Indian Railways: ಆಹಾರ ಪ್ರಿಯ ಪ್ರಯಾಣಿಕರಿಗೆ ಭಾರತೀಯ ರೈಲ್ವೆಯಿಂದ ಸಿಹಿಯಾದ ಸುದ್ದಿ
ಭಾರತೀಯ ರೈಲ್ವೆಯು ತನ್ನ ಅಡುಗೆ ನೀತಿಗೆ ತಿದ್ದುಪಡಿ ತರುವ ಮೂಲಕ ದೇಶಾದ್ಯಂತ ರೈಲ್ವೆ ನಿಲ್ದಾಣಗಳಲ್ಲಿ ಪ್ರೀಮಿಯಂ ಆಹಾರ ಬ್ರಾಂಡ್‌ಗಳನ್ನು ತೆರೆಯಲು ಅನುಮತಿ ನೀಡಿದೆ. ಶೀಘ್ರದಲ್ಲೇ ಇ-ಹರಾಜು ಪ್ರಕ್ರಿಯೆಯ ಮೂಲಕ ಪ್ರಯಾಣಿಕರಿಗೆ ಲಭ್ಯವಾಗಲಿವೆ.

ಭಾರತೀಯ ರೈಲ್ವೆ
ಭಾರತೀಯ ರೈಲ್ವೆ ತನ್ನ ಪ್ರಯಾಣಿಕರಿಗೆ ಹಲವು ಸೇವೆಗಳನ್ನು ನೀಡುತ್ತಿದೆ. ನಿಲ್ದಾಣದ ಪ್ಲಾಟ್‌ಫಾರಂಗಳಲ್ಲಿ ಪ್ರಯಾಣಿಕರಿಗೆ ಮೂಲಭೂತ ಸೌಕರ್ಯಗಳನ್ನು ನೀಡಲಾಗುತ್ತಿದೆ. ಆದರೆ ನಿಲ್ದಾಣಗಳಲ್ಲಿ ತಮ್ಮಿಷ್ಟದ ಅಂದ್ರೆ ನೆಚ್ಚಿನ ಬ್ರಾಂಡ್ ಆಹಾರಗಳು ಸಿಗಲ್ಲ ಎಂಬ ಕೊರಗು ಇದೆ. ಇದೀಗ ಕೊರಗು ನಿವಾರಿಸಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ.
ಪ್ರೀಮಿಯಂ ಬ್ರಾಂಡ್ ಕ್ಯಾಟರಿಂಗ್ ಔಟ್‌ಲೆಟ್
ಇದೀಗ ಪ್ರಯಾಣಿಕರು ಶೀಘ್ರದಲ್ಲೇ ಮೆಕ್‌ಡೊನಾಲ್ಡ್ಸ್, ಕೆಎಫ್‌ಸಿ, ಪಿಜ್ಜಾ ಹಟ್, ಬಾಸ್ಕಿನ್-ರಾಬಿನ್ಸ್, ಬಿಕನೇರ್‌ವಾಲಾ ಮತ್ತು ಹಲ್ದಿರಾಮ್‌ಗಳಂತಹ ರೈಲ್ವೆ ನಿಲ್ದಾಣಗಳಲ್ಲಿ 'ಪ್ರೀಮಿಯಂ ಬ್ರಾಂಡ್ ಕ್ಯಾಟರಿಂಗ್ ಔಟ್‌ಲೆಟ್‌ಗಳಿಂದ ಆಹಾರವನ್ನು ಸವಿಯಬಹುದಾಗಿದೆ. ವಿಮಾನ ನಿಲ್ದಾಣಗಳಲ್ಲಿಯೇ ಕಂಡು ಬರುವಂತಹ ಆಹಾರ ಮಳಿಗೆಗಳನ್ನು ರೈಲ್ವೆ ನಿಲ್ದಾಣಗಳಲ್ಲಿ ಆರಂಭಿಸಲು ಮುಂದಾಗಿದೆ.
