- Home
- Karnataka Districts
- ಡಿಕೆಶಿ ಕುಂಡಲಿಯಲ್ಲಿ ಷಷ್ಠ ಸ್ಥಾನದಲ್ಲಿ ಶನಿ: ರಾಜಕೀಯ ಭವಿಷ್ಯವೇನು? CM ಖುರ್ಚಿ ಯಾರಿಗೆ? ಭೈರವಿ ಅಮ್ಮ ಸ್ಫೋಟಕ ನುಡಿ
ಡಿಕೆಶಿ ಕುಂಡಲಿಯಲ್ಲಿ ಷಷ್ಠ ಸ್ಥಾನದಲ್ಲಿ ಶನಿ: ರಾಜಕೀಯ ಭವಿಷ್ಯವೇನು? CM ಖುರ್ಚಿ ಯಾರಿಗೆ? ಭೈರವಿ ಅಮ್ಮ ಸ್ಫೋಟಕ ನುಡಿ
ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಪೈಪೋಟಿ ನಡೆಯುತ್ತಿದೆ. ಇದರ ನಡುವೆ, ಭೈರವಿ ಅಮ್ಮನವರು ಡಿ.ಕೆ.ಶಿವಕುಮಾರ್ ಅವರ ಜಾತಕವನ್ನು ವಿಶ್ಲೇಷಿಸಿ, ಭವಿಷ್ಯವಾಣಿ ನುಡಿದಿದ್ದಾರೆ. ಅವರು ಹೇಳಿದ್ದೇನು?

ಸಿಎಂ ಖುರ್ಚಿಗೆ ಪೈಪೋಟಿ
ರಾಜ್ಯ ರಾಜಕೀಯದಲ್ಲಿ ಸದ್ಯ ಒಂದೇ ಪಕ್ಷದಲ್ಲಿ ಖುರ್ಚಿಗಾಗಿ ಕಾದಾಟ ನಡೆಯುತ್ತಿರುವ ಅಪರೂಪದ ಘಟನೆ ನಡೆಯುತ್ತಿದೆ. ವಿಭಿನ್ನ ಪಕ್ಷಗಳು ಸಿಎಂ ಗಾದಿಗಾಗಿ ಕೆಸರೆರೆಚಾಟ ಮಾಡುವುದು ಸರ್ವೇ ಸಾಮಾನ್ಯ. ಆದರೆ ಅಪರೂಪದಲ್ಲಿ ಅಪರೂಪ ಎನ್ನುವಂಥ ರಾಜಕೀಯ ಬೆಳವಣಿಗೆ ಕರ್ನಾಟಕದಲ್ಲಿ ನಡೆಯುತ್ತಿದೆ. ಎರಡೂವರೆ ವರ್ಷಗಳ ಬಳಿಕ ಮುಖ್ಯಮಂತ್ರಿಯ ಖುರ್ಚಿ ಬಿಟ್ಟುಕೊಡುವುದಾಗಿ ಹೇಳಿದ್ದ ಸಿದ್ದರಾಮಯ್ಯನವರು ಈಗ ಉಲ್ಟಾ ಹೊಡೆದಿದ್ದರೆ, ಆ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಮಾತ್ರವಲ್ಲದೇ ಇನ್ನೂ ಕೆಲವರು ಪೈಪೋಟಿ ನಡೆಸುತ್ತಿದ್ದಾರೆ. ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎನ್ನುವ ಮೂಲಕ, ತೇಪೆ ಹಚ್ಚುವ ಕಾರ್ಯ ಮಾಡಲಾಗುತ್ತಿದೆಯಾದರೂ ಒಳಗೊಳಗೇ ನಡೆಯುತ್ತಿರುವ ಸಮರಕ್ಕೆ ರಾಜ್ಯ ಸಾಕ್ಷಿಯಾಗುತ್ತಿದೆ.
