- Home
- Entertainment
- Sandalwood
- ಬಿಲ್ಲ ರಂಗ ಬಾಷ ಮಧ್ಯೆ ಮ್ಯಾಕ್ಸ್ 2 ಸಿನಿಮಾ ಶೂಟಿಂಗ್? ಕಿಚ್ಚ ಸುದೀಪ್ ಹೊಸ ಪ್ಲ್ಯಾನ್ ಏನು?
ಬಿಲ್ಲ ರಂಗ ಬಾಷ ಮಧ್ಯೆ ಮ್ಯಾಕ್ಸ್ 2 ಸಿನಿಮಾ ಶೂಟಿಂಗ್? ಕಿಚ್ಚ ಸುದೀಪ್ ಹೊಸ ಪ್ಲ್ಯಾನ್ ಏನು?
ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್ 2’ ಸಿನಿಮಾ ಇನ್ನೇನು ಶುರುವಾಗಲಿದೆ. ವಿಜಯ್ ಕಾರ್ತಿಕೇಯ ನಿರ್ದೇಶನದ ‘ಮ್ಯಾಕ್ಸ್’ ಸಿನಿಮಾ ಗೆಲುವು ಪಡೆದಿತ್ತು.

ಕಿಚ್ಚ ಸುದೀಪ್ ಪಾಳಯದಿಂದ ಮತ್ತೊಂದು ಸಿಹಿ ಸುದ್ದಿ ಬಂದಿದೆ. ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್ 2’ ಸಿನಿಮಾ ಇನ್ನೇನು ಶುರುವಾಗಲಿದೆ. ವಿಜಯ್ ಕಾರ್ತಿಕೇಯ ನಿರ್ದೇಶನದ ‘ಮ್ಯಾಕ್ಸ್’ ಸಿನಿಮಾ ಗೆಲುವು ಪಡೆದಿತ್ತು.
ಆ ಗೆಲುವಿನ ಹಿನ್ನೆಲೆಯಲ್ಲಿ ಇದೀಗ ‘ಮ್ಯಾಕ್ಸ್ 2’ ಸಿನಿಮಾ ಆರಂಭವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ವಿಶೇಷವೆಂದರೆ ಇದು ಮ್ಯಾಕ್ಸ್ ಸಿನಿಮಾದ ಪ್ರೀಕ್ವೆಲ್ ಆಗಿದೆ. ‘ಮ್ಯಾಕ್ಸ್’ ಸಿನಿಮಾದಲ್ಲಿ ಸಸ್ಪೆಂಡ್ ಆಗಿದ್ದ ಅರ್ಜುನ್ ಮಹಾಕ್ಷಯ್ ಹೊಸ ಸ್ಟೇಷನ್‌ಗೆ ಬರುವಲ್ಲಿಂದ ಕತೆ ಶುರುವಾಗುತ್ತದೆ.
ಮ್ಯಾಕ್ಸ್ 2 ಸಿನಿಮಾದಲ್ಲಿ ಅದಕ್ಕೂ ಹಿಂದಿನ ಕತೆಯನ್ನು ಹೇಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ‘ಬಿಲ್ಲ ರಂಗ ಬಾಷ’ ಸಿನಿಮಾ ಬಹಳ ದೊಡ್ಡ ಸಿನಿಮಾವಾದ್ದರಿಂದ ಈ ಸಿನಿಮಾ ಬಿಡುಗಡೆಗೆ ಬಹಳ ಸಮಯ ತಗುಲಲಿದೆ. ಆದ್ದರಿಂದ ‘ಮ್ಯಾಕ್ಸ್ 2’ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಈ ಸಿನಿಮಾವನ್ನೂ ವಿಜಯ್ ಕಾರ್ತಿಕೇಯ ಅವರೇ ನಿರ್ದೇಶಿಸಲಿದ್ದು, ಈಗಾಗಲೇ ಸ್ಕ್ರಿಪ್ಟ್ ಸಿದ್ಧವಿದೆಯಂತೆ. ಮ್ಯಾಕ್ಸ್ ನಿರ್ಮಾಪಕರು ಈ ಸಿನಿಮಾ ಮಾಡುತ್ತಿಲ್ಲವಾದ್ದರಿಂದ ಹೊಸ ನಿರ್ಮಾಪಕರು ಈ ಸಿನಿಮಾ ನಿರ್ಮಾಣ ಜವಾಬ್ದಾರಿ ಹೊರುವ ಸಾಧ್ಯತೆ ಇದೆ.
‘ಬಿಲ್ಲ ರಂಗ ಬಾಷ’ ಸಿನಿಮಾದ ಚಿತ್ರೀಕರಣದ ಗ್ಯಾಪ್‌ನಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯಲಿರುವ ಲಕ್ಷಣ ದಟ್ಟವಾಗಿದೆ. ಎಲ್ಲವೂ ಅಂದುಕೊಂಡಂತಾದರೆ ಮುಂದಿನ ವರ್ಷಾರಂಭಕ್ಕೆ ಕಿಚ್ಚ ಸುದೀಪ್ ಸಿನಿಮಾ ಬಂದರೂ ಅಚ್ಚರಿ ಇಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

