- Home
- Entertainment
- TV Talk
- Bigg Boss ಮನೆಯಲ್ಲೇ ನಟಿಯ ಮದ್ವೆ, ಅಲ್ಲೇ ಫಸ್ಟ್ನೈಟ್ ! ಹೊರಬಂದು ಬೇರೆಯವರ ಜೊತೆ ವಿವಾಹ-ಈಕೆ ಸ್ಟೋರಿ ಕೇಳಿ
Bigg Boss ಮನೆಯಲ್ಲೇ ನಟಿಯ ಮದ್ವೆ, ಅಲ್ಲೇ ಫಸ್ಟ್ನೈಟ್ ! ಹೊರಬಂದು ಬೇರೆಯವರ ಜೊತೆ ವಿವಾಹ-ಈಕೆ ಸ್ಟೋರಿ ಕೇಳಿ
ಹಿಂದಿ ಬಿಗ್‌ಬಾಸ್ ಸೀಸನ್ 4ರಲ್ಲಿ ಅಲಿ ಮರ್ಚೆಂಟ್‌ರನ್ನು ಮದುವೆಯಾಗಿದ್ದ ನಟಿ ಸಾರಾ ಖಾನ್, ಶೋ ಮುಗಿದ ಕೆಲವೇ ದಿನಗಳಲ್ಲಿ ವಿಚ್ಛೇದನ ಪಡೆದಿದ್ದರು. ಇದೀಗ 15 ವರ್ಷಗಳ ಬಳಿಕ, ಸಾರಾ ಖಾನ್ ತಮಗಿಂತ ನಾಲ್ಕು ವರ್ಷ ಚಿಕ್ಕವರಾದ ನಟ ಮತ್ತು ನಿರ್ಮಾಪಕ ಕ್ರಿಶ್ ಪಾಠಕ್ ಅವರನ್ನು ರಹಸ್ಯವಾಗಿ ಮದುವೆಯಾಗಿದ್ದಾರೆ.

ಬಿಗ್‌ಬಾಸ್ ಎಂಬ ವಿಚಿತ್ರ ಲೋಕ...
ಬಿಗ್ ಬಾಸ್ ಮನೆಯಲ್ಲಿ ಜಗಳ, ಕಿತ್ತಾಟ, ಲವ್, ಅಸಭ್ಯ ವರ್ತನೆಗಳು, ಒಂದಿಷ್ಟ ಅಶ್ಲೀಲತೆ ಎಲ್ಲವೂ ಕಾಮನ್. ಇದು ಎಲ್ಲಾ ಭಾಷೆಗಳ ಬಿಗ್‌ಬಾಸ್‌ನಲ್ಲಿಯೂ ನೋಡಬಹುದು. ಅದೇ ರೀತಿ, ಹಿಂದಿಯ ಬಿಗ್‌ಬಾಸ್ ಸೀಸನ್ 4ರಲ್ಲಿ ಸ್ಪರ್ಧಿಗಳಾಗಿದ್ದ ಕಿರುತೆರೆ ನಟಿ ಸಾರಾ ಖಾನ್ ಮತ್ತು ಅಲಿ ಮರ್ಚೆಂಟ್ ಬಿಗ್‌ಬಾಸ್ ಮನೆಯಲ್ಲಿಯೇ ಪ್ರೀತಿ ಮಾಡಿ, ಅಲ್ಲಿಯೇ ಮದುವೆಯನ್ನೂ ಮಾಡಿಕೊಂಡಿದ್ದರು. ಬಿಗ್‌ಬಾಸ್ ಮನೆಯಲ್ಲಿನ ಇವರ ಪ್ರೀತಿ ಕಂಡು ಎಂಥ ಜೋಡಿ ಆಹಾ ಎಂದವರೇ ಬಹುತೇಕ ಮಂದಿ. ಇದ್ದರೆ ಈ ರೀತಿಯ ಜೋಡಿ ಇರಬೇಕು ಎಂದರು. ಈ ಮದುವೆಯಾದ ಮೇಲೆ ಇಬ್ಬರೂ ಸಕತ್ ಫೇಮಸ್ ಆದರು.
ಫಸ್ಟ್ನೈಟ್ ಏರ್ಪಾಟು
ವಿಶೇಷ ಎಂದರೆ, ಮದುವೆ ನಂತರ ಇಬ್ಬರ ಫಸ್ಟ್ ನೈಟ್ ಕೂಡ ಬಿಗ್‌ಬಾಸ್ ಮನೆಯಲ್ಲಿಯೇ ನಡೆಸಲಾಗಿತ್ತು. ಒಟ್ಟಿನಲ್ಲಿ ಬಿಗ್‌ಬಾಸ್ ಟಿಆರ್ಪಿ ಸುರ್ರನೆ ಏರಿಕೆಯಾಗಿತ್ತು. ಆದರೆ ಹೊರಕ್ಕೆ ಬರುತ್ತಿದ್ದಂತೆಯೇ 2011 ರಲ್ಲಿ ಸಾರಾ ಖಾನ್ ಮತ್ತು ಅಲಿ ಮರ್ಚೆಂಟ್ ಪರಸ್ಪರ ವಿಚ್ಛೇದನ ಪಡೆದರು.
ಮತ್ತೊಂದು ಮದುವೆ
ಐದು ವರ್ಷ ಮದ್ವೆಯಾಗದೇ ಉಳಿದ ಅಲಿ 2016ರಲ್ಲಿ ಅನಮ್ ಎನ್ನುವವರನ್ನು ಮದುವೆಯಾದರು. ಆದರೆ ಅದೂ ಅವರಿಗೆ ಸರಿ ಹೊಂದಲಿಲ್ಲ. ಕೆಲವೇ ತಿಂಗಳಿನಲ್ಲಿ ದಂಪತಿ ಬೇರ್ಪಟ್ಟು ಹೊಸ ಹುಡುಗಿಯ ತಲಾಷ್‌ನಲ್ಲಿ ತೊಡಗಿದರು ಅಲಿ ಮರ್ಚೆಂಟ್. ಕೊನೆಗೆ ಗೆಳತಿ ಆಂಡ್ಲೀಬ್ ಜೈದಿ ಅವರೊಂದಿಗೆ ಮದುವೆಯಾದರು. ಆಂಡ್ಲೀಬ್ ಹೈದರಾಬಾದ್ ಮೂಲದ ಮಾಡೆಲ್ ಆಗಿದ್ದಾರೆ.
15 ವರ್ಷಗಳ ಬಳಿಕ ಮದುವೆ
ಅದೇ ಇನ್ನೊಂದೆಡೆ, ಸಾರಾ ಖಾನ್ ಕೂಡ ವೃತ್ತಿಯಲ್ಲಿ ಪೈಲಟ್ ಆಗಿರುವ ಶಾಂತನು ರಾಜೆ ಅವರೊಂದಿಗೆ ಸಂಬಂಧವನ್ನು ಹೊಂದಿದರು. ಆದರೆ ಈ ಸಂಬಂಧವೂ ಈಗ ಮುರಿದು ಬಿದ್ದಂತೆ ಕಾಣುತ್ತಿದೆ. 15 ವರ್ಷಗಳ ಬಳಿಕ ಈಗ ಸಾರಾ ಖಾನ್ ''ಯೇ ಜುಕಿ ಜುಕಿ ಸಿ ನಜರ್'' ಖ್ಯಾತಿಯ ನಟ ಮತ್ತು ನಿರ್ಮಾಪಕ ಕ್ರಿಶ್ ಪಾಠಕ್ ಅವರನ್ನು ಮದುವೆಯಾಗಿದ್ದಾರೆ. ಸೀಕ್ರೇಟ್ ಆಗಿ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದಾರೆ.
ಸೀರಿಯಲ್ ಕುರಿತು...
ಇನ್ನು ಈ ಜೋಡಿ ಕುರಿತು ಹೇಳುವುದಾದರೆ, ಸಾರಾ ಖಾನ್‌ಗೆ ಈಗ 36 ವರ್ಷವಾದರೆ ಕ್ರಿಶ್ ಪಾಠಕ್‌ಗೆ ಈಗ 32ರ ಹರೆಯ. ಇದರ ಅರ್ಥ ಕ್ರಿಶ್ ನಾಲ್ಕು ವರ್ಷ ಚಿಕ್ಕವರು. ಇನ್ನು ಸಾರಾ ಖಾನ್ ''ಲೈಫ್ ಓಕೆ''.. ''ಜುನೂನ್- ಐಸಿ ನಪ್‌ರಥ್ ತೋ ಕೈಸಾ ಇಷ್ಕ್''.. ''ಸಸುರಾಲ್ ಸಿಮರ್ ಕಾ''.. ಹೀಗೆ ಹಲವು ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಪ್ನಾ ಬಾಬುಲ್ ಕಾ.. ಬಿದಾಯಿ'' ಧಾರಾವಾಹಿ ಭಾರೀ ಜನಪ್ರಿಯತೆಯನ್ನು ತಂದು ಕೊಟ್ಟ ಸೀರಿಯಲ್.
ಹೊಟ್ಟೆಯಲ್ಲಿ ಚಿಟ್ಟೆ
ಈ ಮದುವೆಯ ಕುರಿತು ನಟಿ ಮಾಧ್ಯಮವೊಂದಕ್ಕೆ ಸಂದರ್ಶನವನ್ನೂ ನೀಡಿದ್ದಾರೆ. ಕ್ರಿಶ್ನನ್ನು ನೋಡಿ ನನ್ನ ಹೊಟ್ಟೆಯಲ್ಲಿ ಚಿಟ್ಟೆಗಳು ಹಾರಾಡುತ್ತಿದ್ದವು. ತಾಳ್ಮೆಯಿಂದ ಕಾದಾಗ ನಿಮ್ಮ ಬದುಕಿನಲ್ಲಿ ಸರಿಯಾದ ವ್ಯಕ್ತಿ ಬರುತ್ತಾನೆ ಎನ್ನುವುದು ನನ್ನ ಜೀವನದಲ್ಲಿ ಸಾಬೀತಾಗಿದೆ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

