ಚಂದನವನದಲ್ಲಿ 10 ವರ್ಷ ಪೂರೈಸಿದ ಕನ್ನಡದ ಕರೀನಾ ಕಪೂರ್…. ನಟಿಯ ಭಾವುಕ ಪೋಸ್ಟ್
Amrutha Iyengar: ಕನ್ನಡ ಚಿತ್ರರಂಗದಲ್ಲಿ ಕಳೆದ 10 ವರ್ಷಗಳಲ್ಲಿ ಹಲವಾರು ಸಿನಿಮಾಗಳಲ್ಲಿ, ಬೇರೆ ಬೇರೆ ಪಾತ್ರಗಳಲ್ಲಿ ಗುರುತಿಸಿಕೊಂಡ ನಟಿ ಕನ್ನಡಿಗರಿಂದ ಪ್ರೀತಿಯಿಂದ ಕನ್ನಡದ ಕರೀನಾ ಕಪೂರ್ ಎಂದೇ ಖ್ಯಾತಿ ಪಡೆದ ನಟಿ ಅಮೃತಾ ಅಯ್ಯಂಗಾರ್ ಹತ್ತು ವರ್ಷಗಳ ಸಿನಿ ಪಯಣದ ಕುರಿತು ಭಾವುಕ ಪೋಸ್ಟ್ ಮಾಡಿದ್ದಾರೆ.

ಅಮೃತಾ ಅಯ್ಯಂಗಾರ್
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ಮುದ್ದು ಮುಖದ ಸುಂದರಿ ಅಮೃತಾ ಅಯ್ಯಂಗಾರ್. ಇವರು ನಟಿಸಿದ ಹೆಚ್ಚಿನ ಎಲ್ಲಾ ಚಿತ್ರಗಳು ಸೂಪರ್ ಹಿಟ್. ಇದೀಗ ನಟಿ ಚಂದನವನದಲ್ಲಿ ಬರೋಬ್ಬರಿ ಹತ್ತು ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದ್ದಾರೆ. ಈ ಕುರಿತು ಭಾವುಕ ಪೋಸ್ಟ್ ಮಾಡಿದ್ದಾರೆ.
ಭಾವುಕ ಪೋಸ್ಟ್ ಮಾಡಿದ ನಟಿ
ಈ ಪ್ರಯಾಣಕ್ಕೆ ಒಂದು ದಶಕದ ಇತಿಹಾಸವಿದೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ! ಇಂದಿಗೆ ನಾನು 10 ವರ್ಷಗಳನ್ನು ಪೂರೈಸಿದ್ದೇನೆ ಎಂದು ಅನಿಸುತ್ತಿಲ್ಲ. ಇದೆಲ್ಲವೂ ನಿಮ್ಮೆಲ್ಲರಿಂದಾಗಿ. ನಾನು ನಿರ್ವಹಿಸಿದ ಪಾತ್ರಗಳ ಬಗ್ಗೆ ನಿರಂತರ ಬೆಂಬಲ ಮತ್ತು ಪ್ರೀತಿಗೆ ನಾನು ಕೃತಜ್ಞನಾಗಿದ್ದೇನೆ. ಇಷ್ಟೊಂದು ಪ್ರೀತಿಯನ್ನು ಪಡೆಯಲು ನಾನು ತುಂಬಾ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಧನ್ಯವಾದ ತಿಳಿಸಿದ ಅಮೃತಾ
ಈ ಪ್ರಯಾಣವು ನನಗೆ ಸಾಕಷ್ಟು ಶಕ್ತಿ ಮತ್ತು ಧೈರ್ಯವನ್ನು ನೀಡಿದೆ, ಆದರೂ ನಾನು ಇನ್ನೂ ಸ್ಥಿರವಾಗಿದ್ದೇನೆ ಮತ್ತು ನನ್ನಲ್ಲಿರುವ ಸಣ್ಣ ವಿಷಯಗಳಿಗೆ ನಾನು ಕೃತಜ್ಞನಾಗಿದ್ದೇನೆ. ನನ್ನ ಎಲ್ಲಾ ನಿರ್ದೇಶಕರು, ನಿರ್ಮಾಪಕರು, ಸಹ-ನಟರು, ಛಾಯಾಗ್ರಾಹಕರು, ಸಂಪಾದಕರು ಮತ್ತು ಸೆಟ್‌ನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ದೊಡ್ಡ ಧನ್ಯವಾದಗಳು. ನೀವೆಲ್ಲರು ಇರದೇ ಇದ್ದರೆ ಈ ಪ್ರಯಾಣ ಅದ್ಭುತವಾಗುತ್ತಿರಲಿಲ್ಲ. ಧನ್ಯವಾದಗಳು ವಿತ್ ಲವ್ ಅಮೃತಾ ಎಂದು ನಟಿ ಭಾವುಕ ಪೋಸ್ಟ್ ಮಾಡಿದ್ದಾರೆ.
