- Home
- Entertainment
- TV Talk
- Bhagyalakshmi Serial: ಧಾರಾವಾಹಿಯಲ್ಲಿ ಜೈಲಿಗೆ..., ರಿಯಲ್ ಲೈಫ್‌ನಲ್ಲಿ ಜಪಾನ್‌ಗೆ; ಸುದರ್ಶನ್ ರಂಗಪ್ರಸಾದ್ TRIP
Bhagyalakshmi Serial: ಧಾರಾವಾಹಿಯಲ್ಲಿ ಜೈಲಿಗೆ..., ರಿಯಲ್ ಲೈಫ್‌ನಲ್ಲಿ ಜಪಾನ್‌ಗೆ; ಸುದರ್ಶನ್ ರಂಗಪ್ರಸಾದ್ TRIP
Actor Sudarshan Rangaprasad: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಜೈಲಿಗೆ ಹೋಗಿರುವ ತಾಂಡವ್ ಪಾತ್ರಧಾರಿ ಸುದರ್ಶನ್ ರಂಗಪ್ರಸಾದ್ ಅವರು ರಿಯಲ್ ಲೈಫ್‌ನಲ್ಲಿ ಜಪಾನ್‌ಗೆ ಭೇಟಿ ಕೊಟ್ಟಿದ್ದಾರೆ. ಇತ್ತೀಚೆಗೆ ಹತ್ತನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಅವರು ಜಪಾನ್‌ನಲ್ಲಿ ಸುಂದರ ಸಮಯ ಕಳೆದಿದ್ದಾರೆ.

ವಿಶೇಷ ಪೋಸ್ಟ್ ಹಂಚಿಕೊಂಡ ಸಂಗೀತಾ ಭಟ್
ಜಪಾನ್‌ನಲ್ಲಿ ಕಳೆದು ಸುಂದರ ಕ್ಷಣಗಳ ಬಗ್ಗೆ ಸುದರ್ಶನ್ ರಂಗಪ್ರಸಾದ್ ಪತ್ನಿಯೂ ಆಗಿರುವ ನಟಿ ಸಂಗೀತಾ ಭಟ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ವಿಶೇಷವಾದ ಪೋಸ್ಟ್ ಜೊತೆಗೆ ಫೋಟೋಗಳು ಕೂಡ ಇವೆ.
ಜಪಾನ್‌ನಲ್ಲಿ ಭೂಕಂಪ
ಜಪಾನ್‌ನಲ್ಲಿ ಆಗುತ್ತಿರುವ ಭೂಕಂಪ, ಜ್ವಾಲಾಮುಖಿ ಸ್ಫೋಟದಂತಹ ನೈಸರ್ಗಿಕ ವಿಕೋಪಗಳಿಂದ ಅಲ್ಲಿನ ಜನರು, ಸಂತ್ರಸ್ತರು ಸುರಕ್ಷಿತವಾಗಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಸಂಗೀತಾ ಭಟ್ ಹೇಳಿದ್ದಾರೆ.
ಆತಿಥ್ಯದ ಬಗ್ಗೆ ಕೇಳಬೇಡಿ, ಸೂಪರ್
ನಮ್ಮ 10ನೇ ಮದುವೆಯ ವಾರ್ಷಿಕೋತ್ಸವದಂದು ಜಪಾನ್ ನಮಗೆ ನೀಡಿದ ಪ್ರೀತಿ, ಅದ್ಭುತ ನೆನಪುಗಳಿಗಾಗಿ ನನ್ನ ಹೃದಯ ತುಂಬಿದ ಕೃತಜ್ಞತೆಗಳು. ಇಂತಹ ಅದ್ಭುತ ವ್ಯಕ್ತಿಗಳು, ಸುಂದರ ಸ್ಥಳಗಳು ಮತ್ತು ಸಂಸ್ಕೃತಿಯ ನಡುವೆ ಕಾಲ ಕಳೆದ ನಾವು ನಿಜಕ್ಕೂ ಧನ್ಯರು. ಅಲ್ಲಿನ ಆತಿಥ್ಯವಂತೂ ಪದಗಳಿಗೆ ನಿಲುಕದ್ದು ಎಂದು ಹೇಳಿದ್ದಾರೆ.
