- Home
- Entertainment
- Sandalwood
- ಯಶ್ ಟಾಕ್ಸಿಕ್ ಸಿನಿಮಾಗಾಗಿ ಕಾಯುತ್ತಿರುವ ಫ್ಯಾನ್ಸ್‌ಗೆ ಫೆಬ್ರವರಿಯಲ್ಲೇ ಗುಡ್ ನ್ಯೂಸ್
ಯಶ್ ಟಾಕ್ಸಿಕ್ ಸಿನಿಮಾಗಾಗಿ ಕಾಯುತ್ತಿರುವ ಫ್ಯಾನ್ಸ್‌ಗೆ ಫೆಬ್ರವರಿಯಲ್ಲೇ ಗುಡ್ ನ್ಯೂಸ್
ಯಶ್ ಟಾಕ್ಸಿಕ್ ಸಿನಿಮಾಗಾಗಿ ಕಾಯುತ್ತಿರುವ ಫ್ಯಾನ್ಸ್‌ಗೆ ಫೆಬ್ರವರಿಯಲ್ಲೇ ಗುಡ್ ನ್ಯೂಸ್ ಸಿಗಲಿದೆ. ಕನ್ನಡ ಮಾತ್ರವಲ್ಲ ದೇಶಾದ್ಯಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಯಶ್ ಟಾಕ್ಸಿಕ್ ತಂಡ ಇದೇ ತಿಂಗಳಲ್ಲಿ ಸಿಹಿ ಸುದ್ದಿ ನೀಡುತ್ತಿದೆ.

ಯಶ್ ಅಭಿನಯದ ಟಾಕ್ಸಿಕ್ ನ್ಯೂಸ್
ಯಶ್ ಅಭಿನಯದ ಟಾಕ್ಸಿಕ್ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇತ್ತೀಚೆಗೆ ಸಿನಿಮಾದ ಸಣ್ಣ ತುಣುಕು ಭಾರಿ ಕುತೂಹಲ ಕೆರಳಿಸಿದೆ. ಮಾರ್ಚ್ 19ಕ್ಕೆ ಟಾಕ್ಸಿಕ್ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಹೇಳಿದೆ. ಇದೀಗ ಸಿನಿಮಾದ ಬಹುತೇಕ ಕೆಲಸಗಳು ಮುಗಿದೆ. ಇದರ ಬೆನ್ನಲ್ಲೇ ಫೆಬ್ರವರಿಯಲ್ಲೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಲು ಟಾಕ್ಸಿಕ್ ತಂಡ ಮುಂದಾಗಿದೆ.
ಏನಿದು ಫೆಬ್ರವರಿ ಗುಡ್ ನ್ಯೂಸ್
ಯಶ್ ಟಾಕ್ಸಿಕ್ ಸಿನಿಮಾ ಮೇಲೆ ನಿರೀಕ್ಷೆಗಳು ಹೆಚ್ಚಾಗುತ್ತಿದೆ. ಕೋಟಿ ಕೋಟಿ ರೂಪಾಯಿಗೆ ವಿತರಣೆ ಹಕ್ಕಿಗೆ ಬೇಡಿಕೆ ಬರುತ್ತಿದೆ. ಇದೀಗ ಚಿತ್ರತಂಡ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡುತ್ತಿದೆ. ಮಾರ್ಚ್ 19ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದ್ದರೆ, ಫೆಬ್ರವರಿ ಕೊನೆಯವಾರದಲ್ಲಿ ಟಾಕ್ಸಿಕ್ ಸಿನಿಮಾ ಟೀಸರ್ ಬಿಡುಗಡೆಯಾಗಲಿದೆ. ಫೆಬ್ರವರಿ ಅಂತ್ಯದಲ್ಲಿ ಮತ್ತೆ ಟಾಕ್ಸಿಕ್ ಅಬ್ಬರ ದೇಶ ವಿದೇಶದಲ್ಲಿ ನಡೆಯಲಿದೆ.
ಮಾರ್ಚ್ ಆರಂಭದಲ್ಲೇ ಮತ್ತೊಂದು ಹಬ್ಬ
ಮಾರ್ಚ್ ತಿಂಗಳ ಮೊದಲ ಅಥವಾ 2ನೇ ವಾರದಲ್ಲಿ ಟಾಕ್ಸಿಕ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಲಿದೆ. ಟ್ರೇಲರ್ ಮೇಲೆ ಇದೀಗ ಎಲ್ಲರ ಕುತೂಹಲ ನೆಟ್ಟಿದೆ. ಯಶ್ ಟಾಕ್ಸಿಕ್ ಸಿನಿಮಾದ ಮೊದಲ ಟೀಸರ್ ಭಾರಿ ಧೂಳೆಬ್ಬಿಸಿತ್ತು. ಇದೀಗ ಟೀಸರ್ ಹಾಗೂ ಟ್ರೇಲರ್ ಎರಡೂ ಬಿಡುಗಡೆಗೆ ಸಜ್ಜಾಗಿದ್ದು, ಅಭಿಮಾನಿಗಳ ಸಂಭ್ರಮ ಡಬಲ್ ಆಗಿದೆ.
ಐವರು ನಾಯಕಿಯರ ಕುತೂಹಲ
ಟಾಕ್ಸಿಕ್ ಸಿನಿಮಾದಲ್ಲಿ ಐವರು ನಾಯಕಿಯರು ಕಾಣಿಸಿಕೊಂಡಿದ್ದಾರೆ. ಎಲ್ಲರೂ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ನಯನ್ ತಾರಾ, ರುಕ್ಮಿಣಿ ವಸಂತ್, ಕಿಯಾರ ಅಡ್ವಾಣಿ, ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ಸೇರಿ ಐವರು ಈ ಸಿನಿಮಾದಲ್ಲಿದ್ದಾರೆ. ಇದೇ ಕಾರಣದಿಂದ ಕುತೂಹಲ ಡಬಲ್ ಆಗಿದೆ.
ಮಂದೂಡಿಕೆ ಇಲ್ಲ
ಟಾಕ್ಸಿಕ್ ಸಿನಿಮಾ ರಿಲೀಸ್ ಮಾರ್ಚ್ 19ರ ಬದಲು ಮುಂದೂಡಲಾಗುತ್ತಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದೇ ದಿನ ಧುರಧರ್ 2 ಪಾರ್ಟ್ ಬಿಡುಗಡೆಯಾಗಲಿದೆ. ಆದರೆ ಮುಂದೂಡಿಕೆ ಕುರಿತು ಊಹಾಪೋಹಕ್ಕೆ ಚಿತ್ರ ತಂಡ ಸ್ಪಷ್ಟನೆ ನೀಡಿದೆ. ಟಾಕ್ಸಿಕ್ ಮೊದಲೇ ನಿರ್ಧರಿಸಿದಂತೆ ಮಾರ್ಚ್ 19ಕ್ಕೆ ಬಿಡುಗಡೆಯಾಗಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟನೆ ನೀಡಿದೆ.
ಕನ್ನಡ, ಇಂಗ್ಲೀಷ್ ಭಾಷೆ ಜೊತೆ ಭಾರತೀಯ ಭಾಷೆಗಳಲ್ಲಿ ಲಭ್ಯ
ಟಾಕ್ಸಿಕ್ ಸಿನಿಮಾ ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಇನ್ನು ಮಲೆಯಾಳಂ, ತಮಿಳು, ತೆಲೆಗು, ಹಿಂದಿ ಸೇರಿದಂತೆ ಭಾರತೀಯ ಭಾಷೆಗಳಿಗೆ ಡಬ್ ಮಾಡಲಾಗುತ್ತಿದೆ. ಹೀಗಾಗಿ ಹಲವು ಭಾಷೆಗಳಲ್ಲಿ ಟಾಕ್ಕಿಸ್ ಸಿನಿಮಾ ರಿಲೀಸ್ ಆಗುತ್ತಿದೆ. ಇಷ್ಟು ದಿನ ಕನ್ನಡ ಸಿನಿಮಾ ಪ್ಯಾನ್ ಇಂಡಿಯಾ ಪರಿಕಲ್ಪನೆಯಲ್ಲಿದ್ದರೆ, ಇದೀಗ ಯಶ್ ಟಾಕ್ಸಿಕ್ ಪ್ಯಾನ್ ವರ್ಲ್ಡ್ ದಾಖಲೆಗೆ ಸಜ್ಜಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

