ರೈಲಿನಲ್ಲಿ ಇಡ್ಲಿ, ದೋಸೆ ಇಲ್ಲವೇ ಇಲ್ಲ; ಹಿಂದಿ ಭಾಷೆಯಾಯ್ತು, ಈಗ ಆಹಾರ ಹೇರಿಕೆ!
ದಕ್ಷಿಣ ಭಾರತದಲ್ಲಿ ಓಡಾಡುವ ವಂದೇ ಭಾರತ್ ರೈಲಿನಲ್ಲಿ ಉತ್ತರ ಭಾರತದ ಆಹಾರಗಳನ್ನು ಮಾತ್ರ ನೀಡಲಾಗುತ್ತಿದೆ ಎಂದು ಮಲಯಾಳಂ ಲೇಖಕರು ಆರೋಪಿಸಿದ್ದಾರೆ. ಇಡ್ಲಿ, ದೋಸೆಗಳಂತಹ ದಕ್ಷಿಣ ಭಾರತದ ತಿನಿಸುಗಳು ಮೆನುವಿನಲ್ಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದಿ ಭಾಷೆ ಆಯ್ತು, ಈಗ ಆಹಾರ ಹೇರಿಕೆ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಆರಂಭವಾಗಿವೆ.

ಕೇಂದ್ರ ಸರ್ಕಾರ ಕೆಲವು ಸೌಲಭ್ಯಗಳನ್ನು ನೀಡುವ ಮೂಲಕ ದಕ್ಷಿಣ ಭಾರತದ ರಾಜ್ಯಗಳ ಜನತೆಯ ಮೇಲೆ ಹಿಂದಿ ಹೇರಿಕೆಯನ್ನು ಮಾಡುತ್ತಿದೆ ಎಂಬ ವಿರೋಧಾಭಾಸದ ಚರ್ಚೆಯ ನಡುವೆಯೇ ಇದೀಗ ರೈಲ್ವೆ ಇಲಾಖೆಯ ದಕ್ಷಿಣ ಭಾರತದಲ್ಲಿ ಓಡಾಡುವ ವಂದೇ ಭಾರತ್ ರೈಲಿನಲ್ಲಿಯೂ ಉತ್ತರ ಭಾರತದ ಆಹಾರಗಳನ್ನು ಬಲವಂತವಾಗಿ ಹೇರಿಕೆ ಮಾಡಲಾಗುತ್ತಿದೆ. ಇಲ್ಲಿ ದಕ್ಷಿಣ ಭಾರತೀಯರ ಆರೋಗ್ಯಕರ ಆಹಾರ ಹಾಗೂ ತಿಂಡಿಗಳಾದ ಇಡ್ಲಿ, ದೋಸೆ ಇತ್ಯಾದಿಗಳ ಮೆನು ಇಲ್ಲವೇ ಇಲ್ಲ ಎಂದು ಮಲಯಾಳಂ ಲೇಖಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಈ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ.
ಜಾಗತಿಕ ಮಟ್ಟದಲ್ಲಿ ದಕ್ಷಿಣ ಭಾರತದ ಆಹಾರಗಳು ತುಂಬಾ ವಿಶೇಷತೆಯನ್ನು ಪಡೆದುಕೊಂಡಿವೆ. ದಕ್ಷಿಣ ಭಾರತದ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳ ಸೇರಿ ಪ್ರತಿ ರಾಜ್ಯದಲ್ಲೂ ವಿಭಿನ್ನ ರೀತಿಯ ಆಹಾರ ಪದಾರ್ಥಗಳು ಸ್ಥಳೀಯ ಮಾನ್ಯತೆ ಪಡೆದಿವೆ. ದಕ್ಷಿಣ ಭಾರತೀಯ ಆಹಾರಗಳಲ್ಲಿ ಉಪ್ಪು, ಖಾರ, ಹುಳಿ, ಸಿಹಿ ಸಮನ್ವಯದ ಆಹಾರಗಳ ನಾವು ತರುಚಿಸಬಹುದು.
ಆದರೆ, ವಂದೇ ಭಾರತ್ ರೈಲಿನ ಆಹಾರ ಮೆನುವಿನಲ್ಲಿ ದಕ್ಷಿಣ ಭಾರತದ ತಿನಿಸುಗಳೇ ಇಲ್ಲವೆಂದು ಮಲಯಾಳಂ ಲೇಖಕ ಎನ್.ಎಸ್.ಮಾಧವನ್ ಅಸಮಾಧಾನ ವ್ಯಕ್ತಪಡಿಸಿ, ಎಕ್ಸ್‌ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅವರ ಪೋಸ್ಟ್ ವೈರಲ್ ಆಗಿದ್ದು, ಉತ್ತರ ಭಾರತದ ಹಿಂದಿ ಭಾಷೆ ಹೇರಿಕೆ ನಂತರ ಆಹಾರ ಮತ್ತು ಸಂಸ್ಕೃತಿಯನ್ನೂ ಹೇರಿಕೆ ಮಾಡಲಾಗುತ್ತಿದೆ ಎಂಬ ಚರ್ಚೆಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಂತಾಗಿದೆ.
ಸಾಮಾನ್ಯವಾಗಿ ರೈಲಿನಲ್ಲಿ ಸಿಗುವ ಎಲ್ಲ ಆಹಾರಗಳು ಉತ್ತರ ಭಾರತದ ಆಹಾರಗಳಾಗಿದ್ದು, ಈ ಬಗ್ಗೆ ಬಹುತೇಕ ದಕ್ಷಿಣ ಭಾರತದ ಪ್ರಯಾಣಿಕರಿಗೆ ಬೇಸರವಿದೆ. ರೈಲಿನಲ್ಲಿ ಕೊಡುವ ಟೀ, ಕಾಫಿ, ಪಲಾವ್ ಯಾವುದೂ ಕುಡ ಗುಣಮಟ್ಟ ಇರುವುದಿಲ್ಲ. ಉಪ್ಪು, ಖಾರ ಸೇರಿದಂತೆ ಯಾವುದೇ ರುಚಿಯೂ ಇರುವಿದಿಲ್ಲ ಎಂದು ಮಲಯಾಳಂನ ಲೇಖಕರು ಧ್ವನಿ ಎತ್ತಿದ್ದಾರೆ. ಒಂದೊಂದು ರಾಜ್ಯ, ಒಂದೊಂದು ಭಾಗದ ಸಂಸ್ಕೃತಿ, ಆಹಾರ ಪದ್ಧತಿ ಮತ್ತೂ ಅವರಿಗೆ ಅವರವರ ಊರಿನ ಆಹಾರಗಳೇ ಹೆಚ್ಚು ಮುಖ್ಯ ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗ, 9970 ALP ಹುದ್ದೆಗಳಿಗೆ ನೇಮಕಾತಿ
ಹಿಂದಿ ಭಾಷೆ ಹೇರಿಕೆ ನಂತರ ಆಹಾರ ಹೇರಿಕೆ: ಇದೀಗ ಪೋಸ್ಟ್ ಹಂಚಿಕೊಂಡಿರುವ ಮಲಯಾಳಂ ಲೇಖಕ ಎನ್.ಎಸ್. ಮಾಧವನ್ ಅವರು ಬೆಂಗಳೂರಿನಿಂದ ಕೊಯಮತ್ತೂರಿಗೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಆಹಾರವನ್ನು ಆರ್ಡರ್ ಮಾಡುವಾಗ ದಕ್ಷಿಣ ಭಾರತದ ಆಹಾರವನ್ನು ಆಯ್ಕೆ ಮಾಡುವುದಕ್ಕೆ ಯಾವುದೇ ಆಹಾರವೂ ಅದರಲ್ಲಿ ಇರಲಿಲ್ಲ. ಇದರಿಂದ ಬೇಸರಗೊಂಡ ಮಾಧವನ್, 'ಅವರು ಭಾಷಾ ಹೇರಿಕೆಯ ಬಗ್ಗೆ ಮಾತನಾಡುತ್ತಾರೆ.
ಆಹಾರ ಹೇರಿಕೆಯ ಬಗ್ಗೆ ಏನು ಹೇಳುತ್ತೀರಿ? ಇವು ದಕ್ಷಿಣ ಭಾರತದ ವಂದೇ ಭಾರತ್ ರೈಲುಗಳಲ್ಲಿ ನೀಡಲಾಗುವ ವಿಶಿಷ್ಟ ತಿಂಡಿಗಳು. ಇದು ಬೆಂಗಳೂರು-ಕೊಯಮತ್ತೂರು ವಂದೇ ಭಾರತ್ ರೈಲಿನಿಂದ ಬಂದದ್ದು' (They speak about language imposition. What about food imposition. Typical snacks served in South Indian Vande Bharat trains. This one from Bengaluru-Coimbatore VB- @NSMlive) ಎಂದು ಪೋಸ್ಟ್‌ನಲ್ಲಿ ಬರೆದುಕೊಂಡು ಪೋಟೋ ಒಂದನ್ನು ಹಂಚಿಕೊಂಡಿದ್ದಾರೆ.
ಮಾಧವನ್ ಅವರ ಪೋಸ್ಟ್ ವೈರಲ್ ಆಗಿದ್ದು, ಅನೇಕ ನೆಟ್ಟಿಗರು ತರಹೇವಾರಿ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ಮೂಲಕ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಹಿಂದೆ ಭಾಷೆ ಹೇರಿಕೆ ಆಯ್ತು, ಆದರೆ 'ಆಹಾರ ಹೇರಿಕೆ' ಕೂಡ ವಾಸ್ತವವಾಗಿ ನಡೆಯುತ್ತಿದೆ ಎಂದು ಅಭಿಪ್ರಾಯ ತಿಳಿಸಿದ್ದಾರೆ. ಒಬ್ಬ ನೆಟ್ಟಿಗರು 'ಹೌದು, ಇದು ನಿಜಕ್ಕೂ ಗಮನಿಸಬೇಕಾದ ವಿಷಯ. ಕೇಂದ್ರ ಸರ್ಕಾರವಾಗಲಿ ಅಥವಾ ರೈಲ್ವೆ ಇಲಾಖೆಯಾಗಲಿ ಇದರ ಬಗ್ಗೆ ಗಮನ ಕೊಟ್ಟಿಲ್ಲ. ಕ್ಯಾಟರಿಂಗ್ ಮಾಡುವವರಿಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ. ಅದು ಉತ್ತರ ಭಾರತದ ಊಟವಾಗಲಿ ಅಥವಾ ದಕ್ಷಿಣ ಭಾರತದ ಊಟವಾಗಲಿ. ನೀವು ಅತ್ಯಂತ ಕೆಟ್ಟ ಊಟವನ್ನು ತಿನ್ನಬೇಕೆಂದರೆ ರೈಲ್ವೆಗೆ ಹೋಗಿ' ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ನೀತಾ ಅಂಬಾನಿ ಯಾರ ಕೈ ಹಿಡಿದ್ರೂ ಸುದ್ದಿಯಾಗುತ್ತೆ !
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