ಮಲ್ಲಮ್ಮ ಮತ್ತು 1 ನಿಮಿಷ 20 ಸೆಕೆಂಡ್; ನಿಮ್ಮ ಬುಡ ನೀವು ನೋಡ್ಕೊಳ್ಳಿ ಎಂದ ಸುದೀಪ್
Mallamma swimming pool task ಬಿಗ್‌ಬಾಸ್ ಮನೆಯಲ್ಲಿ ಒಂಟಿಯಾಗಿ ಆಡುತ್ತಿರುವ ಮಲ್ಲಮ್ಮ ಅವರ ಸಾಮರ್ಥ್ಯವನ್ನು ಸುದೀಪ್ ಶ್ಲಾಘಿಸಿದ್ದಾರೆ. ಈಜುಕೊಳದ ಟಾಸ್ಕ್‌ನಲ್ಲಿ ಮಲ್ಲಮ್ಮ ವೇಗದ ಪ್ರದರ್ಶನ ನೀಡಿದ್ದನ್ನು ಉಲ್ಲೇಖಿಸಿದ್ದಾರೆ.

ಮಲ್ಲಮ್ಮ
ಒಂಟಿಯಾಗಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟವರ ಪೈಕಿ ಮಲ್ಲಮ್ಮ ಮತ್ತು ಧ್ರವಂತ್ ಸಹ ಆಗಿದ್ದಾರೆ. ಮೊದಲ ವಾರದಲ್ಲಿ ಒಂಟಿಯಾಗಿ ಆಟ ಆಡಿರೋದು ಮಲ್ಮಮ್ಮ ಮಾತ್ರ ಎಂದು ಸುದೀಪ್ ಹೇಳಿದ್ದಾರೆ. ಏನು ಅಲ್ಲದಿದ್ರೆ ಮಲ್ಲಮ್ಮ ಯಾವುದೋ ಹಳ್ಳಿಯಲ್ಲಿ ಕುಳಿತುಕೊಳ್ಳುತ್ತಿದ್ದರು. ಅವರ ಸಾಮರ್ಥ್ಯದ ಮೇಲೆ ಬಿಗ್‌ಬಾಸ್‌ಗೆ ಬಂದಿದ್ದಾರೆ. ಅವರ ಮೇಲೆ ಅನುಕಂಪ ತೋರಿಸೋದು ಬೇಡ ಎಂದು ಸಹ ಸ್ಪರ್ಧಿಗಳಿಗೆ ಹೇಳಿದ್ದಾರೆ.
ಹೊರಗೆ ಬನ್ನಿ
ಬಿಗ್‌ಬಾಸ್ ಆರಂಭವಾದಾಗಿನಿಂದಲೂ ಧ್ರವಂತ್ ಬಹುತೇಕ ಸಮಯ ಮಲ್ಲಮ್ಮ ಜೊತೆಯಲ್ಲಿರುತ್ತಿದ್ದರು. ಮಾತಿನ ಮಧ್ಯೆ ಮಲ್ಲಮ್ಮ ಗೆದ್ರೆ ನನಗೆ ಖುಷಿಯಾಗುತ್ತೆ ಎಂದು ದ್ರವಂತ್ ಹೇಳಿದರು. ಈ ಮಾತು ಕೇಳುತ್ತಿದ್ದಂತೆ ಮತ್ಯಾಕೆ ಅಲ್ಲಿದ್ದೀರಿ. ಬಾಗಿಲು ಓಪನ್ ಮಾಡೋಕೆ ಹೇಳುತ್ತೇನೆ ಹೊರಗೆ ಬನ್ನಿ ಎಂದು ಸುದೀಪ್ ಕರೆದರು.
ಮಾನವೀಯತೆ ತೋರಿಸುವುದು ತಪ್ಪಲ್ಲ
ಮಾನವೀಯತೆ ತೋರಿಸುವುದು ತಪ್ಪಲ್ಲ. ಆದ್ರೆ ಯಾಕೆ ಮನೆಯೊಳಗೆ ಹೋಗಿದ್ದೀರಿ ಎಂಬುದನ್ನು ಮರೆಯಬೇಡಿ. ಒಂಟಿಗಳಾದವರು ಜಂಟಿಗಳಿಗಿಂತ ಕೆಟ್ಟದಾಗಿ ಆಟ ಆಡಿದ್ದೀರಿ ಎಂದು ಎಲ್ಲರಿಗೂ ಸುದೀಪ್ ಸಲಹೆ ನೀಡಿದರು. ಇದೇ ವೇಳೆ ಈಜುಕೊಳದ ಆಟದ ಬಗ್ಗೆಯೂ ಸುದೀಪ್ ಮಾತನಾಡಿದರು.
