MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಬೆಂಗಳೂರು to ಹುಬ್ಬಳ್ಳಿ ವಂದೇ ಭಾರತ್, ಜನಶತಾಬ್ದಿ ಸೇರಿ ಒಟ್ಟು 7 ರೈಲು ರದ್ದು! ಯಾವ ಜಿಲ್ಲೆಗಳಿಗೆ ಎಫೆಕ್ಟ್?

ಬೆಂಗಳೂರು to ಹುಬ್ಬಳ್ಳಿ ವಂದೇ ಭಾರತ್, ಜನಶತಾಬ್ದಿ ಸೇರಿ ಒಟ್ಟು 7 ರೈಲು ರದ್ದು! ಯಾವ ಜಿಲ್ಲೆಗಳಿಗೆ ಎಫೆಕ್ಟ್?

ಬೆಂಗಳೂರು–ಹುಬ್ಬಳ್ಳಿ ರೈಲ್ವೇ ಮಾರ್ಗದಲ್ಲಿ  ಸಂಚರಿಸುವ 7 ರೈಲುಗಳನ್ನು  ಸಂಪೂರ್ಣ ರದ್ದು ಮಾಡಲಾಗುತ್ತಿದೆ. ಫೆಬ್ರವರಿ 16 ಮತ್ತು 17 ರಂದು ವಂದೇ ಭಾರತ್ ಮತ್ತು ಜನಶತಾಬ್ದಿ ಸೇರಿದಂತೆ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. 

2 Min read
Author : Gowthami K
Published : Feb 10 2026, 12:43 PM IST
Share this Photo Gallery
  • FB
  • TW
  • Linkdin
  • Whatsapp
18
ಒಟ್ಟು 7 ರೈಲುಗಳ ಸಂಚಾರ ರದ್ದು
Image Credit : our own

ಒಟ್ಟು 7 ರೈಲುಗಳ ಸಂಚಾರ ರದ್ದು

 ಬೆಂಗಳೂರು/ಹುಬ್ಬಳ್ಳಿ : ವಂದೇ ಭಾರತ್‌ ರೈಲು ಆರಂಭವಾದ ನಂತರ ಬೆಂಗಳೂರಿನಿಂದ ರಾಜ್ಯದ ಹಾಗೂ ದೇಶದ ವಿವಿಧ ಭಾಗಗಳಿಗೆ ವೇಗವಾಗಿ ಹಾಗೂ ಆರಾಮವಾಗಿ ಪ್ರಯಾಣಿಸುವ ಅವಕಾಶ ಲಭ್ಯವಾಗಿದೆ. ಆದರೆ ಇದೀಗ ಬೆಂಗಳೂರು–ಹುಬ್ಬಳ್ಳಿ ರೈಲ್ವೇ ಮಾರ್ಗದಲ್ಲಿ ನಡೆಯುತ್ತಿರುವ ಕಾಮಗಾರಿಯ ಹಿನ್ನೆಲೆಯಲ್ಲಿ ವಂದೇ ಭಾರತ್‌, ಜನಶತಾಬ್ದಿ ಸೇರಿದಂತೆ ಒಟ್ಟು 7 ರೈಲುಗಳ ಸಂಚಾರವನ್ನು ಒಂದು ದಿನ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಜೊತೆಗೆ 11ಕ್ಕೂ ಹೆಚ್ಚು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

28
ಕಾರಣ ಏನು?
Image Credit : social media

ಕಾರಣ ಏನು?

ದೇವರಗುಡ್ಡ ಮತ್ತು ಬ್ಯಾಡಗಿ ನಡುವಿನ ಎಲ್‌ಸಿ ಸಂಖ್ಯೆ 222ರಲ್ಲಿ ತಾತ್ಕಾಲಿಕ ಗರ್ಡರ್‌ಗಳನ್ನು ಅಳವಡಿಸಿ ತೆಗೆದುಹಾಕುವ ಕಾಮಗಾರಿಯ ಹಿನ್ನೆಲೆಯಲ್ಲಿ, ರೈಲ್ವೆ ಇಲಾಖೆ ಲೈನ್ ಬ್ಲಾಕ್ ಹಾಗೂ ಪವರ್ ಬ್ಲಾಕ್ ಘೋಷಿಸಿದೆ. ಇದರ ಪರಿಣಾಮವಾಗಿ ಫೆಬ್ರವರಿ 16 ಮತ್ತು 17ರಂದು ಹಲವು ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.

ಈ ಕುರಿತು ಭಾರತೀಯ ರೈಲ್ವೆ (#IndianRailway) ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಕಾಮಗಾರಿಯ ಕಾರಣದಿಂದ ಕೆಲವು ರೈಲುಗಳು ಸಂಪೂರ್ಣವಾಗಿ ರದ್ದಾಗಲಿದ್ದು, ಇನ್ನೂ ಕೆಲವು ರೈಲುಗಳು ಭಾಗಶಃ ರದ್ದು, ಮಾರ್ಗ ಬದಲಾವಣೆ, ನಿಯಂತ್ರಣ ಹಾಗೂ ಮರುನಿಗದಿಗೆ ಒಳಪಡಲಿವೆ ಎಂದು ತಿಳಿಸಿದೆ.

Related Articles

Related image1
ಕೋವಿಡ್ ಬಳಿಕ ಸ್ಥಗಿತಗೊಂಡಿದ್ದ ದಾಂಡೇಲಿ-ಅಳ್ನಾವರ ಪ್ಯಾಸೆಂಜರ್ ರೈಲು ಫೆ.7ರಿಂದ ಸಂಚಾರ ಪುನರಾರಂಭ
Related image2
ಸೈನಿಕರ ಅನುಕೂಲಕ್ಕೆ ಘಟಪ್ರಭಾದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ, ಕರಾವಳಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ
38
ಫೆಬ್ರವರಿ 16ರಂದು ರದ್ದಾಗುವ ರೈಲುಗಳು
Image Credit : Perplexity AI

ಫೆಬ್ರವರಿ 16ರಂದು ರದ್ದಾಗುವ ರೈಲುಗಳು

16214 ಎಸ್‌ಎಸ್‌ಎಸ್ ಹುಬ್ಬಳ್ಳಿ – ಅರಸೀಕೆರೆ ಎಕ್ಸ್‌ಪ್ರೆಸ್

ಭಾಗಶಃ ರದ್ದಾಗುವ ರೈಲುಗಳು

17310 ವಾಸ್ಕೊ ಡ ಗಾಮಾ – ಯಶವಂತಪುರ ಎಕ್ಸ್‌ಪ್ರೆಸ್

ಎಸ್‌ಎಸ್‌ಎಸ್ ಹುಬ್ಬಳ್ಳಿ – ಯಶವಂತಪುರ ಮಾರ್ಗದಲ್ಲಿ ಭಾಗಶಃ ರದ್ದು

ಈ ರೈಲು ಎಸ್‌ಎಸ್‌ಎಸ್ ಹುಬ್ಬಳ್ಳಿಯಲ್ಲೇ ಪ್ರಯಾಣ ಕೊನೆಗೊಳಿಸಲಿದೆ

17309 ಯಶವಂತಪುರ – ವಾಸ್ಕೊ ಡ ಗಾಮಾ ಎಕ್ಸ್‌ಪ್ರೆಸ್

48
ಫೆಬ್ರವರಿ 17ರಂದು ಸಂಪೂರ್ಣವಾಗಿ ರದ್ದಾಗುವ ರೈಲುಗಳು
Image Credit : Asianet News

ಫೆಬ್ರವರಿ 17ರಂದು ಸಂಪೂರ್ಣವಾಗಿ ರದ್ದಾಗುವ ರೈಲುಗಳು

16213 ಅರಸೀಕೆರೆ – ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್

12079 ಕೆಎಸ್‌ಆರ್ ಬೆಂಗಳೂರು – ಎಸ್‌ಎಸ್‌ಎಸ್ ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್

