Amruthadhaare Serial: ಕುತಂತ್ರ ಮಾಡಿದ ಶಕುಂತಲಾ; ಈ ಕಳ್ಳಾಟ ಬಯಲು ಮಾಡೋರು ಯಾರು?
'ಅಮೃತಧಾರೆ' ಧಾರಾವಾಹಿಯಲ್ಲಿ ಭಾಗ್ಯಮ್ಮಳನ್ನು ಕುತಂತ್ರದಿಂದ ಆಸ್ಪತ್ರೆಗೆ ಸೇರಿಸೋಕೆ ಶಕುಂತಲಾ ಎಲ್ಲ ಪ್ಲ್ಯಾನ್ ಮಾಡಿದ್ದಾಳೆ. ಗೌತಮ್ ಬ್ರೇನ್ ವಾಶ್ ಮಾಡಿ ಅವಳು ತನ್ನ ಆಟ ಶುರು ಮಾಡಿದ್ದಾಳೆ. ಇದೀಗ ಮಲ್ಲಿ ಕಿವಿಗೆ ಬಿದ್ದಿದೆ. ಮುಂದೆ ಏನಾಗಬಹುದು?

ಭಾಗ್ಯಮ್ಮ ಏನು ಹೇಳಬಹುದು?
ಭಾಗ್ಯಮ್ಮಳಿಗೆ ಶಕುಂತಲಾ ವಾರ್ನ್ ಮಾಡ್ತಿರೋದನ್ನು ಮಲ್ಲಿ ನೋಡಿದ್ದಾಳೆ. ಶಕುಂತಲಾ ಹಾಗೂ ಅವಳ ಮಗ ಜಯದೇವ್ ಎಂಥ ನೀಚರು ಎನ್ನೋದು ಮಲ್ಲಿಗೆ ಗೊತ್ತಿದೆ. ಇನ್ನು ಅತ್ತೆಯನ್ನು ಮನೆಯಲ್ಲಿ ಉಳಿಸಿಕೊಳ್ಳಬೇಕು ಅಂತ ಭೂಮಿ ಕೂಡ ಒದ್ದಾಡುತ್ತಿದ್ದಾಳೆ. ಅತ್ತೆಗೆ ಏನೋ ಗೊತ್ತಿದೆ, ಅದನ್ನು ಹೇಳೋಕೆ ಆಗ್ತಿಲ್ಲ ಎಂದು ಅವಳು ಅಂದುಕೊಂಡಿದ್ದಾಳೆ. ಈಗ ಅತ್ತೆ ಕೈಗೆ ಪೆನ್, ಬುಕ್ ಕೊಟ್ಟು ಅವಳು ಸತ್ಯ ಏನು ಎಂದು ರಿವೀಲ್ ಮಾಡಲೂಬಹುದು.
ಎದುರಾಗಲಿದೆ ಮಹಾ ಟ್ವಿಸ್ಟ್!
ಭೂಮಿ, ಮಲ್ಲಿ ಸೇರಿಕೊಂಡು ಶಕುಂತಲಾ ತಂತ್ರ ಏನು ಎಂದು ರಿವೀಲ್ ಮಾಡಿದರೂ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಭಾಗ್ಯಮ್ಮ ಎಲ್ಲರ ಮುಂದೆ ಮಾತನಾಡಲೂಬಹುದು ಅಥವಾ ಏನೋ ಟ್ವಿಸ್ಟ್ ಎದುರಾಗಲೂಬಹುದು. ಮಲ್ಲಿ ಈಗ ಮೊದಲಿನಂತಿಲ್ಲ. ಈಗ ಅವಳು ಇಂಗ್ಲಿಷ್ ಮಾತನಾಡುತ್ತಾಳೆ, ಲ್ಯಾಪ್‌ಟ್ಯಾಪ್ ಬಳಸುತ್ತಾಳೆ.
ಈ ಎಪಿಸೋಡ್ ಪ್ರೋಮೋ ನೋಡಿ ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.
ಮಲ್ಲಿ ಭೂಮಿಕಾಗೆ ಎಲ್ಲ ಹೇಳ್ತಾರೆ, ಆಮೇಲೆ ಭಾಗ್ಯಮ್ಮನ ಕಾಪಾಡ್ಕೋತಾರೆ.
ನಮ್ ಭೂಮಿ ಇದ್ದಾರಲ್ಲ ಟೆನ್ಶನ್ ಇಲ್ಲ ಬಿಡಿ. ಭೂಮಿ ಇರೋ ತನಕ ಶಕುಂತಲಾ ಏನು ಮಾಡೋಕ್ ಆಗಲ್ಲ .
ಭಾಗ್ಯಮ್ಮ ಹೇಳುತ್ತಿಲ್ಲ ಅಷ್ಟೇ, ಎಲ್ಲಾ ಗೊತ್ತು, ಮಾತು ಬರುತ್ತೆ ಶಕುಂತಲಾ ಹೆಸರು ಹೇಳೋಕೆ ಭಯ ಪಡ್ತಿದಾಳೆ.
ವೀಕ್ಷಕರು ಏನು ಹೇಳಿದರು?
ಮಲ್ಲಿ ಭೂಮಿಗೆ ಹೇಳ್ತಾಳೆ.. ಆಮೇಲೆ ಭೂಮಿಕಾ ಭಾಗ್ಯಮ್ಮನ ತವರು ಮನೆಗೆ ಕರಕೊಂಡು ಹೋಗ್ತಾಳೆ ಅನ್ಸುತ್ತೆ.
ವಾವ್ ಸೂಪರ್ ಟ್ವಿಸ್ಟ್ ಸೂಪರ್, ಭಾಗ್ಯಮ್ಮ ಜೊತೆಗೆ ಮಲ್ಲಿ
ಭೂಮಿ ಎಚ್ಚರಿಕೆ ವಹಿಸಿ. ಪಾಪ ಗೌತಮ್ ಅಮ್ಮ
ಮಲ್ಲಿಗೆ ಡೌಟ್ ಬಂದು ಅವ್ಳು ಭೂಮಿಗೆ ಹೇಳ್ತಾಳೆ ಅನಿಸುತ್ತದೆ.
ಭೂಮಿಕಾ ಅವರೂ ಅತ್ತೆ ಹತ್ರ ಮಾತಾಡಿ ಎಲ್ಲ ಸರಿ ಮಾಡುತ್ತಾರೆ, ಶಕುಂತಲಾ ಆಟ ನಡೆಯಲ್ಲ.
ಪಾತ್ರಧಾರಿಗಳು
ಗೌತಮ್ ದಿವಾನ್- ರಾಜೇಶ್ ನಟರಂಗ
ಭೂಮಿಕಾ ಸದಾಶಿವ- ಛಾಯಾ ಸಿಂಗ್
ಮಲ್ಲಿ- ಅನ್ವಿತಾ ಸಾಗರ್
ಶಕುಂತಲಾ- ವನಿತಾ ವಾಸು
ಜಯದೇವ್- ರಾಣವ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