ರಾಜಕೀಯ ತಲ್ಲಣ
ಇದಾಗಲೇ ಡಿ.ಕೆ.ಶಿವಕುಮಾರ್ ಅವರು ಪೂಜೆ, ಪುನಸ್ಕಾರ ಮಾಡದ ದೇವರುಗಳಿಲ್ಲ. ಮಾಡದ ಹೋಮ-ಹವನಗಳೂ ಇಲ್ಲ. ಅಷ್ಟಕ್ಕೂ ಚುನಾವಣೆ ಸಮೀಪಿಸಿದಾಗ ಈ ರೀತಿಯ ಪೂಜೆ, ಪುನಸ್ಕಾರ, ಹೋಮ, ಹವನ ಬಹುತೇಕ ಎಲ್ಲಾ ರಾಜಕೀಯ ನಾಯಕರಿಗೂ ಸರ್ವೇ ಸಾಮಾನ್ಯವಾಗಿದ್ದರೂ, ಇದೀಗ ತಮ್ಮದೇ ಪಕ್ಷದ ವಿರುದ್ಧ ರಾಜಕಾರಣಿಯೊಬ್ಬರು ಈ ರೀತಿ ನಡೆದುಕೊಳ್ಳುತ್ತಿರುವುದು ಇಡೀ ದೇಶಾದ್ಯಂತ ಭಾರಿ ಚರ್ಚೆಗೂ ಗ್ರಾಸವಾಗುತ್ತಿದೆ. ಬಿಜೆಪಿಗೆ ಇದೊಂದು ದೊಡ್ಡ ಅಸ್ತ್ರವೂ ಆಗುತ್ತಿದೆ. ಮುಖ್ಯಮಂತ್ರಿ ಸ್ಥಾನ ಅವರಿಗೆ ಕೊಟ್ಟರೂ ಕಷ್ಟ, ಇವರಿಗೆ ಕೊಟ್ಟರೂ ಕಷ್ಟ ಎನ್ನುವಂಥ ಸ್ಥಿತಿ ಸದ್ಯ ಆಗಿದ್ದು, ಹೈಕಮಾಂಡ್ ಕೂಡ ಯಾವುದೇ ಸೂಕ್ತ ನಿರ್ಧಾರ ತೆಗೆದುಕೊಳ್ಳದ ಸ್ಥಿತಿಗೆ ಬಂದಿದೆ.
ಸ್ಫೋಟಕ ಭವಿಷ್ಯ
ಇದರ ನಡುವೆಯೇ, ಇದಾಗಲೇ ರಾಜ್ಯ, ದೇಶದ ಬಗ್ಗೆ ಹಲವಾರು ಭವಿಷ್ಯ ನುಡಿದಿರುವ ಭೈರವಿ ಅಮ್ಮ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.ಅಶ್ವವೇಗ ಯುಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಅವರು, ಬೌದ್ಧಿಕವಾಗಿ ನೋಡಿದರೆ ಡಿಕೆಶಿ ಅವರಿಗೆ ಮುಖ್ಯಮಂತ್ರಿ ಆಗುವ ಲಕ್ಷಣ ಇಲ್ಲ ಎಂದು ಎನ್ನಿಸುತ್ತದೆ. ಆದರೆ, ಅದೊಂದು ದೈವ ನಿರ್ಣಯವಿದೆ. ಮಾತು ಕೊಟ್ಟಂತೆ ನಡೆಯಬೇಕು. ಎರಡೂವರೆ ವರ್ಷಗಳ ಬಳಿಕ ಮುಖ್ಯಮಂತ್ರಿ ಸ್ಥಾನ ಕೊಡುವುದಾಗಿ ಸಿದ್ದರಾಮಯ್ಯ ಮಾತುಕೊಟ್ಟಂತೆ ನಡೆದುಕೊಳ್ಳಬೇಕು ಎನ್ನುತ್ತಲೇ ಡಿ.ಕೆ.ಶಿವಕುಮಾರ್ ಅವರ ಜಾತಕ ನೋಡಿರುವ ಭೈರವಿ ಅಮ್ಮ ಕೆಲವೊಂದು ವಿಷಯಗಳನ್ನು ಹೇಳಿದ್ದಾರೆ.
