- Home
- Entertainment
- TV Talk
- Photos: 25ನೇ ವಯಸ್ಸಿಗೆ ಹೊಸ ಮನೆಗೆ ಕಾಲಿಟ್ಟ Annayya Serial ನಿಶಾ ರವಿಕೃಷ್ಣನ್; ಗಟ್ಟಿಮೇಳ ತಂಡ ಭಾಗಿ!
Photos: 25ನೇ ವಯಸ್ಸಿಗೆ ಹೊಸ ಮನೆಗೆ ಕಾಲಿಟ್ಟ Annayya Serial ನಿಶಾ ರವಿಕೃಷ್ಣನ್; ಗಟ್ಟಿಮೇಳ ತಂಡ ಭಾಗಿ!
ಗಟ್ಟಿಮೇಳ ಧಾರಾವಾಹಿ ನಟಿ ನಿಶಾ ರವಿಕೃಷ್ಣನ್ ಅವರು ಈಗ ʼಅಣ್ಣಯ್ಯʼ ಧಾರಾವಾಹಿಯ ಪಾರ್ವತಿ ಆಗಿ ಮೆರೆಯುತ್ತಿದ್ದಾರೆ. ಈಗ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ.

ನಟಿ ನಿಶಾ ರವಿಕೃಷ್ಣನ್ ಅವರು ಅದ್ದೂರಿಯಾಗಿ ನೂತನ ಮನೆಯ ಪ್ರವೇಶ ಮಾಡಿದ್ದಾರೆ. ಈ ಶುಭ ಸಮಾರಂಭಕ್ಕೆ ಗಟ್ಟಿಮೇಳ ಧಾರಾವಾಹಿ ಕಲಾವಿದರು ಕೂಡ ಗಮನಿಸಿದ್ದಾರೆ.
ನಟಿ ನಿಶಾ ರವಿಕೃಷ್ಣನ್ ಅವರು ಈಗ ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಅವರು ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ.
ನಟಿ ನಿಶಾ ರವಿಕೃಷ್ಣನ್ ಅವರ ನೂತನ ಮನೆಗೆ ಗಟ್ಟಿಮೇಳ ಧಾರಾವಾಹಿ ನಟಿ ಅಶ್ವಿನಿ, ಪ್ರಿಯಾ ಜೆ ಆಚಾರ್, ಸುಧಾ ನರಸಿಂಹರಾಜು, ಸಿದ್ದು ಮೂಲಿಮನಿ ಅವರು ಆಗಮಿಸಿದ್ದರು.
ನಿಶಾ ರವಿಕೃಷ್ಣನ್ ಅವರು ಕೆಂಪು ಸೀರೆ ಉಟ್ಟು, ಹಸಿರು ಬಣ್ಣದ ಹಾರ ಧರಿಸಿ ಮಿಂಚಿದ್ದಾರೆ. ಒಟ್ಟಿನಲ್ಲಿ ಚಿಕ್ಕ ವಯಸ್ಸಿಗೆ ದೊಡ್ಡ ಸಾಧನೆ ಮಾಡಿದ್ದಾರೆ.
ನಿಶಾ ರವಿಕೃಷ್ಣನ್ ಅವರು ಈ ಹಿಂದೆ ʼಸರ್ವ ಮಂಗಳ ಮಾಂಗಲ್ಯೇʼ ಧಾರಾವಾಹಿಯಲ್ಲಿ ಕೂಡ ನಟಿಸಿದ್ದರು. ಈಗ ಅವರು ಹೀರೋಯಿನ್ ಆಗಿ ಕನ್ನಡ, ತೆಲುಗು ಶೋಗಳಲ್ಲಿ ಬ್ಯುಸಿಯಿದ್ದಾರೆ.
ನಿಶಾ ರವಿಕೃಷ್ಣನ್ ಅವರಿಗೆ ಈಗ 25 ವರ್ಷ ವಯಸ್ಸು ಎನ್ನಲಾಗಿದೆ. ಈಗಲೇ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಮನೆ ಮಾಡೋದು ಅಂದ್ರೆ ಸುಮ್ನೇನಾ?
ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸಿದ್ದ ಪ್ರಿಯಾ ಜೆ ಆಚಾರ್, ಸುಧಾ ನರಸಿಂಹರಾಜು, ಅಶ್ವಿನಿ ಅವರು ನಿಶಾರ ಹೊಸ ಮನೆಗೆ ಬಂದು ಶುಭ ಹಾರೈಸಿದ್ದಾರೆ.
ಕನ್ನಡ ನಟಿ ನಿಶಾ ರವಿಕೃಷ್ಣನ್ ಅವರು ಬ್ಯಾಕ್ ಟು ಬ್ಯಾಕ್ ನಾಲ್ಕು ಧಾರಾವಾಹಿಗಳಿಗೆ ಹೀರೋಯಿನ್ ಆಗಿದ್ದಾರೆ. ಈ ಮೂಲಕ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ.
ಕನ್ನಡ ನಟಿ ನಿಶಾ ರವಿಕೃಷ್ಣನ್ ಅವರು ಉತ್ತಮ ಗಾಯಕಿ ಕೂಡ ಹೌದು. ಸಾಕಷ್ಟು ಶೋಗಳಲ್ಲಿ ಅದ್ಭುತವಾಗಿ ಹಾಡಿ, ಜನರನ್ನು ರಂಜಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