ಹಳೆಯ ನೆನಪುಗಳನ್ನು ಬಿಚ್ಚಿಟ್ಟ ನಟಿ
ಅಮೃತಾ ಅಯ್ಯಂಗಾರ್ ತಮ್ಮ ಸಿನಿ ಪಯಣದ ಪೋಟೋಗಳನ್ನು ಸಹ ಪೋಸ್ಟ್ ಮಾಡಿದ್ದಾರೆ. ಪ್ರಶಸ್ತಿಗಳ ಜೊತೆ ಖುಶಿಯಿಂದ ಮಲಗಿರುವ ಫೋಟೋ, ಸಿನಿಮಾ ಶೂಟಿಂಗ್ ಫೋಟೊಗಳು, ಸಿನಿಮಾದ ಪೋಸ್ಟರ್ ಗಳು, ಪ್ರಶಸ್ತಿ ಪಡೆದ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ. ಅಭಿಮಾನಿಗಳು ನಟಿಯ ಜರ್ನಿಯನ್ನು ನೋಡಿ ಶುಭಾಶಯಗಳನ್ನು ತಿಳಿಸಿದ್ದು, ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿ ಎಂದು ಹಾರೈಸಿದ್ದಾರೆ.
2017ರಲ್ಲಿ ಎಂಟ್ರಿ
ಅಮೃತಾ ಅಯ್ಯಂಗಾರ್ 2017ರಲ್ಲಿ ಸಿಂಹ ಹಾಕಿದ ಹೆಜ್ಜೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ ಅನುಷ್ಕಾ, ಪಾಪ್ ಕಾರ್ನ್ ಮಂಕಿ ಟೈಗರ್, ಲವ್ ಮಾಕ್ಟೇಲ್, ಶಿವಾರ್ಜುನ, ಬಡವ ರಾಸ್ಕಲ್, ಲವ್ ಮಾಕ್ಟೇಲ್ 2,ಫ್ಯಾಮಿಲಿ ಪ್ಯಾಕ್, ವಿಂಡೋ ಸೀಟ್, ಓ, ಗುರುದೇವ ಹೊಯ್ಸಳ, ಅಬ್ಬಬ್ಬಾ, ಜೀಬ್ರಾ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮೂರು ಸಿನಿಮಾಗಳಲ್ಲಿ ಬ್ಯುಸಿ
ಎರಡು ಸೈಮಾ ಆವಾರ್ಡ್ ಮತ್ತು ಒಂದು ಫಿಲಂ ಫೇರ್ ಅವಾರ್ಡ್ ಪಡೆದಿರುವ ನಟಿ ಅಮೃತಾ ಅಯ್ಯಂಗಾರ್ ಸದ್ಯ ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಲ್ಕಾ ಡಾನ್ ಎನ್ನುವ ಕನ್ನಡ- ತೆಲುಗು ಸಿನಿಮಾ, ಫಾದರ್ ಹಾಗೂ ಇನ್ನೂ ಹೆಸರಿಡದ ಸಿನಿಮಾದಲ್ಲಿ ಅಮೃತಾ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

