MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಬೆಂಗಳೂರು ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ 2025ರ ವಿಶೇಷ ಫೋಟೋಗಳು!

ಬೆಂಗಳೂರು ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ 2025ರ ವಿಶೇಷ ಫೋಟೋಗಳು!

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಆಯೋಜಿಸಲಾಗಿರುವ ವಾಲ್ಮೀಕಿ ವಿಷಯಾಧಾರಿತ ಫಲಪುಷ್ಪ ಪ್ರದರ್ಶನಕ್ಕೆ ಭಾರೀ ಜನಸ್ತೋಮ. ಲಕ್ಷಾಂತರ ಹೂವುಗಳಿಂದ ನಿರ್ಮಿಸಲಾದ ಹೂವಿನ ಮನೆ ಮತ್ತು ರಾಮಾಯಣದ ದೃಶ್ಯಗಳನ್ನು ಕಟ್ಟಿಕೊಡುವ ಕಲಾಕೃತಿಗಳು ವೀಕ್ಷಕರನ್ನು ಆಕರ್ಷಿಸುತ್ತಿವೆ.

2 Min read
Author : Sathish Kumar KH
Published : Jan 21 2025, 02:38 PM IST
Share this Photo Gallery
  • FB
  • TW
  • Linkdin
  • Whatsapp
18

ಗಣರಾಜ್ಯೋತ್ಸವ ಅಂಗವಾಗಿ ಬೆಂಗಳೂರಿನ ಸಸ್ಯಕಾಶಿ ಲಾಲ್‌ಬಾಗ್ ಉದ್ಯಾನದಲ್ಲಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನ ಮೇಳಕ್ಕೆ ಭಾರೀ ಸ್ಪಂದನೆ ಸಿಕ್ಕಿದೆ. ವಾರದ ದಿನಗಳು ಸೇರಿದಂತೆ ವಾರಾಂತ್ಯದ ದಿನಗಳಲ್ಲಿ ಲಕ್ಷಾಂತರ ಜನರು ಬಂದು ಭೇಟಿ ನೀಡುತ್ತಿದ್ದು, ತೋಟಗಾರಿಕೆ ಇಲಾಖೆಗೆ ಉತ್ತಮ ಆದಾಯವೂ ಲಭಿಸಿದೆ.

28

ಲಾಲ್‌ಬಾಗ್ ಉದ್ಯಾನದ ಆವರಣದಲ್ಲಿರುವ ಗಾಜಿನ ಮನೆಯಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ವಿಷಯಾಧಾರಿತ ಫಲಪುಷ್ಪ ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ. ಇದರಲ್ಲಿ ವಾಲ್ಮೀಕಿ ಅವರು ಬರೆದ ರಾಮಾಯಣ ಹಾಗೂ ರಾಮಾಯಣದ ದೃಶ್ಯಗಳನ್ನು ಕಟ್ಟಿಕೊಡಲಾಗಿದೆ. ಸಾವಿರಾರು ಜಾತಿಯ, ದೇಶ ವಿದೇಶಗಳ ಹೂವುಗಳನ್ನು ಬಳಸಿ ಫಲಪುಷ್ಪ ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ.

38

ಫಲಪುಷ್ಪ ಪ್ರದರ್ಶನ ಮೇಳದಲ್ಲಿ ಪ್ರತಿವರ್ಷದ ಆಕರ್ಷಣೆಯಂತೆ ಈ ವರ್ಷವೂ ಹೂವುಗಳಿಂದಲೇ ಒಂದು ಮಂಟಪವೊಂದನ್ನು ನಿರ್ಮಿಸಲಾಗಿದೆ. ಇದಕ್ಕೆ ಪ್ರತ್ಯೇಕವಾಗಿ ಯಾವುದೇ ಹೆಸರನ್ನು ನೀಡಲಾಗಿಲ್ಲ. ಈ ಒಂದು ಹೂವಿನ ಮನೆ ನಿರ್ಮಾಣಕ್ಕೆ ಲಕ್ಷಾಂತರ ಹೂವುಗಳನ್ನು ಬಳಕೆ ಮಾಡಲಾಗಿದೆ. ಸುಮಾರು 12 ರಿಂದ 15 ಅಡಿ ಎತ್ತರದ ಈ ಮಂಟಪಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ.

48

ರಾಮಾಯಣದ ಭಾಗವಾಗಿರುವ ಶ್ರೀರಾಮ ಚಂದ್ರನಿಗೆ ಸೀತಾ ಮಾತೆಯನ್ನು ಹುಡುಕುವುದಕ್ಕೆ ನೆರವಾದ ಹನುಂಮತನ ಮೂರ್ತಿಯನ್ನೂ ಅಳವಡಿಕೆ ಮಾಡಲಾಗಿದ್ದು, ರಾಮನಿಗೆ ನಮಿಸುವ ಶೈಲಿಯಲ್ಲಿ ಆಂಜನೇಯನ ಮೂರ್ತಿ ಸ್ಥಾಪಿಸಲಾಗಿದೆ.

