- Home
- News
- India News
- ಭಾರತೀಯ ರೈಲ್ವೆ ಇಲಾಖೆ ಹೊಸ ಪ್ರಯತ್ನ; ಮೊದಲ ಬಾರಿಗೆ ಹೈದರಾಬಾದ್ ಸುತ್ತಲೂ ಹೊಸ ರಿಂಗ್ ರೈಲು ಯೋಜನೆ!
ಭಾರತೀಯ ರೈಲ್ವೆ ಇಲಾಖೆ ಹೊಸ ಪ್ರಯತ್ನ; ಮೊದಲ ಬಾರಿಗೆ ಹೈದರಾಬಾದ್ ಸುತ್ತಲೂ ಹೊಸ ರಿಂಗ್ ರೈಲು ಯೋಜನೆ!
ಹೈದರಾಬಾದ್ ಸುತ್ತ ಮತ್ತೊಂದು ಓಆರ್‌ಆರ್ ಬರ್ತಿದೆ... ಆದೆರೆ ಇದು ಔಟರ್ ರಿಂಗ್ ರೋಡ್ ಅಲ್ಲ, ಔಟರ್ ರಿಂಗ್ ರೈಲು. ಇದು ಭಾರತದಲ್ಲಿಯೇ ಮೊದಲ ಪ್ರಾಜೆಕ್ಟ್ ಆಗಿದೆ. ಹಾಗಾದರೆ, ಏನಿದು ಪ್ರಾಜೆಕ್ಟ್? ಇದರಿಂದ ಆಗೋ ಲಾಭಗಳೇನು? ಇಲ್ಲಿ ತಿಳ್ಕೊಳ್ಳೋಣ.

ಹೈದರಾಬಾದ್ ಸುತ್ತ ಔಟರ್ ರಿಂಗ್ ರೈಲು..
ಮುಖ್ಯಮಂತ್ರಿ ರೇವಂತ್ ರೆಡ್ಡಿ ದೆಹಲಿಗೆ ಹೋದಾಗ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನ ಭೇಟಿ ಮಾಡಿ ಈ ಪ್ರಾಜೆಕ್ಟ್ ಬಗ್ಗೆ ಮಾತಾಡಿದ್ದಾರೆ. ಹೈದರಾಬಾದ್ ಜೊತೆಗೆ ಬೇರೆ ಜಿಲ್ಲೆಗಳಿಗೂ ಇದ್ರಿಂದ ಲಾಭ ಆಗುತ್ತೆ ಅಂತ ಹೇಳಿದ್ದಾರೆ.
ಏನಿದು ಔಟರ್ ರಿಂಗ್ ರೈಲು ಪ್ರಾಜೆಕ್ಟ್?
ಹೈದರಾಬಾದ್‌ನಲ್ಲಿ ಟ್ರಾಫಿಕ್ ಜಾಸ್ತಿ ಆಗುತ್ತಿದೆ. ಮುಂದೆ ಇನ್ನೂ ಜಾಸ್ತಿ ಆಗಬಹುದು. ಹೀಗಾಗಿ, ಹೊರ ವರ್ತುಲ ರಸ್ತೆಗೆ ಪರ್ಯಾಯವಾಗಿ ರೈಲ್ವೆ ಲೈನ್ ಹಾಕೋ ಪ್ಲಾನ್ ಇದೆ. ಇದೇ ಔಟರ್ ರಿಂಗ್ ರೈಲು ಯೋಜನೆಯಾಗಿದೆ.
ಈ ಔಟರ್ ರಿಂಗ್ ರೈಲಿನಿಂದ ಏನು ಲಾಭ?
ಔಟರ್ ರಿಂಗ್ ರೈಲ್ವೆ ಮಾರ್ಗದಿಂದ ಹೈದರಾಬಾದ್‌ನ ಟ್ರಾಫಿಕ್ ಕಡಿಮೆ ಆಗುತ್ತದೆ. ಬೇರೆ ಜಿಲ್ಲೆಗಳಿಗೂ ಹೈದರಾಬಾದ್‌ಗೂ ಓಡಾಟ ಸುಲಭ ಆಗುತ್ತದೆ. ಗೂಡ್ಸ್ ರೈಲುಗಳನ್ನ ಈ ಹೊರ ವರ್ತುಲ ರೈಲ್ವೆ ಮಾರ್ಗದ ಮೂಲಕವೇ ಬೇರೆ ಸ್ಥಳಗಳಿಗೆ ಸಾಗಿಸಬಹುದು.
ಔಟರ್ ರಿಂಗ್ ರೈಲ್ ಇರೋ ಮೊದಲ ನಗರ ಹೈದರಾಬಾದ್
ಈ ರಿಂಗ್ ರೈಲು ಪ್ರಾಜೆಕ್ಟ್ ಮುಗಿದರೆ ಹೊರ ವರ್ತುಲ ರೈಲ್ವೆ ಮಾರ್ಗದ ವ್ಯವಸ್ಥೆ ಹೊಂದಿದ ಮೊದಲ ನಗರ ಎಂಬ ಖ್ಯಾತಿಗೆ ಹೈದರಾಬಾದ್ ಪಾತ್ರವಾಗಲಿದೆ. ಪ್ರಸ್ತುತ ದೇಶದ ಬೇರೆ ಯಾವ ನಗರದಲ್ಲೂ ಇಂಥಹ ವ್ಯವಸ್ಥೆ ಇಲ್ಲ.
ಈ ಔಟರ್ ರಿಂಗ್ ರೈಲ್ ಪ್ರಾಜೆಕ್ಟ್ ಹೇಗೆ ನಡೆಯುತ್ತೆ?
2023ರಲ್ಲಿ ಕೇಂದ್ರ ಸರ್ಕಾರ ಈ ಪ್ರಾಜೆಕ್ಟ್ ಪ್ರಸ್ತಾವನೆಯನ್ನು ರಾಜ್ಯದ ಮುಂದಿಟ್ಟಿತ್ತು. ಆದರೆ, ಇದೀಗ ಫೈನಲ್ ಲೊಕೇಶನ್ ಸರ್ವೆ ಮುಗಿದಿದೆ. ಸುಮಾರು 12 ರಿಂದ 17 ಸಾವಿರ ಕೋಟಿ ರೂ. ಖರ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

