
ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್ ಎ, ಬಿ..!
ವಿಜಯಪುರ ಜಿಲ್ಲೆಯ ಕುಖ್ಯಾತ ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ನಡುರಸ್ತೆಯಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ 6 ಸುತ್ತು ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಈ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ.
ವಿಜಯಪುರ (ಏ.17): ಭೀಮಾತೀರದ ಕುಖ್ಯಾತಿಯ ವಿಜಯಪುರ ಜಿಲ್ಲೆಯಲ್ಲಿ ಬಂದೂಕಿನ ನಳಿಕೆಗಳು ಮತ್ತೆ ಬೆಂಕಿ ಉಗುಳಿವೆ! ಹೌದು, ಶಾಂತಿ ನೆಲೆಸಿತು ಎನ್ನುವಷ್ಟರಲ್ಲೇ ಗುಂಡಿನ ಸದ್ದು ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.
ಕೆಲವೇ ದಿನಗಳ ಹಿಂದೆ ಜ್ಯುವೆಲರಿ ಶಾಪ್ ಮತ್ತು ಬ್ಯಾಂಕ್ ಲೂಟಿ ಮಾಡಿದ್ದ ಗ್ಯಾಂಗ್ಗಳ ಆರ್ಭಟ ತಣ್ಣಗಾಗುವ ಮೊದಲೇ, ಈಗ ನಡುರಸ್ತೆಯಲ್ಲೇ ನೆತ್ತರು ಹರಿದಿದೆ. ಥೇಟ್ ಯುಪಿ, ಬಿಹಾರ್ ಮಾದರಿಯಲ್ಲಿ 6 ರೌಂಡ್ ಫೈರಿಂಗ್ ನಡೆಸಿ ಮಾಜಿ ಗ್ರಾ.ಪಂ ಸದಸ್ಯನನ್ನ ಹತ್ಯೆ ಮಾಡಲಾಗಿದೆ.
ಈ ಭೀಕರ ಹತ್ಯಾಕಾಂಡ ಕಂಡ ಜನ ಮೌನಕ್ಕೆ ಶರಣಾಗಿದ್ದಾರೆ. ಹಾಗಾದ್ರೆ, ಭೀಮಾತೀರದಲ್ಲಿ ಮತ್ತೆ ಶತ್ರು ಸಂಹಾರಕ್ಕೆ ಸ್ಕೆಚ್ ಹಾಕಿದ್ದು ಯಾರು? ಯಾರ ಬಂದೂಕಿನಿಂದ ಸಿಡಿದ ಬುಲೆಟ್ಗಳು ರಾಜು ಎದೆಯನ್ನು ಸೀಳಿದವು?