- Home
- Life
- Relationship
- 1050 ಕೋಟಿ ಮೌಲ್ಯದ ಆಸ್ತಿ ಒಡೆಯನಾದ್ರು ವಿರಾಟ್ ಕೊಹ್ಲಿಗೆ ಒಂದು ಪೋಟೋ ಲೈಕ್ ಮಾಡುವ ಸ್ವಾತಂತ್ರ್ಯ ಇಲ್ವಾ?
1050 ಕೋಟಿ ಮೌಲ್ಯದ ಆಸ್ತಿ ಒಡೆಯನಾದ್ರು ವಿರಾಟ್ ಕೊಹ್ಲಿಗೆ ಒಂದು ಪೋಟೋ ಲೈಕ್ ಮಾಡುವ ಸ್ವಾತಂತ್ರ್ಯ ಇಲ್ವಾ?
ಕ್ರಿಕೆಟರ್ ವಿರಾಟ್ ಕೊಹ್ಲಿ 1050 ಕೋಟಿ ಮೌಲ್ಯದ ನಿವ್ವಳ ಮೌಲ್ಯವನ್ನು ಹೊಂದಿರುವ ಶ್ರೀಮಂತ ಕ್ರಿಕೆಟರ್. ಆದರೂ ತನಗಿಷ್ಟವಾದುದನ್ನು ಇಷ್ಟಪಡುವ ಸ್ವಾತಂತ್ರ್ಯ ಅವರಿಗಿಲ್ಲ, ಇಂತಹದೊಂದು ಮಾತು ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.

ವಿರಾಟ್ಗೆ ಒಂದು ಲೈಕ್ ತಂದಿಟ್ಟ ಸಂಕಷ್ಟ
ಕ್ರಿಕೆಟರ್ ವಿರಾಟ್ ಕೊಹ್ಲಿ 1050 ಕೋಟಿ ಮೌಲ್ಯದ ನಿವ್ವಳ ಮೌಲ್ಯವನ್ನು ಹೊಂದಿರುವ ಶ್ರೀಮಂತ ಕ್ರಿಕೆಟರ್. ಆದರೂ ತನಗಿಷ್ಟವಾದುದನ್ನು ಇಷ್ಟಪಡುವ ಸ್ವಾತಂತ್ರ್ಯ ಅವರಿಗಿಲ್ಲ, ಇಂತಹದೊಂದು ಮಾತು ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ. ಇದಕ್ಕೆ ಕಾರಣವಾಗಿರುವುದು ಅವರು ಇನ್ಸ್ಟಾಗ್ರಾಮ್ನಲ್ಲಿ ಒತ್ತಿದ ಒಂದು ಲೈಕ್. ಹೌದು ಕ್ರಿಕೆಟರ್ ಆರ್ಸಿಬಿ ಆಟಗಾರ ಜಗತ್ತಿನೆಲ್ಲೆಡೆ ಕೋಟ್ಯಾಂತರ ಜನ ಅಭಿಮಾನಿಗಳನ್ನು ಹೊಂದಿರುವ ವಿರಾಟ್ ಕೊಹ್ಲಿ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ.
