- Home
- Entertainment
- TV Talk
- Bigg Boss ಚೈತ್ರಾ, ಪ್ರತಿ ಶುಕ್ರವಾರ ಹುಷಾರ್ ತಪ್ಪೋದು ಯಾಕೆ? ಕಿಡಿ ಹಚ್ಚಿ ಮಜಾ ತಗೊಂಡ ಗಿಲ್ಲಿ- ರಜತ್
Bigg Boss ಚೈತ್ರಾ, ಪ್ರತಿ ಶುಕ್ರವಾರ ಹುಷಾರ್ ತಪ್ಪೋದು ಯಾಕೆ? ಕಿಡಿ ಹಚ್ಚಿ ಮಜಾ ತಗೊಂಡ ಗಿಲ್ಲಿ- ರಜತ್
ಬಿಗ್ ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ಗಿಲ್ಲಿ ನಟ, ರಜತ್ ಮತ್ತು ಚೈತ್ರಾ ಕುಂದಾಪುರ ನಡುವೆ ಜಗಳಕ್ಕೆ ಕಿಡಿ ಹಚ್ಚಿದ್ದಾರೆ. ರಜತ್ ಅವರು ಗಿಲ್ಲಿ ನಟನನ್ನು ಬಳಸಿಕೊಂಡು ಚೈತ್ರಾ ಅವರನ್ನು ಕೆರಳಿಸುತ್ತಿದ್ದು, ಇದು ಮನೆಯಲ್ಲಿ ಹೊಸ ಗಲಾಟೆಗೆ ಕಾರಣವಾಗಿದೆ

ಗಿಲ್ಲಿ ನಟನ ಸೌಂಡ್
ಬಿಗ್ ಬಾಸ್ ಗಿಲ್ಲಿ ನಟ (Bigg Boss) ಸೌಂಡ್ ದಿನದಿಂದ ದಿನಕ್ಕೆ ಮನೆಯಲ್ಲಿ ಹೆಚ್ಚಾಗ್ತನೇ ಇದೆ. ತಮಾಷೆ ತಮಾಷೆ ಮೂಲಕವೇ ಈಗ ಜಗಳ ಹಚ್ಚುವ ಮಟ್ಟಿಗೂ ಬಂದುಬಿಟ್ಟಿದ್ದಾರೆ ಗಿಲ್ಲಿ ನಟ.
ಜಗಳದಿಂದ ಫೇಮಸ್
ಹೇಳಿಕೇಳಿ ರಜತ್ ಮತ್ತು ಚೈತ್ರಾ ಕುಂದಾಪುರ ಜಗಳಗಂಟರು ಎಂದೇ ಫೇಮಸ್ ಆದೋರು. ಇದೇ ಕಾರಣಕ್ಕೆ ಬಿಗ್‌ಬಾಸ್ ಟಿಆರ್ಪಿಗಾಗಿ ಇವರಿಬ್ಬರನ್ನೂ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡಿಸಿ ಇನ್ನೂ ಇಟ್ಟುಕೊಳ್ಳಲಾಗಿದೆ ಎಂದೇ ಸೋಷಿಯಲ್ ಮೀಡಿಯಾದಲ್ಲಿ ಹೇಳಲಾಗ್ತಿದೆ.
ಕಿಡಿ ಹಚ್ಚಿದ ಗಿಲ್ಲಿ
ಇದೀಗ ರಜತ್ ಮತ್ತು ಚೈತ್ರಾ ಕುಂದಾಪುರ ಅವರ ನಡುವೆಯೇ ಕಿಡಿ ಹಚ್ಚಿದ್ದಾರೆ ಗಿಲ್ಲಿ ನಟ. ನೋಡಿ ಈಗ ಕೀಲಿ ಕೊಟ್ರೆ ಕಿಟಾರ್ ಅಂತಾರೆ ಎನ್ನುತ್ತಲೇ ಇಬ್ಬರ ನಡುವೆ ಜಗಳ ಹಚ್ಚಿದ್ರೆ ಮನೆಮಂದಿಯೆಲ್ಲಾ ಖುಷಿ ಪಟ್ಟುಕೊಂಡಿದ್ದಾರೆ.
ಚೈತ್ರಾ-ರಜತ್ ಜಗಳಕ್ಕೆ ಗಿಲ್ಲಿನೇ ಸೇತುವೆ
ಚೈತ್ರಾ-ರಜತ್ ಜಗಳಕ್ಕೆ ಗಿಲ್ಲಿನೇ ಸೇತುವೆ ಆಗಿದ್ದಾರೆ ಎನ್ನುವ ಶೀರ್ಷಿಕೆ ಜೊತೆ ಇದರ ಪ್ರೊಮೋ ಬಿಡುಗಡೆ ಮಾಡಲಾಗಿದೆ. ಅಷ್ಟಕ್ಕೂ, ಈ ಇಂದೆ ರಜತ್ ಮತ್ತು ಗಿಲ್ಲಿ ನಡುವೆಯೂ ಜಗಳವಾಗಿತ್ತು, ಜೊತೆಗೆ ರಜತ್ ಹಾಗೂ ಚೈತ್ರಾ ನಡುವೆ ಕೂಡ ಸಾಕಷ್ಟು ವೇಳೆ ಜಟಾಪಟಿಯಾಗಿದೆ.
ಚೈತ್ರಾಗೆ ಕೌಂಟರ್
ಇದು ಯಾವ ಹಂತಕ್ಕೆ ಹೋಗಿದೆ ಎಂದ್ರೆ, ಚೈತ್ರಾ ಮತ್ತು ರಜತ್ ನಡುವೆ ಕೌಟುಂಬಿಕ ವಿಷ್ಯದಲ್ಲಿಯೂ ಜಗಳ ವಿಪರೀತವಾಗಿತ್ತು. ಈಗ ಇದನ್ನೇ ಮುಂದುಮಾಡಿಕೊಂಡು ಗಿಲ್ಲಿ ನಟ ಅವರನ್ನು ಇಟ್ಟುಕೊಂಡು ರಜತ್ ಚೈತ್ರಾ ಅವರನ್ನ ಉರಿಸುತ್ತಿದ್ದಾರೆ.
ಕೀ ಕೊಟ್ರೆ ಸಾಕು...
ಅಷ್ಟಕ್ಕೂ ಈಗ ಜಗಳ ಶುರುವಾಗುತ್ತೆ ನೋಡಿ ಎಂದು ಗಿಲ್ಲಿ ನಟ ಹೇಳಿದ್ದಾರೆ. ಕೀ ಕೊಟ್ಟರೆ ಸಾಕು ಚೈತ್ರಾ ಕಿಟಾರ್ ಅಂತ ಕಿರುಚುತ್ತಾರೆ. ಹೋದ ಸೀಸನ್ ಬರೀ ಬಾಯಿ ಮಾತೇ ಒಂದು ಗೆದ್ದಿಲ್ಲ. ಏಳು ಸಲ ಕಳಪೆ ತಳ್ಳಿದ್ದು ಇದಕ್ಕೆ ಅಂತ ರಜತ್ ಅಂತಿದ್ದಾರೆ. ಶುಕ್ರವಾರ ಬಂದರೆ ಸಾಕು ಹುಷಾರ್ ತಪ್ತಾ ಇದ್ಯಂತೆ ಏಕೆ ಎಂದು ಪ್ರಶ್ನಿಸಿದ್ದಾರೆ.
ಬಾಯಿಯಿಂದ ಬಂದಿದ್ದೇನೆ..
ಆಗ ಗಿಲ್ಲಿ ಈಗ ಹುಷಾರ್ ತಪ್ಪಲ್ಲ, ತಪ್ಪಿಸ್ತೀನಿ ಕಣೋ ಎಂದು ಕಿರುಚಾಡಿದ್ದಾರೆ. ಬಾಯಿಯಿಂದ ಬಂದಿದ್ದೀನಿ. ಬಾಯಿಯಿಂದಲೇ ಗೆಲ್ತೀನಿ ಅಂತ ಹೇಳಿದ್ದಾರೆ. ನಾನು ಹುಷಾರು ತಪ್ಪಿಸೋಕೆ ಬಂದಿದ್ದೀನಿ ಅಂತ ಕೂಗಾಡಿದ್ದಾರೆ.
ಮನೆ ಮಂದಿಗೆ ಕಾಮಿಡಿ
ಗಿಲ್ಲಿ ನಟನ ಕಾಮಿಡಿಗೆ ಮನೆಮಂದಿ ಬಿದ್ದು ಬಿದ್ದು ನಕ್ಕಿದ್ದಾರೆ. ಸೀಕ್ರೆಟ್ ರೂಮ್ನಲ್ಲಿ ಇರೋ ರಕ್ಷಿತಾ ಮತ್ತು ಧ್ರುವಂತ್ ಕೂಡ ಜೋರಾಗಿ ನಕ್ಕಿದ್ದಾರೆ. ಒಟ್ಟಿನಲ್ಲಿ ರಜತ್ ಮತ್ತು ಗಿಲ್ಲಿ ನಟ ಕಿತ್ತಾಡಿಕೊಳ್ತಿದ್ರೂ, ಇದೀಗ ಗಿಲ್ಲಿಯನ್ನೇ ಮುಂದೆ ಇಟ್ಟುಕೊಂಡು ಚೈತ್ರಾ ಕುಂದಾಪುರ ಅವರ ಹೊಟ್ಟೆ ಉರಿಸಿದ್ದಾರೆ ರಜತ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