58

ಫಲಪುಷ್ಮ ಮೇಳದಲ್ಲಿ ಬಳಕೆ ಮಾಡಲಾದ ತರಹೇವಾರಿ ಹೂವು, ಬಾಳೆ ಎಲೆ, ತೆಂಗಿನ ಗರಿ, ತರಕಾರಿಗಳಲ್ಲಿ ಬಗೆಬಗೆಯ ವಿನ್ಯಾಸದ ಕಲಾಕೃತಿಗಳು ಎಂಥವರನ್ನೂ ಸಹ ಆಕರ್ಷಿಸುತ್ತವೆ. ಇನ್ನು ಎಲ್ಲ ಮೂಲೆಗಳಲ್ಲಿ ಸುಮಾರು 8 ಅಡಿ ಎತ್ತರಕ್ಕೆ ಜೋಡಿಸಲಾದ ಹೂವುಗಳು ಮಾತ್ರ ಮನಮೋಹಕವಾಗಿವೆ.

68

ಗಣರಾಜ್ಯೋತ್ಸವ ನಡೆಯುವ ಜ.26ರಂದು ಒಂದೇ ದಿನದಲ್ಲಿ ಲಕ್ಷಾಂತರ ಜನರು ವೀಕ್ಷಣೆಗೆ ಆಗಮಿಸುವ ನಿರೀಕ್ಷೆಯಿದೆ. ಲಾಲ್‌ಬಾಗ್ ಉದ್ಯಾನದ ವಿವಿಧಡೆ ಹೂವಿನಿಂದ ಅಲಂಕಾಡ ಮಾಡಿದ ಆಕೃತಿಗಳು ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದವರನ್ನೂ ಆಕರ್ಷಿಸುತ್ತವೆ.

78

ಫಲಪುಷ್ಪ ಪ್ರದರ್ಶನ ಮೇಳ ಈಗಾಗಲೇ ಕಳೆದ ನಾಲ್ಕು ದಿನಗಳ ಹಿಂದೆಯೇ ಆರಂಭವಾಗಿದ್ದು, ಸತತ 5ನೇ ದಿನವೂ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ವಾರದ ದಿನಗಳಲ್ಲಿ 20ರಿಂದ 30 ಸಾವಿರ ಜನರು ಭೇಟಿ ನಿಡುತ್ತಿದ್ದಾರೆ. ಉಳಿದಂತೆ ವಾರಾಂತ್ಯದ ದಿನಗಳಲ್ಲಿ 50 ಸಾವಿರಕ್ಕಿಂತ ಹೆಚ್ಚಿನ ಜನರು ಭೇಟಿ ನೀಡುತ್ತಿದ್ದಾರೆ.

88

ಲಾಲ್‌ಬಾಗ್ ಉದ್ಯಾನಕ್ಕೆ ಸಾಮಾನ್ಯ ದಿನಗಳಲ್ಲಿ ಪ್ರವೇಶಕ್ಕೆ ಸಾರ್ವಜನಿಕರಿಗೆ 50 ರೂ. ಹಾಗೂ ಮಕ್ಕಳಿಗೆ 30 ರೂ. ಟಿಕೆಟ್ ಇರುತ್ತದೆ. ಆದರೆ, ಈ ಫಲಪುಷ್ಪ ಪ್ರದರ್ಶನದ ವೇಳೆ ಈ ಟಿಕೆಟ್ ದರವನ್ನು ವಾರದ ದಿನಗಳಲ್ಲಿ 80 ರೂ. ಹಾಗೂ ವಾರಾಂತ್ಯದ ಶನಿವಾರ ಮತ್ತು ಭಾನುವಾರ ದಿನ 100 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.

Latest Videos
Recommended Stories
Recommended image1
ಸತ್ತವರ ಖಾತೆಗೆ ಹೋಗಿದೆ ಬರೋಬ್ಬರಿ 2.20 ಕೋಟಿ ಗೃಹಲಕ್ಷ್ಮೀ ಹಣ: ವಾಪಾಸ್‌ಗೆ ಸೂಚನೆ
Recommended image2
Coffee Shop New Rules ಬೈಟು ಕಾಫಿ ಹೇಳಿ ಗಂಟೆಗಟ್ಟಲೆ ಹರಟುವವರಿಗೆ ಇನ್ನು ಬೀಳುತ್ತೇ ದಂಡ!
Recommended image3
P Ramaiah Passes Away: ಮಾಜಿ ಎಂಎಲ್‌ಸಿ, ಹಿರಿಯ ಪತ್ರಕರ್ತ ಪಿ.ರಾಮಯ್ಯ ನಿಧನ, ದೇವೇಗೌಡ ಸೇರಿ ಗಣ್ಯರು ಸಂತಾಪ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved