- Home
- Entertainment
- TV Talk
- Bhagyalakshmi Serial: ತನ್ವಿಗೆ ತಲೆ ಸರಿ ಇಲ್ಲ ಅಂತ ಬೈಬೇಡಿ; ಯಾರನ್ನೋ ಅಪ್ಪ ಅಂತ ಕರೆಯೋ ಕಷ್ಟ ಯಾರಿಗೂ ಬೇಡ
Bhagyalakshmi Serial: ತನ್ವಿಗೆ ತಲೆ ಸರಿ ಇಲ್ಲ ಅಂತ ಬೈಬೇಡಿ; ಯಾರನ್ನೋ ಅಪ್ಪ ಅಂತ ಕರೆಯೋ ಕಷ್ಟ ಯಾರಿಗೂ ಬೇಡ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಬದುಕಿಗೆ ಹೊಸ ವ್ಯಕ್ತಿ ಆಗಮನವಾಗಿದೆ. ಭಾಗ್ಯ ಈಗ ಆದೀಶ್ವರ್ ಕಾಮತ್ರನ್ನು ಮದುವೆಯಾಗಿದ್ದಾಳೆ. ಇದನ್ನು ತನ್ವಿಗೆ ಸಹಿಸಿಕೊಳ್ಳೋಕೆ ಆಗ್ತಿಲ್ಲ. ತನ್ವಿಗೆ ಬುದ್ಧಿ ಇಲ್ಲ ಎಂದು ಅನೇಕರು ಕಾಮೆಂಟ್ ಮಾಡ್ತಿದ್ದಾರೆ.

ತಾಯಿ ಬಗ್ಗೆ ಯೋಚಿಸೋದಿಲ್ಲ
ಸಮಾಜದಲ್ಲಿ 'ತಾಯಿ' ಅಥವಾ ಅಮ್ಮ ಎಂದರೆ ನಮಗಾಗಿ ಇರೋಳು, ತ್ಯಾಗ, ಮಮತೆ, ಕುಟುಂಬಕ್ಕಾಗಿ ಬದುಕುವ ಒಂದು ಜೀವ ಎಂದುಕೊಳ್ತಾರೆ. ಅವಳನ್ನು ಒಬ್ಬ ವ್ಯಕ್ತಿಯಾಗಿ, ಆಸೆ-ಆಕಾಂಕ್ಷೆವೆ ಎಂದು ಅನೇಕರು ಅಂದುಕೊಳ್ಳೋದಿಲ್ಲ. ತಂದೆ ತೀರಿಕೊಂಡ ಮೇಲೆ ಅಥವಾ ಡಿವೋರ್ಸ್ ಕೊಟ್ಟ ಬಳಿಕ ಅವಳಿಗೆ ಸಂಗಾತಿ ಬೇಕು ಎಂದು ಆಲೋಚಿಸೋದಿಲ್ಲ.
ಮಕ್ಕಳಿಗೆ ಸಹಿಸಿಕೊಳ್ಳೋಕೆ ಆಗೋದಿಲ್ಲ
ಮಕ್ಕಳಿಗೆ ತಂದೆ-ತಾಯಿಯನ್ನು ಒಟ್ಟಿಗೆ ನೋಡಿ ರೂಢಿ ಆಗಿರುವುದು, ಅದರಲ್ಲಿಯೂ ಸ್ವಲ್ಪ ಬುದ್ಧಿ ಬಂತು ಎಂದಾಗ ತಾಯಿ ಜೊತೆಗೆ ಇನ್ನೋರ್ವ ವ್ಯಕ್ತಿಯನ್ನು, ತಂದೆ ಜೊತೆಗೆ ಇನ್ನೋರ್ವ ಮಹಿಳೆಯನ್ನು ನೋಡಲು ಕಷ್ಟ ಆಗುವುದು. ಅದರಲ್ಲಿಯೂ ಪೊಸೆಸ್ಸಿವ್ನೆಸ್ ಬರುವುದು.
ತಾಯಿಗೂ ಸಂಗಾತಿ ಬೇಕು
ತಾಯಿಯನ್ನು ಕೇವಲ ತಾಯಿಯಾಗಿ ನೋಡ್ತೀವಿ ಹೊರತು, ಆಕೆಗೆ ಒಬ್ಬ ಸಂಗಾತಿಯ ಅಗತ್ಯವಿರಬಹುದು ಎಂದು ಯೋಚನೆ ಮಾಡೋದಿಲ್ಲ. ಮತ್ತೊಬ್ಬ ವ್ಯಕ್ತಿ ಬಂದರೆ ನಮ್ಮ ತಂದೆಯ ಸ್ಥಾನಕ್ಕೆ ಧಕ್ಕೆ ಬರಬಹುದು ಅಥವಾ ಅವರ ನೆನಪು ಇರೋದಿಲ್ಲ ಎಂಬ ಭಯ ಆಗುವುದು. ಈ ವಯಸ್ಸಿನಲ್ಲಿ ತಾಯಿ ಅಥವಾ ತಂದೆ ಬೇರೆ ಮದುವೆಯಾದರೆ ಜನರು ಏನು ಅಂದುಕೊಳ್ತಾರೆ ಎನ್ನುವ ಭಯ ಇರುತ್ತದೆ.ಲ
ತಾಯಿ ಬಗ್ಗೆ ಯೋಚನೆ ಮಾಡಿ
ಮಕ್ಕಳು ಬೆಳೆದು ದೊಡ್ಡವರಾಗಿ ತಮ್ಮದೇ ಬದುಕಿನಲ್ಲಿ ಬ್ಯುಸಿಯಾಗುತ್ತಾರೆ. ತಾಯಿ ಮಾತ್ರ ಮಕ್ಕಳ ಆರೈಕೆ ಅಥವಾ ಚಾಕರಿ ಮಾಡಿಕೊಂಡು ಏಕಾಂಗಿತನ ಅನುಭವಿಸುತ್ತಾಳೆ. ಅವಳ ಏಕಾಂತ ಯಾರಿಗೂ ಕಾಣೋದಿಲ್ಲ.
ಸಂಗಾತಿ ಬೇಕು
ವಯಸ್ಸಾದಾಗ ಅಥವಾ ಕಷ್ಟದಲ್ಲಿ ಅಥವಾ ಅವಳ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳಲು ತಾಯಿಗೂ ಕೂಡ ಒಬ್ಬ ಸಂಗಾತಿ ಬೇಕು. ಪ್ರತಿ ಮಾನವನಿಗೆ ಇದರ ಅಗತ್ಯ ಇದೆ. ತಾಯಿ ಕೂಡ ಮನುಷ್ಯಳು, ಅವಳಿಗೂ ಕೂಡ ತನ್ನಿಷ್ಟದಂತೆ ಬದುಕುವ, ಸಂತೋಷವಾಗಿರುವ ಹಕ್ಕಿದೆ. ತಾಯಿ ತನ್ನ ಮಕ್ಕಳಿಗೋಸ್ಕರ ಬದುಕಬೇಕು ಎನ್ನುವ ನಿಯಮ ಇಲ್ಲವೇ ಇಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

