MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಶಾಸಕ ಸತೀಶ್ ಸೈಲ್ ಪುತ್ರಿಗೆ ‘ಮಿಸ್ ಇಂಡಿಯಾ’ ಕಿರೀಟ: ಸಾಧ್ವಿ ಸಾಧನೆಗೆ ದೇಶವೇ ಫಿದಾ; 2027ರ ಮಿಸ್ ವರ್ಲ್ಡ್‌ಗೆ ಆಯ್ಕೆ

ಶಾಸಕ ಸತೀಶ್ ಸೈಲ್ ಪುತ್ರಿಗೆ ‘ಮಿಸ್ ಇಂಡಿಯಾ’ ಕಿರೀಟ: ಸಾಧ್ವಿ ಸಾಧನೆಗೆ ದೇಶವೇ ಫಿದಾ; 2027ರ ಮಿಸ್ ವರ್ಲ್ಡ್‌ಗೆ ಆಯ್ಕೆ

ಕಾರವಾರದ ಶಾಸಕ ಸತೀಶ್ ಸೈಲ್ ಅವರ ಪುತ್ರಿ ಸಾಧ್ವಿ ಸೈಲ್, 'ಫೆಮಿನಾ ಮಿಸ್ ಇಂಡಿಯಾ 2026' ಕಿರೀಟವನ್ನು ಗೆದ್ದಿದ್ದಾರೆ. ಭುವನೇಶ್ವರದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ, ಅವರು 2027ರ 'ಮಿಸ್ ವರ್ಲ್ಡ್' ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅರ್ಹತೆ ಪಡೆದಿದ್ದಾರೆ.

2 Min read
Author : Sathish Kumar KH
Published : Apr 19 2026, 07:21 PM IST
Share this Photo Gallery
  • FB
  • TW
  • Linkdin
  • Whatsapp
17
ಫೆಮಿನಾ ಮಿಸ್ ಇಂಡಿಯಾ 2026
Image Credit : Asianet News

ಫೆಮಿನಾ ಮಿಸ್ ಇಂಡಿಯಾ 2026

ಕಾರವಾರ/ಭುವನೇಶ್ವರ (ಏ.19): ಕರಾವಳಿ ಜಿಲ್ಲೆ ಉತ್ತರ ಕನ್ನಡದ ಹೆಮ್ಮೆಯ ಪುತ್ರಿ, ಕಾರವಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರ ಮಗಳು ಸಾಧ್ವಿ ಸತೀಶ್ ಸೈಲ್ ಅವರು 'ಫೆಮಿನಾ ಮಿಸ್ ಇಂಡಿಯಾ 2026' (Femina Miss India 2026) ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಒಡಿಶಾದ ಭುವನೇಶ್ವರದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ದೇಶದ ವಿವಿಧ ರಾಜ್ಯಗಳ ಸುಂದರಿಯರನ್ನು ಹಿಂದಿಕ್ಕಿ ಸಾಧ್ವಿ ಈ ಪ್ರತಿಷ್ಠಿತ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

27
ಭವ್ಯ ವೇದಿಕೆಯಲ್ಲಿ ಅರಳಿದ ಸುಂದರಿ
Image Credit : Asianet News

ಭವ್ಯ ವೇದಿಕೆಯಲ್ಲಿ ಅರಳಿದ ಸುಂದರಿ

ಒಡಿಶಾದ ಭುವನೇಶ್ವರದ ಪ್ರಸಿದ್ಧ 'ಕಳಿಂಗಾ ಇನ್ಸ್‌ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ' (KIIT) ಆವರಣದಲ್ಲಿ ಶನಿವಾರ ರಾತ್ರಿ ಫೆಮಿನಾ ಮಿಸ್ ಇಂಡಿಯಾ 2026ರ ಗ್ರ್ಯಾಂಡ್ ಫಿನಾಲೆ ನಡೆಯಿತು. ದೇಶದ 30 ರಾಜ್ಯಗಳಿಂದ ಆಗಮಿಸಿದ್ದ 30 ರೂಪದರ್ಶಿಯರ ನಡುವೆ ಕಠಿಣ ಪೈಪೋಟಿ ಇತ್ತು. ಈ ಸ್ಪರ್ಧೆಯಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿದ ಸಾಧ್ವಿ ಸೈಲ್ ವಿಜೇತರಾಗಿ ಘೋಷಿಸಲ್ಪಟ್ಟರು. ಮಹಾರಾಷ್ಟ್ರದ ರಾಜನಂದಿನಿ ಪವಾರ್ ಮೊದಲ ರನ್ನರ್ ಅಪ್ ಆಗಿ ಮತ್ತು ಜಮ್ಮು ಕಾಶ್ಮೀರದ ಶ್ರೀ ಅದ್ವೈತ ಜಿ ಎರಡನೇ ರನ್ನರ್ ಅಪ್ ಸ್ಥಾನ ಪಡೆದರು.

Related Articles

Related image1
ಮಿಸ್ ಇಂಡಿಯಾ ಕಿರೀಟ ಗೆದ್ದ ಕಾರವಾರ ಶಾಸಕ ಸತೀಶ್ ಸೈಲ್ ಪುತ್ರಿ, ಕನ್ನಡತಿ ಸಾಧ್ವಿ ಸೌಂದರ್ಯಕ್ಕೆ ದೇಶದ ಮನ್ನಣೆ
Related image2
ಕರಾವಳಿ ಉತ್ಸವ: ಹೆಲಿಕಾಪ್ಟರ್‌ನಲ್ಲಿ ಹಾರಾಡಿದ ವಿಶೇಷ ಚೇತನ ಮಕ್ಕಳು, ಸತೀಶ್ ಸೈಲ್ ಪುತ್ರಿಯ ಈ ಮಹತ್ಕಾರ್ಯಕ್ಕೆ ಜೈ ಎಂದ ಜನತೆ
37
ಮಗಳ ಸಾಧನೆಗೆ ತಂದೆಯ ಸಂಭ್ರಮ
Image Credit : Asianet News

ಮಗಳ ಸಾಧನೆಗೆ ತಂದೆಯ ಸಂಭ್ರಮ

ಮಗಳು ಮಿಸ್ ಇಂಡಿಯಾ ಆದ ಸುದ್ದಿ ತಿಳಿಯುತ್ತಿದ್ದಂತೆಯೇ ಶಾಸಕ ಸತೀಶ್ ಸೈಲ್ ಭಾವುಕರಾದರು. ವಿಡಿಯೋ ಕಾಲ್ ಮೂಲಕ ಮಗಳನ್ನು ಅಭಿನಂದಿಸಿದ ಅವರು, 'ದೇವರ ಆಶೀರ್ವಾದದಿಂದ ಮಗಳು ಈ ಸಾಧನೆ ಮಾಡಿದ್ದಾಳೆ. ಕೇವಲ ಮೂರು ತಿಂಗಳ ಅಲ್ಪಾವಧಿಯಲ್ಲಿ ಆಕೆ ಈ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಳು. 

ಶಾಸಕನಾಗಿ ಕೆಲಸದ ಒತ್ತಡದಲ್ಲಿದ್ದ ನನಗೆ ಆಕೆಯ ತಯಾರಿಗೆ ಪೂರ್ಣವಾಗಿ ಸಹಕರಿಸಲು ಸಾಧ್ಯವಾಗಿರಲಿಲ್ಲ. ಆದರೂ ಆಕೆ ತನ್ನ ಪರಿಶ್ರಮದಿಂದ ಇಂದು ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾಳೆ' ಎಂದು ಸಂತಸ ಹಂಚಿಕೊಂಡಿದ್ದಾರೆ. ಈ ಸಿಹಿ ಸುದ್ದಿಯನ್ನು ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೂ ಹಂಚಿಕೊಂಡಿದ್ದಾರೆ.

47
ಕಾರವಾರದ ನಂಟು ಮತ್ತು ಶಿಕ್ಷಣ
Image Credit : Asianet News

ಕಾರವಾರದ ನಂಟು ಮತ್ತು ಶಿಕ್ಷಣ

ಸಾಧ್ವಿ ಸೈಲ್ ಅವರ ತಂದೆ ಸತೀಶ್ ಕೃಷ್ಣಾ ಸೈಲ್ ಮತ್ತು ತಾಯಿ ಕಲ್ಪನಾ ಸೈಲ್. ಸಾಧ್ವಿ ಗೋವಾದ ಪಣಜಿಯಲ್ಲಿ ಜನಿಸಿದ ಕಾರಣ ಅವರು ಗೋವಾ ರಾಜ್ಯವನ್ನು ಈ ಸ್ಪರ್ಧೆಯಲ್ಲಿ ಪ್ರತಿನಿಧಿಸಿದ್ದರು. ಆದರೆ ಅವರ ಬಾಲ್ಯ ಮತ್ತು ಪ್ರಾಥಮಿಕ ಶಿಕ್ಷಣ ನಡೆದದ್ದು ಕಾರವಾರದಲ್ಲಿ.

