Chitradurga: ಮಗಳೆಂಬ ಮಮತೆಯ ಒಡಲನ್ನೇ ಸುಟ್ಟು ಕರಕಲು ಮಾಡಿದ ಬಸ್ ದುರಂತ!
Chitradurga Bus Fire: 5 Women Killed, DNA Tests to Identify Victims ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಅಪಘಾತಕ್ಕೀಡಾಗಿ ಐವರು ಮಹಿಳೆಯರು ಸಜೀವ ದಹನವಾಗಿದ್ದಾರೆ. ಬಸ್‌ನಲ್ಲಿದ್ದ 33 ಪ್ರಯಾಣಿಕರ ಪೈಕಿ ಐವರು ಮೃತಪಟ್ಟಿದ್ದು, ಮದುವೆ ನಿಶ್ಚಯವಾಗಿದ್ದ ಯುವತಿಯರ ಸಾವಾಗಿದೆ.

ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಖಾಸಗಿ ಬಸ್ ಅಪಘಾತದಲ್ಲಿ ಒಟ್ಟು ಮೃತಪಟ್ಟವರ ಸಂಖ್ಯೆ 5 ಎಂದು ಚಿತ್ರದುರ್ಗ ಎಸ್‌ಪಿ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಮೃತಪಟ್ಟವರೆಲ್ಲರೂ ಹೆಣ್ಣುಮಕ್ಕಳಾಗಿದ್ದಾರೆ.
ಬಸ್‌ನಲ್ಲಿ ಒಟ್ಟು 33 ಜನ ಪ್ರಯಾಣಿಕರಿದ್ದರು. 29 ಸೀಟ್ ಬುಕ್ಕಿಂಗ್ ಆಗಿದ್ದರೆ, 28 ಮಂದಿ ಪ್ರಯಾಣಕ್ಕೆ ಬಂದಿದ್ದರು. ಮಾರ್ಗಮಧ್ಯೆ ಇಬ್ಬರು ಪ್ರಯಾಣಿಕರು ಬಸ್‌ಗೆ ಹತ್ತಿದ್ದರು. ತಲಾ ಒಬ್ಬ ಡ್ರೈವರ್ ಹಾಗೂ ಕಂಡಕ್ಟರ್ ಸೇರಿ ಒಟ್ಟು 33 ಮಂದಿ ಪ್ರಯಾಣಿಕರಿದ್ದರು.
ಒಟ್ಟು ಜೀವಂತವಾಗಿರುವ ಪ್ರಯಾಣಿಕರ ಸಂಖ್ಯೆ 28 ಮಂದಿ. ಬಸ್‌ನಲ್ಲಿ ಒಟ್ಟು 4 ಮೃತದೇಹಗಳು ಸಿಕ್ಕಿದ್ದು, ಇನ್ನೂ ಒಬ್ಬರ ಬಗ್ಗೆ ಮಾಹಿತಿ ಸಿಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
5 ಮೃತದೇಹಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಮೇಲ್ನೋಟದಿಂದ ಅವುಗಳನ್ನು ಗುರುತಿಸುವುದು ಕಷ್ಟಸಾಧ್ಯ ಎಂದು ಪೊಲೀಸರು ಹೇಳಿದ್ದು, ಡಿಎನ್‌ಎ ಮ್ಯಾಚಿಂಗ್ ಮೂಲಕ ಶವವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗುತ್ತದೆ.
ಮೃತಪಟ್ಟ ವ್ಯಕ್ತಿಗಳಲ್ಲಿ ಬಿಂದು ಬೆಂಗಳೂರು ಮೂಲದವರಾಗಿದ್ದು, ಬಸ್‌ನಲ್ಲಿ 8L ಸೀಟ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. ಸ್ನೇಹಿತೆ ಕವಿತಾ ಅವರ ಬ್ಯಾಚುಲರೇಟ್ ಪಾರ್ಟಿಗಾಗಿ ಗೋಕರ್ಣಕ್ಕೆ ತನ್ನ ಮಗಳೊಂದಿಗೆ ಪ್ರಯಾಣ ಮಾಡುತ್ತಿದ್ದರು,
ಗ್ರೇಯ ಎನ್ನುವವರು ಬಿಂದು ಅವರ ಎಂಟು ವರ್ಷದ ಪುತ್ರಿ. ಆಕೆಗೆ ಟಿಕೆಟ್ ಖರೀದಿ ಮಾಡಿರಲಿಲ್ಲ. ಬಿಂದು ಅವರೊಂದಿಗೆ 8L ಸೀಟ್‌ನಲ್ಲಿಯೇ ಪ್ರಯಾಣ ಮಾಡಿದ್ದರು.
2L ಸೀಟ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಮಾನಸ ಅವರೂ ಸಾವು ಕಂಡಿದ್ದಾರೆ. ಚೆನ್ನರಾಯಪಟ್ಟಣ ಮೂಲದವರಾಗಿದ್ದು, ಇನ್ನು 6 ತಿಂಗಳಲ್ಲಿ ಅವರ ಮದುವೆ ಆಗುವುದರಲ್ಲಿತ್ತು. ಆಕೆಗೆ ನೀಡಿದ್ದ ಚಿನ್ನದ ಸರವನ್ನು ತಂದೆ ಚಂದ್ರೇಗೌಡ ನೀಡಿದ್ದರು. ಆ ಮೂಲಕ ಆಕೆಯ ಶವ ಗುರುತಿಸಲಾಗಿದೆ.
11L ಸೀಟ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ನವ್ಯಾ ಕೂಡ ಚೆನ್ನರಾಯಪಟ್ಟಣದವರು. ಏಪ್ರಿಲ್ 28ಕ್ಕೆ ಅವರ ಮದುವೆ ನಿಶ್ಚಯವಾಗಿತ್ತು. ಇತ್ತೀಚೆಗೆ ಆಕೆಯ ಎಂಗೇಜ್‌ಮೆಂಟ್ ಕೂಡ ನಡೆದಿತ್ತು ಎಂದು ಆಕೆಯ ತಂದೆ ಮಂಜಪ್ಪ ಹೇಳಿದ್ದಾರೆ.
11U ಸೀಟ್‌ನಲ್ಲಿ ಭಟ್ಕಳ ಮೂಲದ ರಶ್ಮಿ ಮಹಾಲೆ ಪ್ರಯಾಣ ಮಾಡುತ್ತಿದ್ದರು. ಆಕೆಯೂ ಕೂಡ ಸಾವು ಕಂಡಿದ್ದಾರೆ. ತನ್ನ ಸ್ನೇಹಿತೆಯರಾದ ಗಗನಾ ಹಾಗೂ ರಕ್ಷಿತಾ ಜೊತೆ ಅವರು ಗೋಕರ್ಣಕ್ಕೆ ಪ್ರಯಾಣ ಮಾಡುತ್ತಿದ್ದರು. ಆರಂಭದಲ್ಲಿ ಇವರು ಸೇಫ್ ಎನ್ನಲಾಗಿತ್ತಾದರೂ, ಪೊಲೀಸರು ಈಕೆ ಸಾವು ಕಂಡಿರುವುದನ್ನು ಖಚಿತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