ಊಟ-ತಿಂಡಿ ಸಖತ್ ಆಗಿತ್ತು
ಈ ಪ್ರಯಾಣದುದ್ದಕ್ಕೂ ನಾವು ಬಹಳಷ್ಟು ಹೆಜ್ಜೆಗಳನ್ನು ನಡೆಯಬೇಕಾಯಿತು... ಆದರೂ ಜೊತೆಯಾಗಿ ಸಾಗಿದ ಪ್ರತಿ ಹೆಜ್ಜೆಯನ್ನೂ ನಾವು ಆನಂದಿಸಿದೆವು. ನಮ್ಮ ತಡರಾತ್ರಿಯ 7/11, Lawson ಮತ್ತು Family Mart ಭೇಟಿಗಳನ್ನು ನಾವು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳುತ್ತೇವೆ; ಅಲ್ಲಿನ ಅಸಾಹಿ (Asahi) ಪಾನೀಯ, ಹೃದಯದ ಆಕಾರದಲ್ಲಿ ಪ್ಯಾಕ್ ಮಾಡಿದ ರುಚಿಕರವಾದ ಅಣಬೆ ಕ್ಯಾರೆಟ್ ಅನ್ನದ ರೆಡಿ-ಟು-ಈಟ್ ಫುಡ್ ಬೌಲ್‌ಗಳು ಅತ್ಯುತ್ತಮವಾಗಿದ್ದವು ಎಂದು ಹೇಳಿದ್ದಾರೆ.
ಸಾಕುರಾ ಮರದ ಮಧ್ಯೆ ವೆಡ್ಡಿಂಗ್ ಆನಿವರ್ಸರಿ ಆಚರಣೆ
ನಮ್ಮ ಮದುವೆಯ ವಾರ್ಷಿಕೋತ್ಸವದ ದಿನವನ್ನು ಹಚ್ಚಹಸಿರಿನ ಸಾಕುರಾ (Sakura) ಮರಗಳ ನಡುವೆ, ನದಿಯ ನೋಟವನ್ನು ಸವಿಯುತ್ತಾ, ಕನ್ವೀನಿಯನ್ಸ್ ಸ್ಟೋರ್‌ನ ಆಹಾರ ಮತ್ತು ಪಾನೀಯಗಳೊಂದಿಗೆ ಪಾರ್ಕ್‌ನಲ್ಲಿ ಬಹಳ ಚೆನ್ನಾಗಿ ಕಳೆದವು. ಈ ಸುಂದರ ಸ್ಥಳ ನನ್ನ ಹೃದಯ ಗೆದ್ದಿದೆ ಎಂದು ಅವರು ಹೇಳಿದ್ದಾರೆ.
ವಾಶ್‌ರೂಮ್ ಮಿಸ್ ಮಾಡಿಕೊಳ್ತೀವಿ
ಕೊನೆಯದಾಗಿ, ಅಲ್ಲಿನ ವಾಶ್‌ರೂಮ್‌ಗಳನ್ನಂತೂ (Washrooms) ನಾವು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳುತ್ತೇವೆ ಎಂದು ಸಂಗೀತಾ ಭಟ್ ಹೇಳಿದ್ದಾರೆ.
ಸೀರಿಯಲ್‌ನಲ್ಲಿ ಕಾಣಿಸೋದು ಯಾವಾಗ?
ಸದ್ಯ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಜೈಲಿನಲ್ಲಿದ್ದಾನೆ, ಅಲ್ಲಿಂದ ಯಾವಾಗ ಹೊರಗಡೆ ಬರುತ್ತಾನೆ, ವೀಕ್ಷಕರಿಗೆ ಕಾಣಿಸುತ್ತಾನೆ ಎಂಬ ಪ್ರಶ್ನೆ ಕಾಡುತ್ತಿದೆ.
ಪ್ರವಾಸ ಅಂದ್ರೆ ಖುಷಿ
ಅಂದಹಾಗೆ ಸಂಗೀತಾ ಭಟ್, ಸುದರ್ಶನ್ ರಂಗಪ್ರಸಾದ್ ದಂಪತಿಗೆ ಪ್ರವಾಸ ಅಂದರೆ ತುಂಬ ಇಷ್ಟ. ಆಗಾಗ ಪ್ರವಾಸಗಳಿಗೆ ಹೋಗುತ್ತಿರುತ್ತಾರೆ.
ತಾರಾ ದಂಪತಿ
ಸಂಗೀತಾ ಭಟ್ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ, ಸುದರ್ಶನ್ ಕೂಡ ನಟನೆ, ನಿರ್ದೇಶನ, ಸ್ಟ್ಯಾಂಡ್‌ಪ್ ಕಾಮಿಡಿ ಎಂದು ಬ್ಯುಸಿ ಆಗಿದ್ದವರು. ಮತ್ತೆ ಯಾವಾಗ ತೆರೆ ಮೇಲೆ ಕಾಣಿಸ್ತಾರೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

