BBK 12: Bigg Boss ಕಿರೀಟ ಏರಿಸಿಕೊಳ್ಳೋದಲ್ಲ, ಸೂರಜ್ ಹೃದಯ ಕದಿಯಲು ರಾಶಿಕಾ ಕಸರತ್ತು
ಬಿಗ್ ಬಾಸ್ ಕನ್ನಡದಲ್ಲಿ ಪ್ರತಿ ವರ್ಷವೂ ಒಂದಲ್ಲ ಒಂದು ಲವ್ ಸ್ಟೋರಿ ನಡೆದೇ ನಡೆಯುತ್ತೆ. ಆದರೆ ಈಗ ಹೊಸ ಸೀಸನ್ ಶುರುವಾಗಿ ವಾರ ಮೂರು ಕಳೆದ್ರು ಏನೂ ಇಲ್ವೇ ಇಲ್ಲ ಅಂತ ಜನ ಅಂದುಕೊಂಡಿರೋವಾಗಲೇ ಶುರುವಾಗಿದೆ ರಾಶಿಕಾ ಶೆಟ್ಟಿ ಮತ್ತು ಸೂರಜ್ ನಡುವೆ ಲವ್ವಿ ಡವ್ವಿ.

ಬಿಗ್ ಬಾಸ್ ಕನ್ನಡ
ಬಿಗ್ ಬಾಸ್ ಕನ್ನಡ ಸೀಸನ್ ಆರಂಭವಾಗಿ ಇದೀಗ ಮೂರನೇ ವಾರಕ್ಕೆ ಕಾಲಿಟ್ಟಿದೆ. ಈ ಮೂರು ವಾರದಲ್ಲಿ ಜಗಳ, ಸ್ಪರ್ಧೆ, ಸವಾಲು, ವಿವಾದ ಎಲ್ಲವೂ ನಡೆದಿದೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಹೊಸ ಲವ್ ಸ್ಟೋರಿ ಶುರುವಾಗುವ ಹಂತದಲ್ಲಿದೆ.
ವೈಲ್ಡ್ ಕಾರ್ಡ್ ಎಂಟ್ರಿ
ಬಿಗ್ ಬಾಸ್ ಮನೆಯಿಂದ ಕಳೆದ ವಾರ ಮೂವರು ಎಲಿಮಿನೇಟ್ ಆಗಿದ್ದರು. ಅಷ್ಟೇ ಅಲ್ಲ ವಾರದ ಕೊನೆಯಲ್ಲಿ ಮೂರು ಜನ ವೈಲ್ಡ್ ಕಾರ್ಡ್ ಎಂಟ್ರಿ ಕೂಡ ಆಗಿದ್ದರು. ಈ ವೈಲ್ಡ್ ಕಾರ್ಡ್ ಎಂಟ್ರಿ ಒಬ್ಬ ಸ್ಪರ್ಧಿಯಾಗಿ ಸೂರಜ್ ಸಿಂಗ್, ಎಂಟ್ರಿ ಕೊಟ್ಟ ತಕ್ಷಣವೇ ದೊಡ್ಮನೆಯಲ್ಲಿರುವ ಹುಡುಗಿಯರ ಹೃದಯ ಕದ್ದಿದ್ದಾರೆ.
ರಾಶಿಕಾಗೆ ರೋಸ್ ಕೊಟ್ಟ ಸೂರಜ್
ಮನೆಯೊಳಗೆ ಕಾಲಿಡುತ್ತಿದ್ದಂತೆ, ಸೂರಜ್ ಗೆ ಬಿಗ್ ಬಾಸ್ ನಿಮಗೆ ಹುಡುಗಿಯರಲ್ಲಿ ಯಾರು ಕ್ಯೂಟ್ ಅನಿಸ್ತಾರೋ ಅವರಿಗೆ ರೋಸ್ ಕೊಡಿ ಎಂದಿದ್ದಾರೆ. ಸೂರಜ್ ಯೋಚನೆ ಮಾಡಿ ಕೊನೆಗೆ ರಾಶಿಕಾ ಶೆಟ್ಟಿಗೆ ರೋಸ್ ಕೊಟ್ಟಿದ್ದು, ರಾಶಿಕ ಹೃದಯ ಆವಾಗ್ಲೆ ಕಳೆದು ಹೋದಂತೆ ಕಾಣಿಸ್ತಿದೆ.
