ಕನ್ನಡ ಕಿರುತೆರೆಗೆ ಇನ್ನೊಂದು ಸೀರಿಯಲ್ ಸೇರ್ಪಡೆ ಆಗಲಿದೆ. ರಜನೀಶ್, ಆಶಾ ಅಯ್ಯನರ್ ನಟನೆಯ ಆದಿ ಲಕ್ಷ್ಮೀ ಪುರಾಣ ಧಾರಾವಾಹಿ ಪ್ರಸಾರ ಆಗಲಿದೆ. ಈ ಧಾರಾವಾಹಿ ತಂಡದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಕನ್ನಡ ಕಿರುತೆರೆಯಲ್ಲಿ ಹೊಸದಾಗಿ ಒಂದಿಷ್ಟು ಸೀರಿಯಲ್ಗಳು ಆರಂಭ ಆಗುತ್ತಿವೆ. ಅದರಂತೆ ವಿಭಿನ್ನ ದಿಕ್ಕಿನಲ್ಲಿ ಸಾಗುವ ಇಬ್ಬರ ಪ್ರಯಾಣ 'ಆದಿ ಲಕ್ಷ್ಮಿ ಪುರಾಣ' ಇದೇ ಡಿಸೆಂಬರ್ 8 ರಿಂದ ರಾತ್ರಿ 9 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರ ಆಗಲಿದೆ.
ಈ ಧಾರಾವಾಹಿ ಕಥೆ ಏನು?
ಕನ್ನಡ ಕಿರುತೆರೆಯಲ್ಲಿ ಸದ್ದು ಮಾಡಲು 'ಆದಿಲಕ್ಷ್ಮೀ ಪುರಾಣ' ಧಾರಾವಾಹಿ ಸಿದ್ದವಾಗಿದೆ. ಸಂಪ್ರದಾಯ, ಆಧುನಿಕತೆಯ ಮಧ್ಯೆ ನಿರ್ಮಾಣವಾದ ಹೊಸದಾದ ಕಥೆಯಾಗಿದೆ. ಹಳ್ಳಿ ಹುಡುಗಿ ಲಕ್ಷ್ಮೀ, ಸಿಟಿ ಹುಡುಗ ಆದಿ ನಡುವಿನ ಕಥೆಯನ್ನು ಇಲ್ಲಿ ಇರಲಿದೆ. ಮೊದಲ ಭೇಟಿಯಲ್ಲೇ ಆದಿಯಿಂದ ತಿರಸ್ಕರಿಸಲ್ಪಟ್ಟ ಲಕ್ಷ್ಮಿ ಪುನಃ ಆತನ ಜಗತ್ತಿಗೆ ಮರಳಿ ಬರುತ್ತಾಳೆ. ಅದು ಹೇಗೆ ಎಂದು ಸೀರಿಯಲ್ನಲ್ಲಿಯೇ ನೋಡಬೇಕು.
ಆದಿಯ ಪ್ರೀತಿ ಪಡೆಯಲು ಪರದಾಡುವ ಲಕ್ಷ್ಮೀ ಆತನ ತಾತ ಧರ್ಮರಾಜ್ ಅವರು ನೀಡುವ ಕಠಿಣ ಸವಾಲುಗಳನ್ನು ಎದುರಿಸುತ್ತಾಳೆ. ಮನೆ, ಕಾಲೇಜು ಇವೆರಡರನ್ನು ಲಕ್ಷ್ಮೀ ಹೇಗೆ ಸರಿದೂಗಿಸಿಕೊಂಡು ಹೋಗುತ್ತಾಳೆ ಎಂದು ನೋಡಬೇಕಿದೆ. ಈ ಧಾರಾವಾಹಿಯಲ್ಲಿ ದೊಡ್ಡ ಧಾರಾವಾಹಿ ಬಳಗವೇ ಇದೆ.
ತಾರಾ ಬಳಗದಲ್ಲಿ ಯಾರಿದ್ದಾರೆ?
