ಚಿಕ್ಕಮಗಳೂರು: ಕಾಡಾನೆಗಳ ಬಳಿಕ ಕಾಡುಕೋಣಗಳ ಹಾವಳಿ: ಟೀ ಎಸ್ಟೇಟ್ನಲ್ಲಿ ದಾಂಧಲೆ: 1 ಕಾಟಿ ಸಾವು
ಚಿಕ್ಕಮಗಳೂರಿನಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು, ಟೀ ಎಸ್ಟೇಟ್ಗಳಲ್ಲಿ ದಾಂಧಲೆ ನಡೆಸುತ್ತಿವೆ. ಇತ್ತೀಚೆಗೆ ಎರಡು ಕಾಡುಕೋಣಗಳ ನಡುವಿನ ಕಾದಾಟದಲ್ಲಿ ಒಂದು ಸಾವನ್ನಪ್ಪಿದ್ದು, ಮೂರು ದಿನಗಳ ಹಿಂದೆ ಕಾಡುಕೋಣ ದಾಳಿಗೆ ಯುವಕನೊಬ್ಬ ಬಲಿಯಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಾಡಾನೆಗಳ ಬಳಿಕ ಕಾಡು ಕೋಣಗಳ ಹಾವಳಿ ಹೆಚ್ಚಾಗಿದ್ದು ಟೀ ಎಸ್ಟೇಟ್ನಲ್ಲಿ ದಾಂಧಲೆ ನಡೆಸುತ್ತಿರುವ ಈ ಕಾಡುಕೋಣಗಳು ಟೀ ಸೋಪ್ಪನ್ನು ತುಳಿದು ನಾಶ ಮಾಡುತ್ತಿವೆ.
ಕೊಪ್ಪ ತಾಲೂಕಿನ ಎಲೆಮಡಲು ಸಮೀಪದ ಟೀ ಎಸ್ಟೇಟಿನಲ್ಲಿ ಕಾಡು ಕೋಣಗಳ ಗುಂಪು ಬೀಡು ಬಿಟ್ಟಿದ್ದು, 2 ಕಾಡುಕೋಣಗಳ ನಡುವಿನ ಜಗಳದಲ್ಲಿ ಒಂದು ಕಾಡುಕೋಣ ಸಾವನ್ನಪ್ಪಿದೆ.
ಟೀ ಎಸ್ಟೇಟ್ನಲ್ಲಿ ಕಾಡು ಕೋಣಗಳು ಬೀಡು ಬಿಟ್ಟಿದ್ದು, ಅಧಿಕಾರಿಗಳ ಗಮನಕ್ಕೆ ತಂದರೂ ಸೂಕ್ತ ಕ್ರಮ ಕೈಗೊಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಚಿಕ್ಕಮಗಳೂರಿನ ಕಳಸ ತಾಲೂಕಿನಲ್ಲಿ ನಿರಂತರವಾಗಿ ಕಾಡುಕೋಣಗಳ ಹಾವಳಿ ತೀವ್ರವಾಗಿದೆ.
ಇಲ್ಲಿ 2 ಕಾಟಿಗಳ ನಡುವಿನ ಜಗಳದಲ್ಲಿ ಒಂದು ಕಾಟಿ ಸಾವನ್ನಪ್ಪಿದೆ. ಎರಡು ಕಾಡುಕೋಣಗಳ ನಡುವಿನ ಕಾದಾಟದ ವೇಳೆ 50 ಅಡಿ ಎತ್ತರದಿಂದ ಬಿದ್ದ ಒಂದು ಕಾಡುಕೋಣ ಸಾವನ್ನಪ್ಪಿದೆ. ವಿಚಾರ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಚಿಕಿತ್ಸೆ ನೀಡಿದರೂ ಕಾಡುಕೋಣ ಬದುಕುಳಿದಿಲ್ಲ.
ಮಲೆನಾಡಲ್ಲಿ ಕಾಡುಕೋಣಗಳ ಹಾವಳಿ ಮಿತಿಮೀರಿದ್ದು, 3 ದಿನಗಳ ಹಿಂದಷ್ಟೇ ಕಾಡುಕೋಣಗಳ ದಾಳಿಗೆ ಯುವಕ ಸಾವನ್ನಪ್ಪಿದ್ದ. ಇಲ್ಲಿನ ಕಾಫಿತೋಟ-ಟೀ ಎಸ್ಟೇಟಿನಲ್ಲಿ ಬೀಡು ಬಿಟ್ಟಿರೋ ಕಾಡುಕೋಣಗಳ ಹಿಂಡು ಬೀಡು ಬಿಟ್ಟಿದೆ.
ಇದನ್ನೂ ಓದಿ: ಕೊಡಗು ಹೋಂ ಸ್ಟೇಯಲ್ಲಿ ಕರಾಳ ಘಟನೆ: ಸಿಬ್ಬಂದಿಯಿಂದಲೇ ವಿದೇಶಿ ಮಹಿಳೆ ಮೇಲೆ ರೇ**ಪ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

