- Home
- Life
- Relationship
- Chanakya Niti: ಇಂಥಾ ಮಹಿಳೆಯರ ಕೈ ಹಿಡಿದ್ರೆ ಜೀವನ ಪರ್ಯಂತ ಅಳೋದು ಗ್ಯಾರಂಟಿ: ಮದುವೆ ಬಗ್ಗೆ ಪುರುಷರಿಗೆ ಕಿವಿಮಾತು
Chanakya Niti: ಇಂಥಾ ಮಹಿಳೆಯರ ಕೈ ಹಿಡಿದ್ರೆ ಜೀವನ ಪರ್ಯಂತ ಅಳೋದು ಗ್ಯಾರಂಟಿ: ಮದುವೆ ಬಗ್ಗೆ ಪುರುಷರಿಗೆ ಕಿವಿಮಾತು
ಸಾಂಸಾರಿಕ ಜೀವನ ಶಾಂತಿಯುತವಾಗಿರಬೇಕಾದ್ರೆ ಎಂತಹ ಹೆಣ್ಣನ್ನು ಮದುವೆ ಮಾಡಿಕೊಳ್ಳಬೇಕು ಎಂಬುದನ್ನು ಚಾಣಕ್ಯರು ತಿಳಿಸಿದ್ದಾರೆ. ತಮ್ಮ ನೀತಿಯಲ್ಲಿ 6 ರೀತಿಯ ಮಹಿಳೆಯರನ್ನು ಮದುವೆ ಆಗಬಾರದು ಎಂದು ಹೇಳಿದ್ದಾರೆ.

ಚಾಣಕ್ಯ ನೀತಿ
ಆಚಾರ್ಯ ಚಾಣಕ್ಯರು ಆರ್ಥಿಕ ಮತ್ತು ರಾಜಕೀಯ ತಜ್ಞರಾಗಿದ್ದಾರೆ. ಅರ್ಥಶಾಸ್ತ್ರ ಎಂಬ ಬಹುದೊಡ್ಡ ಪುಸ್ತಕವನ್ನು ಸಹ ಬರೆದಿದ್ದು, ಇದು ಯುದ್ದನೀತಿ ಮತ್ತು ಆರ್ಥಿಕ ನೀತಿಗಳನ್ನು ಒಳಗೊಂಡಿದೆ. ಇದೆಲ್ಲದರೊಂದಿಗೆ ಜೀವನದ ಕುರಿತ ನೀತಿ ಪಾಠಗಳನ್ನು ಸಹ ಆಚಾರ್ಯ ಹೇಳಿದ್ದಾರೆ.
ಮದುವೆ
ಮಕ್ಕಳು ವಯಸ್ಸಿಗೆ ಬರುತ್ತಿದ್ದಂತೆ ಪೋಷಕರು ಮದುವೆ ಮಾಡಲು ಮುಂದಾಗುತ್ತಾರೆ. ಸಾಂಸಾರಿಕ ಜೀವನ ಶಾಂತಿಯುತವಾಗಿರಬೇಕಾದ್ರೆ ಎಂತಹ ಹೆಣ್ಣನ್ನು ಮದುವೆ ಮಾಡಿಕೊಳ್ಳಬೇಕು ಎಂಬುದನ್ನು ಚಾಣಕ್ಯರು ತಿಳಿಸಿದ್ದಾರೆ. ತಮ್ಮ ನೀತಿಯಲ್ಲಿ 6 ರೀತಿಯ ಮಹಿಳೆಯರನ್ನು ಮದುವೆ ಆಗಬಾರದು ಎಂದು ಹೇಳಿದ್ದಾರೆ.
1.ಸೌಂದರ್ಯವತಿಯಾಗಿರುವ ಮೂರ್ಖ ಮಹಿಳೆ
ಸಾಮಾನ್ಯವಾಗಿ ಹುಡುಗಿ ನೋಡಲು ಚೆನ್ನಾಗಿದ್ರೆ ಪುರುಷರು ಮದುವೆಗೆ ಒಪ್ಪಿಕೊಳ್ಳುತ್ತಾರೆ. ಮದುವೆಗೂ ಮುನ್ನವೇ ಹುಡುಗಿ ಜಾಣತನ ಪರಿಶೀಲಿಸಬೇಕು. ಸುಂದರಿಯಾಗಿರುವ ಮೂರ್ಖ ಹುಡುಗಿ ಮದುವೆಯಾಗಲು ಯೋಗ್ಯವಲ್ಲ. ಇದರಿಂದ ಮನೆಯಲ್ಲಿ ಕಲಹ ಉಂಟಾಗುತ್ತದೆ.
