- Home
- Entertainment
- Sandalwood
- Vineesh Thoogudeepa: ಮಾಸ್ ಲುಕ್ಕಲ್ಲಿ ದರ್ಶನ್ ಪುತ್ರ... ಅಪ್ಪ ಜೈಲಲ್ಲಿರೋವಾಗ್ಲೆ ಮಗ ಸಿನಿಮಾಗೆ ಹೀರೋ ಆಗ್ತಾರ?
Vineesh Thoogudeepa: ಮಾಸ್ ಲುಕ್ಕಲ್ಲಿ ದರ್ಶನ್ ಪುತ್ರ... ಅಪ್ಪ ಜೈಲಲ್ಲಿರೋವಾಗ್ಲೆ ಮಗ ಸಿನಿಮಾಗೆ ಹೀರೋ ಆಗ್ತಾರ?
ಚಂದನವನದ ನಟ ದರ್ಶನ್ ತೂಗುದೀಪ ಅವರ ಪುತ್ರ ವಿನೀಶ್ ತೂಗುದೀಪ ಮಾಸ್ ಲುಕ್ ಅಲ್ಲಿ ಫೋಟೊ ಶೂಟ್ ಮಾಡಿಸಿಕೊಂಡಿದ್ದು, ಈ ಫೋಟೊಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅಪ್ಪ ಜೈಲಲ್ಲಿ ಇರೋವಾಗ್ಲೇ ಮಗ ಸಿನಿಮಾ ಇಂಡಷ್ಟ್ರಿಗೆ ಎಂಟ್ರಿ ಕೊಡ್ತಿದ್ದಾರ ಎನ್ನುವ ಹಾಗಿದೆ ಈ ಲುಕ್.

ದರ್ಶನ್ ತೂಗುದೀಪ ಪುತ್ರ
ಚಂದನವನದ ನಟ ದರ್ಶನ್ ತೂಗುದೀಪ ಅವರ ಪುತ್ರ ವಿನೀಶ್ ತೂಗುದೀಪ ಅವರ ಫೋಟೊ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ರಿಯಲ್ ಫೋಟೊನೋ ಅಥವಾ ಫೋಟೊ ಶಾಪ್ ಮಾಡಿದ್ದೋ ಅನ್ನೋದು ಖಚಿತವಿಲ್ಲ, ಆದರೆ ವಿನೀಶ್ ಮಾಸ್ ಲುಕ್ ಮಾತ್ರ ವೈರಲ್ ಆಗಿದೆ.
ಮಾಸ್ ಲುಕ್ಕಲ್ಲಿ ವಿನೀಶ್
ದರ್ಶನ್ ಪುತ್ರ ವಿನೀಶ್ ಅವರು ಸ್ಟೈಲಿಶ್ ಆಗಿ ಕೋಟು, ಬೂಟು ಧರಿಸಿ, ಕಾರ್ ಮುಂದೆ ಪೋಸ್ ನೀಡಿದ್ದು. ಸಖತ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ಗೆ ಅಭಿಮಾನಿಗಳು ಮನಸೋತಿದ್ದಾರೆ. ಮುಂದಿನ ಹೀರೋ ಇವರೇ ಎನ್ನುತ್ತಿದ್ದಾರೆ.
ಹೀರೋ ಆಗಲು ರೆಡಿಯಾದ್ರಾ?
ಈ ಫೋಟೊಗಳನ್ನು ನೋಡುತ್ತಿದ್ದರೆ, ತಂದೆ ದರ್ಶನ್ ತೂಗುದೀಪ ಜೈಲಲ್ಲಿ ಇರೋವಾಗಲೇ ವಿನೀಶ್ ಸಿನಿಮಾ ಇಂಡಷ್ಟ್ರಿಗೆ ಹೀರೋ ಆಗಿ ಎಂಟ್ರಿ ಕೊಡಲು ರೆಡಿಯಾಗಿರುವಂತೆ ತೋರುತ್ತಿದೆ. ಲುಕ್, ಸ್ಟೈಲ್ ಎಲ್ಲವೂ ಅಪ್ಪನಂತೆ ಕಾಣಿಸುತ್ತಿದೆ. ಹಾಗಾಗಿ ಸಿನಿಮಾಗೆ ಬರಲಿದ್ದಾರೆ ಎನ್ನುತ್ತಿದ್ದಾರೆ ಜನ.
ಈಗಾಗಲೇ ಅಪ್ಪನ ಜೊತೆ ನಟನೆ
ವಿನೀಶ್ ಅವರು ಈಗಾಗಲೇ ತಮ್ಮ ತಂದೆಯ ಜೊತೆಗೆ ಎರಡು ಸಿನಿಮಾಗಳಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ಐರಾವತ, ಯಜಮಾನ ಚಿತ್ರದಲ್ಲಿ ವಿನೀಶ್ ನಟಿಸಿದ್ದರು. ದರ್ಶನ್ ಪೊಲೀಸ್ ಅಧಿಕಾರಿಯಾಗಿ ಮಿಂಚಿದ ಮಿಸ್ಟರ್ ಐರಾವತ ಮೂವಿನಲ್ಲಿ ಚೋಟಾ ಪೊಲೀಸ್ ಆಗಿ ಕಾಣಿಸಿಕೊಂಡಿದ್ದ. 2019ರಲ್ಲಿ ಬಂದ ಯಜಮಾನ ಮೂವಿನಲ್ಲೂ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು.
ಡೆವಿಲ್ ಸಿನಿಮಾದಲ್ಲಿ ವಿನೀಶ್
ಇನ್ನು ದರ್ಶನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಡೆವಿಲ್ ನಲ್ಲೂ ಸಹ ವಿನೀಶ್ ಬಣ್ಣ ಹಚ್ಚಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚಿಗೆ ದಿ ಡೆವಿಲ್ ಸಿನಿಮಾದ ಉದಯಪುರ ಶೆಡ್ಯೂಲ್ನ ಮೇಕಿಂಗ್ ದೃಶ್ಯಗಳನ್ನ ಚಿತ್ರತಂಡ ರಿಲೀಸ್ ಮಾಡಿತ್ತು. ಅದ್ರಲ್ಲಿ ವಿನೀಶ್ ಮೇಕಪ್ ಹಾಕಿಸಿಕೊಂಡು ಹೇರ್ ಸ್ಟೈಲ್ ಮಾಡಿಸಿಕೊಳ್ತಾ ಇರುವ ಒಂದು ಪುಟ್ಟ ಝಲಕ್ ಇದೆ. ಹಾಗಾಗಿ ವಿನೀಶ್ ಸಿನಿಮಾದಲ್ಲಿ ಇರೋದು ಖಚಿತವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವಿನೀಶ್
ಇನ್ನು ವಿನೀಶ್ ಅವರಿಗೆ ಕೇವಲ 15 ವರ್ಷ, ಅವರು ಸೋಶಿಯಲ್ ಮೀಡಿಯಾದಲ್ಲಿ ಅಷ್ಟೊಂದು ಆಕ್ಟಿವ್ ಆಗಿಲ್ಲ. ಆದರೆ ವಿನೀಶ್ ಹೆಸರಲ್ಲಿ ಹಲವಾರು ಫ್ಯಾನ್ಸ್ ಪೇಜ್ ಗಳು ಕ್ರಿಯೇಟ್ ಆಗಿದ್ದು, ಅವುಗಳಲ್ಲಿ ವಿನೀಶ್ ಮಾಸ್ ಫೋಟೊ ವೈರಲ್ ಆಗಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

