- Home
- Entertainment
- Sandalwood
- ಅಪ್ಪ ಎದುರು ಬಂದ್ರೆ ಅಳು ಬರುತ್ತೆ; ಮಿಸ್ ಡೀವಾ ಸ್ಪರ್ಧಿಯಲ್ಲಿ ಕೇಳಿದ ಪ್ರಶ್ನೆಗೆ KGF ನಟಿ ಕೊಟ ಉತ್ತರ ವೈರಲ್
ಅಪ್ಪ ಎದುರು ಬಂದ್ರೆ ಅಳು ಬರುತ್ತೆ; ಮಿಸ್ ಡೀವಾ ಸ್ಪರ್ಧಿಯಲ್ಲಿ ಕೇಳಿದ ಪ್ರಶ್ನೆಗೆ KGF ನಟಿ ಕೊಟ ಉತ್ತರ ವೈರಲ್
ಫಿನಾಲೆಯಲ್ಲಿ ಕೇಳಿದ ಪ್ರಶ್ನೆಗೆ ಶ್ರೀನಿಧಿ ಶೆಟ್ಟಿ ಕೊಟ್ಟ ಉತ್ತರ ವೈರಲ್. ಪ್ರಶಸ್ತಿ ಗೆಲ್ಲುವ ಲಕ್ಷಣಗಳು ಏನು?

ಮಂಗಳೂರು ಸುಂದರಿ ಶ್ರೀನಿಧಿ ಸೆಟ್ಟಿ ಮಾಡಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡು ಆನಂತರ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರು.
2016ರಲ್ಲಿ ಮಿಸ್ ಡೀವಾ ಪೇಜೆಂಟ್‌ನಲ್ಲಿ ಸ್ಪರ್ಧಿಸಿ ಫೈನಲಿಸ್ಟ್ ಆಗಿ ಮಿಸ್ ಸುಪ್ರಾನ್ಯಾಷನಲ್ ಇಂಡಿಯಾ ಟೈಟಪ್ ಗಿಟ್ಟಿಸಿಕೊಂಡು. ಈ ವೇಳೆ ಎದುರಾದ ಪ್ರಶ್ನೆಗೆ ನಿಧಿ ಕೊಟ್ಟ ಉತ್ತರ ವೈರಲ್ ಆಗುತ್ತಿದೆ.
'ನಿಮ್ಮ ಪ್ರಕಾರ ನಿಮ್ಮ ಶಕ್ತಿ ಮತ್ತು ವೀಕ್‌ನೆಸ್ ಏನು?' ಎಂದು ತೀರ್ಪುಗಾರರು ಪ್ರಶ್ನಿಸುತ್ತಾರೆ. ಒಂದು ನಿಮಿಷವೂ ಯೋಚನೆ ಮಾಡದೆ ಶ್ರೀನಿಧಿ ಧೈರ್ಯವಾಗಿ ಉತ್ತರ ನೀಡಲಿದ್ದಾರೆ.
'ನನ್ನ ಶಕ್ತಿ ಏನೆಂದರೆ ಯಾವತ್ತೂ ಬಿಟ್ಟು ಕೊಡದೆ ಇರುವ ಗುಣ. ಜೀವನದಲ್ಲಿ ಎಷ್ಟೇ ಕುಗ್ಗಿದರು ಎಷ್ಟೇ ಸೋತರು ನಾನು ಗಟ್ಟಿಯಾಗಿ ಕಮ್‌ಬ್ಯಾಕ್ ಮಾಡುತ್ತೀನಿ' ಎಂದು ಶ್ರೀನಿಧಿ ಶೆಟ್ಟಿ ಮಾತನಾಡಿದ್ದಾರೆ.
'ನನ್ನ ಗುರಿ ನನ್ನ ಸಾಧನೆ ಕಡೆ ಗಮನ ಕೊಡುತ್ತೀನಿ. ಪರಿಸ್ಥಿತಿ ಏನೇ ಇರಲಿ ನಾನು ಧೈರ್ಯವಾಗಿ ನಿಲ್ಲಬೇಕು. ನನ್ನ ವೀಕ್‌ನೆಸ್ ಏನೆಂದರೆ ನಾನು ಸ್ವಲ್ಪ ಎಮೋಷನಲ್ ವ್ಯಕ್ತಿ'
'ಒಂದು ವೇಳೆ ನನ್ನ ತಂದೆ ಬಂದು ಎದುರು ನಿಂತರೆ ನಾನು ಅಳುವುದಕ್ಕೆ ಶುರು ಮಾಡಿಬಿಡುತ್ತೀನಿ. ನನ್ನ ಪ್ರಕಾರ ಇದೇ ನನ್ನ ವೀಕ್‌ನೆಸ್' ಎಂದು ಶ್ರೀನಿಧಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.