MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಪತ್ನಿಗೆ ತಾಯಿಯಾಗುವ ಹಂಬಲವಿದ್ದರೆ, ಕೋಮಾದಲ್ಲಿರುವ ಗಂಡನಿಂದಲೂ ವೀರ್ಯ ಪಡೆಯಬಹುದು! ಹೇಗೆ ತೆಗೆಯಲಾಗುತ್ತೆ? ಎಷ್ಟು ಖರ್ಚು?

ಪತ್ನಿಗೆ ತಾಯಿಯಾಗುವ ಹಂಬಲವಿದ್ದರೆ, ಕೋಮಾದಲ್ಲಿರುವ ಗಂಡನಿಂದಲೂ ವೀರ್ಯ ಪಡೆಯಬಹುದು! ಹೇಗೆ ತೆಗೆಯಲಾಗುತ್ತೆ? ಎಷ್ಟು ಖರ್ಚು?

ಪತ್ನಿಗೆ ತಾಯಿಯಾಗುವ ಹಂಬಲವಿದ್ದರೆ, ಕೋಮಾದಲ್ಲಿರುವ ಗಂಡನಿಂದಲೂ ವೀರ್ಯ ಪಡೆಯಬಹುದು! ಹೇಗೆ ತೆಗೆಯಲಾಗುತ್ತೆ, ಸಮಯದ ಪಾfರವೇನು, ಚಿಕ್ಕಿತ್ಸೆಗೆ ಖರ್ಚಾಗುವ ಹಣವೆಷ್ಟು ತಿಳಿಯಲು ಮುಂದೆ ಓದಿ.

2 Min read
Author : Ravi Janekal
Published : Apr 16 2026, 12:32 PM IST
Share this Photo Gallery
  • FB
  • TW
  • Linkdin
  • Whatsapp
15
ಕೋಮಾದಲ್ಲಿರುವ ವ್ಯಕ್ತಿಯಿಂದ ವೀರ್ಯ ಹೇಗೆ ತೆಗೆಯಲಾಗುತ್ತೆ?
Image Credit : Asianet News

ಕೋಮಾದಲ್ಲಿರುವ ವ್ಯಕ್ತಿಯಿಂದ ವೀರ್ಯ ಹೇಗೆ ತೆಗೆಯಲಾಗುತ್ತೆ?

ವೈದ್ಯಕೀಯ ವಿಜ್ಞಾನವು ಇಂದು ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತಾ ಮುನ್ನಡೆಯುತ್ತಿದೆ. ಒಂದು ಕಾಲದಲ್ಲಿ ಕಲ್ಪನೆಗೂ ನಿಲುಕದ ವಿಷಯಗಳು ಇಂದು ವಾಸ್ತವವಾಗುತ್ತಿವೆ. ಹೌದು ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಕೋಮಾದಲ್ಲಿರುವ ವ್ಯಕ್ತಿಯಿಂದ ವೀರ್ಯವನ್ನು ಹೊರತೆಗೆಯುವ ತಂತ್ರಜ್ಞಾನ. ಅಚ್ಚರಿಯೆನಿಸುತ್ತದಲ್ಲವೇ? ಇತ್ತೀಚೆಗೆ ದೆಹಲಿ ಹೈಕೋರ್ಟ್ ನೀಡಿದ ಒಂದು ಮಹತ್ವದ ತೀರ್ಪು ಈ ವಿಷಯದ ಚರ್ಚೆಯು ಮುನ್ನಲೆಗೆ ಬಂದಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಆರೋಗ್ಯ ನಿಯತಕಾಲಿಕೆಗಳಲ್ಲಿ ಚರ್ಚಿತಗೊಳ್ಳುತ್ತಿವೆ.