12080 ಎಸ್‌ಎಸ್‌ಎಸ್ ಹುಬ್ಬಳ್ಳಿ – ಕೆಎಸ್‌ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್

26751 ಬೆಳಗಾವಿ – ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್

26752 ಕೆಎಸ್‌ಆರ್ ಬೆಂಗಳೂರು – ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್

17347 ಎಸ್‌ಎಸ್‌ಎಸ್ ಹುಬ್ಬಳ್ಳಿ – ಚಿತ್ರದುರ್ಗ ಎಕ್ಸ್‌ಪ್ರೆಸ್

17348 ಚಿತ್ರದುರ್ಗ – ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್

58
ಫೆಬ್ರವರಿ 17ರಂದು ಭಾಗಶಃ ರದ್ದಾಗುವ ರೈಲು
Image Credit : our own

ಫೆಬ್ರವರಿ 17ರಂದು ಭಾಗಶಃ ರದ್ದಾಗುವ ರೈಲು

ಯಶವಂತಪುರ – ಎಸ್‌ಎಸ್‌ಎಸ್ ಹುಬ್ಬಳ್ಳಿ ಮಾರ್ಗದಲ್ಲಿ ಭಾಗಶಃ ರದ್ದು

ಈ ರೈಲು ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ನಿಗದಿತ ಸಮಯಕ್ಕೆ ಹೊರಡಲಿದೆ

12726 ಧಾರವಾಡ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್

ಧಾರವಾಡ – ಹರಿಹರ ಮಾರ್ಗದಲ್ಲಿ ಭಾಗಶಃ ರದ್ದು

ಈ ರೈಲು ಹರಿಹರದಿಂದ ನಿಗದಿತ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ

68
ಮಾರ್ಗ ಬದಲಾವಣೆಗೊಳ್ಳುವ ರೈಲುಗಳು
Image Credit : google

ಮಾರ್ಗ ಬದಲಾವಣೆಗೊಳ್ಳುವ ರೈಲುಗಳು

16588 ಬಿಕಾನೆರ್ – ಯಶವಂತಪುರ ಎಕ್ಸ್‌ಪ್ರೆಸ್ (ಫೆಬ್ರವರಿ 15 ರಂದು)

ಗದಗ – ಹೊಸಪೇಟೆ – ಕೊಟ್ಟೂರು – ಅಮರಾವತಿ – ದಾವಣಗೆರೆ ಮಾರ್ಗವಾಗಿ ಸಂಚರಿಸಲಿದೆ. ಸ್‌ಎಸ್‌ಎಸ್ ಹುಬ್ಬಳ್ಳಿ ಹಾಗೂ ರಾಣೆಬೆನ್ನೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ

17391 ಕೆಎಸ್‌ಆರ್ ಬೆಂಗಳೂರು – ಸಿಂಧನೂರು ಎಕ್ಸ್‌ಪ್ರೆಸ್ (ಫೆಬ್ರವರಿ 17 ರಂದು)

ದಾವಣಗೆರೆ – ಅಮರಾವತಿ – ಕೊಟ್ಟೂರು – ಹೊಸಪೇಟೆ – ಗಿಣಿಗೇರಾ – ಸಿಂಧನೂರು ಮಾರ್ಗವಾಗಿ ಸಂಚಾರ ಇರಲಿದೆ.ಹರಿಹರ, ರಾಣೆಬೆನ್ನೂರು, ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಗದಗ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ

78
ಮರುನಿಗದಿಗೊಳ್ಳುವ ರೈಲು
Image Credit : our own

ಮರುನಿಗದಿಗೊಳ್ಳುವ ರೈಲು

17325 ಬೆಳಗಾವಿ – ಮೈಸೂರು ಎಕ್ಸ್‌ಪ್ರೆಸ್

ದಿನಾಂಕ: 17-02-2026

ಬೆಳಗಾವಿಯಿಂದ 120 ನಿಮಿಷ ತಡವಾಗಿ ಹೊರಡಲಿದೆ

ಮಾರ್ಗ ಮಧ್ಯೆ 45 ನಿಮಿಷಗಳ ಕಾಲ ಹೆಚ್ಚುವರಿ ನಿಲುಗಡೆ ಇರಲಿದೆ

88
ನಿಯಂತ್ರಣ
Image Credit : Meta AI

ನಿಯಂತ್ರಣ

ಮಾರ್ಗ ಮಧ್ಯೆ ಈ ರೈಲುಗಳನ್ನು ಕೆಲ ನಿಮಿಷಗಳ ಕಾಲ ನಿಲ್ಲಿಸಿ ನಿಯಂತ್ರಣಕ್ಕೆ ಒಳಪಡಿಸಲಾಗುತ್ತದೆ. ಅವುಗಳೆಂದರೆ

17310 ವಾಸ್ಕೊ ಡ ಗಾಮಾ – ಯಶವಂತಪುರ ಎಕ್ಸ್‌ಪ್ರೆಸ್ (08-02-2026) – 30 ನಿಮಿಷ

16589 ಕೆಎಸ್‌ಆರ್ ಬೆಂಗಳೂರು – ಸಾಂಗ್ಲಿ ಎಕ್ಸ್‌ಪ್ರೆಸ್ (08-02-2026) – 40 ನಿಮಿಷ

12650 ಹಜರತ್ ನಿಜಾಮುದ್ದೀನ್ – ಯಶವಂತಪುರ ಎಕ್ಸ್‌ಪ್ರೆಸ್ (09-02-2026) – 55 ನಿಮಿಷ

16535 ಮೈಸೂರು – ಪಂಡರಾಪುರ ಎಕ್ಸ್‌ಪ್ರೆಸ್ (10-02-2026) – 50 ನಿಮಿಷ

11022 ತಿರುನೇಲ್ವೇಲಿ – ದಾದರ್ ಎಕ್ಸ್‌ಪ್ರೆಸ್ (16-02-2026) – 110 ನಿಮಿಷ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ವಂದೇ ಭಾರತ್ ಎಕ್ಸ್‌ಪ್ರೆಸ್
ಭಾರತೀಯ ರೈಲ್ವೆ
ರೈಲು
ಹುಬ್ಬಳ್ಳಿ
ಧಾರವಾಡ
ಬೆಂಗಳೂರು

Latest Videos
Recommended Stories
Recommended image1
ಶಾಂತಂ ಪಾಪಂನಲ್ಲಿ Leela-Manju ಕಥೆ, ಮತ್ತೆ ಟ್ರೋಲ್ ಆದ ದಂಪತಿಯಿಂದ ಕಾನೂನು ಕ್ರಮಕ್ಕೆ ನಿರ್ಧಾರ
Recommended image2
ಕುಡಿದ ಮತ್ತಿನಲ್ಲಿ SSLC ಓದುವ ಮಗಳ ಬ್ಯಾಗ್, ಪುಸ್ತಕ ಸುಟ್ಟ ತಂದೆ, ವಿದ್ಯಾರ್ಥಿನಿಗೆ ಆಸರೆಯಾದ ಖಾಕಿ ಪಡೆ!
Recommended image3
ಸಚಿವ ಬೈರತಿ ಸುರೇಶ್ ವಿಧಾನಸೌಧದ ಕಚೇರಿಯಲ್ಲೇ 300 ಗ್ರಾಂ ಚಿನ್ನಾಭರಣ, 1.5 ಲಕ್ಷ ನಗದು ಕಳ್ಳತನ
Related Stories
Recommended image1
ಕೋವಿಡ್ ಬಳಿಕ ಸ್ಥಗಿತಗೊಂಡಿದ್ದ ದಾಂಡೇಲಿ-ಅಳ್ನಾವರ ಪ್ಯಾಸೆಂಜರ್ ರೈಲು ಫೆ.7ರಿಂದ ಸಂಚಾರ ಪುನರಾರಂಭ
Recommended image2
ಸೈನಿಕರ ಅನುಕೂಲಕ್ಕೆ ಘಟಪ್ರಭಾದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ, ಕರಾವಳಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved