ಟಿಕೆಟ್ ಇಲ್ಲದ ಪ್ರಯಾಣಿಕರಿಂದ ಈ ವರ್ಷ ಭಾರತೀಯ ರೈಲ್ವೇ ವಸೂಲಿ ಮಾಡಿದ ದಂಡ ಎಷ್ಟು?
ಟಿಕೆಟ್ ಇಲ್ಲದ ಪ್ರಯಾಣಿಕರಿಂದ ಈ ವರ್ಷ ಭಾರತೀಯ ರೈಲ್ವೇ ವಸೂಲಿ ಮಾಡಿದ ದಂಡ ಎಷ್ಟು?, ಭಾರತದ ರೈಲಿನಲ್ಲಿ ಇಷ್ಟೊಂದು ಮಂದಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಾರಾ? ದಂಡದ ಮೊತ್ತ ಅಚ್ಚರಿ ಹುಟ್ಟಿಸುವುದು ಸತ್ಯ

ಟಿಕೆಟ್ ಇಲ್ಲದೆ ರೈಲು ಪ್ರಯಾಣ
ರೈಲು ಪ್ರಯಾಣದಲ್ಲಿ ಮಹತ್ತರ ಸುಧಾರಣೆ ತರಲಾಗಿದೆ. ಈ ಪೈಕಿ ಟಿಕೆಟ್ ರಹಿತ ಪ್ರಯಾಣಕ್ಕೆ ಕಡಿವಾಣ ಹಾಕುವುದು ಪ್ರಮುಖವಾಗಿದೆ. ರೈಲು ಟಿಕೆಟ್ ಖರೀದಿ, ಬುಕಿಂಗ್ ಎಲ್ಲವೂ ಇದೀಗ ಸರಳೀಕೃತಗೊಳಿಸಲಾಗಿದೆ. ಆದರೂ ಕೆಲವು ಪ್ರಯಾಣಿಕರು ಟಿಕೆಟ್ ಇಲ್ಲದೆ ಪ್ರಯಾಣ ಮಾಡಿ ದುಪ್ಪಟ್ಟು ದಂಡ ಕಟ್ಟಿದ ಘಟನೆಗಳಿವೆ. ಇದೀಗ ಭಾರತೀಯ ರೈಲ್ವೇ 20025ರಲ್ಲಿ ಹೀಗೆ ಟಿಕೆಟ್ ಇಲ್ಲದೆ ಪ್ರಯಾಣಿಕರಿಂದ ವಸೂಲಿ ಮಾಡಿದ ದಂಡ ಮಾಹಿತಿ ನೀಡಿದೆ.
ಲೋಕಸಭೆಗೆ ಮಾಹಿತಿ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಲೋಕಸಭೆಯಲ್ಲಿ ಈ ಕುರಿತು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. 2025ರಲ್ಲಿ ಭಾರತೀಯ ರೈಲ್ವೇ ಬರೋಬ್ಬರಿ 1,781 ಕೋಟಿ ರೂಪಾಯಿ ಮೊತ್ತವನ್ನು ಟಿಕೆಟ್ ಇಲ್ಲದೆ ಪ್ರಯಾಣಕರಿಂದ ದಂಡ ರೂಪದಲ್ಲಿ ವಸೂಲಿ ಮಾಡಿದೆ. ಈ ಮೊತ್ತ ಕೇಳಿ ಭಾರತದಲ್ಲಿ ಇಷ್ಟೊಂದು ಮಂದಿ ಟಿಕೆಟ್ ಇಲ್ಲದೆ ರೈಲು ಪ್ರಯಾಣ ಮಾಡುತ್ತಿದ್ದಾರ ಅನ್ನೋ ಅಚ್ಚರಿಯಾಗುವುದು ಸತ್ಯ.
ರೈಲ್ವೇ ದಂಡದ ನಿಯಮವೇನು?
