ಸೀರಿಯಲ್ ಬಿಟ್ಟರೂ, ಬಿಡದ ಅತ್ತೆ ಸೊಸೆ ಭಾಂದವ್ಯ… ತುಂಬು ಗರ್ಭಿಣಿ ಮಾನಸ ಜೊತೆ ಅಂಜಲಿ
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಅತ್ತೆ ಸೊಸೆಯಾಗಿ ನಟಿಸುತ್ತಿದ್ದ ಅಂಜಲಿ ಹಾಗೂ ಮಾನಸ ಮನೋಹರ್ ಸೀರಿಯಲ್ ಬಿಟ್ಟ ಬಳಿಕವೂ ಉತ್ತಮ ಭಾಂದವ್ಯ ಹೊಂದಿದ್ದು, ತುಂಬು ಗರ್ಭಿಣಿ ಮಾನಸಾಗಾಗಿ ರುಚಿಕರ ಊಟ ತಯಾರಿಸಿ ತಂದಿದ್ದಾರೆ ಹಿರಿಯ ನಟಿ ಅಂಜಲಿ.

ಲಕ್ಷ್ಮೀ ನಿವಾಸದ ಅತ್ತೆ ಸೊಸೆ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಅತ್ತೆ ಸೊಸೆಯಾಗಿ ನಟಿಸುತ್ತಿದ್ದ ನಟರು ಹಿರಿಯ ನಟಿ ಅಂಜಲಿ ಮತ್ತು ಮಾನಸ ಮನೋಹರ್. ಮಾನಸ ಮರಿಗೌಡ್ರ ಹೆಂಡ್ತಿ ನೀಲೂ ಆಗಿ ನಟಿಸಿದ್ರೆ, ಅಂಜಲಿ ಮರಿ ಗೌಡ, ಸಿಂಚನಾ, ಸಿದ್ಧೆ ಗೌಡರ ಅಮ್ಮನಾಗಿ, ಜವರೇ ಗೌಡ್ರ ಪತ್ನಿಯಾಗಿ ನಟಿಸುತ್ತಿದ್ದರು.
ಸೀರಿಯಲ್ ಬಿಟ್ಟಮೇಲೂ ಬಿಡ ಭಾಂದವ್ಯ
‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಅತ್ತೆ ಸೊಸೆ ಭಾಂದವ್ಯ ಉತ್ತಮವಾಗಿದ್ದು, ಸೀರಿಯಲ್ ಹೊರಗೂ ಕೂಡ ಇಬ್ಬರು ಜೊತೆಯಾಗಿ ಸಿಕ್ಕಾಪಟ್ಟೆ ರೀಲ್ಸ್ ಮಾಡುತ್ತಿದ್ದರು. ಇದೀಗ ಇಬ್ಬರೂ ಕೂಡ ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಆದರೂ ಇಬ್ಬರ ಭಾಂದವ್ಯ ಹಾಗೆಯೇ ಇದೆ.
ನಾನು ಇಷ್ಟಪಡುವ ವ್ಯಕ್ತಿ ಎಂದ ಮಾನಸ
ನಾನು ಇಷ್ಟಪಡುವ ವ್ಯಕ್ತಿ ಅಂಜಲಿ ಅಮ್ಮ ನಮ್ಮ ಮನೆಯಲ್ಲಿ. ನೀವು ಇಲ್ಲಿ ಬಂದಿರೋದಕ್ಕೆ ತುಂಬಾನೆ ಧನ್ಯವಾದಗಳು, ಜೊತೆಗೆ ರುಚಿಯಾದ ಊಟ ತಂದಿದ್ದಕ್ಕೆ ಥ್ಯಾಂಕ್ಯೂ, ಲವ್ ಯೂ ಎಂದು ಮಾನಸ ಮನೋಹರ್ ಬರೆದುಕೊಂಡಿದ್ದು, ನಟಿ ಅಂಜಲಿ ಜೊತೆಗಿನ ಫೋಟೊಗಳನ್ನು ಶೇರ್ ಮಾಡಿದ್ದಾರೆ.
