ಬೆಂಗಳೂರಿನಲ್ಲಿ ವಿವಾಹಿತ ಮಹಿಳೆಯೊಬ್ಬಳು ಗಂಡ-ಮಕ್ಕಳಿಗೆ ನಿದ್ರೆ ಮಾತ್ರೆ ನೀಡಿ, ಕಸ ಎಸೆಯುವ ನೆಪದಲ್ಲಿ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿವಾಹಿತ ಮಹಿಳೆಯ ಈ ಕಿತಾಪತಿಗೆ ಗಂಡ ಮಕ್ಕಳು ಕಂಗಾಲಾಗಿದ್ದಾರೆ.

ಕಸ ಎಸೆದು ಬರ್ತಿನಿ ಅಂತ ಹೋದ ವಿವಾಹಿತ ಮಹಿಳೆ ವಾಪಸ್ ಬರಲೇ ಇಲ್ಲ

ಬೆಂಗಳೂರು: ಇತ್ತಿಚೆಗೆ ವಿವಾಹೇತರ ಸಂಬಂಧಗಳ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದ್ದು, ಕುಟುಂಬ ವ್ಯವಸ್ಥೆಯೇ ಮುರಿದು ಬೀಳುವ ಆತಂಕ ಎದುರಾಗಿದೆ. ಪ್ರತಿದಿನವೂ ಒಂದಲ್ಲ ಒಂದು ಅನೈತಿಕ ಸಂಬಂಧಗಳಿಂದ ಅವಾಂತರಗಳಾದ ಸುದ್ದಿಗಳು ಬೆಳಕಿಗೆ ಬರುತ್ತಿದ್ದು, ಇದರಿಂದ ಅವರನ್ನು ನಂಬಿದವರು ಬೀದಿಗೆ ಬೀಳುತ್ತಿದ್ದಾರೆ. ಗಂಡ ಮಕ್ಕಳಿದ್ದವರು ಅಥವಾ ಹೆಂಡತಿ ಮಕ್ಕಳಿದ್ದವರು ಎಲ್ಲರನ್ನು ಬಿಟ್ಟು ಮತ್ತೊಬ್ಬರ ಹಿಂದೆ ಹೋಗಿ ತಮ್ಮನ್ನು ನಂಬಿ ಬಂದವರನ್ನು ನಡು ನೀರಲ್ಲಿ ಕೈ ಬಿಡುತ್ತಿದ್ದಾರೆ. ಈಗ ಅಂತಹದ್ದೇ ಮತ್ತೊಂದು ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಕಟ್ಟಿಂಗ್ ಶಾಪ್‌ನವನ ಜೊತೆ ಪ್ರಿಯಾಂಕಾ ಪರಾರಿ

ವಿವಾಹಿತ ಮಹಿಳೆಯೊಬ್ಬಳು, ಗಂಡ ಮಕ್ಕಳನ್ನು ಬಿಟ್ಟು ಕಟ್ಟಿಂಗ್ ಶಾಪ್ ಹೊಂದಿದ್ದ ವ್ಯಕ್ತಿ ಜೊತೆ ರಾತ್ರೋರಾತ್ರಿ ಎಸ್ಕೇಪ್ ಆಗಿದ್ದಾಳೆ. ಬೆಂಗಳೂರಿನ ಬಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ವಿವಾಹಿತ ಮಹಿಳೆಯ ಮಾಡಿದ ಈ ಕಿತಾಪತಿಯಿಂದ ಆಕೆಯ ಗಂಡ ಮಕ್ಕಳು ಕಂಗಾಲಾಗಿದ್ದಾರೆ. ಪ್ರಿಯಾಂಕಾ ಎಂಬಾಕೆಯೇ ಗಂಡ ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋಗಿರುವ ಮಹಿಳೆ.