ರಜನೀಶ್, ಆಶಾ ಅಯ್ಯನರ್ ಅವರು ಆದಿ ಮತ್ತು ಲಕ್ಷ್ಮಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಸಂಜೀವ ಅನ್ನುವ ಒಬ್ಬ ಸಾಧಾರಣ ಹಳ್ಳಿ ಟೀಚರ್ ಮತ್ತು ಅಮೃತಾ, ಸಿಟಿ ಹುಡುಗಿ PHD ಆಕಾಂಕ್ಷಿ, ಇವರಿಬ್ಬರು ಮದುವೆ ಆದ್ಮೇಲೆ ಇವರಿಬ್ಬರ ಬದುಕು ಹೇಗೆ ಬದಲಾಗುತ್ತೆ ಅನ್ನೋ ಕಥೆಯು ಇರಲಿದೆ. ಇನ್ನು ಈ ಧಾರಾವಾಹಿಯಲ್ಲಿ ಮಂಜುನಾಥ ಹೆಗಡೆ, ಅಶೋಕ್ ಶರ್ಮಾ, ರಕ್ಷಿತಾ, ಸುಷ್ಮಾ ನಾಣಯ್ಯ, ಮಾಲತಿ ಸರ್ದೇಶಪಾಂಡೆ, ಕೈಲಾಶ್, ಜ್ಯೋತಿ, ಸವಿತಾ ಕೃಷ್ಣಮೂರ್ತಿ ಮತ್ತು ಭಾಗ್ಯಶ್ರೀ ರಾವ್ ಇದ್ದಾರೆ. ಒಟ್ಟಿನಲ್ಲಿ ಅದ್ಬುತ ನಟನೆ, ಅತ್ಯುತ್ತಮ ತಾರಾಬಳಗ, ವಿಭಿನ್ನ ಕಥೆಯೇ ಆದಿಲಕ್ಷ್ಮೀ ಪುರಾಣದ ಪ್ಲಸ್ ಪಾಯಿಂಟ್.
'ಆದಿಲಕ್ಷ್ಮೀ ಪುರಾಣ' ಸೀರಿಯಲ್ ಕೇವಲ ಸಾಧಾರಣ ಕಥೆಯಾಗಿರದೆ, ನಿಜ ಜೀವನಕ್ಕೆ ಹತ್ತಿರವಾಗಿದ್ದು ಬಹಳ ವಿಭಿನ್ನವಾಗಿದೆ. ಈ ಧಾರಾವಾಹಿಯ ಕಥೆಯ ನೈಜ್ಯತೆ, ಉತ್ತಮ ತಾರಾಬಳಗ, ನಿರ್ದೇಶನ, ಅದ್ಭುತ ಸ್ಥಳಗಳು, ಕಲಾತ್ಮಕವಾಗಿ ವಿನ್ಯಾಸಗೊಳಿಸಿದ ಸೆಟ್ಗಳು ವೀಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವೀ ಆಗಲಿದೆ ಎಂಬ ನಂಬಿಕೆಯಿದೆ. ವಿರುದ್ಧ ದಿಕ್ಕಿನಲ್ಲಿ ಪ್ರಯಾಣಿಸುವವರು ಒಂದಾದರೆ ಏನಾಗಲಿದೆ ಎಂಬುದಕ್ಕೆ ಉತ್ತರ ಮುಂದಿನ ದಿನಗಳಲ್ಲಿ ಸಿಗಲಿದೆ.
ಪ್ರತಿ ದಿನ ರಾತ್ರಿ 9 ಗಂಟೆಗೆ ಪ್ರಸಾರ ಆಗುತ್ತಿದ್ದ ಜನಪ್ರಿಯ ಧಾರಾವಾಹಿ ಶ್ರೀ ರಾಘವೇಂದ್ರ ಮಹಾತ್ಮೆ ಈ ವಾರದಿಂದ ಪ್ರತಿ ಶನಿವಾರ ಮತ್ತು ಭಾನುವಾರ ಸಂಬಜೆ 6 ಗಂಟೆಯಿಂದ 7 ಗಂಟೆಯ ವರೆಗೆ ಪ್ರಸಾರ ಆಗಲಿದೆ.
ಇದೇ ಡಿಸೆಂಬರ್ 8 ರಿಂದ, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:00 ಗಂಟೆಗೆ ‘ಆದಿ ಲಕ್ಷ್ಮೀ ಪುರಾಣ’ ಧಾರಾವಾಹಿ ವೀಕ್ಷಿಸಿ. ‘ಶ್ರೀ ರಾಘವೇಂದ್ರ ಮಹಾತ್ಮೆ’ ಪ್ರತಿ ಶನಿವಾರ, ಭಾನುವಾರ ಸಂಜೆ 6.00 ಗಂಟೆಗೆ ನೋಡಿ.


