MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ತಮಿಳುನಾಡು ಸ್ವರ್ಗ, ಕರ್ನಾಟಕದಲ್ಲಿ ನರಕ! ಗಡಿ ರಸ್ತೆಗಳ ಹಕೀಕತ್ತು ಬಿಚ್ಚಿಟ್ಟ ಬ್ಲಾಗರ್; ನೆಟ್ಟಿಗರಿಂದ ಛೀಮಾರಿ!

ತಮಿಳುನಾಡು ಸ್ವರ್ಗ, ಕರ್ನಾಟಕದಲ್ಲಿ ನರಕ! ಗಡಿ ರಸ್ತೆಗಳ ಹಕೀಕತ್ತು ಬಿಚ್ಚಿಟ್ಟ ಬ್ಲಾಗರ್; ನೆಟ್ಟಿಗರಿಂದ ಛೀಮಾರಿ!

ಕರ್ನಾಟಕ-ತಮಿಳುನಾಡು ಗಡಿಯ ರಸ್ತೆಗಳ ಸ್ಥಿತಿಗತಿ ಕುರಿತ ವೈರಲ್ ವಿಡಿಯೋವೊಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳುನಾಡು ಭಾಗದಲ್ಲಿ ಸುಸಜ್ಜಿತ ರಸ್ತೆಗಳಿದ್ದರೆ, ಕರ್ನಾಟಕದ ತಾಳವಾಡಿ ಭಾಗದಲ್ಲಿ ದಶಕಗಳಿಂದ ದುರಸ್ತಿಯಾಗದ, ಗುಂಡಿ ಬಿದ್ದ ರಸ್ತೆಗಳು ಪ್ರಯಾಣಿಕರಿಗೆ ನರಕ ದರ್ಶನ ಮಾಡಿಸುತ್ತಿವೆ.

2 Min read
Author : Sathish Kumar KH
Published : Feb 11 2026, 08:22 PM IST
Share this Photo Gallery
  • FB
  • TW
  • Linkdin
  • Whatsapp
15
ಕರ್ನಾಟಕ ವರ್ಸಸ್ ತಮಿಳುನಾಡು ಗಡಿ ರಸ್ತೆಗಳು
Image Credit : Instagram

ಕರ್ನಾಟಕ ವರ್ಸಸ್ ತಮಿಳುನಾಡು ಗಡಿ ರಸ್ತೆಗಳು

'ಗಡಿ ದಾಟಿದ ಕೂಡಲೇ ಭಾಗ್ಯ ಬದಲಾಗುತ್ತದೆ' ಎನ್ನುವ ಮಾತು ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿ ಅಕ್ಷರಶಃ ನಿಜವಾದಂತಿದೆ. ತಮಿಳುನಾಡಿನ ಗಡಿಯೊಳಗೆ ಪ್ರವೇಶಿಸುತ್ತಿದ್ದಂತೆ ಸುಸಜ್ಜಿತ ರಸ್ತೆಗಳು ಸ್ವಾಗತಿಸಿದರೆ, ಕರ್ನಾಟಕದ ಗಡಿಯೊಳಗೆ ಕಾಲಿಟ್ಟ ಕೂಡಲೇ ಗುಂಡಿ ಬಿದ್ದ ರಸ್ತೆಗಳು ಮೈ-ಕೈ ನೋವು ತರಿಸುತ್ತಿವೆ. ಕನ್ನಡಿಗ ಬ್ಲಾಗರ್ ಒಬ್ಬರು ಚಿತ್ರೀಕರಿಸಿರುವ ಈ ರಸ್ತೆಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಕರ್ನಾಟಕ ಸರ್ಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

25
ವೈರಲ್ ವಿಡಿಯೋದಲ್ಲಿ ಏನಿದೆ?
Image Credit : Instagram

ವೈರಲ್ ವಿಡಿಯೋದಲ್ಲಿ ಏನಿದೆ?