2.ಮಾತನಾಡುವ ಸ್ವಭಾವ
ಮಾತುಗಳಿಂದಲೇ ಹಲವರು ಮನಸ್ಸು ಗೆಲ್ಲಬಹುದು. ಯಾರೊಂದಿಗೆ ಹೇಗೆ ಮಾತನಾಡಬೇಕು ಎಂಬ ತಿಳುವಳಿಕೆ ಇಲ್ಲದ ಮಹಿಳೆಯನ್ನು ಮದುವೆ ಆಗದಂತೆ ಚಾಣಕ್ಯರು ಹೇಳುತ್ತಾರೆ. ಕೆಲವೊಮ್ಮೆ ಅನಾವಶ್ಯಕ ಅಥವಾ ಅಸಂಬದ್ಧ ಮಾತುಗಳು ಜಗಳಕ್ಕೆ ಕಾರಣವಾಗಬಹುದು.
3.ಸುಳ್ಳು ಹೇಳುವ ಮಹಿಳೆ
ಒಂದು ಸುಳ್ಳು ಇಡೀ ಮನೆ ವಾತಾವರಣವನ್ನೇ ಕೆಡಿಸುವ ಸಾಮಾರ್ಥ್ಯವನ್ನು ಹೊಂದಿರುತ್ತದೆ. ಹಾಗಾಗಿ ಸುಳ್ಳು ಹೇಳುವ ಗುಣ ಹೊಂದಿರುವ ಮಹಿಳೆ ಕುಟುಂಬಕ್ಕೆ ಎಂದಿಗೂ ಹಿತವನ್ನುಂಟು ಮಾಡಲಾರು. ಸುಳ್ಳು ಮಾತುಗಳಿಂದ ಮನೆಯಲ್ಲಿ ವಿನಾಕಾರಣ ಜಗಳ ನಡೆಯುತ್ತವೆ.
4.ಕೆಲಸ ಮಾಡಲು ಹಿಂದೇಟು
ಈ ಹಿಂದೆ ಮನೆಯಲ್ಲಿ ಮಹಿಳೆಯರು ಎಲ್ಲಾ ಕೆಲಸಗಳನ್ನು ಮಾಡಬೇಕೆಂಬ ನಿಯಮವಿತ್ತು. ಮದುವೆಗೂ ಮುಂಚೆಯೇ ಮಹಿಳೆ ಎಲ್ಲಾ ಮನೆಗೆಲಸಗಳನ್ನು ತಿಳಿದುಕೊಂಡಿಬೇಕು ಎಂಬ ಅಲಿಖಿತ ಕಡ್ಡಾಯ ನಿಯಮವಿತ್ತು. ಆದ್ರೆ ಇಂದು ಕಾಲ ಬದಲಾಗಿದೆ.
5.ಕುಟುಂಬದ ಹಿನ್ನೆಲೆ
ಮದುವೆಯಾಗುವ ಮಹಿಳೆಯ ಕುಟುಂಬದ ಹಿನ್ನೆಲೆಯನ್ನು ಮೊದಲೇ ತಿಳಿದುಕೊಳ್ಳಬೇಕು. ಕುಟುಂಬದ ಹಿನ್ನೆಲೆ ಮನೆಯ ಸದಸ್ಯರ ಗುಣವನ್ನು ತೋರಿಸುತ್ತದೆ. ಹೆಣ್ಣು ತರುವಾಗ ಕುಟುಂಬದ ಬಗ್ಗೆ ನಾಲ್ಕು ಕಡೆ ವಿಚಾರಿಸಬೇಕು ಎಂದು ಚಾಣಕ್ಯರು ತಮ್ಮ ನೀತಿಯಲ್ಲಿ ಹೇಳಿದ್ದಾರೆ.
6.ಚಾರಿತ್ರ್ಯ ಮತ್ತು ವ್ಯಕ್ತಿತ್ವ
ಈ ಎರಡು ಗುಣಗಳು ಮಹಿಳೆಯರಲ್ಲಿ ಅವಶ್ಯಕವಾಗಿರಬೇಕಾಗುತ್ತದೆ. ಈ ಗುಣಗಳು ಸಮಾಜದಲ್ಲಿ ಮಹಿಳೆಯ ಗೌರವವನ್ನು ಹೆಚ್ಚಿಸುತ್ತವೆ. ಈ ಗುಣಗಳನ್ನು ಹೊಂದಿರುವ ಮಹಿಳೆ ಕುಟುಂಬಕ್ಕಾಗಿ ಕಣ್ಣು ಆಗಿ ಸಂಸಾರ ನಡೆಸುತ್ತಾಳೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