25
ಭರವಸೆ ಮೂಡಿಸಿದ ಹೈಕೋರ್ಟ್ ತೀರ್ಪು
Image Credit : Asianet News

ಭರವಸೆ ಮೂಡಿಸಿದ ಹೈಕೋರ್ಟ್ ತೀರ್ಪು

ಇಂಡಿಯನ್ ಅರ್ಮಿ ಸೈನಿಕರೊಬ್ಬರು ದೀರ್ಘಕಾಲದಿಂದ ಕೋಮಾ ಸ್ಥಿತಿಯಲ್ಲಿದ್ದರು. ಆದರೆ ಆ ಸೈನಿಕನ ಪತ್ನಿಗೆ ತಾಯಿಯಾಗುವ ಹಂಬಲ! ಇತ್ತ ಪತಿ ನಿಶ್ಚಲವಾಗಿ ಕೋಮಸ್ಥಿತಿಯಲ್ಲಿ ಮಲಗಿದ್ದಾನೆ ಇಂಥ ಸ್ಥಿತಿಯಲ್ಲಿ ಪತ್ನಿ ಮಾಡಿದ್ದೇನೆಂದರೆ ಪತಿಯ ವೀರ್ಯವನ್ನು ಸಂರಕ್ಷಿಸಲು ಅನುಮತಿ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಪ್ರಕರಣದಲ್ಲಿ ಮಾನವೀಯ ಹಿನ್ನೆಲೆ ತೀರ್ಪು ನೀಡಿದ ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ ಅವರು, 'ಪತಿಯ ಲಿಖಿತ ಒಪ್ಪಿಗೆ ಇಲ್ಲ ಎಂಬ ಕಾರಣಕ್ಕೆ ಪತ್ನಿಯ ಹಕ್ಕನ್ನು ನಿರಾಕರಿಸಲು ಸಾಧ್ಯವಿಲ್ಲ' ಎಂದು ಹೇಳಿದರು. ಈ ದಂಪತಿಗಳು ಮೊದಲೇ ಐವಿಎಫ್ (IVF) ಮೂಲಕ ಮಗು ಪಡೆಯಲು ಪ್ರಯತ್ನಿಸುತ್ತಿದ್ದರಿಂದ, ನ್ಯಾಯಾಲಯವು ಇದಕ್ಕೆ ಕಾನೂನು ಮಾನ್ಯತೆ ನೀಡಿತು. ಈ ತೀರ್ಪು ಪ್ರಜ್ಞಾಹೀನ ಸ್ಥಿತಿಯಲ್ಲಿರುವ ರೋಗಿಗಳ ಕುಟುಂಬಕ್ಕೆ ಹೊಸ ಭರವಸೆ ನೀಡಿರುವುದಂತೂ ದಿಟ.

Related Articles

Related image1
ಅವಿವಾಹಿತ ನಟಿ ಭಾವನಾ ರಾಮಣ್ಣ ಗರ್ಭಿಣಿ, ಭಾರತದಲ್ಲಿ ಒಂಟಿ ಮಹಿಳೆ ಐವಿಎಫ್ ಮೂಲಕ ತಾಯಿಯಾಗಲು ಅವಕಾಶವಿದೆಯೇ?
Related image2
ತನ್ನ ವೀರ್ಯ ಬಳಸಿ ತಾಯಿಯಾಗಲು ಬಯಸುವರಿಗೆ IVF ವೆಚ್ಚ, ಎಲ್ಲಾ ಮಕ್ಕಳಿಗೆ ಆಸ್ತಿಯಲ್ಲಿ ಪಾಲು: ಉದ್ಯಮಿಯ ಬಿಗ್ ಆಫರ್
35
ಏನಿದು ವೀರ್ಯ ಮರುಪಡೆಯುವಿಕೆ ತಂತ್ರ?
Image Credit : Asianet News

ಏನಿದು ವೀರ್ಯ ಮರುಪಡೆಯುವಿಕೆ ತಂತ್ರ?