ಇದನ್ನೂ ಓದಿ: ಥರ್ಡ್ ಕ್ಲಾಸ್ ರೀತಿ ವರ್ತಿಸಿದ್ದ, ಅವಾಜ್ ಹಾಕಿದ್ಮೇಲೆ ಬಕೆಟ್ ಹಿಡಿತಿದ್ದಾನೆ: ಸತೀಶ್ ಹೇಳಿದ್ಯಾರಿಗೆ?
ಮಾತಿನಲ್ಲಿಯೇ ಚಾಟಿ ಬೀಸಿದ ಸುದೀಪ್
ಸ್ವಿಮ್ಮಿಂಗ್ ಫೂಲ್‌ನಲ್ಲಿ ಲಾಕ್ ಒಪನ್ ಮಾಡಿ, ಕೀ ತೆಗೆದುಕೊಂಡು ಬರಬೇಕಿತ್ತು. ಈ ಆಟವನ್ನು ಕಡಿಮೆ ಸಮಯದಲ್ಲಿ ಆಡಿದವರು ಮಲ್ಲಮ್ಮ. ಕೇವಲ 1 ನಿಮಿಷ 20 ಸೆಕೆಂಡ್‌ನಲ್ಲಿ ಈ ಆಟವನ್ನು ಮುಗಿಸಿದ್ದಾರೆ. ದ್ರವಂತ್ ನೀವು ಈ ಆಟ ಮುಗಿಸಲು 2 ನಿಮಿಷಕ್ಕೂ ಹೆಚ್ಚಿನ ಸಮಯ ತೆಗೆದುಕೊಂಡಿದ್ದೀರಿ ಎಂದು ಹೇಳುವ ಮೂಲಕ ಮಲ್ಲಮ್ಮ ಅವರ ಸಾಮರ್ಥ್ಯ ಏನು ಎಂಬುದನ್ನು ಮನೆ ಮಂದಿಗೆ ತಿಳಿಸಿದರು. ಈ ಮೂಲಕ ನಿಮ್ಮ ಬುಡ ನೀವು ನೋಡ್ಕೊಳ್ಳಿ ಎಂದು ಸುದೀಪ್ ಮಾತಿನಲ್ಲಿಯೇ ಚಾಟಿ ಬೀಸಿದರು.
ಇದನ್ನೂ ಓದಿ: ರಣಚಂಡಿಯಾಗಿ ಮರಳಿ ಬಂದ ರಕ್ಷಿತಾ; ಉತ್ತರ ಕೊಡ್ತಾರಾ ಸ್ಪರ್ಧಿಗಳು? ಶುರುವಾಯ್ತು ಅಸಲಿ ಆಟ
ಸೇಫ್ ಆದ್ರು ಮಲ್ಲಮ್ಮ
ನಾಮಿನೇಟ್ ಆಗಿರುವ ಸ್ಪರ್ಧಿಗಳ ಪೈಕಿ ಮಲ್ಲಮ್ಮ ಸೇಫ್ ಆಗಿದ್ದಾರೆ. ತಮ್ಮನ್ನು ಉಳಿಸಿದ ಎಲ್ಲರಿಗೂ ಮಲ್ಮಮ್ಮ ಧನ್ಯವಾದಗಳನ್ನು ತಿಳಿಸಿದ್ದಾರೆ. ನನಗೆ ಓದಿದ್ರೆ ಗೊತ್ತಾಗಲ್ಲ, ಅಲ್ಲಿ ಆಟ ನೋಡಿದ್ರೆ ಗೊತ್ತಾಗುತ್ತೆ. ಗೊತ್ತಾಗಿಲ್ಲ ಅಂದ್ರೆ ಇವರೆಲ್ಲರ ಬಳಿ ಕೇಳಿ ತಿಳಿದುಕೊಳ್ಳುವೆ ಎಂದು ಮಲ್ಲಮ್ಮ ಹೇಳಿದರು.
ಇದನ್ನೂ ಓದಿ: ಸುದೀಪ್ ಕ್ಲಾಸ್: ಕಾಕ್ರೋಚ್ ಸುಧಿಯ ಆಟದ ಅಸಲಿಯತ್ತು ಬಯಲು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