ವಿರಾಟ್ ಚಟುವಟಿಕೆಯನ್ನು ದುರ್ಬಿನ್ ಕಣ್ಣಲ್ಲಿ ನೋಡುವ ಅಭಿಮಾನಿಗಳು
ಈ ಬಾರಿ ಅವರು ಸುದ್ದಿಗೆ ಗ್ರಾಸವಾಗಿರುವುದು ಕ್ರಿಕೆಟ್ ಮೈದಾನದಲ್ಲಿ ಮಾಡಿದ ದಾಖಲೆಗಳಿಗಾಗಿ ಅಲ್ಲ ಬದಲಾಗಿದೆ ಜರ್ಮನ್ ವ್ಲಾಗರ್ ಒಬ್ಬರ ಫೋಟೋಗೆ ಲೈಕ್ ಒತ್ತಿದ ಕಾರಣಕ್ಕೆ. ಸಾಮಾನ್ಯವಾಗಿ ಒಮ್ಮೆ ಸೆಲೆಬ್ರಿಟಿ ಪಟ್ಟಕ್ಕೆ ಏರಿದರೆ ಅವರಿಗೆ ವೈಯಕ್ತಿಕ ಬದುಕು ಎಂಬುದು ಇರುವುದಿಲ್ಲ. ಅವರ ಪ್ರತಿಯೊಂದು ಚಲನವಲನಗಳ ಮೇಲೆ ಅವರಿಗೆ ಅರಿವಿಲ್ಲದಂತೆ ಬೇರೆಯವರ ಕಣ್ಣು ಬಿದ್ದಿರುತ್ತದೆ. ಅವರ ಸಣ್ಣ ಸಣ್ಣ ಚಟುವಟಿಕೆಗಳನ್ನು ಅವರ ಅಭಿಮಾನಿಗಳು ದುರ್ಬಿನ್ ಹಿಡಿದು ನೋಡುವಂತೆ ಗಮನಿಸುತ್ತಿರುತ್ತಾರೆ. ಹಾಗೆಯೇ ಈಗ ವಿರಾಟ್ ಕೊಹ್ಲಿ ಅವರನ್ನು ಅವರ ಅಭಿಮಾನಿಗಳು ಅದೇ ರೀತಿ ಹದ್ದಿನ ಕಣ್ಣಿಟ್ಟು ನೋಡುತ್ತಿದ್ದು, ಅವರು ಸಾರ್ವಜನಿಕ ವೇದಿಕೆಗಳು ಅಥವಾ ಸೋಶಿಯಲ್ ಮೀಡಿಯಾದಲ್ಲಿ ಏನೇ ಮಾಡಿದರು ಅದು ದೊಡ್ಡ ಸುದ್ದಿಯಾಗುತ್ತಿದೆ.
ವಿರಾಟ್ ಜೊತೆ ತಳುಕು ಹಾಕಿದ್ದಕ್ಕೆ ಗರಂ ಆದ ಮಾಜಿ ಗೆಳತಿ
ಅದೇ ರೀತಿ ಈಗ ಅವರು ಜರ್ಮನ್ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಲಿಜಲಾಜ್ ಅವರ ಪೋಸ್ಟ್ಗೆ ಒತ್ತಿದ ಲೈಕ್ ಚರ್ಚೆಗೆ ಗ್ರಾಸವಾಗಿದೆ. ವಿಶೇಷ ಎಂದರೆ ಈ ವಿಚಾರಕ್ಕೆ ಸಂಬಂಧಿಸಿದ ಟ್ರೋಲ್ ಒಂದಕ್ಕೆ ವಿರಾಟ್ ಕೊಹ್ಲಿ ಅವರ ಮಾಜಿ ಗೆಳತಿ ಇಜಬೆಲ್ಲೆ ಲೈಟ್ ಅವರು ಕೂಡ ಪ್ರತಿಕ್ರಿಯಿಸಿದ್ದು ಇದು ಸಾಕಷ್ಟು ಗಮನ ಸೆಳೆದಿದೆ. ಹಾಗಿದ್ರೆ ವಿರಾಟ್ ಕೊಹ್ಲಿಗೆ ಸಂಬಂಧಿಸಿದ ಟ್ರೋಲ್ ಬಗ್ಗೆ ಇಜೆಬೆಲ್ಲೆ ಹೇಳಿದ್ದೇನು?
ಇಜಾಬೆಲ್ಲೆ, ಅನುಷ್ಕಾ ಶರ್ಮಾ, ಜರ್ಮನ್ ಪ್ರಭಾವಿ ಲಿಜ್ಲಾಜ್ ಮತ್ತು ಅವ್ನೀತ್ ಕೌರ್ ಅವರು ಇರುವ ಕೊಲಾಜ್ ಅನ್ನು ಇನ್ಸ್ಟಾಗ್ರಾಮ್ ಪೇಜ್ವೊಂದು ಹಂಚಿಕೊಂಡಾಗ ವಿರಾಟ್ ಕೊಹ್ಲಿ ಅವರ ಟೇಸ್ಟ್ ಬಗ್ಗೆ ಚರ್ಚೆ ಶುರುವಾಗಿದ್ದು, ಇದಕ್ಕೆ ವಿರಾಟ್ ಮಾಜಿ ಗೆಳತಿ ಇಜಾಬೆಲ್ಲೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಏನಿದೆ?
ಇವರಲ್ಲಿ ಇಜಾಬೆಲ್ಲೆ ವಿರಾಟ್ ಕೊಹ್ಲಿ ಮಾಜಿ ಗರ್ಲ್ಫ್ರೆಂಡ್, ಅನುಷ್ಕಾ ಶರ್ಮಾ ಪತ್ನಿ, ಅವ್ನಿತ್ ಕೌರ್ ನಟಿಯಾಗಿದ್ದು, ಇವರ ಫೋಟೋವನ್ನು ಹಿಂದೊಮ್ಮೆ ವಿರಾಟ್ ಕೊಹ್ಲಿ ಲೈಕ್ ಮಾಡಿದ ಕಾರಣಕ್ಕೆ ಭಾರಿ ಸುದ್ದಿಯಾಗಿತ್ತು. ಆ ಸಮಯದಲ್ಲಿ ವಿರಾಟ್ ಕೊಹ್ಲಿ ಅವರ ಟೀಂ ಈ ಬಗ್ಗೆ ಸ್ಪಷ್ಟನೆ ನೀಡಿ ಇದು ಇನ್ಸ್ಟಾಗ್ರಾಮ್ ಅಲ್ಗೋರಿತಮ್ನಿಂದ ಉಂಟಾದ ದೋಷದಿಂದ ಲೈಕ್ ಒತ್ತಿ ಹೋಗಿದ್ದು ಎಂಬ ಸ್ಪಷ್ಟನೆ ನೀಡಿ ಸುದ್ದಿಯಾಗಿದ್ದರು. ಕಳೆದ ವರ್ಷ ಈ ಘಟನೆ ನಡೆದಿದ್ದು, ಈಗ ಮತ್ತೆ ಅವರ ಖಾತೆಯಿಂದ ಜರ್ಮನಿ ಇನ್ಫ್ಲುಯೆನ್ಸರ್ ಲಿಜಾಲಾಜ್ ಅವರ ಫೋಟೋಗೆ ಲೈಕ್ ಬಂದಿದೆ. ಹೀಗಾಗಿ ಈ ನಾಲ್ವರ ಫೋಟೋಗಳನ್ನು ಜೊತೆಗೆ ಕೊಲಾಜ್ ಮಾಡಿ ಹಾಕಿರುವ ಪೋಸ್ಟ್ ಈಗ ಭಾರಿ ವೈರಲ್ ಆಗಿದ್ದು, ವಿರಾಟ್ ಮಾಜಿ ಗೆಳತಿ ಈ ಬಗ್ಗೆ ತೀಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.
ಇಜಾಬೆಲ್ಲೆ ಲೈಟ್ ನಿಂದ ಅನುಷ್ಕಾ ಶರ್ಮಾ ವರೆಗೆ...
