- Home
- Entertainment
- TV Talk
- Bhagyalakshmi Serial: ಮೊಂಡು ಹಠದಿಂದ ಮುಗ್ಧ ಹೆಣ್ಣು ಕಷ್ಟದಲ್ಲೇ ಕೈತೊಳೆಯೋ ಹಾಗೆ ಮಾಡಿದ ಕುಸುಮಾ!
Bhagyalakshmi Serial: ಮೊಂಡು ಹಠದಿಂದ ಮುಗ್ಧ ಹೆಣ್ಣು ಕಷ್ಟದಲ್ಲೇ ಕೈತೊಳೆಯೋ ಹಾಗೆ ಮಾಡಿದ ಕುಸುಮಾ!
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ 2 ಮದುವೆಗಳಿಂದ ಭಾರೀ ಸೌಂಡ್ ಮಾಡ್ತಿದೆ. ತಾಂಡವ್ 2 ನೇ ಮದುವೆಯಾದರೆ, ಭಾಗ್ಯ ಕೂಡ 2 ನೇ ಮದುವೆ ಆಗಿದ್ದಾಳೆ. ಈ ಧಾರಾವಾಹಿಯ 2 ಮದುವೆ ಬಗ್ಗೆ ಕೆಲವರಿಗೆ ಬೇಸರ ಆದರೆ, ಇನ್ನೂ ಕೆಲವರಿಗೆ ಭಾಗ್ಯಳಿಗೆ ಒಳ್ಳೆಯ ಜೀವನ ಸಿಕ್ಕಿತು ಎಂಬ ಖುಷಿ ಸಿಕ್ಕಿದೆ.

ಒಲ್ಲದ ಮನಸ್ಸಿನ ಮದುವೆ
ತಾಂಡವ್ ಒಳ್ಳೆಯ ಕೆಲಸ ಹೊಂದಿರೋ, ಮಾಡರ್ನ್ ಹುಡುಗ. ಇಷ್ಟು ವರ್ಷಗಳ ಕಾಲ ತಾಯಿ ಹೇಳಿದಂತೆ ಕೇಳಿದ್ದ ಅವನಿಗೆ, ಮದುವೆ ಕೂಡ ಇಷ್ಟದಂತೆ ಆಗಿರಲಿಲ್ಲ. ಆದರೆ ಭಾಗ್ಯ ಮಾತ್ರ ಓದಿಲ್ಲವಾದರೂ ಕೂಡ ಸಂಸ್ಕಾರವಂತ, ಮುಗ್ಧತೆ ಹೊಂದಿದ್ದಳು. ಗಂಡ ಹೇಳಿದಂತೆ ಕೇಳುವ ಅವಳು ಒಂದು ಹಂತದವರೆಗೆ ಎಲ್ಲ ಕಷ್ಟವನ್ನು ಅನುಭವಿಸ್ತಾಳೆ. ಆಮೇಲೆ ಅವಳು ಗಂಡನ ವಿರುದ್ಧ ಮಾತನಾಡ್ತಾಳೆ.
ಮಕ್ಕಳು ಎಂದರೆ ಇಷ್ಟ
ತಾಂಡವ್‌ಗೆ ಭಾಗ್ಯ ಇಷ್ಟ ಇಲ್ಲ, ಆದರೆ ಮಕ್ಕಳು ಎಂದರೆ ಇಷ್ಟ. ನಾನು ಹಾಳಾದರೂ ಪರವಾಗಿಲ್ಲ, ಭಾಗ್ಯ ಮಾತ್ರ ಚೆನ್ನಾಗಿರಬಾರದು ಎಂದು ಅವನು ಪ್ಲ್ಯಾನ್ ಹಾಕಿದ್ದನು. ಇವನು ಮಾಡಿದ ಮೋಸಕ್ಕೆ ಈಗ ಜೈಲಿನಲ್ಲಿ ಊಟ ಮಾಡ್ತಿದ್ದಾನೆ.
ಭಾಗ್ಯ-ತಾಂಡವ್ ದೂರ ಆದರು
ಈಗ ಭಾಗ್ಯ ತಾಂಡವ್ ದೂರ ಆಗಿದ್ದಾರೆ. ಇವರಿಬ್ಬರಿಗೂ ಬೇರೆ ಮದುವೆ ಆಗಿದೆ. ಭಾಗ್ಯ ಮದುವೆಯನ್ನು ಸಮಾಜ ಒಪ್ಪೋದಿಲ್ಲ, ಇನ್ನು ಗಂಡನ ಮನೆಯಲ್ಲಿ ಬದುಕೋದು ಕೂಡ ಸುಲಭ ಇಲ್ಲ. ಅಂದಹಾಗೆ ತನ್ನ ತಾಯಿ ಎರಡನೇ ಮದುವೆ ಆಗಿರೋದು ತನ್ವಿಗೆ ಇಷ್ಟವೇ ಆಗ್ತಿಲ್ಲ.
ಕುಸುಮಾಳಿಂದ ಹಾಳಾಯ್ತು
ತಂದೆ-ತಾಯಿಗೆ ತನ್ನ ಇಷ್ಟವನ್ನು ಅರ್ಥ ಮಾಡಿಸದೆ ತಾಂಡವ್ ಮದುವೆ ಆಗಿದ್ದನು. ಮಗನ ಇಷ್ಟವನ್ನು ಕೇಳದೆ ಮದುವೆ ಮಾಡಿದ್ದು ನಮ್ಮ ತಪ್ಪು ಎಂದು ಕುಸುಮಾ-ಧರ್ಮರಾಜ್‌ಗೆ ಅರ್ಥವೇ ಆಗಿಲ್ಲ. ಇದರಲ್ಲಿ ತಾಂಡವ್ ತಪ್ಪು ಎಷ್ಟಿದೆಯೋ ಅಷ್ಟೇ ಭಾಗ್ಯ ತಪ್ಪು ಕೂಡ ಇದೆ. ಅಪ್ಪ-ಅಮ್ಮನ ದೂರ ಆದಾಗ, ಇದರ ಪರಿಣಾಮ ಆ ಮಕ್ಕಳ ಜೀವನದ ಮೇಲೂ ಆಗುತ್ತದೆ. ಒಟ್ಟಿನಲ್ಲಿ ಭಾಗ್ಯ ಜೀವನ ಹಾಳಾಯ್ತು. ಈಗ ಮತ್ತೆ ಅವಳು ಬದುಕು ಕಟ್ಟಿಕೊಳ್ಳಬೇಕಿದೆ.
ಎಲ್ಲ ಸರಿ ಹೋಗುತ್ತಾ?
ಕುಸುಮಾ ಮುಂದಾಳತ್ವ ಒಹಿಸಿ, ಈಗ ಭಾಗ್ಯಳಿಗೆ ಇನ್ನೊಂದು ಮದುವೆ ಮಾಡಿಸಿದ್ದಾಳೆ. ಆದರೆ ಅವಳ ಮೊಮ್ಮಕ್ಕಳು ಕೂಡ ಈ ಮದುವೆಯನ್ನು ಒಪ್ಪಬೇಕು, ಎಲ್ಲರೂ ಈ ಮದುವೆಯನ್ನು ಒಪ್ಪಬೇಕು. ಒಂದೇ ಬಾರಿಗೆ ಎಲ್ಲವೂ ಸರಿ ಹೋಗೋದಿಲ್ಲ. ಹೀಗಾಗಿ ಭಾಗ್ಯಗೆ ಮತ್ತೆ ಕಷ್ಟ ಬರಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

