- Home
- Entertainment
- TV Talk
- Bigg Boss: 'ಜುಂ ಜುಂ ಮಾಯಾ, ಪ್ರಾಯ ಬಂದ್ರೆ..' ಗಿಲ್ಲಿ- ಅಶ್ವಿನಿ ರೊಮಾನ್ಸ್, ಕಾವ್ಯಾನ ಕಣ್ಣು ಮುಚ್ರಪ್ಪೋ ಪ್ಲೀಸ್
Bigg Boss: 'ಜುಂ ಜುಂ ಮಾಯಾ, ಪ್ರಾಯ ಬಂದ್ರೆ..' ಗಿಲ್ಲಿ- ಅಶ್ವಿನಿ ರೊಮಾನ್ಸ್, ಕಾವ್ಯಾನ ಕಣ್ಣು ಮುಚ್ರಪ್ಪೋ ಪ್ಲೀಸ್
ಬಿಗ್‌ಬಾಸ್ ಮನೆಯಲ್ಲಿ ಹಾವು-ಮುಂಗುಸಿಗಳಂತಿದ್ದ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಇದೀಗ 'ಜುಂ ಜುಂ ಮಾಯಾ' ಹಾಡಿಗೆ ರೊಮ್ಯಾಂಟಿಕ್ ಆಗಿ ಡಾನ್ಸ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಈ ಸಮಯದಲ್ಲಿ ಕಾವ್ಯಾ ಶೈವ ಅವರ ಮುಖಭಾವ ಬದಲಾಗಿರುವುದನ್ನು ನೋಡಬಹುದು.

ಹಾವು-ಮುಂಗುಸಿ
ಬಿಗ್‌ಬಾಸ್ (Bigg Boss)ನಲ್ಲಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಹಲವಾರು ಬಾರಿ ಹಾವು ಮುಂಗುಸಿ ರೀತಿ ವರ್ತಿಸುವುದು ಉಂಟು. ಸ್ಪರ್ಧೆ ಎಂದ ಮೇಲೆ ಎಲ್ಲರೂ ಎದುರಾಳಿಗಳೇ ಆಗಿರೋ ಕಾರಣ, ಇದು ಅನಿವಾರ್ಯ ಕೂಡ ಹೌದು ಅನ್ನಿ.
ತದ್ವಿರುದ್ಧ ಗುಣ
ಅದೇ ರೀತಿ ಅಶ್ವಿನಿ ಗೌಡ ಜಗಳದಿಂದಲೇ ಬಿಗ್‌ಬಾಸ್ ಟಿಆರ್ಪಿ ಏರಿಸುತ್ತಿದ್ದರೆ, ಗಿಲ್ಲಿ ನಟ (Bigg Boss Gilli Nata) ಹಾಸ್ಯದಿಂದ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಒಟ್ಟಿನಲ್ಲಿ ಇವರಿಬ್ಬರದ್ದೂ ತದ್ವಿರುದ್ಧ ಗುಣ.
ರೊಮಾಂಟಿಕ್ ಡಾನ್ಸ್
ಆದರೆ ಇದೀಗ ಕುತೂಹಲ ಎನ್ನುವಂತೆ ಅಶ್ವಿನಿ ಗೌಡ (Bigg Boss Ashwni Gowda) ಮತ್ತು ಗಿಲ್ಲಿ ನಟ ಇಬ್ಬರೂ ರೊಮಾಂಟಿಕ್ ಆಗಿ ಡಾನ್ಸ್ ಮಾಡಿದ್ದಾರೆ.
ಜುಂ ಜುಂ ಮಾಯಾ
ವೀರ ಮದಕರಿ ಚಿತ್ರದ ಜುಂ ಜುಂ ಮಾಯಾ ಜುಂ ಜುಂ ಮಾಯಾ. ಪ್ರಾಯ ಬಂದ್ರೆ ಏನಿದು ಮಾಯಾ... ಹಾಡಿಗೆ ಇಬ್ಬರೂ ಸಕತ್ ರೊಮಾಂಟಿಕ್ ಸ್ಟೆಪ್ ಹಾಕಿದ್ದಾರೆ.
ಅಯ್ಯೋ ಕಾವ್ಯಾ
ಈ ಸಮಯದಲ್ಲಿ, ಗಿಲ್ಲಿ ನಟನ ಸ್ನೇಹಿತೆ ಎಂದೇ ಬಿಂಬಿತವಾಗಿರುವ ಕಾವ್ಯಾ ಶೈವ (Bigg Boss Kavya Shaiva) ಮುಖದಲ್ಲಿನ ಬದಲಾವಣೆ ಕೂಡ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಕಾವ್ಯಾ ಫ್ಯಾನ್ಸ್ ಅಯ್ಯೋ ಕಾವ್ಯಾ ಎಂದು ತಮಾಷೆ ಮಾಡುತ್ತಿದ್ದಾರೆ.
ಅಶ್ವಿನಿ ಗೌಡ ದಿಗಿಲು
ಹಾಡಿನ ಕೊನೆಯಲ್ಲಿ ಅಶ್ವಿನಿ ಗೌಡ ಅವರನ್ನು ಗಿಲ್ಲಿ ನಟ ಎತ್ತುಕೊಂಡೇ ಬಿಟ್ಟಿದ್ದಾರೆ. ಆ ಕ್ಷಣದಲ್ಲಿ ಅಶ್ವಿನಿ ಅವರು ದಿಗಿಲಾಗಿದ್ದು ಕಾಣಿಸುತ್ತದೆ. ಆದರೆ ಸರಿಯಾಗಿ ಎತ್ತಿಕೊಂಡು ಅಶ್ವಿನಿ ಅವರನ್ನು ಬಚಾವ್ ಮಾಡಿದ್ದಾರೆ ಗಿಲ್ಲಿ ನಟ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

