- Home
- Entertainment
- TV Talk
- Bigg Boss ಡಾಗ್ ಸತೀಶ್ ಮಗನಿಗೆ ಭಾರತದ 2ನೇ ಹೀರೋ ಪಟ್ಟ? ಖುದ್ದು ಪುತ್ರ ಹರ್ಷ ಹೇಳಿದ್ದೇನು?
Bigg Boss ಡಾಗ್ ಸತೀಶ್ ಮಗನಿಗೆ ಭಾರತದ 2ನೇ ಹೀರೋ ಪಟ್ಟ? ಖುದ್ದು ಪುತ್ರ ಹರ್ಷ ಹೇಳಿದ್ದೇನು?
ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್ ತಮ್ಮ ಮಗ ಹರ್ಷನನ್ನು ಇಂಡಿಯಾದ ನಂಬರ್ 2 ಹೀರೋ ಮಾಡುವ ಕನಸಿನ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ, ಅಪ್ಪನ ದೊಡ್ಡ ಮಾತುಗಳಿಗೆ ನಾಚಿಕೆ ಸ್ವಭಾವದ ಹರ್ಷ ಪ್ರತಿಕ್ರಿಯಿಸಿದ್ದು, ಅಪ್ಪನಿಗೆ ಒಳ್ಳೆಯ ಹೆಸರು ತರಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.

ಡಾಗ್ ಸತೀಶ್ ಹವಾ
ಬಿಗ್ಬಾಸ್ (Bigg Boss)ನಲ್ಲಿ ಇದ್ದ ಮೂರೇ ವಾರಗಳಲ್ಲಿ ಸಕತ್ ಹವಾ ಸೃಷ್ಟಿಸಿದವರು ಡಾಗ್ ಸತೀಶ್. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ನಾಯಿಗಳನ್ನು ಸಾಕುವ ಮೂಲಕ ಅವರ ಫೇಮಸ್ ಆಗಿದ್ದಾರೆ. ಸಹಜವಾಗಿ ಬಿಗ್ಬಾಸ್ನಿಂದ ಹೊರಕ್ಕೆ ಬಂದ ಮೇಲೆ ಅವರ ಲೆವೆಲ್ ಇನ್ನೂ ಒಂದು ಹಂತ ಮೇಲೆ ಹೋಗಿದೆ.
ದಾಂಪತ್ಯ ಕಲಹ
ಪ್ರತಿ ಸಂದರ್ಶನದಲ್ಲಿಯೂ ಡಾಗ್ ಸತೀಶ್ ಅವರು ತಮ್ಮನ್ನು ತಾವು ಹ್ಯಾಂಡ್ಸಮ್. ವಯಸ್ಸಾಗುತ್ತಾ ಇನ್ನೂ ಚಿಕ್ಕವನಾಗುತ್ತಿದ್ದೇನೆ. ಇದಕ್ಕಾಗಿಯೇ ತುಂಬಾ ಹುಡುಗಿಯರು ನನ್ನ ಹಿಂದೆ ಇಂದಿಗೂ ಬೀಳ್ತಿದ್ದಾರೆ ಎನ್ನುತ್ತಲೇ ಇದ್ದಾರೆ. ಅಂದಹಾಗೆ, ಇವರ ಮತ್ತು ಪತ್ನಿಯ ನಡುವಿನ ಕೇಸ್ ಕೋರ್ಟ್ನಲ್ಲಿ ಬಾಕಿ ಇದೆ. ನಾನು ನೋಡಲು ತುಂಬಾ ಸ್ಮಾರ್ಟ್ ಆಗಿರುವ ಬೇರೆ ಮದ್ವೆಯಾಗುತ್ತೇನೆ ಎಂದು ಅವಳು ಡಿವೋರ್ಸ್ ಕೊಡಲ್ಲ, ಆದರೆ ಕೋಟಿ ಕೋಟಿ ದುಡ್ಡಿಗಾಗಿ ಬೇಡಿಕೆ ಇಟ್ಟಿದ್ದಾಳೆ ಎಂದಿದ್ದಾರೆ ಡಾಗ್ ಸತೀಶ್.
ಮಗನ ಬಗ್ಗೆ ದೊಡ್ಡ ಕನಸು
ಅದೇ ಇನ್ನೊಂದೆಡೆ, ಮಗ ಡಾಗ್ ಸತೀಶ್ ಬಳಿಯೇ ಇದ್ದು, ಆತನ ಬಗ್ಗೆ ದೊಡ್ಡ ಕನಸನ್ನು ಕಟ್ಟಿಕೊಂಡಿದ್ದಾರೆ ಅಪ್ಪ. ನನ್ನ ಮಗನೇ ನನಗೆ ಜೀವ, ತಾಯಿ ಇಲ್ಲದಿದ್ರೂ ಅವನನ್ನ ಅಷ್ಟು ಚೆನ್ನಾಗಿ ಸಾಕಿದ್ದೇನೆ. ಅವನನ್ನು ಇಂಡಿಯಾಕ್ಕೆ ನಂಬರ್ 2 ಹೀರೋ ಮಾಡಬೇಕು ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಮಿಸ್ಟರ್ ಹ್ಯಾಡ್ಸಮ್
ನಂಬರ್ ಒನ್ ಮಾಡಿದ್ರೆ ದುರಹಂಕಾರ ಬರುತ್ತೆ, ಹಾಗಾಗಿ ನಂಬರ್ 2 ಹೀರೋ ಮಾಡ್ತೇನೆ. ಅವನಿಗೆ ಈಗಾಗಲೇ ಲಕ್ಷ ಲಕ್ಷ ಹುಡುಗಿಯರು ಫ್ಯಾನ್ಸ್ ಇದ್ದಾರೆ. ಅವನಿಗೆ ಮಿಸ್ಟರ್ ಹ್ಯಾಡ್ಸಮ್ ಅಂತ ಅವಾರ್ಡ್ ಎಲ್ಲ ಬಂದಿದೆ ಎಂದು ಹೇಳಿದ್ದಾರೆ. ಇದೀಗ ಈ ಬಗ್ಗೆ ಖುದ್ದು ಮಗ ಹರ್ಷನನ್ನು ಮಾತನಾಡಿಸಿದ್ದಾರೆ ಆ್ಯಂಕರ್ ಪೂಜಾ.
ನಾಚಿಕೆ ಸ್ವಭಾವ
ಹರ್ಷ ತುಂಬಾ ನಾಚಿಕೆ ಸ್ವಭಾವದವ ಎಂದು ತಿಳಿಯುತ್ತದೆ. ತನ್ನನ್ನು ಹಾಡಿ ಹೊಗಳಿ ಅಪ್ಪ ಹೇಳಿದ ಮಾತುಗಳು ಬಹುಶಃ ಹರ್ಷ ಕೇಳಿಸಿಕೊಂಡ ಹಾಗಿಲ್ಲ. ಆದ್ದರಿಂದ ಲಕ್ಷ ಲಕ್ಷ ಹುಡುಗಿಯರ ಫ್ಯಾನ್ಸ್, ಅದೂ ಇದೂ ಹೇಳಿದಾಗ ತಬ್ಬಿಬ್ಬಾಗಿದ್ದಾರೆ.
ನಂ.2 ಹೀರೋ ಆಗಿ ಎಂಟ್ರಿ
ಕೊನೆಗೆ ನಂ.2 ಹೀರೋ ಆಗಿ ಮಾಡುತ್ತೇನೆ ಎಂದಿದ್ದಾರೆ, ಏನನಿಸುತ್ತದೆ ಹೇಳಿದಾಗ, ನಾನು ಆ ಬಗ್ಗೆ ಟ್ರೈ ಮಾಡುತ್ತೇನೆ. ಸಾಧ್ಯವಾದಷ್ಟು ಮಟ್ಟಿಗೆ ಪ್ರಯತ್ನಿಸಿ, ಅಪ್ಪನಿಗೆ ಒಳ್ಳೆಯ ಹೆಸರು ತರುತ್ತೇನೆ ಎಂದಿದ್ದಾರೆ. ತನ್ನ ಫೆಮರೆಟ್ ಹೀರೋ ಯಶ್ ಎಂದಿರೋ ಹರ್ಷ, ಅಪ್ಪನನ್ನು ಪ್ರೌಡ್ ಮಾಡುತ್ತೇನೆ ಎಂದಿದ್ದಾರೆ.
ಹುಡುಗಿಯರ ಬಗ್ಗೆ ಹೇಳಿದ್ದೇನು?
ಎಷ್ಟೋ ಲಕ್ಷ ಹುಡುಗಿಯರು ಹಿಂದೆ ಬಿದ್ದಿದ್ದಾರೆ ಅಂತ ಅಪ್ಪ ಹೇಳಿದ್ರು ಹೌದಾ ಎಂದಾಗ ಹರ್ಷ, ಹಾಗೇನಿಲ್ಲ. ಕಾಂಪ್ಲಿಮೆಂಟ್ಸ್ ಸಿಗತ್ತೆ ಅಷ್ಟೇ. ಕಾಲೇಜ್ ಅಂದ ಮೇಲೆ ಅದೆಲ್ಲಾ ಇರುತ್ತೆ ಎಂದು ಸ್ವಲ್ಪ ಇರುಸು ಮುರುಸಿನಲ್ಲಿಯೇ ಉತ್ತರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

