- Home
- Entertainment
- TV Talk
- Bhagyalakshmi: ಶ್ರೇಷ್ಠಾ ನೀಚತನ ಬಯಲಾಯ್ತು! ಭಾಗ್ಯ-ಆದಿ ಒಂದಾಗೋ ಹೊತ್ತಲ್ಲೇ ತಾಂಡವ್ ಬಾಳಲ್ಲಿ ಬಿರುಗಾಳಿ!
Bhagyalakshmi: ಶ್ರೇಷ್ಠಾ ನೀಚತನ ಬಯಲಾಯ್ತು! ಭಾಗ್ಯ-ಆದಿ ಒಂದಾಗೋ ಹೊತ್ತಲ್ಲೇ ತಾಂಡವ್ ಬಾಳಲ್ಲಿ ಬಿರುಗಾಳಿ!
ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ, ಶ್ರೇಷ್ಠಾಳ ಕುತಂತ್ರವನ್ನು ಮಗಳು ತನ್ವಿ ತನ್ನ ತಂದೆ ತಾಂಡವ್ ಎದುರು ಬಯಲು ಮಾಡಿದ್ದಾಳೆ. ಇನ್ನೊಂದೆಡೆ, ಭಾಗ್ಯ ಮತ್ತು ಆಕೆಯ ಗಂಡನನ್ನು ಒಂದು ಮಾಡಲು ಹೊರಟ ಆದಿಗೆ ಸತ್ಯ ತಿಳಿದಿಲ್ಲ, ಆದರೆ ಕುಸುಮಾ ಆದಿ ಮತ್ತು ಭಾಗ್ಯಳನ್ನು ಒಂದು ಮಾಡಲು ಯೋಜನೆ ರೂಪಿಸುತ್ತಿದ್ದಾಳೆ.

ರೋಚಕ ತಿರುವಿನಲ್ಲಿ ಭಾಗ್ಯಲಕ್ಷ್ಮಿ
ಭಾಗ್ಯಲಕ್ಷ್ಮಿ (Bhagyalakshmi Serial) ಇದೀಗ ರೋಚಕ ತಿರುವಿನತ್ತ ಸಾಗಿದೆ. ಭಾಗ್ಯ ಮತ್ತು ಆದಿಯನ್ನು ಒಂದು ಮಾಡಲು ಕುಸುಮಾ ಹರಸಾಹಸ ಪಡುತ್ತಿದ್ದಾಳೆ. ಅಷ್ಟಕ್ಕೂ ಆದಿ ಮತ್ತು ಭಾಗ್ಯರಿಗೆ ಒಬ್ಬರ ಮೇಲೊಬ್ಬರಿಗೆ ಇನ್ನೂ ಲವ್ ಏನೂ ಶುರುವಾಗಿಲ್ಲ. ಭಾಗ್ಯ ಕಂಡರೆ ಆದಿಗೆ ಅದೇನೋ ಸೆಳೆತ, ಒಂಥರಾ ಪ್ರೀತಿ ಅಷ್ಟೇ.
ಭಾಗ್ಯಳನ್ನು ಗಂಡನ ಬಳಿ ಸೇರಿಸುವೆ ಎಂದ ಆದಿ
ಭಾಗ್ಯಳ ಗಂಡ ಯಾರು, ಏಕೆ ಡಿವೋರ್ಸ್ ಆಗಿದ್ದು ಎಂದು ತಿಳಿಯುವ ಕುತೂಹಲ ಆದಿಗೆ. ಆದರೆ ಅದನ್ನು ನೇರವಾಗಿ ಕೇಳುವ ಧೈರ್ಯ ಅವನಿಗೆ ಇಲ್ಲ. ಹೋಗಿ ಹೋಗಿ ಶ್ರೇಷ್ಠಾಳ ಎದುರೇ ಭಾಗ್ಯ ಮತ್ತು ಗಂಡನನ್ನು ಒಂದು ಮಾಡುತ್ತೇನೆ ಎಂದಿದ್ದಾನೆ ಆದಿ. ಇದನ್ನು ಕೇಳಿ ಶ್ರೇಷ್ಠಾಳಿಗೆ ಶಾಕ್ ಆಗಿ, ಆತ ಬೇರೆ ಮದುವೆಯಾಗಿದ್ದರೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾಳೆ.
ತಾಂಡವ್ ವಿರುದ್ಧ ಆದಿ ಮಾತು
ಅದಕ್ಕೆ ಆದಿ, ಇದನ್ನು ನೋಡಿದರೇನೇ ತಿಳಿಯುತ್ತದೆ, ತಾಂಡವ್ ಎಷ್ಟು ಕೆಟ್ಟ ಮನುಷ್ಯ ಹಾಗೂ ಆತನನ್ನು ಮದುವೆಯಾದವಳು ಇನ್ನೆಷ್ಟು ಕೆಟ್ಟವಳು ಎಂದು ಹೇಳಿದಾಗ ಶ್ರೇಷ್ಠಾಳ ಮೈಯೆಲ್ಲಾ ಉರಿದು ಹೋಗಿದೆ.
ವಾಪಸಾದ ತನ್ವಿ
ಅದೇ ಇನ್ನೊಂದೆಡೆ, ತನ್ವಿಯನ್ನು ತನ್ನ ವಶದಲ್ಲಿ ಇಟ್ಟುಕೊಳ್ಳಲು ಶ್ರೇಷ್ಠಾ ಎಲ್ಲಾ ಪ್ರಯತ್ನ ಮಾಡಿದ್ದಳು. ಆದರೆ, ತನ್ವಿಗೆ ಶ್ರೇಷ್ಠಾಳ ಮೋಸದಾಟ ತಿಳಿದು ವಾಪಸ್ ಮನೆಗೆ ಬಂದಿದ್ದಾಳೆ.
ಕೆಟ್ಟವಳೆಂದು ಸಾಬೀತು
ಶ್ರೇಷ್ಠಾ ಒಳ್ಳೆಯವಳ್ಳ ಎಂದು ತಾಂಡವ್ಗೆ ಮಗಳೇ ಬುದ್ಧಿ ಹೇಳಿದ್ರೂ ಅದನ್ನು ಆತ ಕೇಳಲು ರೆಡಿ ಇರಲಿಲ್ಲ. ಕೊನೆಗೆ ಫೋನ್ ಕಾಲ್ನಲ್ಲಿಯೇ ಶ್ರೇಷ್ಠಾ ಎಷ್ಟು ಕೆಟ್ಟವಳು ಎನ್ನುವುದನ್ನು ಸಾಬೀತು ಮಾಡಿದ್ದಾಳೆ ತನ್ವಿ. ತನ್ವಿ ತನ್ನಮಗಳಂತೆ ಎಂದು ತಾಂಡವ್ ಎದುರು ನಾಟಕ ಆಡ್ತಿರೋ ಶ್ರೇಷ್ಠಾಳ ಮುಖವಾಡ ತಾಂಡವ್ ಎದುರು ಕಳಚಿ ಬಿದ್ದಿದೆ.
ಅಪ್ಪನಿಗೆ ತನ್ವಿ ಪಾಠ
ಅದೇ ಇನ್ನೊಂದೆಡೆ, ತನ್ವಿ ಕೂಡ ಪಪ್ಪಾ ನೀವು ತುಂಬಾ ಒಳ್ಳೆಯವರು. ಆದರೆ ಶ್ರೇಷ್ಠಾ ಆಂಟಿ ಜೊತೆ ಸೇರಿ ಹೀಗೆ ಆಗಿದ್ದೀರಿ. ಆಕೆಯ ಸಹವಾಸ ಮಾಡಬೇಡಿ ಎಂದಿದ್ದಾಳೆ. ಈಗ ಅದನ್ನು ಸಾಬೀತು ಕೂಡ ಮಾಡಿದ್ದಾಳೆ.
ಕುಸುಮಾ ಪ್ಲ್ಯಾನ್
ಹಾಗಿದ್ರೆ ತಾಂಡವ್ ವಾಪಸ್ ಭಾಗ್ಯಳ ಬಳಿ ಬರ್ತಾನಾ? ಆದಿ ಮತ್ತು ಭಾಗ್ಯಳ ಮದುವೆ ಮಾಡಲು ಪ್ಲ್ಯಾನ್ ಹಾಕ್ತಿರೋ ಕುಸುಮಾಳ ಮುಂದಿನ ನಡೆ ಏನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