ರೈಲಿನಲ್ಲಿ ಟಿಕೆಟ್ ಇಲ್ಲದೆ, ಅಥವಾ ಸೂಕ್ತ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ 1989ರ ರೈಲ್ವೇ ಕಾಯ್ದೆ ಅಡಿ ದಂಡ ವಿಧಿಸಲಾಗುತ್ತದೆ. ಈ ನಿಯಮದ ಪ್ರಕಾರ ಪ್ರಯಾಣಿಕ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ ದಂಡ ವಿಧಿಸಲಾಗುತ್ತದೆ. ಪ್ರಯಾಣಿಕ ತೆರಳು ಸ್ಥಳಧ ರೈಲು ಟಿಕೆಟ್ ದರದ ಜೊತೆಗೆ 250 ರೂಪಾಯಿ ದಂಡ ವಿಧಿಸಲಾಗುತ್ತದೆ. ಉದಾಹರಣೆ ರೈಲು ಟಿಕೆಟ್ ದರ 100 ರೂಪಾಯಿ ಆಗಿದ್ದರೆ, 250 ರೂಪಾಯಿ ಪೆನಾಲ್ಟಿ ಸೇರಿ 350 ರೂಪಾಯಿ ದಂಡದ ರೂಪದಲ್ಲಿ ಪಾವತಿಸಬೇಕು.
ವಿಶೇಷ ಸಂದರ್ಭದಲ್ಲಿ ಹೆಚ್ಚಿನ ರೈಲು ಸೇವೆ
ಲೋಕಸಭೆಯಲ್ಲಿ ಮಾತನಾಡಿದ ಅಶ್ವಿನಿ ವೈಷ್ಣವ್, ಹಬ್ಬ ಸೇರಿದಂತೆ ರಜಾ ದಿನಗಳಲ್ಲಿ ಹೆಚ್ಚುವರಿ ರೈಲು ಸೇವೆಯನ್ನು ಪರಿಣಾಮಕಾರಿಯಾಗಿ ಒದಗಿಸಲು ಪ್ರಯಾಣಿಕರು ಮನವಿ ಮಾಡಿದ್ದಾರೆ. ಈ ಕುರಿತು ಹೊಸ ಸೂತ್ರ ಜಾರಿಗೊಳಿಸಲಾಗಿದೆ. ಈ ಮೂಲಕ ಜನಸಂದಣಿ ಕಡಿಮೆ ಮಾಡಲು ಕ್ರಮಕೈಗೊಂಡಿರುವುದಾಗಿ ಹೇಳಿದ್ದಾರೆ.
ವಿಶೇಷ ಸಂದರ್ಭದಲ್ಲಿ ಹೆಚ್ಚಿನ ರೈಲು ಸೇವೆ
ಹೊಸ ರೈಲು ಸೇವೆ
ವಂದೇ ಭಾರತ್, ಸಾಮಾನ್ಯ ರೈಲು ಸೇರಿದಂತೆ ಹಲವು ಹೊಸ ರೈಲು ಸೇವೆಗಳನ್ನು ನೀಡಲಾಗುತ್ತಿದೆ. ಈಗಾಗಲೇ 28 ಹೊಸ ವಂದೇ ಭಾರತ್ ರೈಲು ಸೇವೆ ಸೇರ್ಪಡೆಗೊಂಡಿದೆ ಎಂದು ಸಚಿವರು ಲೋಕಸಭೆಯಲ್ಲಿ ಹೇಳಿದ್ದಾರೆ. ದೇಶದ 76 ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆಗೊಳಿಸಲು ಹೆಚ್ಚುವರಿ ರೈಲಿನ ಜೊತೆಗೆ ಕೆಲ ಹೊಸ ವಿಧಾನ ಅನುಸರಿಸಲಾಗುತ್ತಿದೆ ಎಂದಿದ್ದಾರೆ.
ಹೊಸ ರೈಲು ಸೇವೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

