- Home
- Entertainment
- Sandalwood
- 2025ರಲ್ಲಿ ಪ್ಯಾನ್ ಇಂಡಿಯಾ ಸಕ್ಸಸ್‌ಗಳೊಂದಿಗೆ ಮಿಂಚಿದ ಟಾಪ್ 5 ನಟಿಯರು: ಮೊದಲ ಸ್ಥಾನ ಯಾರಿಗೆ?
2025ರಲ್ಲಿ ಪ್ಯಾನ್ ಇಂಡಿಯಾ ಸಕ್ಸಸ್‌ಗಳೊಂದಿಗೆ ಮಿಂಚಿದ ಟಾಪ್ 5 ನಟಿಯರು: ಮೊದಲ ಸ್ಥಾನ ಯಾರಿಗೆ?
ಪ್ಯಾನ್ ಇಂಡಿಯಾ ಚಿತ್ರಗಳ ಮೂಲಕ ಈ ವರ್ಷ ಬೇಡಿಕೆಯ ನಟಿ ಎನಿಸಿಕೊಂಡವರು. ‘ಕಾಂತಾರ 1’ ಚಿತ್ರದಲ್ಲಿ ಕನಕವತಿಯಾಗಿ 2025ರಲ್ಲಿ ಬೆಂಚ್ ಮಾರ್ಕ್ ಹಾಕಿಕೊಂಡವರು. ಸದ್ಯ ದಕ್ಷಿಣ ಭಾರತೀಯ ಚಿತ್ರರಂಗದ ಕಣ್ಮಣಿ ರುಕ್ಮಿಣಿ ವಸಂತ್.

2025ರಲ್ಲಿ ಗಮನ ಸೆಳೆದ 5 ನಟಿಯರು
2025ನೇ ವರ್ಷ ಮುಗಿಯುವಷ್ಟರಲ್ಲಿ ಸೋಲು, ಗೆಲುವುಗಳ ನಡುವೆ ಬೇಡಿಕೆ, ಪ್ರತಿಭೆ, ಭರವಸೆ ಮೂಡಿಸಿ ಗಮನ ಸೆಳೆದ ನಟಿಯರು ಹಲವರು ಇದ್ದಾರೆ. ಹೀಗಾಗಿ ಈ ವರ್ಷ ನಟಿಯರ ಪಾಲಿಗೆ ಸುಗ್ಗಿ ಅಂತಲೇ ಹೇಳಬಹುದು. ಹಾಗೆ ಗಮನ ಸೆಳೆದ 5 ನಟಿಯರ ದೊಡ್ಡ ಸಕ್ಸಸ್‌ನ ಕಿರು ನೋಟ ಇಲ್ಲಿದೆ.
1. ರುಕ್ಮಿಣಿ ವಸಂತ್
ಪ್ಯಾನ್ ಇಂಡಿಯಾ ಚಿತ್ರಗಳ ಮೂಲಕ ಈ ವರ್ಷ ಬೇಡಿಕೆಯ ನಟಿ ಎನಿಸಿಕೊಂಡವರು. ‘ಕಾಂತಾರ 1’ ಚಿತ್ರದಲ್ಲಿ ಕನಕವತಿಯಾಗಿ 2025ರಲ್ಲಿ ಬೆಂಚ್ ಮಾರ್ಕ್ ಹಾಕಿಕೊಂಡವರು. ಸದ್ಯ ದಕ್ಷಿಣ ಭಾರತೀಯ ಚಿತ್ರರಂಗದ ಕಣ್ಮಣಿ. ತಮಿಳಿನಲ್ಲಿ ಶಿವಕಾರ್ತಿಕೇಯನ್ ಜೊತೆಗೆ ‘ಮದ್ರಾಸಿ’, ವಿಜಯ್ ಸೇತುಪತಿ ಜೊತೆಗೆ ‘ಆಸೆ’ ಚಿತ್ರಗಳಲ್ಲೂ ನಟಿಸಿ ಪರಭಾಷೆಯಲ್ಲೂ ಗಮನ ಸೆಳೆದವರು. ಮುಂದಿನ ವರ್ಷ ‘ಟಾಕ್ಸಿಕ್’ ಬರಲಿದೆ.
2. ಸಂಧ್ಯಾ ಅರಕೆರೆ
2025ರ ಬ್ಲಾಕ್ ಬಾಸ್ಟರ್ ಹಿಟ್ ‘ಸು ಫ್ರಮ್ ಸೋ’ ಚಿತ್ರದಲ್ಲಿ ಕಾಣಿಸಿಕೊಂಡ ಸಂಧ್ಯಾ ಅರಕೆರೆ ತಮ್ಮ ಸಹಜ ನಟನೆಯಿಂದಲೇ ಗಮನ ಸೆಳೆದವರು. ಭಾವಪ್ರಧಾನ ನಟನೆಯನ್ನು ತೋರಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದವರು. ಕಣ್ಣಲ್ಲೇ ಮಾತನಾಡುವ ಕಲಾವಿದರು ದೊರೆಯುವುದು ಅಪರೂಪ. ಅಂಥಾ ಒಬ್ಬ ಪ್ರತಿಭಾವಂತ ಅಪರೂಪದ ನಟಿ.
3. ರಚನಾ ರೈ
ವರ್ಷದ ಕೊನೆಯ ತಿಂಗಳಲ್ಲಿ ಅದ್ದೂರಿಯಾಗಿ ತೆರೆಗೆ ಬಂದ ‘ದಿ ಡೆವಿಲ್’ಚಿತ್ರದ ಮೂಲಕ ಭರವಸೆಯ ನಟಿ ಎನಿಸಿಕೊಂಡವರು. ಸ್ಟಾರ್ ನಟನ, ಬಿಗ್ ಬಜೆಟ್ ಚಿತ್ರದಲ್ಲೂ ತಮ್ಮ ಪಾತ್ರಕ್ಕೆ ಮಹತ್ವ ಬಂದಿದೆ ಎಂದರೆ ಅದು ರಚನಾ ರೈ ಅವರ ಸ್ಕ್ರೀನ್ ಪ್ರೆಸೆನ್ಸ್ ಹಾಗೂ ಪ್ರತಿಭೆ ಅಂತಲೇ ಹೇಳಬೇಕು. ‘ದಿ ಡೆವಿಲ್’ ಮೂಲಕ ಮತ್ತೊಬ್ಬ ಪ್ರತಿಭಾವಂತ ನಟಿ ಸಿಕ್ಕಂತಾಗಿದೆ.
4. ಪ್ರಿಯಾಂಕ ಆಚಾರ್
‘ಮಹಾನಟಿ’ ರಿಯಾಲಿಟಿ ಶೋನಲ್ಲಿ ಎಲ್ಲರ ಮೆಚ್ಚುಗೆ ಗಳಿಸಿ ಹಿರಿತೆರೆಗೆ ಬಂದ ಇವರು ರಕ್ಷಿತಾ ಸೋದರ ರಾಣಾ ನಾಯಕನಾಗಿ ನಟಿಸಿರುವ, ಪುನೀತ್ ರಂಗಸ್ವಾಮಿ ನಿರ್ದೇಶನದ ‘ಏಳುಮಲೆ’ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ತಮ್ಮ ನಟನೆಯಿಂದ ಪ್ರೇಕ್ಷಕರು ಮನಸ್ಸು ಗೆದ್ದು ಭರವಸೆಯ ನಟಿ ಎನಿಸಿಕೊಂಡರು.
5. ಸಂಪದಾ ಹುಲಿವಾನ
ಕಿರುತೆರೆಯಿಂದ ಬಂದವರು. ‘ಎಕ್ಕ’ ಚಿತ್ರದಲ್ಲಿ ತಮ್ಮ ಸಹಜ ಅಭಿನಯದಿಂದ ಎಲ್ಲರ ಗಮನ ಸೆಳೆದವರು. ಮುಂದೆ ಈಕೆ ಬೇಡಿಕೆಯ ನಟಿ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಮುಂದಿನ ವರ್ಷ ಇವರು ನಟಿಸಿರು ‘ಕರಾವಳಿ’ ಬಿಡುಗಡೆಯಾಗಲಿದೆ.
ಗಮನ ಸೆಳೆದ ಮತ್ತಷ್ಟು ನಟಿಯರು
‘ಬ್ಯಾಂಕ್ ಆಫ್ ಭಾಗ್ಯ ಲಕ್ಷ್ಮಿ’ ಹಾಗೂ ‘ಮಾರುತ’ ಚಿತ್ರಗಳ ಮೂಲಕ ಬೃಂದಾ ಆಚಾರ್ಯ, ‘ಜೂನಿಯರ್’, ತೆಲುಗಿನಲ್ಲಿ ‘ಮಾಸ್ ಜಾತರ’, ‘ರಾಬಿನ್‌ಹುಡ್’ ಚಿತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬಂದು ತಮ್ಮ ಬೇಡಿಕೆಯನ್ನು ಸಾಬೀತು ಮಾಡಿಕೊಂಡ ಶ್ರೀಲೀಲಾ, ‘ಮಾದೇವ’ ಚಿತ್ರದಲ್ಲಿ ಸೋನಲ್ ಮೊಂಥೆರೋ, ‘ಎಕ್ಕ’ ಚಿತ್ರದಿಂದ ಸಂಜನಾ ಆನಂದ್, ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಚಿತ್ರದ ಮೂಲಕ ಕಾಜಲ್ ಕುಂದರ್ ಅವರು ಕೂಡ ಉತ್ತಮ ಅಭಿನಯ ನೀಡಿ ಮೆಚ್ಚುಗೆ ಗಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

