- Home
- Life
- Relationship
- ಗಂಡನಿಗೆ ಬಾಲ್ಯದ ಗೆಳತಿ ಜೊತೆಯೇ ಮದುವೆ ಮಾಡಿಸಿದ ಹೆಂಡ್ತಿ, ಇಂತಹ ನಿರ್ಧಾರ ತೆಗೆದುಕೊಂಡಿದ್ದೇಕೆ?
ಗಂಡನಿಗೆ ಬಾಲ್ಯದ ಗೆಳತಿ ಜೊತೆಯೇ ಮದುವೆ ಮಾಡಿಸಿದ ಹೆಂಡ್ತಿ, ಇಂತಹ ನಿರ್ಧಾರ ತೆಗೆದುಕೊಂಡಿದ್ದೇಕೆ?
Wife marries husband to childhood friend: ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವೈವಾಹಿಕ ಜೀವನದಲ್ಲಿ ಇಂತಹ ಸಂದರ್ಭಗಳು ಎದುರಾದಾಗ ಅಸೂಯೆ ಅಥವಾ ಕಲಹಗಳು ಉಂಟಾಗುವುದು ಸಹಜ. ಆದರೆ ಈ ಮಹಿಳೆ ಮಾತ್ರ…

ಸುದ್ದಿ ಕೇಳಿದ್ರೇನೇ ಹುಬ್ಬೇರಿಸುತ್ತೀರಿ!
"ಎರಡು ಜಡೆ ಸೇರಿದರೆ ಅಲ್ಲಿ ಜಗಳ ಗ್ಯಾರಂಟಿ" ಅನ್ನೋ ಮಾತಿದೆ. ಆದರೆ ಲಾಹೋರ್‌ನಿಂದ ಬಂದಿರುವ ಈ ಸುದ್ದಿ ಕೇಳಿದರೆ ನೀವು ಹೌಹಾರೋದು ಗ್ಯಾರಂಟಿ. ಯಾಕೆ ಅಂಥದ್ದೇನಾಯ್ತು ಅಂತೀರಾ? ಮುಂದೆ ಓದಿ..
ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಈ ಮೊದಲೇ ಹೇಳಿದ ಹಾಗೆ ಘಟನೆ ನಡೆದಿರುವುದು ಪಾಕಿಸ್ತಾನದ ಲಾಹೋರ್‌ನಲ್ಲಿ. ಪ್ರಸ್ತುತ ಈ ಅಚ್ಚರಿಯ ವಾರ್ತೆ ಕೇಳಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಎಲ್ಲರ ಗಮನಸೆಳೆದ ಮಹಿಳೆ
ಆಗಿದ್ದಿಷ್ಟು.. ಒರ್ವ ಮಹಿಳೆ ತನ್ನ ಗಂಡನಿಗೆ ಮದುವೆ ಮಾಡಿಸಿದ್ದಾಳೆ. ಆಕೆ ಬೇರಾರೂ ಅಲ್ಲ. ಬಾಲ್ಯದ ಗೆಳತಿಯೇ. ಗೆಳತಿಯನ್ನೇ ವಿವಾಹವಾಗುವಂತೆ ಒಪ್ಪಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.
ಅನಿರೀಕ್ಷಿತ ತಿರುವು
ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವೈವಾಹಿಕ ಜೀವನದಲ್ಲಿ ಇಂತಹ ಸಂದರ್ಭಗಳು ಎದುರಾದಾಗ ಅಸೂಯೆ ಅಥವಾ ಕಲಹಗಳು ಉಂಟಾಗುವುದು ಸಹಜ. ಆದರೆ ಈ ಮಹಿಳೆ ಮಾತ್ರ ತನ್ನ ಪತಿ ಮತ್ತು ಗೆಳತಿಯ ಸಂತೋಷಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ಇಂದಿನ ಆಧುನಿಕ ಸಂಬಂಧಗಳಿಗೆ ಒಂದು ಅನಿರೀಕ್ಷಿತ ತಿರುವು ನೀಡಿದ್ದಾಳೆ.
ಜಗತ್ತಿನ ಅತ್ಯಂತ ಅದೃಷ್ಟವಂತ ವ್ಯಕ್ತಿ
ಸದ್ಯ ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪ್ರೀತಿ ಮತ್ತು ಸ್ನೇಹವನ್ನು ಇಷ್ಟೊಂದು ವಿಭಿನ್ನವಾಗಿ ಗೌರವಿಸುವ ಇಂತಹ ಪತ್ನಿ ಸಿಕ್ಕಿದ್ದಕ್ಕೆ ಅನೇಕರು ಆ ಪತಿಯನ್ನು "ಜಗತ್ತಿನ ಅತ್ಯಂತ ಅದೃಷ್ಟವಂತ ವ್ಯಕ್ತಿ" ಎಂದು ಕರೆಯುತ್ತಿದ್ದಾರೆ.
ಈ ನಿರ್ಧಾರ ತೆಗೆದುಕೊಳ್ಳಲು ಕಾರಣ
ತನ್ನ ಗಂಡನ ಮೇಲೆ ಅತಿಯಾದ ನಂಬಿಕೆ ಮತ್ತು ಗೆಳತಿಯ ಮೇಲಿರುವ ಗಾಢವಾದ ಸ್ನೇಹದಿಂದಾಗಿ ಆಕೆ ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎನ್ನಲಾಗಿದೆ. ಈ ಅಪರೂಪದ ಕಥೆಯು ಸಾಂಪ್ರದಾಯಿಕ ವೈವಾಹಿಕ ಚೌಕಟ್ಟುಗಳನ್ನು ಮೀರಿ ಬೆಳೆದಿದ್ದು, ಸಂಬಂಧಗಳಲ್ಲಿನ ತಿಳುವಳಿಕೆ ಮತ್ತು ಪರಸ್ಪರ ಸಹಕಾರದ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಕಾಮೆಂಟ್ಸ್ ಹೀಗಿದೆ
ಆದರೆ ಈಕೆಯ ಈ ಅಸಾಮಾನ್ಯ ನಿರ್ಧಾರವು ಕೆಲವರಿಗೆ ಶಾಕ್ ಎನಿಸಿದೆ. ಇನ್ನು ಕೆಲವರಿಗೆ ಇದು ನಿಸ್ವಾರ್ಥ ಪ್ರೇಮದ ಸಂಕೇತವಾಗಿ ಕಂಡಿದೆ. ಏನೇ ಇರಲಿ, ಇಂದಿನ ಕಾಲಘಟ್ಟದಲ್ಲಿ ಇಂತಹ "ಹೃದಯಸ್ಪರ್ಶಿ" ಎನ್ನಬಹುದಾದ ಅನಿರೀಕ್ಷಿತ ಘಟನೆಗಳು ವಿರಳವೇ ಸರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