ಡಿಕೆಶಿ ಜಾತಕ ನನ್ನ ಕೈಯಲ್ಲಿದೆ
ಡಿ.ಕೆ.ಶಿವಕುಮಾರ್ ಅವರ ಜಾತಕ ನನ್ನ ಕೈಯಲ್ಲಿ ಇದೆ. ಅವರದ್ದು ಮೇಷ ಲಗ್ನ. ಅವರ ಕುಂಡಲಿಯನ್ನು ನಾನು ನೋಡಿದ್ದೇನೆ. ಸದ್ಯ ರವಿ ಉಚ್ಛಸ್ಥಾನದಲ್ಲಿ ಇದ್ದಾನೆ. ಕುಂಭದಲ್ಲಿ ಗುರು ಇದ್ದಾನೆ. ಇಂಥ ಸಂದರ್ಭದಲ್ಲಿ ಗುರುವಿನ ಅನುಗ್ರಹ ಆಗುತ್ತದೆ. ಇಂಥ ಸಂದರ್ಭದಲ್ಲಿ ಶುಭ ಕಾರ್ಯಕ್ಕೆ ಅಡ್ಡ ಇದ್ದವರನ್ನು ಹೇಗೆ ಸರಿಸಬೇಕು ಎನ್ನುವ ಸನ್ನಿವೇಶವನ್ನು ಗುರುವೇ ಕ್ರಿಯೇಟ್ ಮಾಡುತ್ತಾನೆ ಎಂದು ಭೈರವಿ ಅಮ್ಮ ಹೇಳಿದ್ದಾರೆ.
ಸ್ವಲ್ಪ ದಿನದಲ್ಲೇ ಶನಿ ನಿರ್ಗಮನ
2024ರಿಂದ ಡಿ.ಕೆ.ಶಿವಕುಮಾರ್ ಅವರಿಗೆ ಪಂಚಮ ಶನಿ ನಡೆಯುತ್ತಿತ್ತು. ಇದು ತುಂಬಾ ತೊಂದರೆ ಕೊಟ್ಟಿದೆ. ಇದೀಗ ಶನಿ ಷಷ್ಠ ಸ್ಥಾನಕ್ಕೆ ಬಂದಿದ್ದಾನೆ, ಈಗ ಆತ ಮೀನ ರಾಶಿಯಲ್ಲಿ ಇದ್ದಾನೆ. ಸ್ವಲ್ಪ ದಿನ ಶನಿ ನಿರ್ಗಮನ ಆಗುತ್ತದೆ. ಅದು ನಿರ್ಗಮಿಸಿದಂತೆಯೇ ತಕ್ಷಣವೇ ಡಿ.ಕೆ.ಶಿವಕುಮಾರ್ ಅವರಿಗೆ ಉತ್ತಮ ಫಲಿತಾಂಶ ಸಿಗುತ್ತದೆ. ಅವರು ಮುಖ್ಯಮಂತ್ರಿ ಆಗುವುದು ಸತ್ಯ ಸತ್ಯ ಸತ್ಯ ಎಂದಿದ್ದಾರೆ. ಆದರೆ ಅವರ ಜಾತಕದಲ್ಲಿ ಸ್ವಲ್ಪ ದೋಷಗಳು ಇರುವ ಹಿನ್ನೆಲೆಯಲ್ಲಿ ಕೆಲವು ಪರಿಹಾರಗಳನ್ನು ಮಾಡಿಕೊಳ್ಳಬೇಕು. ಹೀಗಾದರೆ ಯಾವುದೇ ಸಮಸ್ಯೆ ಇಲ್ಲದೇ ಮುಖ್ಯಮಂತ್ರಿ ಸೀಟು ಪ್ರಾಪ್ತಿ ಆಗುವುದನ್ನು ಯಾರಿಂದಲೂ ತಪ್ಪಿಸಲು ಆಗುವುದಿಲ್ಲ ಎಂದಿದ್ದಾರೆ ಭೈರವಿ ಅಮ್ಮ.