ಒಬ್ಬ ವ್ಯಕ್ತಿ ಅಪಘಾತದಿಂದಲೋ, ಇನ್ಯಾವುದೋ ದುರಂತದಿಂದಾಗಿ ಕೋಮಾಕ್ಕೆ ಹೋದಾಗ ಅವರ ದೇಹವು ಬಾಹ್ಯ ಪ್ರಪಂಚಕ್ಕೆ ಸ್ಪಂದಿಸುವುದಿಲ್ಲ, ಆದರೆ ಒಳಗಿನ ಅಂಗಾಂಗಗಳು ಕಾರ್ಯನಿರ್ವಹಿಸುತ್ತಿರುತ್ತವೆ. ಇಂತಹ ಸ್ಥಿತಿಯಲ್ಲಿ ನೈಸರ್ಗಿಕವಾಗಿ ವೀರ್ಯ ಹೊರತೆಗೆಯಲು ಸಾಧ್ಯವಾಗದಿದ್ದಾಗ, ವೈದ್ಯರು 'ಸರ್ಜಿಕಲ್ ಸ್ಪೆರ್ಮ್ ರಿಟ್ರೈವಲ್' (SSR) ಎಂಬ ವಿಧಾನವನ್ನು ಬಳಸುತ್ತಾರೆ. ಇದು ಅತ್ಯಂತ ನಿಖರವಾದ ಶಸ್ತ್ರಚಿಕಿತ್ಸಾ ವಿಧಾನವಾಗಿದ್ದು, ಮೂತ್ರಶಾಸ್ತ್ರಜ್ಞರು (Urologists) ನೇರವಾಗಿ ಸಂತಾನೋತ್ಪತ್ತಿ ಅಂಗಗಳಿಂದ ವೀರ್ಯವನ್ನು ಸಂಗ್ರಹಿಸುತ್ತಾರೆ.

45
PESA ಮತ್ತು TESA: ವೀರ್ಯ ಪಡೆಯುವ ಎರಡು ಮಾರ್ಗಗಳು
Image Credit : Asianet News

PESA ಮತ್ತು TESA: ವೀರ್ಯ ಪಡೆಯುವ ಎರಡು ಮಾರ್ಗಗಳು

ಈ ಪ್ರಕ್ರಿಯೆಯಲ್ಲಿ ಮುಖ್ಯವಾಗಿ ಎರಡು ವಿಧಾನಗಳನ್ನು ಬಳಸಲಾಗುತ್ತದೆ:

ಮೊದಲನೆಯದು, PESA (ಪರ್ಕ್ಯುಟೇನಿಯಸ್ ಎಪಿಡಿಡೈಮಲ್ ಸ್ಪೆರ್ಮ್ ಆಸ್ಪಿರೇಷನ್): ಇದರಲ್ಲಿ ವೃಷಣದ ಮೇಲಿರುವ ಕೊಳವೆಯಿಂದ (ಎಪಿಡಿಡೈಮಿಸ್) ಅತ್ಯಂತ ಸೂಕ್ಷ್ಮವಾದ ಸೂಜಿಯ ಮೂಲಕ ವೀರ್ಯವನ್ನು ಹೀರಿಕೊಳ್ಳಲಾಗುತ್ತದೆ.

TESA (ಟೆಸ್ಟಿಕುಲರ್ ಸ್ಪೆರ್ಮ್ ಆಸ್ಪಿರೇಷನ್): ಈ ವಿಧಾನದಲ್ಲಿ ವೈದ್ಯರು ನೇರವಾಗಿ ವೃಷಣದ ಅಂಗಾಂಶಕ್ಕೆ ಸೂಜಿಯನ್ನು ಚುಚ್ಚುವ ಮೂಲಕ ವೀರ್ಯವನ್ನು ಹೊರತೆಗೆಯುತ್ತಾರೆ. ಈ ಎರಡೂ ಪ್ರಕ್ರಿಯೆಗಳನ್ನು ಅರಿವಳಿಕೆ (Anesthesia) ನೀಡಿ ಮಾಡುವುದರಿಂದ ರೋಗಿಗೆ ಯಾವುದೇ ನೋವಾಗುವುದಿಲ್ಲ.