ಮಾನಸ ಸೀಮಂತದಲ್ಲೂ ಭಾಗಿಯಾಗಿದ್ದ ಅಂಜಲಿ
ನಟಿ ಅಂಜಲಿ ಸುಧಾಕರ್ ಅವರು ಮಾನಸ ಮನೋಹರ್ ಅವರ ಸೀಮಂತ ಶಾಸ್ತ್ರದಲ್ಲೂ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ಮಾನಸ ಹಿರಿಯ ನಟಿಯ ಜೊತೆಗಿನ ಭಾಂದವ್ಯದ ಕುರಿತು ಮಾಹಿತಿ ಹಂಚಿಕೊಂಡಿದ್ದರು. “ನಟನೆ ನನ್ನ ಪ್ಯಾಶನ್, ಆದರೆ ಅದನ್ನು ವೃತ್ತಿಯಾಗಿ ನಿರ್ವಹಿಸಿದಾಗ, ಸೆಟ್‌ನಲ್ಲಿನ ಪ್ರತಿಯೊಂದು ಬಂಧವು ಪರ್ಸನಲ್ ಆಗುವುದಿಲ್ಲ. ಅನೇಕರು ಸಹೋದ್ಯೋಗಿಗಳಾಗಿ ಉಳಿಯುತ್ತಾರೆ, ಕೆಲವರು ಸ್ನೇಹಿತರಾಗುತ್ತಾರೆ - ಮತ್ತು ಬಹಳ ವಿರಳವಾಗಿ, ಯಾರಾದರೂ ಕುಟುಂಬವಾಗುತ್ತಾರೆ. ‘ಅಂಜಲಿ ಅಮ್ಮ ನನ್ನ ಪ್ರಯಾಣದಲ್ಲಿ ಅಪರೂಪದ ಆಶೀರ್ವಾದ ’
ಅಂಜಲಿ ಅಮ್ಮ ನನ್ನ ಕುಟುಂಬವೇ ಆಗಿದ್ದಾರೆ
ಲಕ್ಷ್ಮಿ ನಿವಾಸ ಚಿತ್ರೀಕರಣದ ಸಹ-ನಟರಿಂದ ಪ್ರಾರಂಭವಾದದ್ದು ನಿಧಾನವಾಗಿ ಹೆಚ್ಚು ಆಳವಾದ ಮತ್ತು ಲೈಫ್ ಲಾಂಗ್ ಸಂಬಂಧವಾಗಿ ಬದಲಾಯಿಸಿತು. ನಾವು ಸೆಟ್‌ನಲ್ಲಿ ನಿರ್ಮಿಸಿದ ಬಂಧವು ಕ್ಯಾಮೆರಾವನ್ನು ಮೀರಿ ಸುಂದರವಾಗಿ ವಿಸ್ತರಿಸಿದೆ. ಒಬ್ಬ ಮಹಿಳೆಯಾಗಿ, ನಂತರ ನಟಿಯಾಗಿ ಅವರು ನನಗೆ ನೀಡಿದ ಬೆಂಬಲ ನನ್ನ ವೈಯಕ್ತಿಕ ಮತ್ತು ವೃತ್ತಿಪರ ಹಂತಗಳಲ್ಲಿ ನೀಡಿದ ಮಾರ್ಗದರ್ಶನ, ನಾನು ಶಾಶ್ವತವಾಗಿ ಪಾಲಿಸುತ್ತೇನೆ. ಈ ಒಂದು ಧಾರಾವಾಹಿಯ ಮೂಲಕ ನಾನು ಕೇವಲ ಒಬ್ಬ ಸಹನಟಿ ಅಥವಾ ಸ್ನೇಹಿತೆಯನ್ನು ಪಡೆಯಲಿಲ್ಲ... ನನಗೆ ಒಬ್ಬ ಕುಟುಂಬ ಸದಸ್ಯರು ಸಿಕ್ಕಿದ್ದಕ್ಕೆ ನಾನು ತುಂಬಾ ಕೃತಜ್ಞಳಾಗಿದ್ದೇನೆ ಎಂದು ಮಾನಸ ಮನೋಹರ್ ಹೇಳಿದ್ದರು.
ತುಂಬು ಗರ್ಭಿಣಿ ಮಾನಸ
ಮಾನಸ ಮನೋಹರ್ ತುಂಬು ಗರ್ಭಿಣಿಯಾಗಿತ್ತು, ಮೇ ತಿಂಗಳಲ್ಲಿ ಡೆಲಿವರಿ ಡೇಟ್ ನೀಡಲಾಗಿದೆ. ಹಾಗಾಗಿ ಮಾನಸ ತಮ್ಮ ಗರ್ಭಾವಸ್ಥೆಯ ಕೊನೆಯ ಘಟ್ಟಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಟಿ ಅಂಜಲಿಯವರು, ಮಾನಸಾಗೆ ಇಷ್ಟವಾಗುವ ರುಚಿಕರವಾದ ಅಡುಗೆ ಮಾಡಿ, ಮನೆಗೆ ಬಂದು ಯೋಗ ಕ್ಷೇಮ ವಿಚಾರಿಸಿದ್ದಕ್ಕೆ ನಟಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