ಶಾಲೆ: 1 ರಿಂದ 10ನೇ ತರಗತಿಯವರೆಗೆ ಕಾರವಾರದ ಸದಾಶಿವಗಡದ 'ಅಮ್ಮಾ ಸ್ಕೂಲ್'ನಲ್ಲಿ ವ್ಯಾಸಂಗ.

ಪಿಯುಸಿ: ಬೆಂಗಳೂರಿನ ಇಂಡಸ್ ಇಂಟರ್ನ್ಯಾಷನಲ್ ಸ್ಕೂಲ್ (ICIC).

ಪದವಿ: ಕೆನಡಾದ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಎಕಾನಮಿಕ್ಸ್ ಮತ್ತು ಮಾರ್ಕೆಟಿಂಗ್ ವಿಷಯದಲ್ಲಿ ಪದವಿ ಪಡೆದಿದ್ದಾರೆ.

57
ಮಿಸ್ ವರ್ಲ್ಡ್ 2027 ಗೆ ನೇರ ಪ್ರವೇಶ
Image Credit : Asianet News

ಮಿಸ್ ವರ್ಲ್ಡ್ 2027 ಗೆ ನೇರ ಪ್ರವೇಶ

ಸಾಧ್ವಿ ಸೈಲ್ ಕೇವಲ ಮಿಸ್ ಇಂಡಿಯಾ ಕಿರೀಟವನ್ನು ಗೆದ್ದಿಲ್ಲ, ಬದಲಾಗಿ 2027 ರಲ್ಲಿ ನಡೆಯಲಿರುವ ಪ್ರತಿಷ್ಠಿತ 'ಮಿಸ್ ವರ್ಲ್ಡ್' (Miss World 2027) ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಲು ನೇರ ಅರ್ಹತೆ ಪಡೆದಿದ್ದಾರೆ. ಇದು ಕಾರವಾರ ಮಾತ್ರವಲ್ಲದೆ ಇಡೀ ಕರ್ನಾಟಕ ಮತ್ತು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ.

67
ಗೋವಾ ಮೂಲಕ ಸ್ಪರ್ಧೆಗಿಳಿದಿದ್ದೇಕೆ?
Image Credit : Asianet News

ಗೋವಾ ಮೂಲಕ ಸ್ಪರ್ಧೆಗಿಳಿದಿದ್ದೇಕೆ?

ಸಾಧ್ವಿ ಸೈಲ್ ಅವರ ಮೂಲ ಮನೆ ಕಾರವಾರದಲ್ಲಿದ್ದರೂ, ಅವರು ಜನಿಸಿದ್ದು ಗೋವಾದ ಪಣಜಿಯಲ್ಲಿ. ಮಿಸ್ ಇಂಡಿಯಾ ನಿಯಮಗಳ ಪ್ರಕಾರ ಜನ್ಮಸ್ಥಳದ ಆಧಾರದ ಮೇಲೆ ಅವರು ಗೋವಾ ರಾಜ್ಯವನ್ನು ಪ್ರತಿನಿಧಿಸಿದ್ದರು. ರಾಜ್ಯ ಯಾವುದಾದರೂ, ಗೆದ್ದಿರುವುದು ನಮ್ಮ ಕಾರವಾರದ ಹೆಮ್ಮೆಯ ಪುತ್ರಿ ಎಂಬುದು ಕನ್ನಡಿಗರ ಖುಷಿಗೆ ಕಾರಣವಾಗಿದೆ.

