ಮಾಂಸಾಹಾರ ಪ್ರಸಾದ ನೀಡುವ ಕಾಳಿಬಾರಿ ದೇವಸ್ಥಾನಕ್ಕೆ ಮೋದಿ ಭೇಟಿ, ಕಂಗಾಲಾದ ಟಿಎಂಸಿ
ಮಾಂಸಾಹಾರ ಪ್ರಸಾದ ನೀಡುವ ಕಾಳಿಬಾರಿ ದೇವಸ್ಥಾನಕ್ಕೆ ಮೋದಿ ಭೇಟಿ, ಕಂಗಾಲಾದ ಟಿಎಂಸಿ, ರೋಡ್‌ಶೋ ಆರಂಭಕ್ಕೂ ಮೊದಲೇ ಮೋದಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದರಿಂದ ಟಿಂಎಂಸಿ ಗಲಿಬಿಲಿಗೊಂಡಿದ್ದು ಹೇಗೆ?

ಮೀನು, ಮಾಂಸ ನೈವೇದ್ಯ
ಮೀನು ಅಥವಾ ಮಾಂಸವನ್ನು ನೈವೇದ್ಯವಾಗಿ ಅರ್ಪಿಸುವ ಕೋಲ್ಕಾತದ ಅತ್ಯಂತ ಪುರಾತನ ಹಾಗೂ ಅತ್ಯಂತ ಪ್ರಸಿದ್ಧಿ ಕಾಳಿಬಾರಿ ದೇವಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪಶ್ಚಿಮ ಬಂಗಾಳದ ಎರಡನೇ ಹಂತದ ಚುನಾವಣೆಗೂ ಮೊದಲು ಬಿಜೆಪಿ ಭರ್ಜರಿ ಪ್ರಚಾರ ನಡೆಸುತ್ತಿದೆ. ಎರಡನೇ ಹಂತದ ಪ್ರಚಾರದ ರೋಡ್‌ಶೋ ಮೊದಲು ಮೋದಿ ಕಾಳಿಬಾರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಥಂಥಾನಿಯಾ ಕಾಳಿಬಾರಿ ದೇವಸ್ಥಾನ
ಕೋಲ್ಕತಾದ ಅತ್ಯಂತ ಪುರಾತನ ದೇವಸ್ಥಾನಗಳಲ್ಲಿ ಥಂಥಾನಿಯಾ ಕಾಳಿಬರಿ ದೇವಸ್ಥಾನ ಕೂಡ ಒಂದು. 300 ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನಕ್ಕೆ ಮೋದಿ ಭೇಟಿ ನೀಡಿದ್ದಾರೆ. ತಾಯಿ ಸಿದ್ದೇಶ್ವರಿಯನ್ನು ಆರಾಧಿಸುವ ಈ ಕಾಳಿಬಾರಿ ದೇವಸ್ಥಾನದಲ್ಲಿ ಮೋದಿ ಪೂಜೆ ಸಲ್ಲಿಸಿದ್ದಾರೆ.
ಭಕ್ತರಿಗೆ ಮಾಂಸಾಹಾರ ಪ್ರಸಾದ
ಈ ದೇವಸ್ಥಾನದಲ್ಲಿ ದೇವಿಗೆ ಮೀನು ಅಥವಾ ಮಾಂಸವನ್ನು ನೈವೇದ್ಯವಾಗಿ ಭಕ್ತರು ನೀಡುತ್ತಾರೆ. ಬಳಿಕ ಇದೇ ಪ್ರಸಾದವನ್ನು ಭಕ್ತರಿಗೆ ಹಂಚಲಾಗುತ್ತದೆ. ಅತ್ಯಂತ ಶಕ್ತಿಶಾಲಿ ದೇವಿ ಅನ್ನೋ ನಂಬಿಕೆ ಭಕ್ತರಲ್ಲಿದೆ. ಮೋದಿ ಈ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಟಿಎಂಸಿಗೆ ಶುರುವಾಯ್ತು ಢವಢವ
ಪಶ್ಚಿಮ ಬಂಗಾಳ ಚುನಾವಣೆ ಪ್ರಚಾರದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಬಂಗಾಳ ಜನತೆ ಬಿಜೆಪಿಗೆ ಮತ ಹಾಕಿದರೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಬಂಗಾಳದ ಆಹಾರ ಪದ್ಧತಿ ಬದಲಾಯಿಸುತ್ತಾರೆ. ಹಲವು ಕಡೆ ಮಾಂಸಾರವನ್ನು ಬಿಜೆಪಿ ನಿಷೇಧಿಸಿದೆ ಎಂದಿದ್ದರು. ಇದರ ನಡುವೆ ಮೋದಿ ಮಾಂಸಾರ ಪ್ರಸಾದ ದೇವಸ್ಥಾನಕ್ಕೆ ಭೇಟಿ ನೀಡಿರುವುದು ಟಿಎಂಸಿ ಪ್ಲಾನ್ ಉಲ್ಟಾ ಮಾಡಿದೆ.
ತಿರುಗೇಟು ನೀಡಿದ್ದ ಬಿಜೆಪಿ
ಮಮತಾ ಬ್ಯಾನರ್ಜಿ ಆರೋಪವನ್ನು ಅಲ್ಲಗೆಳೆದ ಬಿಜೆಪಿ, ಆಹಾರ ಪದ್ಧತಿ ಜನರ ಆಯ್ಕೆ. ಇದರ ಮಧ್ಯ ಬಿಜೆಪಿ ಪ್ರವೇಶ ಮಾಡೋದಿಲ್ಲ ಎಂದಿತ್ತು. ಇತ್ತ ಬಿಜೆಪಿಯ ಹಲವು ನಾಯಕರು ಮಾಂಸಾರ ಸೇವಿಸಿ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು. ಇದೀಗ ಮೋದಿ ಕಾಳಿಬಾರಿ ದೇವಸ್ಥಾನಕ್ಕೆ ಭೇಟಿ ನೀಡಿರುವುದು ಬಂಗಾಳ ಜನರ ಉತ್ಸಾಹ ಇಮ್ಮಡಿಗೊಳಿಸಿದೆ.
ತಿರುಗೇಟು ನೀಡಿದ್ದ ಬಿಜೆಪಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

