- Home
- Life
- Relationship
- 4 ಲಕ್ಷ ಬೆಲೆ ಬಾಳುವ ಸೆ*ಕ್ಸ್ ಡಾಲ್ಸ್ ಮಾರಾಟ: Karnataka No.1: ಅಂಥದ್ದೇನಿದೆ? ಮಾಲೀಕರೇ ಹೇಳಿದ್ದಾರೆ ನೋಡಿ!
4 ಲಕ್ಷ ಬೆಲೆ ಬಾಳುವ ಸೆ*ಕ್ಸ್ ಡಾಲ್ಸ್ ಮಾರಾಟ: Karnataka No.1: ಅಂಥದ್ದೇನಿದೆ? ಮಾಲೀಕರೇ ಹೇಳಿದ್ದಾರೆ ನೋಡಿ!
ಒಂಟಿತನ ನೀಗಿಸಿಕೊಳ್ಳಲು ಪುರುಷರು ದುಬಾರಿ ಸೆ*ಕ್ಸ್ ಡಾಲ್ಸ್ ಮೊರೆ ಹೋಗುತ್ತಿದ್ದು, ಭಾರತದಲ್ಲಿ ಇದರ ಮಾರುಕಟ್ಟೆ ಬೆಳೆಯುತ್ತಿದೆ. ಅದರಲ್ಲೂ ಕರ್ನಾಟಕದ ಪುರುಷರು ನಾಲ್ಕು ಲಕ್ಷ ರೂಪಾಯಿವರೆಗಿನ, ಥೇಟ್ ಹೆಣ್ಣನ್ನೇ ಹೋಲುವ ಗೊಂಬೆ ಖರೀದಿಯಲ್ಲಿ ಮುಂದಿದ್ದಾರೆ ಎಂದು ತಯಾರಕರೊಬ್ಬರು ಬಹಿರಂಗಪಡಿಸಿದ್ದಾರೆ.

ಬಯಸುವುದು ಏಕೆ?
ಅನೇಕ ಕಾರಣಗಳಿಂದ ಇಂದು ಒಂಟಿಯಾಗಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಸಂಗಾತಿಯ ಸಾವು, ಡಿವೋರ್ಸ್, ಮದುವೆಯೇ ಬೇಡ ಎನ್ನುವ ಯೋಚನೆ, ಮದುವೆಯಾಗುವ ಯೋಚನೆ ಇದ್ದರೂ ಹುಡುಗಿಯರ ಡಿಮಾಂಡ್ ಪೂರೈಸಲಾರದೇ ಒಂಟಿಯಾಗಿರುವ ಪುರುಷರು, ಲಕ್ಷಾಂತರ ರೂಪಾಯಿ ದುಡಿದರೂ ಅದ್ಯಾವುದೋ ಕಾರಣಕ್ಕೆ ಮದುವೆನೇ ಆಗದೇ ಉಳಿದುಕೊಂಡವರು... ಹೀಗೆ ದೊಡ್ಡ ಪಟ್ಟಿಯೇ ಇದೆ.
ಹೇಳಿದಂತೆ ಕೇಳೋ ಹೆಣ್ಣು!
ಅಂಥವರ ಪೈಕಿ ಕೈತುಂಬಾ ಹಣ ಇದ್ದವರು, ಮೊರೆ ಹೋಗ್ತಿರೋದು ಸೆ*ಕ್ಸ್ ಡಾಲ್ಸ್ಗೆ. ಹುಡುಗಿಯರಿಗಿಂತಲೂ ತಾವು ಹೇಳಿದಂತೆ ಕೇಳುವ ಈ ಗೊಂಬೆಗಳೇ ಬೆಸ್ಟ್ ಎನ್ನೋದು ಈ ಪುರುಷರ ಭಾವನೆ. ಅದರಲ್ಲಿಯೂ ಕೊರೋನಾ ಲಾಕ್‌ಡೌನ್‌ನಿಂದಾಗಿ ಜಾಗತಿಕ ಮಟ್ಟದಲ್ಲಿ ಸೆ*ಕ್ಸ್ ಟಾಯ್ಸ್ ಮಾರಾಟ ಹೆಚ್ಚಾಗಿತ್ತು.
370 ಮಿಲಿಯನ್ ಡಾಲರ್!
ಕುತೂಹಲದ ಸಂಗತಿ ಏನೆಂದರೆ, ಭಾರತದಲ್ಲಿ 2024 ರಲ್ಲಿ 112-118 ಮಿಲಿಯನ್ ಡಾಲರ್ ಇದೇ ಗೊಂಬೆಗಳಿಂದ ಗಳಿಕೆಯಾಗಿದ್ದರೆ, 2030 ರ ವೇಳೆಗೆ ಇದರ ಪ್ರಮಾಣ 260-370 ಮಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ ಎನ್ನುವ ಲೆಕ್ಕಾಚಾರ ಇದೆ. ನಗರ ಪ್ರದೇಶಗಳು ಬೇಡಿಕೆಯಲ್ಲಿ ಏರುತ್ತಲೇ ಇದೆ. ಕೆಲವೇ ಸಾವಿರ ರೂಪಾಯಿಗಳಿಂದ ಆರಂಭವಾಗುವ ಈ ಗೊಂಬೆಗಳು ಲಕ್ಷ ಲಕ್ಷ ಬೆಲೆ ಬಾಳುತ್ತವೆ.