ಕರ್ನಾಟಕ ಮೂಲದ 'ಗಂಧದಗುಡಿ' ಹೆಸರಿನ ಬ್ಲಾಗರ್ ಒಬ್ಬರು ಕರ್ನಾಟಕ ಮತ್ತು ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ತಾಳವಾಡಿಗೆ ಭೇಟಿ ನೀಡಿ ಈ ವಿಡಿಯೋ ಮಾಡಿದ್ದಾರೆ. ಆಟೋವೊಂದರಲ್ಲಿ ಪ್ರಯಾಣಿಸುತ್ತಾ ಗಡಿ ಭಾಗದ ರಸ್ತೆಗಳ ಸ್ಥಿತಿಯನ್ನು ಅವರು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ತಮಿಳುನಾಡು ವ್ಯಾಪ್ತಿಗೆ ಬರುವ ರಸ್ತೆಗಳು ರಾಷ್ಟ್ರೀಯ ಹೆದ್ದಾರಿಯ ಗುಣಮಟ್ಟದಲ್ಲಿವೆ. 'ಇಲ್ಲಿನ ರಸ್ತೆಗಳು ಎಷ್ಟು ನುಣುಪಾಗಿವೆ ಎಂದರೆ, ರಸ್ತೆಯ ಮೇಲೆ ತುಪ್ಪ ಚೆಲ್ಲಿದರೂ ಅದನ್ನು ವಾಪಸ್ ಬಳಸಿಕೊಳ್ಳಬಹುದು' ಎಂದು ಅವರು ತಮಿಳುನಾಡು ಸರ್ಕಾರದ ಅಭಿವೃದ್ಧಿ ಕಾರ್ಯವನ್ನು ಶ್ಲಾಘಿಸಿದ್ದಾರೆ.

Related Articles

Related image1
ಮನೆ ಬಾಗಿಲಿಗೆ ಕಸದ ವ್ಯಾನ್ ಬರಲಿಲ್ಲವೆಂದು Porter ಬುಕ್‌ ಮಾಡಿ ಕಸ ಕಳಿಸಿದ ಕಿಲಾಡಿ ಲೇಡಿ; ವಿಡಿಯೋ ವೈರಲ್!
Related image2
ಬೆಂಗಳೂರು ಕಾಮಗಾರಿ ನಡೆಯುತ್ತಿರುವಾಗಲೇ 20 ಅಡಿ ಕುಸಿದ ರಸ್ತೆ; ಸುತ್ತಲಿನ ಏರಿಯಾದಲ್ಲಿ ಭಾರೀ ಟ್ರಾಫಿಕ್ ಜಾಮ್!
35
ಕರ್ನಾಟಕದ ರಸ್ತೆಗಳೆಂದರೆ ಧೂಳು-ಮಣ್ಣಿನ ರಾಶಿ
Image Credit : Instagram

ಕರ್ನಾಟಕದ ರಸ್ತೆಗಳೆಂದರೆ ಧೂಳು-ಮಣ್ಣಿನ ರಾಶಿ

ಆದರೆ, ಅದೇ ರಸ್ತೆಯ ಮುಂದುವರಿದ ಭಾಗ ಕರ್ನಾಟಕದ ಗಡಿಗೆ ಪ್ರವೇಶಿಸುತ್ತಿದ್ದಂತೆಯೇ ರಸ್ತೆಯ ಚಿತ್ರಣವೇ ಬದಲಾಗುತ್ತದೆ. ಇಲ್ಲಿ ಡಾಂಬರ್ ಕಂಡು ದಶಕಗಳೇ ಕಳೆದಿವೆ ಎನ್ನುವಷ್ಟು ಹೀನಾಯ ಸ್ಥಿತಿಯಿದೆ. ಜಲ್ಲಿಕಲ್ಲುಗಳು ಎದ್ದು ಹೋಗಿದ್ದು, ಮಣ್ಣು ಮತ್ತು ದೂಳಿನ ಹಾವಳಿ ಹೆಚ್ಚಾಗಿದೆ. ರಸ್ತೆಯಲ್ಲಿ ಬಿದ್ದಿರುವ ಬೃಹತ್ ಗುಂಡಿಗಳನ್ನು ಕಂಡು ಕನ್ನಡಿಗರು ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ. ಸ್ಥಳೀಯರು ಸಂಚಾರಕ್ಕಾಗಿ ತಾವೇ ಕಲ್ಲು-ಮಣ್ಣುಗಳನ್ನು ತಂದು ಗುಂಡಿ ಮುಚ್ಚುವ ಪರಿಸ್ಥಿತಿ ಬಂದೊದಗಿದೆ.

