- Home
- Entertainment
- TV Talk
- ಇಂದು ಕೂಡ ಸಮಾಜ ಮುಜುಗರಪಡುವ ಟಾಪಿಕ್ ಬಗ್ಗೆ ದನಿಯೆತ್ತಿದ Annayya Kannada Serial; ವೀಕ್ಷಕರಿಂದ ಮೆಚ್ಚುಗೆ
ಇಂದು ಕೂಡ ಸಮಾಜ ಮುಜುಗರಪಡುವ ಟಾಪಿಕ್ ಬಗ್ಗೆ ದನಿಯೆತ್ತಿದ Annayya Kannada Serial; ವೀಕ್ಷಕರಿಂದ ಮೆಚ್ಚುಗೆ
Annayya Serial Today Episode: 'ಅಣ್ಣಯ್ಯ' ಧಾರಾವಾಹಿಯಲ್ಲಿ ಈಗಾಗಲೇ ನಾಲ್ಕು ಟ್ರ್ಯಾಕ್ ಕಥೆ ಸಾಗುತ್ತಿದೆ. ಶಿವು-ಪಾರು, ರಶ್ಮಿ-ಜಿಮ್ ಸೀನ, ರತ್ನ, ರಾಣಿ-ಮನು ಕುರಿತಂತೆ ಎಪಿಸೋಡ್ ಪ್ರಸಾರ ಆಗ್ತಿದೆ. ಈ ಮಧ್ಯೆ ಹೊಸ ವಿಷಯವನ್ನು ಹೇಳಲಾಗಿದೆ. ಧಾರಾವಾಹಿಯಲ್ಲಿ ಸಾಮಾಜಿಕ ಸಂದೇಶ ಸಾರಲಾಗಿದೆ.

ಹೆಣ್ಣು ಮಕ್ಕಳ ತಿಂಗಳ ನೋವು
ಮಾರಿಗುಡಿ ಶಿವುಗೆ ತಂಗಿಯರು ಅಂದರೆ ತುಂಬ ಇಷ್ಟ, ಹೆಣ್ಣು ಮಕ್ಕಳ ಮೇಲೆ ಅವನಿಗೆ ಅಪಾರ ಗೌರವ ಇದೆ. ಈಗ ಈ ಸೀರಿಯಲ್ ತಂಡವು ಹೆಣ್ಣು ಮಕ್ಕಳ ಪರವಾಗಿ ನಿಂತು, ಸಮಾಜದಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ. ಹೆಣ್ಣು ಮಕ್ಕಳ ತಿಂಗಳ ನೋವಿನ ಬಗ್ಗೆ ಬೆಳಕು ಚೆಲ್ಲಲು ಸೀರಿಯಲ್‌ನಲ್ಲಿ ಈ ಬಗ್ಗೆ ಹೇಳಲಾಗಿದೆ.
'ಮಡಿಲು' ಎಂಬ ಹೊಸ ಯೋಜನೆ
ತಿಂಗಳಿಗೊಮ್ಮೆ ಹೆಣ್ಣುಮಕ್ಕಳ ದೇಹದಲ್ಲಾಗುವ ಸಹಜ ಪ್ರಕ್ರಿಯೆ ( ಋತುಸ್ರಾವ ) ಸಮಾಜದಲ್ಲಿ ಇನ್ನೂ ಮುಜುಗರ, ಮಡಿವಂತಿಕೆ, ಮೂಢನಂಬಿಕೆ ಇದೆ ಮುಕ್ತವಾಗಿ ಮಾತನಾಡಿದೆ. ಮಾರಿಗುಡಿ ಎನ್ನುವ ಪುಟ್ಟ ಹಳ್ಳಿಯಲ್ಲಿ ಕಥಾನಾಯಕ ಶಿವು ತನ್ನ ಅಂಗಡಿಯಲ್ಲಿ ಊರ ಹೆಣ್ಣುಮಕ್ಕಳಿಗೆ ಅನುಕೂಲವಾಗುವಂತೆ 'ಮಡಿಲು' ಎಂಬ ಹೊಸ ಯೋಜನೆ ಶುರುಮಾಡಿದ್ದಾನೆ.
ಋತುಸ್ರಾವದ ಸಂದರ್ಭದಲ್ಲಿ ಏನಾಗುವುದು?
ಋತುಸ್ರಾವದ ಸಂದರ್ಭದಲ್ಲಿ ಹೆಣ್ಣುಮಕ್ಕಳು ಶುಚಿತ್ವ ಕಾಪಾಡಿಕೊಳ್ಳಬೇಕು, ಮನೆಯಲ್ಲಿರುವ ಗಂಡುಮಕ್ಕಳು ಮುಜುಗರ ಬಿಟ್ಟು ಅವರ ಜತೆ ನಿಲ್ಲಬೇಕು, ಆ ಸಮಯದಲ್ಲಿ ಹೆಣ್ಣಿಗೆ ದೈಹಿಕವಾಗಿ ಒಂದಿಷ್ಟು ನೋವು, ಮಾನಸಿಕವಾಗಿ ಕೂಡ ಏರಿಳಿತ ಇರುವುದು. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಶಿವು ಹೇಳುತ್ತಾನೆ.
ಜಾಗೃತಿ ಮೂಢಿಸಬೇಕು
ಈ ಸೀರಿಯಲ್ ನಾಯಕಿ ಡಾಕ್ಟರ್ ಪಾರು ಜತೆ ಸೇರಿ ಶಿವು ಕೂಡ ದೊಡ್ಡ ಸಂದೇಶ ನೀಡಿದ್ದಾನೆ. ತನ್ನ ಅಂಗಡಿಯಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್ ನೀಡುವ ವ್ಯವಸ್ಥೆ ಮಾಡಿದ್ದಾನೆ. ಈ ಬಗ್ಗೆ ಎಲ್ಲರೂ ಊರುಗಳಲ್ಲಿ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದ್ದಾನೆ. ಈ ಕುರಿತ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಟಾಪ್ 5 ಸೀರಿಯಲ್
ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಪಾತ್ರದಲ್ಲಿ ವಿಕಾಶ್ ಉತ್ತಯ್ಯ, ಪಾರು ಪಾತ್ರದಲ್ಲಿ ನಿಶಾ ರವಿಕೃಷ್ಣನ್, ನಾಗೇಂದ್ರ ಶಾ ನಟಿಸುತ್ತಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಟಾಪ್ 5 ಧಾರಾವಾಹಿಗಳಲ್ಲಿ ಈ ಸೀರಿಯಲ್ ಕೂಡ ಒಂದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

