ಆಟವಾಡುತ್ತಿದ್ದ ಮಗುವನ್ನು ಫುಟ್ಬಾಲ್‌ನಂತೆ ಒದ್ದ ಜಿಮ್ ಟ್ರೈನರ್; ಮಾರುದ್ದ ಹಾರಿಬಿದ್ದ ಮಗು!
ಬೆಂಗಳೂರಿನ ತ್ಯಾಗರಾಜ ನಗರದಲ್ಲಿ, ಜಿಮ್ ಟ್ರೈನರ್ ರಂಜನ್ ಆಟವಾಡುತ್ತಿದ್ದ ಬಾಲಕನಿಗೆ ಅಮಾನವೀಯವಾಗಿ ಒದ್ದು ವಿಕೃತಿ ಮೆರೆದಿದ್ದಾನೆ. ಸಿಸಿಟಿವಿಯಲ್ಲಿ ಸೆರೆಯಾದ ಈ ಘಟನೆಯ ಆರೋಪಿ ಈ ಹಿಂದೆಯೂ ಹಲವು ಮಕ್ಕಳ ಮೇಲೆ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ.

ಬಾಲಕನ್ನು ಫುಟ್ಬಾಲ್‌ನಂತೆ ಒದ್ದು ವಿಕೃತಿ
ಬೆಂಗಳೂರು (ಡಿ.19): ಸಿಲಿಕಾನ್ ಸಿಟಿಯ ಬನಶಂಕರಿ ವ್ಯಾಪ್ತಿಯ ತ್ಯಾಗರಾಜ ನಗರದಲ್ಲಿ ಅತ್ಯಂತ ಅಮಾನವೀಯ ಘಟನೆಯೊಂದು ನಡೆದಿದೆ. ಮನೆಯ ಮುಂದೆ ತನ್ನ ಪಾಡಿಗೆ ತಾನು ಆಟವಾಡುತ್ತಿದ್ದ ಪುಟ್ಟ ಬಾಲಕನೊಬ್ಬನನ್ನು ಜಿಮ್ ಟ್ರೈನರ್ ಒಬ್ಬ ಫುಟ್ಬಾಲ್‌ನಂತೆ ಕಾಲಿನಿಂದ ಒದ್ದು ವಿಕೃತಿ ಮೆರೆದಿದ್ದಾನೆ. ಈ ಘಟನೆಯನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ತೀವ್ರವಾಗಿ ಖಂಡಿಸಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.
ಸುಮ್ಮನೆ ಆಡುವಾಡುತ್ತಿದ್ದವನ ಮೇಲೆ ಹಲ್ಲೆ
ತ್ಯಾಗರಾಜ ನಗರದ ತನ್ನ ಅಜ್ಜಿ ಮನೆಗೆ ಬಂದಿದ್ದ ನೀವ್ ಜೈನ್ ಎಂಬ ಬಾಲಕ, ಕಳೆದ ಡಿಸೆಂಬರ್ 14ರಂದು ರಸ್ತೆಯಲ್ಲಿ ಆಟವಾಡುತ್ತಿದ್ದನು. ಈ ವೇಳೆ ಅಲ್ಲಿಗೆ ಬಂದ ರಂಜನ್ ಎಂಬ ಜಿಮ್ ಟ್ರೈನರ್, ಯಾವುದೇ ಪ್ರಚೋದನೆ ಇಲ್ಲದಿದ್ದರೂ ಬಾಲಕನಿಗೆ ಬಲವಾಗಿ ಒದ್ದಿದ್ದಾನೆ.
ಹಾರಿ ಬಿದ್ದ ಮಗು
ರಂಜನ್ ಒದ್ದ ರಭಸಕ್ಕೆ ಮಗು ಹಾರಿ ಹೋಗಿ ದೂರಕ್ಕೆ ಬಿದ್ದಿದೆ. ಪರಿಣಾಮ ಬಾಲಕನ ಮೈಕೈಗೆ ತೀವ್ರ ಗಾಯಗಳಾಗಿವೆ. ಆರಂಭದಲ್ಲಿ ಮಗು ಬಿದ್ದಿದ್ದಕ್ಕೆ ಕಾರಣ ತಿಳಿದಿರಲಿಲ್ಲ, ಆದರೆ ಪೋಷಕರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿ ರಂಜನ್‌ನ ಅಸಲಿ ಮುಖವಾಡ ಬಯಲಾಗಿದೆ.
ಸರಣಿ ಹಲ್ಲೆಯ ಆರೋಪ
ಆರೋಪಿ ರಂಜನ್ ಇದೇ ಮೊದಲ ಬಾರಿಗೆ ಇಂತಹ ಕೃತ್ಯ ಎಸಗಿಲ್ಲ, ಈ ಮೊದಲು ಇಂತಹ ಅನೇಕ ಕೃತ್ಯಗಳನ್ನು ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈತ ತ್ಯಾಗರಾಜ ನಗರದ ಸುಮಾರು ಮೂರ್ನಾಲ್ಕು ಮಕ್ಕಳಿಗೆ ಇದೇ ರೀತಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಪೊಲೀಸರಿಂದ ಬಂಧನ, ಬಿಡುಗಡೆ
ಜಿಮ್ ಟರೈನರ್ ಆಗಿದ್ದರೂ ದಾರಿಹೋಕರಿಗೆ ಅನಗತ್ಯವಾಗಿ ಬೈಯುವುದು ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸುವುದು ಈತನ ಚಾಳಿಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಬಾಲಕನ ತಾಯಿ ನೀಡಿದ ದೂರಿನ ಮೇರೆಗೆ ಬನಶಂಕರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರೂ, ಸದ್ಯ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.
ರಾಜ್ಯ ಮಕ್ಕಳ ಆಯೋಗದ ಆಕ್ರೋಶ
ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶಶಿಧರ್ ಕೋಸಂಬೆ, 'ಈ ಘಟನೆಯು ಅತ್ಯಂತ ಖಂಡನೀಯ. ಮಕ್ಕಳಿಗೆ 18 ವರ್ಷ ತುಂಬುವವರೆಗೆ ಅವರು ಗೌರವಯುತವಾಗಿ ಬದುಕಲು ಸಮಾಜದಲ್ಲಿ ಅವಕಾಶ ನೀಡಬೇಕು. ಪದೇ ಪದೇ ಇಂತಹ ಘಟನೆಗಳು ನಡೆಯುವುದು ಆರೋಗ್ಯಕರ ಬೆಳವಣಿಗೆಯಲ್ಲ ಎಂದು ಹೇಳಿದರು.
ಇವನೇ ನೋಡಿ ಮಕ್ಕಳಿಗೆ ಹೊಡೆಯೋ ಸೈಕ್
ಈ ಬಗ್ಗೆ ಮಕ್ಕಳ ಆಯೋಗದ ವತಿಯಿಂದಲೂ ಈ ಸಂಬಂಧ ದೂರು ದಾಖಲಿಸಲಾಗುವುದು ಮತ್ತು ಹಲ್ಲೆಕೋರನ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸುತ್ತೇವೆ ಎಂದು ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ತಿಳಿಸಿದರು.
Bizarre in #Bengaluru!
A disturbing video from Thyagarajnagar shows a man kicking a child from behind while the kid was peacefully playing badminton with his mother on the street — no provocation at all.#Police are on the lookout for the rogue@timesofindiapic.twitter.com/omYwEAC2su— TOI Bengaluru (@TOIBengaluru) December 19, 2025
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