ಪ್ರೀಮಿಯಂ ಸಿಂಗಲ್-ಬ್ರಾಂಡ್ ಆಹಾರ ಮಳಿಗೆ
ಪ್ರೀಮಿಯಂ ಸಿಂಗಲ್-ಬ್ರಾಂಡ್ ಆಹಾರ ಮಳಿಗೆಗಳನ್ನು ದೇಶಾದ್ಯಂತ ರೈಲ್ವೆ ನಿಲ್ದಾಣಗಳಲ್ಲಿ ಆರಂಭಿಸುವ ಪ್ರಸ್ತಾಪವನ್ನು ರೈಲ್ವೆ ಮಂಡಳಿಯು ಅಡುಗೆ ಸೇವೆಗಳ ಕುರಿತಾದ ತನ್ನ ನೀತಿಗೆ ತಿದ್ದುಪಡಿ ಮಾಡಿದೆ. ದಕ್ಷಿಣ ಮಧ್ಯ ರೈಲ್ವೆಯ ಶಿಫಾರಸನ್ನು ಅನುಸರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನವೆಂಬರ್ 13ರಂದು ಎಲ್ಲಾ ರೈಲ್ವೆ ವಲಯಗಳಲ್ಲಿ ಸುತ್ತೋಲೆಯನ್ನು ಹೊರಡಿಸಿದೆ.
ಜನಪ್ರಿಯ ಆಹಾರ ಬ್ರಾಂಡ್
ನಿಲ್ದಾಣಗಳಲ್ಲಿ ಜನಪ್ರಿಯ ಆಹಾರ ಬ್ರಾಂಡ್‌ಗಳನ್ನು ಶೀಘ್ರದಲ್ಲೇ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸಲು ಅನುಮತಿಸಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ರೈಲ್ವೆ ನಿಲ್ದಾಣಗಳಲ್ಲಿ ಆರಂಭಿಸಲಾಗುವ ಮಳಿಗೆಗಳು ಕಂಪನಿಗಳ ಒಡೆತನದಲ್ಲಿರಬಹುದು ಅಥವಾ ಫ್ರಾಂಚೈಸಿಗಳಿಂದ ನಡೆಸಬಹುದಾಗಿದೆ. ಈ ಪ್ರಕ್ರಿಯೆ ಇ-ಹರಾಜು ನೀತಿಯ ಮೂಲಕ ನಡೆಸಲಾಗುತ್ತದೆ.
ಇದನ್ನೂ ಓದಿ: ರೈಲಿನ ಲೋವರ್ ಬರ್ತ್ ಟಿಕೆಟ್ ಬೇಕಿದ್ದರೆ ಈ ತಪ್ಪು ಮಾಡಬೇಡಿ, ಬುಕಿಂಗ್ ಟಿಪ್ಸ್ ನೀಡಿದ ಟಿಟಿಇ
ಭಾರತೀಯ ರೈಲ್ವೆಯ ಅಡುಗೆ ನೀತಿ ತಿದ್ದುಪಡಿ
ಭಾರತೀಯ ರೈಲ್ವೆಯ ಅಡುಗೆ ನೀತಿ ತಿದ್ದುಪಡಿ, 2017ಕ್ಕೆ ಔಪಚಾರಿಕವಾಗಿ ಹೊಸ ವರ್ಗ - ಪ್ರೀಮಿಯಂ ಬ್ರಾಂಡ್ ಅಡುಗೆ ಔಟ್ಲೆಟ್ ಸೇರಿಸುತ್ತದೆ. ಇಲ್ಲಿಯವರೆಗೆ ನಿಲ್ದಾಣಗಳಲ್ಲಿ ಲಘು ಉಪಹಾರ, ತಿಂಡಿಗಳು ಮತ್ತು ಚಹಾ, ಹಾಲು ಮತ್ತು ಜ್ಯೂಸ್‌ನಂತಹ ಪಾನೀಯಗಳನ್ನು ಮಾರಾಟ ಮಾಡಲು ಕೇವಲ ಮೂರು ರೀತಿಯ ಅಂಗಡಿಗಳಿಗೆ ಮಾತ್ರ ಅಧಿಕಾರವಿತ್ತು. ಹೊಸ ಮಾನದಂಡಗಳ ಪ್ರಕಾರ, ಬೇಡಿಕೆ ಮತ್ತು ಜನಸಂದಣಿ ಅನುಗುಣವಾಗಿ ಹೆಚ್ಚುವರಿಯಾಗಿ ಏಕ-ಬ್ರಾಂಡ್ ಔಟ್‌ಲೆಟ್ ತೆರೆಯಲು ಅನುಮತಿ ಕಲ್ಪಿಸಲಾಗುತ್ತದೆ.
ಇದನ್ನೂ ಓದಿ: ರೈಲಿನಲ್ಲಿ ತಿನಿಸು ಮಾರುತ್ತಿದ್ದ ಯುವಕ ಪರದಾಡುವಂತೆ ಮಾಡಿದ ಪ್ರಯಾಣಿಕ: ವೀಡಿಯೋ ನೋಡಿ ನೆಟ್ಟಿಗರ ಆಕ್ರೋಶ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

