ನೀವಿಬ್ಬರು ಸಲಿಂಗಿಗಳು, ಎಲ್ಲರಿಗೂ ಹೇಳ್ತೀನಿ ಅಂದವನ ಉಸಿರು ನಿಲ್ಲಿಸಿದ್ರು: ಇಬ್ಬರು ಅರೆಸ್ಟ್
ತಮ್ಮ ಸಲಿಂಗಿ ಸಂಬಂಧದ ವಿಷಯವನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಕ್ಕೆ, ರಾಜ್‌ವೀರ್ ಮತ್ತು ಸಾಹಿಲ್ ಎಂಬ ಇಬ್ಬರು ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. ಪೊಲೀಸರು ಇಬ್ಬರನ್ನೂ ಬಂಧಿಸಿ, ಕೊಲೆಯ ಹಿಂದಿನ ರಹಸ್ಯವನ್ನು ಬಯಲು ಮಾಡಿದ್ದಾರೆ.

ಕೊ*ಲೆಯ ಹಿಂದಿನ ರಹಸ್ಯ
ಕೀಟನಾಶಕ ಮಾರಾಟಗಾರ ಮನೀಷ್ ಕೊ*ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಓರ್ವ ತನ್ನನ್ನು ಸಲಿಂಗಿ ಎಂದು ಒಪ್ಪಿಕೊಂಡಿದ್ದಾನೆ. ರಾಜ್‌ವೀರ್ ಮತ್ತು ಸಾಹಿಲ್ ಬಂಧಿತ ಆರೋಪಿಗಳು. ಪೊಲೀಸರ ವಿಚಾರಣೆ ವೇಳೆ ಕೊ*ಲೆಯ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ಸಲಿಂಗಿ ಜೋಡಿಯಿಂದ ಕೊ*ಲೆ
ಉತ್ತರ ಪ್ರದೇಶದ ಶಾಮಿಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬಂಧಿತ ಆರೋಪಿಗಳಿಂದ ಪೊಲೀಸರು, ಅಪರಾಧಕ್ಕೆ ಬಳಸಲಾದ ಚಾಕು, ಬ್ಯಾಗ್ ಮತ್ತು ಇಬ್ಬರ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಕೊ*ಲೆಯಾದ ಮನೀಷ್, ಇಬ್ಬರು ಆರೋಪಿಗಳ ಸಲಿಂಗಿತನದ ವಿಷಯವನ್ನು ರಿವೀಲ್ ಮಾಡೋದಾಗಿ ಬೆದರಿಕೆ ಹಾಕಿದ್ದನು. ಇದರಿಂದ ಮನೀಷ್ ಬಾಯಿ ಮುಚ್ಚಿಸಲು ಹೋಗಿ ಆತನ ಪ್ರಾಣವನ್ನೇ ತೆಗೆದಿದ್ದಾರೆ.
ಆರೋಪಿಗಳ ಬಂಧನ
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ಎನ್‌ಪಿ ಸಿಂಗ್, ಖೇಡಭಾವು ಗ್ರಾಮದ ನಿವಾಸಿಯಾಗಿರುವ ಮನೀಷ್ (28) ಎಂಬಾತನ ಕೊ*ಲೆಯಾಗಿದೆ. ಗುರುವಾರ ಮಧ್ಯಾಹ್ನ ಮನೀಷ್ ಚಿಕ್ಕಪ್ಪ ರೂಪ್ ಸಿಂಗ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ರಾಜ್‌ವೀರ್ ಮತ್ತು ಸಾಹಿಲ್ ಎಂಬಾತನನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ನನ್ನ ಗರ್ಭಿಣಿ ಮಾಡುವ ಗಂಡು ಬೇಕು: ಜಾಹೀರಾತು ನಂಬಿ ವೀರ್ಯದಾನದ ಆಸೆಯಲ್ಲಿದ್ದವನಿಗೆ ಆಘಾತ: 11 ಲಕ್ಷ ಖೋತಾ
ಬೆದರಿಕೆ ಹಾಕಿದ್ದ ಮನೀಷ್
ಮನೀಷ್‌ಗೂ ಮತ್ತು ಆರೋಪಿ ರಾಜ್‌ವೀರ್‌ಗೂ ಬಹಳ ದಿನಗಳಿಂದ ಪರಿಚಯವಿತ್ತು. ಕೀಟನಾಶಕ ವಿತರಕನಾಗಿದ್ದರಿಂದ ಆರೋಪಿಗಳ ಊರಿಗೆ ಮನೀಷ್ ತೆರಳುತ್ತಿದ್ದನು. ಕೆಲ ದಿನಗಳ ಹಿಂದೆಯಷ್ಟೇ ಮನೀಷ್‌ಗೆ ಸಾಹಿಲ್‌ನ ಪರಿಚಯವಾಗಿತ್ತು. ರಾಜ್‌ವೀರ್ ಮತ್ತು ಸಾಹಿಲ್ ಸಂಬಂಧ ವಿಷಯ ತಿಳಿಯುತ್ತಿದ್ದಂತೆ ಮನೀಷ್ ಇಬ್ಬರಿಗೂ ಬೆದರಿಕೆ ಹಾಕಲು ಆರಂಭಿಸಿದ್ದನು ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಾಷ್ಟ್ರ ಮಟ್ಟದ ಕಬ್ಬಡಿ ಆಟಗಾರ ತೇಜ್‌ಪಾಲ್ ಗುಂಡೇಟಿಗೆ ಬಲಿ
ತೋಟಕ್ಕೆ ತೆರಳಿ ಚಾಕು ಇರಿದು ಎಸ್ಕೇಪ್
ಇದರಿಂದ ಕೋಪಗೊಂಡ ಆರೋಪಿಗಳು ಪ್ಲಾನ್ ಮಾಡಿಕೊಂಡು ಮನೀಷ್ ಮನೆಗೆ ತೆರಳಿದ್ದಾರೆ. ಮನೀಷ್ ತೋಟದಲ್ಲಿರುವ ವಿಷಯ ತಿಳಿದು ಅಲ್ಲಿಗೆ ಹೋದ ರಾಜ್‌ವೀರ್ ಮತ್ತು ಸಾಹಿಲ್ ಚಾಕು ಇರಿದು ಕೊ*ಲೆ ಮಾಡಿದ್ದಾರೆ. ನಂತರ ಅಲ್ಲಿಂದ ಇಬ್ಬರು ಪರಾರಿಯಾಗಿದ್ದಾರೆ. ಮನೆಗೆ 5 ನಿಮಿಷದಲ್ಲಿ ಬರೋದಾಗಿ ಮನೀಷ್ ಹೇಳಿದ್ದನು. ಮನೆಗೆ ಹೊರಡುವ ವೇಳೆ ಇಬ್ಬರು ಆರೋಪಿಗಳು ಎದುರಾಗಿ ಚಾಕುವಿನಿಂದ ಇರಿದಿದ್ದಾರೆ.
ಇದನ್ನೂ ಓದಿ: ಆಸ್ತಿ ಚೆನ್ನಾಗಿದೆ, ಮಗಳು ಚೆನ್ನಾಗಿರ್ತಾಳೆ ಅಂತಾ ಮದ್ವೆ ಮಾಡಿಕೊಟ್ಟೆ, ಆದ್ರೆ ಹೀಗಾಗೋಯ್ತು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