ರಾತ್ರಿ ಮನೆಯಲ್ಲಿದ್ದ ಕಸ ಎಸೆದು ಬರ್ತೀನಿ ಅಂತ ಹೇಳಿ ಪ್ರಿಯಾಂಕಾ ಮನೆಯಿಂದ ಹೊರಗೆ ಹೋಗಿದ್ದು, ಮತ್ತೆ ಆಕೆ ವಾಪಸ್ ಬಂದಿಲ್ಲ, ಹೋಗುವ ಮೊದಲು ಆಕೆ ಗಂಡ ಮಕ್ಕಳಿಗೆ ನಿದ್ರೆ ಮಾತ್ರೆ ಹಾಕಿದ್ದಾಳೆ. ಪ್ರಿಯಾಂಕಾಗೆ ಮನೆ ಪಕ್ಕದಲ್ಲೇ ಕಟ್ಟಿಂಗ್ ಶಾಪ್ ಇಟ್ಟುಕೊಂಡಿದ್ದ ಪ್ರಭು ಎಂಬಾತನ ಜೊತೆ ಅನೈತಿಕ ಸಂಬಂಧವಿತ್ತು. ಪ್ರಿಯಾಂಕಾಗೆ ಕೆಲ ದಿನಗಳ ಹಿಂದಷ್ಟೇ ಈ ಕಟ್ಟಿಂಗ್ ಶಾಪ್ ಹೊಂದಿದ್ದ ಪ್ರಭು ಪರಿಚಯವಾಗಿದ್ದ. ಈ ಪರಿಚಯ ಅನೈತಿಕ ಸಂಬಂಧಕ್ಕೆ ತಿರುಗಿದ್ದು, ದಿನ ಕಳೆದಂತೆ ಪ್ರೇಮ ಪ್ರಣಯದಲ್ಲಿ ತೊಡಗಿದ್ದರು.

ಪ್ರಿಯಾಂಕಾಗೆ ಮೊಬೈಲ್ ರಿಚಾರ್ಜ್ ಮಾಡ್ತಿದ್ದ ಪ್ರಭು

ಪ್ರಿಯಾಂಕಾ ಪತಿ ಶರತ್‌ಕುಮಾರ್ ಕೆಲಸಕ್ಕೆ ಹೋಗ್ತಿದ್ದ ಸಮಯದಲ್ಲಿಯೇ ಈ ಖತರ್ನಾಕ್ ಜೋಡಿಗಳು ಪರಸ್ಪರ ಭೇಟಿಯಾಗ್ತಿದ್ದರು. ಪ್ರಭು ಪ್ರಿಯಾಂಕಾ ಮೊಬೈಲ್‌ಗೆ ರಿಚಾರ್ಜ್ ಮಾಡ್ತಿದ್ದ.ತನ್ನ ಪತ್ನಿಗೆ ಮೊಬೈಲ್ ರಿಚಾರ್ಜ್ ಯಾರು ಮಾಡ್ತಿದ್ದಾರೆಂದು ಪತಿ ಶರತ್‌ಕುಮಾರ್ ಚೆಕ್ ಮಾಡಿದಾಗ ಇವರಿಬ್ಬರ ಪಲ್ಲಂಗದಾಟ ಬೆಳಕಿಗೆ ಬಂದಿತ್ತು. ವಿಚಾರ ಬೆಳಕಿಗೆ ಬಂದ ನಂತರ ಪತಿ ಶರತ್‌ಕುಮಾರ್ ಪತ್ನಿ ಪ್ರಿಯಾಂಕಳಿಗೆ ಎರಡ್ಮೂರು ಬಾರಿ ಬುದ್ದಿ ಹೇಳಿದ್ದ. ಆದರೂ ಕೇಳದ ಪ್ರಿಯಾಂಕಾ ಗೆಳೆಯ ಪ್ರಭು ಜೊತೆ ಓಡಿ ಹೋಗಿದ್ದಾಳೆ ಎಂದು ಪತಿ ಶರತ್‌ಕುಮಾರ್ ಆರೋಪಿಸಿದ್ದಾರೆ.

ಇದನ್ನೂ ಓದಿ: 1050 ಕೋಟಿ ಮೌಲ್ಯದ ಆಸ್ತಿ ಒಡೆಯನಾದ್ರು ವಿರಾಟ್‌ ಕೊಹ್ಲಿಗೆ ಒಂದು ಪೋಟೋ ಲೈಕ್ ಮಾಡುವ ಸ್ವಾತಂತ್ರ್ಯ ಇಲ್ವಾ?

ಏಪ್ರಿಲ್‌ 11ರ ರಾತ್ರಿ 11.57ರ ಸುಮಾರಿಗೆ ಮನೆ ಬಿಟ್ಟು ಹೋಗಿರುವ ಪ್ರಿಯಾಂಕಾ ಒಂದು ಕೈಯಲ್ಲಿ ಕಸದ ಬಕೆಟ್, ಮತ್ತೊಂದು ಕೈಯಲ್ಲಿ ಬ್ಯಾಗ್ ತೆಗೆದುಕೊಂಡು ಹೋಗಿದ್ದಾಳೆ. ಪ್ರಿಯಾಂಕಾ ಮನೆಬಿಟ್ಟು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪತ್ನಿಗಾಗಿ ಹಲವು ಕಡೆಗಳಲ್ಲಿ ಹುಡುಕಾಡಿದ ನಂತರ ಆಕೆ ಸಿಗದೇ ಹೋದ ಹಿನ್ನೆಲೆ ಶರತ್‌ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಬಗಲಗುಂಟೆ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.