- Home
- Entertainment
- Sandalwood
- KD Movie ಸೆರಗ ಸರಿಸೋ ಬಗ್ಗೆ ಮೊದಲ ಬಾರಿ ರಿಯಾಕ್ಷನ್ ಕೊಟ್ಟ ಸುದೀಪ್: ಕಿಚ್ಚ ಹೇಳಿದ್ದೇನು
KD Movie ಸೆರಗ ಸರಿಸೋ ಬಗ್ಗೆ ಮೊದಲ ಬಾರಿ ರಿಯಾಕ್ಷನ್ ಕೊಟ್ಟ ಸುದೀಪ್: ಕಿಚ್ಚ ಹೇಳಿದ್ದೇನು
ಕೆಡಿ ಸಿನಿಮಾದ 'ಸೆರಗ ಸರ್ಸೆ' ಹಾಡಿನ ವಿವಾದದ ಬಗ್ಗೆ ನಟ ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ಪ್ರೇಮ್ ಅವರ ಪರವಾಗಿ ಮಾತನಾಡಿದ ಅವರು, ಒಂದು ಹಾಡಿಗಾಗಿ ಇಷ್ಟು ಕಠಿಣವಾಗಿ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ. ನಮ್ಮವರ ಬಗ್ಗೆಯೇ ಇಷ್ಟು ಹಾರ್ಶ್ ಆಗಬೇಕಾ ಎಂದು ಅವರು ಪ್ರಶ್ನಿಸಿದ್ದಾರೆ.

ಸೆರಗ ಸರ್ಸೆ ವಿವಾದ
ಜೋಗಿ ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ಅಭಿನಯಿಸಿರುವಂತಹ ಕೆಡಿ ಸಿನಿಮಾದ ಸೆರಗ ಸರ್ಸೆ ಹಾಡು ಯಾವ ಪರಿಯಲ್ಲಿ ಸದ್ದು ಮಾಡಿತ್ತು ಎನ್ನುವುದು ಎಲ್ಲರಿಗೂ ತಿಳಿದದ್ದೇ. ಇದರಲ್ಲಿನ ಅಶ್ಲೀಲ ಸಾಹಿತ್ಯದ ವಿರುದ್ಧ ಸಿಕ್ಕಾಪಟ್ಟೆ ಸೋಷಿಯಲ್ ಮೀಡಿಯಾದಲ್ಲಿ ಗದ್ದಲವಾಗುತ್ತಲೇ, ಇದರ ಬಗ್ಗೆ ದೂರು ಕೂಡ ದಾಖಲಾಗಿತ್ತು. ಆ ಹಾಡನ್ನು ತೆಗೆದು ಈಗ ಸಿನಿಮಾ ರಿಲೀಸ್ ಮಾಡಲಾಗಿದೆ.
ಇಂದು ಕೆಡಿ ಬಿಡುಗಡೆ
ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಇಂದು ಮಾಧ್ಯಮಗೋಷ್ಠಿ ನಡೆಸಲಾಗಿತ್ತು. ಅದರಲ್ಲಿ ಸುದೀಪ್ ಕೂಡ ಹಾಜರಿದ್ದರು. ಈ ಸಂದರ್ಭದಲ್ಲಿ ಅವರು ಸೆರಗ ಸರ್ಸೆ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ತಮ್ಮದೇ ಆದ ಶೈಲಿಯಲ್ಲಿ ಉತ್ತರಿಸಿದರು,
ಸುದೀಪ್ ಹೇಳಿದ್ದೇನು?
ಈ ಹಾಡಿನಲ್ಲಿ ತಪ್ಪಿದೆ ಎಂದು ನಾನು ಹೇಳುವುದಿಲ್ಲ. ಕೆಲವು ಟೈಂ ಕೆಲವು ವರ್ಕ್ ಆಗಲ್ವಲ್ಲಾ, ಈಗಲೂ ಹಾಗೆಯೇ ಆಗಿದೆ ಅಷ್ಟೇ. ಗಲ್ಲ, ಒಪಿನಿಯನ್ಸ್ ಬೇಗ ಎಲ್ಲಾ ಕಡೆ ರೀಚ್ ಆಗುತ್ತೆ. ಏನೋ ಆಗಿರುತ್ತೆ, ಅದಕ್ಕಾಗಿ ಹೀಗಾಗಿದೆ ಎಂದಿದ್ದಾರೆ, ಈ ಮೂಲಕ ಈ ಹಿಂದೆಯೂ ಅಶ್ಲೀಲ ಎನ್ನುವಂಥ ಸಾಹಿತ್ಯದ ಹಲವು ಹಾಡುಗಳು ಬಂದಿರುವ ಬಗ್ಗೆ ಪರೋಕ್ಷವಾಗಿ ನಟ ನುಡಿದಿದ್ದಾರೆ.
ನಟನಿಂದ ಬೇಸರ
ಆದರೆ, ಸೆರಗ ಸರ್ಸೆ ವಿವಾದ ಆಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಸುದೀಪ್, ಇದರಿಂದ ಬೇಸರವಾಯ್ತು. ಏಕೆಂದರೆ, ಪ್ರೇಮ್ ಅವರು, ತಾಯಿ ಬಗ್ಗೆ, ಎಮೋಷನ್ ಬಗ್ಗೆ ಎಷ್ಟೊಂದು ಸಾಂಗ್ ಬರೆದಿದ್ದಾರೆ. ಎಷ್ಟೋ ಮಂದಿ ಈ ಹಾಡುಗಳನ್ನು ಹಾಕ್ಕೊಂಡು ಹಾಕ್ಕೊಂಡು ಕೇಳಿ ಕೇಳಿ, ಮನೆಗಳಲ್ಲಿ ನಮ್ಮ ತಂದೆ ತಾಯಂದಿರಿಂದ ದೂರ ಆದವರು ಎಲ್ಲರೂ ಹೋಗಿ ಹತ್ತಿರ ಆಗಿದ್ದಾರೆ ಎಂದಿದ್ದಾರೆ.
ಹೀಗೆ ಮಾಡೋದು ತಪ್ಪು
ಆದರೆ ಈಗ ಈ ಒಂದು ಹಾಡಿನಿಂದ ಈ ರೀತಿ ಮಾತನಾಡುವುದು ಸರಿಯಲ್ಲ. ಒಬ್ಬರನ್ನು ತುಂಬಾ ಸಣ್ಣ ಎನ್ನುವಂತೆ ಫೀಲ್ ಮಾಡಿಸೋದು, ಏನೋ ಒಂದು ದೊಡ್ಡ ತಪ್ಪು ಮಾಡಿಬಿಟ್ರು ಅನ್ನೋದು ಸರಿಯಲ್ಲ ಎಂದಿದ್ದಾರೆ ಸುದೀಪ್.
ಇಷ್ಟೊಂದು ಹಾರ್ಶ್ ಯಾಕೆ?
ನಾವು ನಮ್ಮ ಜನರ ಬಗ್ಗೆಯೇ ಇಷ್ಟು ಹಾರ್ಶ್ ಆಗೋದು ಯಾಕೆ? ಕನ್ನಡದ ಒಬ್ಬ ನಿರ್ದೇಶಕರು, ಕನ್ನಡದ ಒಬ್ಬ ಸಾಹಿತಿ, ನಾವು ನಮ್ಮ ಜನರ ಬಗ್ಗೆಯೇ ಇಷ್ಟು ಹಾರ್ಶ್ ಆಗಬೇಕಾ ಎಂದು ಸುದೀಪ್ ಪ್ರಶ್ನಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