ಸೂರಜ್ ಹೃದಯ ಕದಿಯಲು ರಾಶಿಕಾ ಕಸರತ್ತು
ಸೂರಜ್ ಮನೆಗೆ ಬಂದು ರಾಶಿಕಾಗೆ ರೋಸ್ ಕೊಟ್ಟ ಬಳಿಕದಿಂದ ರಾಶಿಕಾ ಪೂರ್ತಿಯಾಗಿ ಸೂರಜ್ ಹಿಂದೆ ಮುಂದೆ ಸುತ್ತೋದೆ ಕಾಣಿಸ್ತಿದೆ. ಬಿಗ್ ಬಾಸ್ ಟೈಟಲ್ ಗೆಲ್ಲದಿದ್ದರೂ ಪರವಾಗಿಲ್ಲ ಸೂರಜ್ ಹೃದಯ ಗೆಲ್ಲಲೇ ಬೇಕು ಎನ್ನುವಂತಿದೆ ರಾಶಿಕಾ ನಡೆ.
ಸೂರಜ್ ಇಂಪ್ರೆಸ್ ಆಗೋದ್ರ
ಇಲ್ಲಿವರೆಗೆ ಸಖತ್ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಶಿಕಾ ಇದೀಗ ಟ್ರೆಡಿಶನಲ್ ಆಗಿ ಸೀರೆಯುಟ್ಟು, ತಲೆಗೆ ಮಲ್ಲಿಗೆ ಹೂವು ಮುಡಿದು ಸೂರಜ್ ಇದ್ದಲ್ಲಿಗೆ ಬಂದು ಹೇಗೆ ಕಾಣಿಸ್ತಿದ್ದೀನಿ ಅಭಿ ಎಂದು ಕೇಳುತ್ತಿದ್ದಾರೆ, ಅಷ್ಟೇ ಅಲ್ಲ ಸೂರಜ್ ಪಕ್ಕ ಕುಳಿತುಕೊಳ್ಳುತ್ತಿದ್ದಾರೆ.
ಸೂರಜ್ ಜೊತೆ ಮಾತು ಕತೆ
ರಾತ್ರಿ ಹೊತ್ತು ಕೂಡ ಸೂರಜ್ ಜೊತೆ ಕುಳಿತು, ತಾನು ಎಷ್ಟು ಹೊತ್ತಿಗೆ ನಿದ್ರೆ ಮಾಡೋದುಈ ಬಗ್ಗೆ ಎಲ್ಲಾ ವಿವರಣೆ ಕೊಡುತ್ತಾ, ಸೂರಜ್ ಗೆ ಹತ್ತಿರವಾಗಲು ಪ್ರಯತ್ನಿಸುವಂತೆ ಕಾಣಿಸ್ತಿದೆ. ಅಷ್ಟೇ ಅಲ್ಲ ರಾಶಿ ಮುಖದಲ್ಲಿ ಬ್ಲಶ್ ಕೂಡ ಕಾಣಿಸ್ತಿದೆ.
ಎಲ್ಲಾ ಮಾಡ್ತಿರೋದು ಸುಮ್ನೇನಾ
ಇದೀಗ ಇದನ್ನ ನೋಡಿ ಹಲವಾರು ಸೂರಜ್ ರಾಶಿಕಾ ಫ್ಯಾನ್ ಪೇಜಸ್ ಗಳು ಸಹ ಹುಟ್ಟಿಕೊಂಡಿವೆ. ಅಷ್ಟೇ ಅಲ್ಲ ರಾಶಿಕಾ ಹೆಚ್ಚು ಜನಪ್ರಿಯತೆ ಪಡೆಯಲು ಈ ಪ್ರೀತಿಯ ನಾಟಕ ಮಾಡ್ತಿದ್ದಾಳೆ ಎನ್ನುತ್ತಿದ್ದಾರೆ ಜನ. ಯಾವುದು ಸುಳ್ಳು ಯಾವುದು ಸತ್ಯ ಕೆಲವೇ ಸಮಯದಲ್ಲಿ ರಿವೀಲ್ ಆಗಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