ವಿರಾಟ್ ಕೊಹ್ಲಿ ಜೊತೆ ಯಾವುದೋ ಕಾರಣಕ್ಕೆ ಸಂಬಂಧ ಹೊಂದಿರುವ ನಾಲ್ವರು ಮಹಿಳೆಯ ಫೋಟೋವನ್ನು ಕೊಲಾಜ್ ಮಾಡಿ ಹೀಗೆ ಬರೆಯಲಾಗಿದೆ. ವಿರಾಟ್ ಕೊಹ್ಲಿ ಬಗ್ಗೆ ಒಂದು ವಿಷಯ ಆ ವ್ಯಕ್ತಿ ಮೈದಾನದ ಒಳಗೆ ಅಥವಾ ಹೊರಗೆ ಸ್ಪಷ್ಟವಾಗಿ ತಪ್ಪಿಸಿಕೊಳ್ಳುವುದಿಲ್ಲ. ಇಜಾಬೆಲ್ಲೆ ಲೈಟ್ ನಿಂದ ಅನುಷ್ಕಾ ಶರ್ಮಾ ವರೆಗೆ... ವಿರಾಟ್ ಗಣ್ಯ ಅಭಿರುಚಿಯು ಬ್ರ್ಯಾಂಡ್ನ ಒಂದು ಭಾಗ ಮಾತ್ರ ಎಂದು ಬರೆಯಲಾಗಿದೆ. ಇದಕ್ಕೆ ಇಜಾಬೆಲ್ಲೆ ಸಿಟ್ಟಿನಿಂದಲೇ ಪ್ರತಿಕ್ರಿಯಿಸಿದ್ದು, ಇದಾಗಿ 12 ವರ್ಷಗಳೇ ಕಳೆದಿವೆ ಆದರೂ ಯಾಕೆ ಜನರು ಇದರಿಂದ ಹೊರಬರುತ್ತಿಲ್ಲ ಎಂದು ಅವರು ತಮ್ಮ ಫೋಟೋ ಬಳಸಿ ವಿರಾಟ್ ಕಾಲೆಳೆದಿದ್ದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅವರ ಈ ಪ್ರತಿಕ್ರಿಯೆ ಕೂಡಲೇ ಜನರ ಗಮನ ಸೆಳೆದಿದೆ.
ಅವ್ನಿತ್ ಕೌರ್ ಫೋಟೊ ಲೈಕ್ ಮಾಡಿದ್ದ ವಿರಾಟ್
ವಿರಾಟ್ ಕೊಹ್ಲಿ ಅವರ ಸೋಶಿಯಲ್ ಮಿಡಿಯಾ ಚಟುವಟಿಕೆಗಳನ್ನು ಜನ ಮೈಕ್ರೋಸ್ಕೋಪ್ನಲ್ಲಿ ಇಟ್ಟಂತೆ ಗಮನಿಸುತ್ತಿದ್ದಾರೆ. ಕಳೆದ ವರ್ಷ, ಅವರ ಅಭಿಮಾನಿಗಳು ಅವರು ಅವ್ನೀತ್ ಕೌರ್ ಅವರ ಫೋಟೋ ಇಷ್ಟಪಟ್ಟಿದ್ದನ್ನು ಗಮನಿಸಿದರು. ಅದರ ಸ್ಕ್ರೀನ್ಶಾಟ್ ವೈರಲ್ ಆಗುತ್ತಿದ್ದಂತೆ ವಿರಾಟ್ ಸ್ಪಷ್ಟೀಕರಣವನ್ನು ನೀಡಿದರು, ಅದನ್ನು ಅಲ್ಗಾರಿದಮ್ ದೋಷ ಎಂದು ಕರೆದರು. ಇದಾಗಿ ವರ್ಷದ ನಂತರ ಮತ್ತೆ ಇದೇ ರೀತಿಯ ಕಾರಣಕ್ಕೆ ವಿರಾಟ್ ಸುದ್ದಿಯಲ್ಲಿದ್ದಾರೆ. ಈ ಬಾರಿ ಜರ್ಮನ್ ವ್ಲಾಗರ್ ಲಿಜ್ಲಾಜ್ ಅವರ ಪೋಸ್ಟ್ಗೆ ವಿರಾಟ್ ಲೈಕ್ ಬಂದಿದೆ.
ಇದನ್ನೂ ಓದಿ: ಕೌಟುಂಬಿಕ ಕಲಹದ ನಂತರ ಇಬ್ಬರು ಮುದ್ದಾದ ಮಕ್ಕಳೊಂದಿಗೆ ಕೆರೆಗೆ ಹಾರವಾದ ತಾಯಿ
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