ಕರ್ನಾಟಕವೂ ನಂ.1
ಇದೀಗ ರಾಜ್ ಶಮಾನಿ ಅವರ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಈ ಡಾಲ್ ತಯಾರಕರೇ ಇದರ ಬಗ್ಗೆ ಅಚ್ಚರಿಕೆಯ ಹೇಳಿಕೆಯನ್ನು ನೀಡಿದ್ದಾರೆ. ಅದರಲ್ಲಿ ಅಚ್ಚರಿ ಎನ್ನುವುದಕ್ಕೆ ಕಾರಣವೂ ಇದೆ. ಅದೇನೆಂದರೆ, ಭಾರತದಲ್ಲಿ ಕರ್ನಾಟಕದಲ್ಲಿಯೇ ಈ ಸೆ*ಕ್ಸ್ ಡಾಲ್ಸ್ ಮಾರಾಟ ಹೆಚ್ಚಾಗುತ್ತಿದೆಯಂತೆ. ತಮಿಳುನಾಡು ಮತ್ತು ಪಂಜಾಬ್ ಜೊತೆಗೆ ಕರ್ನಾಟಕದಲ್ಲಿ ಇದರ ಪ್ರಮಾಣ ಹೆಚ್ಚು ಎನ್ನುವ ವಿಷಯವನ್ನು ಅವರು ತಿಳಿಸಿದ್ದಾರೆ.
ನಾಲ್ಕು ಲಕ್ಷ ರೂ.
ಹಾಗೆಂದು ಕರ್ನಾಟಕದ ಮಂದಿ ಒಂದಷ್ಟು ಸಾವಿರ ರೂಪಾಯಿ ಕೊಟ್ಟು ಇದನ್ನು ಖರೀದಿ ಮಾಡುತ್ತಿಲ್ಲ. ಅತ್ಯಂತ ಬೆಲೆ ಬಾಳುವ ಅಂದರೆ ನಾಲ್ಕು ಲಕ್ಷ ರೂಪಾಯಿಯನ್ನು ಕೊಟ್ಟು ಒಂದು ಈ ಗೊಂಬೆಯನ್ನು ಖರೀದಿ ಮಾಡುವವರಲ್ಲಿ ಕರ್ನಾಟಕದವರೇ ಅತ್ಯಧಿಕ ಎನ್ನುವ ವಿಷಯವನ್ನು ಈ ಸಂದರ್ಶನದಲ್ಲಿ ಅವರು ರಿವೀಲ್ ಮಾಡಿದ್ದಾರೆ!
ಪುರುಷರ ಆಸಕ್ತಿಗೆ ತಕ್ಕಂತೆ...
ನಾಲ್ಕು ಲಕ್ಷ ರೂಪಾಯಿ ಕೊಡುವಷ್ಟು ವಿಶೇಷತೆ ಇದರಲ್ಲಿ ಏನಿದೆ ಎನ್ನುವ ಬಗ್ಗೆ ಅವರು ಮಾತನಾಡಿದ್ದಾರೆ. ಇದು ಥೇಟ್ ಹೆಣ್ಣನ್ನು ಹೋಲುವ ರೀತಿಯಲ್ಲಿಯೇ ಇದೆ. ತಮ್ಮ ದೈಹಿಕ ವಾಂಛೆಯನ್ನು ತೀರಿಸಿಕೊಳ್ಳಲು ಬಯಸುವವರು ಯಾವ ರೀತಿಯ ಹೆಣ್ಣಿನ ದೇಹವನ್ನು ಬಯಸುತ್ತಾರೋ ಅಂಥದ್ದೇ ದೇಹವನ್ನು ಈ ಗೊಂಬೆ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ಥೇಟ್ ಹೆಣ್ಣನ್ನೇ ಹೋಲುತ್ತದೆ
ಇದನ್ನು ನೋಡಿದರೆ, ಕೃತಕ ಎಂದು ಅನ್ನಿಸುವುದಿಲ್ಲ. ಅದರ ತ್ವಚೆಯಿಂದ ಹಿಡಿದು ಸರ್ವ ಅಂಗಗಳೂ ಹೆಣ್ಣನ್ನು ಹೋಲುವ ರೀತಿಯಲ್ಲಿಯೇ ಇದೆ. ತುಟಿ, ಮೂಗು, ಕಣ್ಣು ಎಲ್ಲವೂ ಸೇಮ್ ಟು ಸೇಮ್ ಹೆಣ್ಣನ್ನೇ ಹೋಲುತ್ತದೆ ಎಂದು ಅವರು ಹೇಳಿದ್ದಾರೆ.
ಅಂಗಾಂಗ ಬದಲಾವಣೆ
ಅಷ್ಟೇ ಅಲ್ಲದೇ ಇದರ ವಿಶೇಷತೆ ಏನೆಂದರೆ, ಗಂಡಸರು ಈ ಹೆಣ್ಣಿನ ಎಲ್ಲ ಅಂಗಾಂಗಗಳನ್ನು ತಮಗೆ ಹೇಗೆ ಬೇಕೋ ಆ ರೀತಿ ಬದಲಾವಣೆಗೆ ಅವಕಾಶ ಮಾಡಿಕೊಡಲಾಗಿದೆ. ಅಳತೆ, ಡ್ರೆಸ್ ಸೆನ್ಸ್ ಸೇರಿದಂತೆ ಎಲ್ಲವೂ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಬಹುದಾಗಿರುವ ಕಾರಣದಿಂದ ಇಷ್ಟು ದುಬಾರಿಯಾಗಿದ್ದರೂ ಅದನ್ನು ಬಳಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