ಸಮಯ ಅತ್ಯಂತ ಮುಖ್ಯ

ಇಲ್ಲಿ ಸಮಯವೇ ಅತ್ಯಂತ ಪ್ರಮುಖವಾದುದು. ವ್ಯಕ್ತಿಯು ಕೋಮಾಕ್ಕೆ ಹೋದಾಗ ಅಥವಾ ಮೆದುಳು ನಿಷ್ಕ್ರಿಯಗೊಂಡಾಗ (Brain Dead), ವೀರ್ಯದ ಗುಣಮಟ್ಟ ಉತ್ತಮವಾಗಿರಲು 48 ರಿಂದ 72 ಗಂಟೆಗಳ ಒಳಗಾಗಿ ಈ ಪ್ರಕ್ರಿಯೆ ನಡೆಯಬೇಕು. ಸಮಯ ಕಳೆದಂತೆ ವೀರ್ಯದ ಚಲನಶೀಲತೆ ಮತ್ತು ಜೀವಿತಾವಧಿ ಕಡಿಮೆಯಾಗುತ್ತಾ ಹೋಗುತ್ತದೆ. ಆದ್ದರಿಂದಲೇ ಇಂತಹ ಪ್ರಕರಣಗಳಲ್ಲಿ ಕಾನೂನು ಪ್ರಕ್ರಿಯೆ ಮತ್ತು ವೈದ್ಯಕೀಯ ಚಿಕಿತ್ಸೆ ಎರಡೂ ವೇಗವಾಗಿ ನಡೆಯಬೇಕಾಗುತ್ತದೆ.

55
ವೀರ್ಯವನ್ನು ಸಂರಕ್ಷಿಸುವುದು ಹೇಗೆ?
Image Credit : Asianet News

ವೀರ್ಯವನ್ನು ಸಂರಕ್ಷಿಸುವುದು ಹೇಗೆ?

ಹೊರತೆಗೆದ ವೀರ್ಯವನ್ನು ಕೂಡಲೇ ಬಳಸಬೇಕೆಂದಿಲ್ಲ. 'ಕ್ರಯೋಪ್ರೆಸರ್ವೇಶನ್' (Cryopreservation)* ಎಂಬ ತಂತ್ರಜ್ಞಾನದ ಮೂಲಕ ಇದನ್ನು ದ್ರವ ಸಾರಜನಕವಿರುವ ಟ್ಯಾಂಕ್‌ಗಳಲ್ಲಿ ಅತಿ ಕಡಿಮೆ ತಾಪಮಾನದಲ್ಲಿ ಹೆಪ್ಪುಗಟ್ಟಿಸಿ ಸಂರಕ್ಷಿಸಲಾಗುತ್ತದೆ. ಈ ವಿಧಾನದಲ್ಲಿ ವೀರ್ಯವನ್ನು ಹಲವು ವರ್ಷಗಳವರೆಗೆ ಸುರಕ್ಷಿತವಾಗಿ ಇಡಬಹುದು. ಮುಂದೆ ಪತ್ನಿ ಅಥವಾ ಸಂಗಾತಿ ಸಿದ್ಧರಾದಾಗ IVF ಅಥವಾ ICSI ಚಿಕಿತ್ಸೆಯ ಮೂಲಕ ಗರ್ಭಧರಿಸಲು ಇದನ್ನು ಬಳಸಬಹುದು.

ಈ ಚಿಕಿತ್ಸೆಗೆ ಎಷ್ಟು ಹಣ ಬೇಕಾಗುತ್ತೆ?

ಭಾರತದಲ್ಲಿ ಈ ತಂತ್ರಜ್ಞಾನದ ವೆಚ್ಚ ಆಸ್ಪತ್ರೆ ಮತ್ತು ನಗರಗಳನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ PESA ಅಥವಾ TESA ನಂತಹ ಮೂಲಭೂತ ವಿಧಾನಗಳಿಗೆ ಅಂದಾಜು ₹25,000 ರಿಂದ ₹50,000 ವರೆಗೆ ಖರ್ಚಾಗಬಹುದು.