77
ಸಾಂಸ್ಕೃತಿಕ ವೈಭವದ ನಡುವೆ ಕಿರೀಟ ಧಾರಣೆ
Image Credit : Sadhvi Sail

ಸಾಂಸ್ಕೃತಿಕ ವೈಭವದ ನಡುವೆ ಕಿರೀಟ ಧಾರಣೆ

KIIT ಕ್ಯಾಂಪಸ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 25,000 ಬುಡಕಟ್ಟು ವಿದ್ಯಾರ್ಥಿನಿಯರು ಭಾಗವಹಿಸಿದ್ದು ವಿಶೇಷವಾಗಿತ್ತು. ಕಿಟ್ ಸಂಸ್ಥೆಯ ಸಂಸ್ಥಾಪಕ ಡಾ. ಅಚ್ಯುತ ಸಮಂತಾ ಅವರು ಸಾಧ್ವಿ ಸೈಲ್ ಅವರಿಗೆ 1 ಲಕ್ಷ ರೂಪಾಯಿ ನಗದು ಬಹುಮಾನ ನೀಡಿ ಗೌರವಿಸಿದರು. ಈ ಹಿಂದಿನ ವಿಜೇತರಾದ ನಿಖಿತಾ ಪೋರ್ವಾಲ್ ಮತ್ತು ರೇಖಾ ಪಾಂಡೆ ಅವರು ಸಾಧ್ವಿಗೆ ಕಿರೀಟ ತೊಡಿಸಿ ಶುಭ ಹಾರೈಸಿದರು. ಸ್ಪರ್ಧೆಯ ಟಾಪ್ 15 ಹಂತದಲ್ಲಿ ಕರ್ನಾಟಕದ ಖುಷಿ ರಮೇಶ್ ಕಲಕೇರಿ ಕೂಡ ಸ್ಥಾನ ಪಡೆದಿದ್ದು ರಾಜ್ಯಕ್ಕೆ ಮತ್ತೊಂದು ಗರಿ ತಂದಿದೆ.

ಸಾಧ್ವಿ ಸೈಲ್ ಅವರ ಈ ಯಶಸ್ಸು ಕರಾವಳಿ ಭಾಗದ ಪ್ರತಿಭೆಗಳಿಗೆ ಹೊಸ ಸ್ಫೂರ್ತಿಯಾಗಿದೆ. ಮಿಸ್ ವರ್ಲ್ಡ್ ವೇದಿಕೆಯಲ್ಲೂ ಅವರು ಜಯಭೇರಿ ಬಾರಿಸಲಿ ಎಂದು ನಾಡಿನ ಜನತೆ ಹಾರೈಸುತ್ತಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಭಾರತ ಸುದ್ದಿ
ಫ್ಯಾಷನ್
ಉತ್ತರ ಕನ್ನಡ
ಮಹಿಳೆಯರು

Latest Videos
Recommended Stories
Recommended image1
ಪತಿಯ ಅಕ್ರಮ ಸಂಬಂಧ ಪತ್ತೆ ಮಾಡಿದ್ದ ಪತ್ನಿ ನಿಗೂಢ ಸಾವು: ಪೋಷಕರಿಂದ ಕೊಲೆ ಆರೋಪ
Recommended image2
ಮುಂದಿನ 7 ದಿನ ಹಲವೆಡೆ ಮಳೆ; ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಎಚ್ಚರಿಕೆ!
Recommended image3
ಚಾಮರಾಜನಗರ ಆಕ್ಸಿಜನ್ ದುರಂತ: ಸಂತ್ರಸ್ತರ ಕುಟುಂಬಕ್ಕೆ ಕೊನೆಗೂ ಸಿಕ್ತು ಸರ್ಕಾರಿ ನೌಕರಿ; ಅರ್ಹರ ಪಟ್ಟಿ ಇಲ್ಲಿದೆ ನೋಡಿ
Related Stories
Recommended image1
ಮಿಸ್ ಇಂಡಿಯಾ ಕಿರೀಟ ಗೆದ್ದ ಕಾರವಾರ ಶಾಸಕ ಸತೀಶ್ ಸೈಲ್ ಪುತ್ರಿ, ಕನ್ನಡತಿ ಸಾಧ್ವಿ ಸೌಂದರ್ಯಕ್ಕೆ ದೇಶದ ಮನ್ನಣೆ
Recommended image2
ಕರಾವಳಿ ಉತ್ಸವ: ಹೆಲಿಕಾಪ್ಟರ್‌ನಲ್ಲಿ ಹಾರಾಡಿದ ವಿಶೇಷ ಚೇತನ ಮಕ್ಕಳು, ಸತೀಶ್ ಸೈಲ್ ಪುತ್ರಿಯ ಈ ಮಹತ್ಕಾರ್ಯಕ್ಕೆ ಜೈ ಎಂದ ಜನತೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved