- Home
- Entertainment
- Sandalwood
- ಪ್ರಪಂಚದ್ ಪಾಪದಲ್ಲಿ, ಎಲ್ರೂ ಪಾಲುದಾರರೂ ಎಂದ ಯುವ ರಾಜ್‌ಕುಮಾರ್: 'ಎಕ್ಕ' ಅಂದ್ರೆ ಏನು ಗೊತ್ತಾ?
ಪ್ರಪಂಚದ್ ಪಾಪದಲ್ಲಿ, ಎಲ್ರೂ ಪಾಲುದಾರರೂ ಎಂದ ಯುವ ರಾಜ್‌ಕುಮಾರ್: 'ಎಕ್ಕ' ಅಂದ್ರೆ ಏನು ಗೊತ್ತಾ?
ಕನ್ನಡ ಚಿತ್ರರಂಗದ ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್ ಅವರ ದ್ವಿತೀಯ ಪುತ್ರ ಯುವ ರಾಜ್‌ಕುಮಾರ್ ಕಳೆದ ಈ ವರ್ಷ ತೆರೆಕಂಡ 'ಯುವ' ಚಿತ್ರದ ಮೂಲಕ ನಾಯಕನಾಗಿ ಗಮನ ಸೆಳೆದಿದ್ದಾರೆ. ಈ ಚಿತ್ರ ಬಿಡುಗಡೆಯಾಗಿ ಹಲವು ತಿಂಗಳು ಕಳೆದಿದ್ದರೂ ಅವರ ಹೊಸ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.

ಯುವ ರಾಜ್ ಕುಮಾರ್ ನಟನೆಯ ಎರಡನೇ ಸಿನಿಮಾದ ಘೋಷಣೆಯಾಗಿದೆ. ವಿಕ್ರಂ ಹತ್ವಾರ್ ಕಥೆ ಆಧರಿಸಿ ರೋಹಿತ್ ಪದಕಿ ನಿರ್ದೇಶಿಸುತ್ತಿರುವ ಈ ಸಿನಿಮಾಕ್ಕೆ 'ಎಕ್ಕ' ಎಂಬ ಹೆಸರಿಡಲಾಗಿದೆ.
ಯುವ ನಟನೆಯ ಮುಂದಿನ ಸಿನಿಮಾ ಯಾವುದು ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಆಯುಧವೊಂದನ್ನು ಹಿಡಿದು ರಕ್ತಸಿಕ್ತವಾಗಿ ಯುವ ಎಂಟ್ರಿ ಕೊಟ್ಟಿದ್ದಾರೆ. ಖಡಕ್ ಆಗಿ ಲುಕ್ ಕೊಟ್ಟಿದ್ದಾರೆ.
ಈ ಸಿನಿಮಾಗೆ 'ಎಕ್ಕ' ಎಂದು ಟೈಟಲ್ ಫಿಕ್ಸ್ ಮಾಡಿದ್ದಾರೆ. ಸದ್ಯ ಈ ಸಿನಿಮಾದ ಪೋಸ್ಟರ್ ಶೇರ್ ಮಾಡಿ, ಪ್ರಪಂಚದ್ ಪಾಪದಲ್ಲಿ, ಎಲ್ರೂ ಪಾಲುದಾರ್ರು ಹಾಗೂ ನೆತ್ತರಿನ ಹೊಳೆಯಲ್ಲಿ, ಹರಿಯುತ್ತಿರುವ ಕಥೆ ಎಂದು ಯುವ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಒಬ್ಬ ಮನುಷ್ಯ ಭೂಗತ ಜಗತ್ತಿಗೆ ಎಂಟ್ರಿ ಕೊಟ್ಟಾಗ ಆತನಿಗೆ ಆಗುವ ಅನುಭವವನ್ನು ಹೇಳುವ ಕಥೆಯೇ ಎಕ್ಕ. ಚಿತ್ರವನ್ನು ರೋಹಿತ್ ಪದಕಿ ಹಾಗೂ ವಿಕ್ರಂ ಹತ್ವಾರ್ ಬರೆದು, ರೋಹಿತ್ ಪದಕಿ ಆಕ್ಷನ್ ಕಟ್ ಹೇಳಲಿದ್ದಾರೆ.
ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಲಿದ್ದು, ಸತ್ಯ ಹೆಗಡೆ ಸಿನಿಮಾಟೋಗ್ರಫಿ, ದೀಪು.ಎಸ್. ಕುಮಾರ್ ಸಂಕಲನಕಾರರಾಗಿರುತ್ತಾರೆ ಮತ್ತು ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸದ ಜವಬ್ದಾರಿ ವಹಿಸಿಕೊಂಡಿದ್ದಾರೆ.
ಎಕ್ಕ ಚಿತ್ರವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಪಿ.ಆರ್.ಕೆ.ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ, ಜಯಣ್ಣ ಹಾಗೂ ಭೋಗೇಂದ್ರ ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಮತ್ತು ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಕೆ.ಆರ್.ಜಿ.ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ. ಇದೇ ನ.28ಕ್ಕೆ ಚಿತ್ರೀಕರಣ ಆರಂಭವಾಗಲಿದ್ದು, 2025ಕ್ಕೆ ಸಿನಿಮಾ ತೆರೆ ಕಾಣಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.