ಇನ್ನು ಸುಧಾರಿತ ತಂತ್ರ ಬಳಸುವುದಾದರೆ, ಒಂದು ವೇಳೆ ಮೈಕ್ರೋ-TESE ನಂತಹ ಸೂಕ್ಷ್ಮದರ್ಶಕ ಬಳಸಿ ಮಾಡುವ ಸುಧಾರಿತ ವಿಧಾನ ಬೇಕಿದ್ದರೆ, ವೆಚ್ಚ ₹1.2 ಲಕ್ಷಕ್ಕಿಂತ ಹೆಚ್ಚಾಗಬಹುದು.

ಬೆಂಗಳೂರು, ಮುಂಬೈ, ದೆಹಲಿಯಂತಹ ನಗರಗಳ ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿ ಈ ದರಗಳು ಇನ್ನು ಸ್ವಲ್ಪ ಹೆಚ್ಚಿರಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಇದು ಅಗ್ಗವಾದರೂ, ಇಂತಹ ಸುಧಾರಿತ ಸೌಲಭ್ಯಗಳ ಲಭ್ಯತೆ ಸವಾಲಿನ ಕೆಲಸವಾಗಿದೆ.

ಗಮನಿಸಿ: ಇಲ್ಲಿ ಕೊಡಲಾಗಿರುವ ಮಾಹಿತಿ ಆರೋಗ್ಯ ನಿಯತಕಾಲಿಕೆಗಳಿಂದ ಪಡೆದ ಪ್ರಾಥಮಿಕ ಮಾಹಿತಿಯಾಗಿದೆ.  ಆರೋಗ್ಯ ಸಂಬಂಧಿತ ಸಮಸ್ಯೆಗಳೀಗೆ ವೈದ್ಯರನ್ನ ಸಂಪರ್ಕಿಸಿ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಆರೋಗ್ಯ
ಜೀವನಶೈಲಿ

Latest Videos
Recommended Stories
Recommended image1
ಯೋಗೇಶ್ ಗೌಡ ಕೊಲೆ ಪ್ರಕರಣ: ವಿನಯ್‌ ಕುಲಕರ್ಣಿಗೆ ಇಂದು ಶಿಕ್ಷೆ ಪ್ರಕಟ | ಯಾರಿಗೂ ತೊಂದರೆ ಕೊಟ್ಟಿಲ್ಲ: ಜಡ್ಜ್‌ ಮುಂದೆ ಕಣ್ಣೀರಿಟ್ಟ ಶಾಸಕ
Recommended image2
ನಮ್ಮ ಗ್ರಾಮಕ್ಕೆ 79 ವರ್ಷಗಳಿಂದ ಕರೆಂಟು ಇಲ್ಲ! ವಿದ್ಯುತ್ ಕೊಡದಿದ್ದರೆ ದಯಾಮರಣ ಕೊಡಿ, ಬೇಸತ್ತ ವೃದ್ಧೆಯಿಂದ ಸಿಎಂ ಪತ್ರ
Recommended image3
Karnataka Politics: ತಂದೆ ಸಿಎಂ ಇರುವಾಗ ನಾ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸ್ಪಷ್ಟನೆ
Related Stories
Recommended image1
ಅವಿವಾಹಿತ ನಟಿ ಭಾವನಾ ರಾಮಣ್ಣ ಗರ್ಭಿಣಿ, ಭಾರತದಲ್ಲಿ ಒಂಟಿ ಮಹಿಳೆ ಐವಿಎಫ್ ಮೂಲಕ ತಾಯಿಯಾಗಲು ಅವಕಾಶವಿದೆಯೇ?
Recommended image2
ತನ್ನ ವೀರ್ಯ ಬಳಸಿ ತಾಯಿಯಾಗಲು ಬಯಸುವರಿಗೆ IVF ವೆಚ್ಚ, ಎಲ್ಲಾ ಮಕ್ಕಳಿಗೆ ಆಸ್ತಿಯಲ್ಲಿ ಪಾಲು: ಉದ್ಯಮಿಯ ಬಿಗ್ ಆಫರ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved