- Home
- Entertainment
- TV Talk
- Bigg Boss ಅಬ್ಬಬ್ಬಾ, ಕೊನೆಗೂ ಸುದೀಪ್ ಎದುರೇ ಕಾವ್ಯಾಗೆ ಪ್ರಪೋಸ್ ಮಾಡಿದ ಗಿಲ್ಲಿ- ಮದ್ವೆ ಊಟ ಯಾವಾಗ?
Bigg Boss ಅಬ್ಬಬ್ಬಾ, ಕೊನೆಗೂ ಸುದೀಪ್ ಎದುರೇ ಕಾವ್ಯಾಗೆ ಪ್ರಪೋಸ್ ಮಾಡಿದ ಗಿಲ್ಲಿ- ಮದ್ವೆ ಊಟ ಯಾವಾಗ?
ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರ ತಮಾಷೆಯ ಲವ್ಸ್ಟೋರಿ ಜನಪ್ರಿಯವಾಗಿದೆ. ಇತ್ತೀಚೆಗೆ, ನಿರೂಪಕ ಸುದೀಪ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ, ಗಿಲ್ಲಿ ನಟ ಕವನದ ಮೂಲಕ ಕಾವ್ಯಾಗೆ ಪ್ರೇಮ ನಿವೇದನೆ ಮಾಡಿ, ಎಲ್ಲರಿಗೂ ಮತ್ತು ಕಾವ್ಯಾಗೆ ಶಾಕ್ ನೀಡಿದ್ದಾರೆ.

ಗಿಲ್ಲಿ-ಕಾವ್ಯಾ ಲವ್ಸ್ಟೋರಿ
ಬಿಗ್ಬಾಸ್ನಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಲವ್ಸ್ಟೋರಿ ವೀಕ್ಷಕರಿಗೆ ಗೊತ್ತೇ ಇದೆ. ಇದೇನು ಸೀರಿಯಲ್ ಲವ್ಸ್ಟೋರಿ ಅಲ್ಲ. ಬದಲಿಗೆ ಗಿಲ್ಲಿ ನಟ (Bigg Boss Gilli Nata) ಅವಕಾಶ ಸಿಕ್ಕಾಗಲೆಲ್ಲಾ ಕಾವ್ಯಾರನ್ನು ಕಿಚಾಯಿಸುತ್ತಲೇ ಇರುತ್ತಾರೆ. ಇದಕ್ಕಾಗಿಯೇ ಈ ಜೋಡಿ ಎಂದರೆ ಅಭಿಮಾನಿಗಳಿಗೆ ಇನ್ನಿಲ್ಲದ ಇಷ್ಟ.
ಆರೋಪ
ಕಾವ್ಯಾ ಶೈವ (Bigg Boss Kavya Shaiva) ಗಿಲ್ಲಿ ನಟನಿಗಾಗಿಯೇ ಬಿಗ್ಬಾಸ್ನಲ್ಲಿ ಇದುವರೆಗೂ ಉಳಿದುಕೊಂಡಿರೋದು, ಗಿಲ್ಲಿಯ ರಕ್ಷಣೆ ಆಕೆಯ ಮೇಲೆ ಇದೆ ಎಂದು ಬಿಗ್ಬಾಸ್ನಿಂದ ಹೊರಕ್ಕೆ ಬಂದಿರುವ ಸ್ಪರ್ಧಿಯೊಬ್ಬರು ಆರೋಪಿಸಿದ್ದೂ ಇದೆ. ಅದೇನೇ ಇದ್ದರೂ ಈ ಜೋಡಿಯ ತಮಾಷೆಯ ಲವ್ ಮ್ಯಾಟರ್ ವೀಕ್ಷಕರಿಗೆ ಇಷ್ಟವಾಗುತ್ತಿದೆ ಅಷ್ಟೇ.
ಅಶ್ವಿನಿ ಗೌಡ ಜೊತೆ ಡಾನ್ಸ್
ಕೆಲವು ದಿನಗಳ ಹಿಂದೆ ಗಿಲ್ಲಿ ನಟ, ಅಶ್ವಿನಿ ಗೌಡ (Bigg Boss Ashwini Gowda) ಅವರ ಜೊತೆ ರೊಮಾಂಟಿಕ್ ಆಗಿ ಡಾನ್ಸ್ ಮಾಡಿದ್ದರು. ಯಾರ ಜೊತೆ ಡಾನ್ಸ್ ಮಾಡಬೇಕು ಎಂದು ಅವರನ್ನು ಪ್ರಶ್ನಿಸಿದ್ದಾಗ ಅಶ್ವಿನಿ ಗೌಡ ಅವರ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದರು.
ಗಿಲ್ಲಿಗೆ ಸುದೀಪ್ ಪ್ರಶ್ನೆ
ಈ ಬಗ್ಗೆ ಕಿಚ್ಚ ಸುದೀಪ್ ಗಿಲ್ಲಿ ನಟನನ್ನು ಪ್ರಶ್ನಿಸಿದ್ದಾರೆ. ನೀವು ಡಾನ್ಸ್ ಮಾಡಲು ಅಶ್ವಿನಿ ಗೌಡ ಅವರನ್ನು ಆಯ್ಕೆ ಮಾಡಿಕೊಂಡ್ರಿ, ಕಾವ್ಯಾರನ್ನು ಯಾಕಿಲ್ಲ ಎಂದು. ಇಷ್ಟು ಕೇಳುತ್ತಿದ್ದಂತೆಯೇ ಗಿಲ್ಲಿ ಕವನವನ್ನು ಹೇಳುವ ಮೂಲಕ ಸುದೀಪ್ ಎದುರೇ ಕಾವ್ಯಾ ಶೈವ ಅವರನ್ನು ಪ್ರಪೋಸ್ ಮಾಡಿಬಿಟ್ಟಿದ್ದಾರೆ.
ಗಿಲ್ಲಿ ರಾಕ್, ಕಾವ್ಯಾ ಶಾಕ್
ಬಿಗ್‌ಬಾಸ್ ಮನೆಯಲ್ಲಿ ಇವಳೊಟ್ಟಿಗೆ ಕಳೆದದ್ದೆಲ್ಲಾ ಸುಂದರ ಸಮಯ, ಏನವಳ ನಾಜೂಕು- ನಯ- ವಿನಯ, ಪ್ರೀತಿ ಹೇಳಲು ಇನ್ನು ನನಗೇಕೆ ಭಯ? ಓ ನನ್ನ ಕಾವ್ಯಾ, ಕೊನೆವರೆಗೂ ಜೊತೆಯಲ್ಲಿ ಇರುವಿಯಾ ಎಂದಾಗ ಕಾವ್ಯಾ ಶಾಕ್ ಆಗಿದ್ದಾರೆ. ಇದನ್ನು ನೋಡಿದ ಗಿಲ್ಲಿ ಫ್ಯಾನ್ಸ್ ಸೋ ಸ್ವೀಟ್ ಎಂದಿದ್ದು, ಮದ್ವೆ ಊಟ ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

