ಸಿನಿಮಾಗಳಿಗಿಂತ ಸೂಪರ್ ಆಗಿವೆ ಈ ಶಾರ್ಟ್ ಫಿಲಂಗಳು… YouTube ನಲ್ಲಿವೆ ನೋಡಿ
ನೀವು ಶಾರ್ಟ್ ಸಿನಿಮಾ ಪ್ರಿಯರಾಗಿದ್ರೆ ,YouTube ನಲ್ಲಿ ಲಭ್ಯವಿದೆ ಕೆಲವು ಅದ್ಭುತ ಸಿನಿಮಾಗಳು. ಮಿಸ್ಟ್ರಿ, ಥ್ರಿಲ್ಲರ್, ಇಮೋಷನಲ್ ಕಥೆಯನ್ನೊಳಗೊಂಡ ಈ ಸಿನಿಮಾಗಳನ್ನು ಮಿಸ್ ಮಾಡದೆ ನೋಡಿ.

ಕಿರುಚಿತ್ರಗಳು
ನೀವು ಒಳ್ಳೆಯ ಕಥೆಗಳನ್ನು ಇಷ್ಟಪಡುತ್ತಿದ್ದರೆ ಈ ಲೇಖನ ನಿಮಗಾಗಿ. YouTube ನಲ್ಲಿರುವ ಈ 10 ಕಿರುಚಿತ್ರಗಳು ತನ್ನ ಕಥೆ, ಅಭಿನಯ, ಪಾತ್ರಗಳ ಮೂಲಕ ಯಾವುದೇ ಸಿನಿಮಾಗಳಿಗಿಂತ ಕಮ್ಮಿ ಇಲ್ಲ ಎನ್ನೋದನ್ನು ತೋರಿಸಿವೆ. ನೀವು ಮಿಸ್ ಮಾಡದೆ ಈ ಸಿನಿಮಾಗಳನ್ನು ನೋಡಿ.
ಚಟ್ನಿ
ತನ್ನ ಗಂಡ ಇನ್ನೊಬ್ಬ ಮಹಿಳೆಯೊಂದಿಗೆ ಸಲುಗೆಯಿಂದ ಇರುವುದನ್ನು ಗಮನಿಸಿದ ವನಿತಾ, ಆಕೆಯನ್ನು ಮನೆಗೆ ಆಹ್ವಾನಿಸುತ್ತಾಳೆ. ಅವರ ಮಾತುಕತೆ ಹೀಗೆ ಸಾಗುತ್ತಿದ್ದಂತೆ, ಕೊನೆಗೆ ಅದು ಡಾರ್ಕರ್ ಸೈಡ್ ರಿವೀಲ್ ಆಗುತ್ತಾ ಸಾಗುತ್ತದೆ. ಇದೊಂದು ಮಿಸ್ಟ್ರಿ ಕಥೆಯಾಗಿದ್ದು, ಮಿಸ್ ಮಾಡದೆ ನೋಡಿ.
ಜ್ಯೂಸ್
ಇದು ಸಾಮಾನ್ಯ ಮನೆ ಮನೆಯಲ್ಲಿ ನಡೆಯುವ ಗೆಟ್ ಟು ಗೆದರ್ ಕಥೆ. ಇಂತಹ ಸಂದರ್ಭದಲ್ಲಿ ಮನೆಯ ಗಂಡಸರೆಲ್ಲಾ ಮಾತುಕತೆಯಲ್ಲಿ ಬ್ಯುಸಿಯಾಗಿದ್ರೆ, ಹೆಂಗಸರು ಅಡುಗೆ ಮಾಡುತ್ತಲೇ ಇರಬೇಕು. ಈ ಶಾರ್ಟ್ ಫಿಲಂ ಕಥೆಯೂ ಅದೆ. ಆದರೆ ಎಂಡಿಂಗ್ ಮಾತ್ರ ಚೆನ್ನಾಗಿದೆ.
ಅಹಲ್ಯ
ಕಾಣೆಯಾದ ಅರ್ಜುನನ ಬಗ್ಗೆ ವಿಚಾರಿಸಲು ಪೊಲೀಸ್ ಅಧಿಕಾರಿ ಇಂದ್ರ ಪ್ರಸಿದ್ಧ ಕಲಾವಿದ ಗೌತಮ್ ಸಾಧು ಅವರನ್ನು ಭೇಟಿ ಮಾಡುತ್ತಾನೆ. ಆತ ತನ್ನ ಸುಂದರಿ ಹೆಂಡತಿ ಜೊತೆ ವಾಸ ಮಾಡುತ್ತಿರುತ್ತಾನೆ. ಗೌತಮ್ ಅಲ್ಲಿದ್ದ ಅರ್ಜುನನನ್ನು ಹೋಲುವ ಗೊಂಬೆಯನ್ನು ತೋರಿಸಿದಾಗ ಹೊಸ ಕಥೆಯೊಂದು ತಿರುವು ಪಡೆಯುತ್ತದೆ.
ಅನುಕೂಲ್
ಹಿಂದಿ ಶಿಕ್ಷಕ ನಿಕುಂಜ್, ಮನೆ ಕೆಲಸಗಳಲ್ಲಿ ಸಹಾಯ ಮಾಡಲು ಹುಮನಾಯ್ಡ್ ರೋಬೋಟ್ ಅನ್ನು ಖರೀದಿಸುತ್ತಾನೆ. ಆ ನಂತರ ಆತನ ಜೀವನ ಯಾವ ರೀತಿ ಬದಲಾಗುತ್ತದೆ ಎನ್ನುವ ಕಥೆ ಸಿನಿಮಾದ್ದು. ಇದರಲ್ಲಿ ಕಾಮಿಡಿ, ಇಮೋಷನ್ಸ್, ಪವರ್ ಫುಲ್ ಕತೆ ಎಲ್ಲವೂ ಇದೆ.
ಮನೋರಂಜನ್
ಆರಂಭದಲ್ಲಿ ಕಾಮಿಡಿ, ಜೋಕ್ಸ್ ಗಳನ್ನೇ ಒಳಗೊಂದು ಮನರಂಜನಾ ಜಗತ್ತನ್ನೆ ಗೇಲಿ ಮಾಡುವಂತೆ ಶುರುವಾಗುವ ಕಥೆ ನಂತರ ಸಡನ್ ತಿರುವು ತೆಗೆದುಕೊಂಡು, ತಮಾಷೆಯೇ ಇಲ್ಲದೆ ಕಥೆ ತೆರೆದುಕೊಳ್ಳುತ್ತದೆ.
ದಿ ಬ್ರೋಕನ್ ಟೇಬಲ್
ಅಲ್ಝಮೈರ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರ ಕೇರ್ ಟೇಕರ್ ಆಗಿ ಬರುವ ಮಹಿಳೆ, ಆತನೊಂದಿಗೆ ಬೆಳಗ್ಗಿನಿಂದ ಸಂಜೆಯವರೆಗೆ ಸಮಯ ಕಳೆದಂತೆ ಜೀವನದಲ್ಲಿ ಯಾವೆಲ್ಲಾ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾಳೆ ಎನ್ನುವ ಸುಂದರ ಕಥೆ ಇದಾಗಿದೆ.
ಕಹಾನಿ ಬಾಜ್
ಇದು ನೋಡಲೇಬೇಕಾದ ಒಂದು ಥ್ರಿಲ್ಲರ್ ಶಾರ್ಟ್ ಮೂವಿ ಆಗಿದೆ. ಸಂದೀಪ್ ಪಿ ವರ್ಮಾ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಆಶಿಶ್ ವಿದ್ಯಾರ್ಥಿ ಟ್ಯಾಕ್ಸಿ ಡ್ರೈವರ್ ಆಗಿ ನಟಿಸಿದ್ದಾರೆ. ಶಿರಡಿಯಿಂದ ಜರ್ನಿ ಮಾಡುವ ವಿವಾಹಿತ ಜೋಡಿಗಳ ನಡುವೆ ಏನೇನು ನಡೆಯುತ್ತೆ ಅನ್ನೋದು ಕಥೆ.
ರೋಗನ್ ಜೋಶ್
ಸಂಜೀವ್ ವಿಗ್ ನಿರ್ದೇಶನ ಮಾಡಿರುವ ರೋಗನ್ ಜೋಶ್ ಸಿನಿಮಾದಲ್ಲಿ ನಾಸಿರುದ್ಧೀನ್ ಶಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ತನ್ನ 65 ನೇ ಹುಟ್ಟುಹಬ್ಬವನ್ನು ಆಚರಿಸಲು ಔತಣಕೂಟವನ್ನು ಸಿದ್ಧಪಡಿಸುತ್ತಿರುವ ವ್ಯಕ್ತಿಯ ಸಂಭಾಷಣೆ ಕೊನೆಗೆ ಹಾರ್ಟ್ ಬ್ರೇಕ್ ನಲ್ಲಿ ಕೊನೆಯಾಗುತ್ತೆ, ಇದು ಮುಂಬೈ ಉಗ್ರರ ದಾಳಿಗೆ ಸಂಬಂಧಿಸಿದ ಸಿನಿಮಾ. 17 ನಿಮಿಷಗಳ ಕಿರುಚಿತ್ರ ನೀವು ನೋಡಲೇಬೇಕು.
ಪ್ಲಸ್ ಮೈನಸ್
ಟ್ರೈನ್ ಜರ್ನಿಯಲ್ಲಿ ದಿವ್ಯಾ ದತ್ತ ಒಬ್ಬ ಯುವ ಸೈನಿಕನ ಬಳಿ ಮಾತುಕತೆ ನಡೆಸುತ್ತಾಳೆ. ಆದರೆ ಈ ಸಿಂಪಲ್ ಮಾತುಕತೆ, ಮರೆಯಲಾರದ ಕ್ಷಣವಾಗಿ ಬದಲಾಗುತ್ತೆ. ತುಂಬಾನೆ ಸುಂದರವಾದ ಕಥೆ ಇದು, ಮಿಸ್ ಮಾಡದೆ ನೋಡಿ.
ಅನುಜಾ
ಇಬ್ಬರು ಸಹೋದರಿಯರು ದೆಹಲಿಯಲ್ಲಿ ಬಟ್ಟೆ ಸ್ಟಿಚ್ ಮಾಡುತ್ತಿರುತ್ತಾರೆ. ಒಂದು ಬಾರಿ ಟೀಚರ್ ಒಬ್ಬರು ಅನುಜಾ ಟ್ಯಾಲೆಂಟ್ ನೋಡಿ ಆಕೆಗೆ ಅವಕಾಶ ನೀಡುತ್ತಾರೆ. ಈ ಸಿನಿಮಾ ಉತ್ತಮ ವೇತನ ಮತ್ತು ವಿಭಿನ್ನ ಜೀವನ ಇದರಲ್ಲಿ ಅನುಜಾ ಯಾವುದನ್ನು ಆಯ್ಕೆ ಮಾಡುತ್ತಾಳೆ ಅನ್ನೋದು ಕಥೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