45
ಹತ್ತು ವರ್ಷಗಳಿಂದ ಇದೇ ನರಕ
Image Credit : Instagram

ಹತ್ತು ವರ್ಷಗಳಿಂದ ಇದೇ ನರಕ

ಸ್ಥಳೀಯ ನಿವಾಸಿಗಳ ಅಳಲು ಕೇಳುವವರಿಲ್ಲದಂತಾಗಿದೆ. 'ಕಳೆದ 10 ವರ್ಷಗಳಿಂದ ಈ ರಸ್ತೆಯನ್ನು ಯಾರೂ ರಿಪೇರಿ ಮಾಡಿಲ್ಲ. ಬೇಸಿಗೆಯಲ್ಲಿ ಧೂಳಿನ ಮಜ್ಜನವಾದರೆ, ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸುವುದು ನರಕಕ್ಕೆ ಸಮಾನ. ರಾತ್ರಿ ವೇಳೆ ವಾಹನ ಚಾಲನೆ ಮಾಡುವುದು ಜೀವ ಕೈಯಲ್ಲಿ ಹಿಡಿದು ನಡೆದಂತೆ' ಎಂದು ಸ್ಥಳೀಯರು ನೋವು ತೋಡಿಕೊಂಡಿದ್ದಾರೆ. ಇನ್ನು ಕೆಲವರು 'ನಮ್ಮ ರಾಜ್ಯದಲ್ಲಿ ರಸ್ತೆ ಮಾಡಲು ಬಜೆಟ್ ಇಲ್ಲವೇ?' ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

55
ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ
Image Credit : Instagram

ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕರ್ನಾಟಕ ಸರ್ಕಾರ ಮತ್ತು ಲೋಕೋಪಯೋಗಿ ಇಲಾಖೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಪಕ್ಕದ ರಾಜ್ಯಗಳು ಗಡಿ ಭಾಗದ ಕೊನೆಯ ಹಳ್ಳಿಯವರೆಗೂ ಉತ್ತಮ ರಸ್ತೆಗಳನ್ನು ನಿರ್ಮಿಸುತ್ತಿದ್ದರೆ, ನಮ್ಮಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಕ್ಯಾಕರಿಸಿ ಉಗಿಯುತ್ತಿದ್ದಾರೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಈ ರಸ್ತೆಗಳಿಗೆ ಮುಕ್ತಿ ನೀಡಲಿದೆಯೇ ಎಂದು ಕಾದು ನೋಡಬೇಕಿದೆ.

 
 
 
 
View this post on Instagram
 
 
 
 
 
 
 
 
 
 
 

A post shared by ಗಂಧದಗುಡಿ (@gandhadagudivlogss)

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಚಾಮರಾಜನಗರ
ತಮಿಳುನಾಡು
ಕರ್ನಾಟಕ ರಾಜಕೀಯ

Latest Videos
Recommended Stories
Recommended image1
2028ರವರೆಗೂ ಸಿದ್ದರಾಮಯ್ಯ ಫಿಕ್ಸ್: ಆಮೇಲೆ ಬೀದಿ ದಾಸಯ್ಯನ್ನ ಸಿಎಂ ಮಾಡಿದ್ರೂ ಒಕೆ' ಜಮೀರ್ ಸ್ಫೋಟಕ ಹೇಳಿಕೆ!
Recommended image2
ದೇಶದ ದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಗಳಲ್ಲಿ ಸ್ಥಾನ ಪಡೆದ ರಿವರ್ ಮೊಬೈಲಿಟಿ ಯಶೋಗಾಥೆ!
Recommended image3
ದರೋಡೆಗೆ ಯತ್ನಿಸಿ ಫಿಲ್ಮಿ ಸ್ಟೈಲ್‌ನಲ್ಲಿ ಟ್ರಾಪ್, ಮಾಲೀಕ ಬರುವವರೆಗೂ ನೆಲದ ಮೇಲೆ ಮಲಗಿದ ಕಳ್ಳ
Related Stories
Recommended image1
ಮನೆ ಬಾಗಿಲಿಗೆ ಕಸದ ವ್ಯಾನ್ ಬರಲಿಲ್ಲವೆಂದು Porter ಬುಕ್‌ ಮಾಡಿ ಕಸ ಕಳಿಸಿದ ಕಿಲಾಡಿ ಲೇಡಿ; ವಿಡಿಯೋ ವೈರಲ್!
Recommended image2
ಬೆಂಗಳೂರು ಕಾಮಗಾರಿ ನಡೆಯುತ್ತಿರುವಾಗಲೇ 20 ಅಡಿ ಕುಸಿದ ರಸ್ತೆ; ಸುತ್ತಲಿನ ಏರಿಯಾದಲ್ಲಿ ಭಾರೀ ಟ್ರಾಫಿಕ್ ಜಾಮ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved