- Home
- Entertainment
- TV Talk
- ಕಾವ್ಯಾ, ಗಗನ, ಯಶು... ಯಾರು Bigg Boss ಗಿಲ್ಲಿ ಹೆಂಡ್ತಿಯಾಗ್ಬೇಕು ಕೇಳಿದಾಗ ಚಿಕ್ಕಪ್ಪ ಹೇಳಿದ್ದೇನು?
ಕಾವ್ಯಾ, ಗಗನ, ಯಶು... ಯಾರು Bigg Boss ಗಿಲ್ಲಿ ಹೆಂಡ್ತಿಯಾಗ್ಬೇಕು ಕೇಳಿದಾಗ ಚಿಕ್ಕಪ್ಪ ಹೇಳಿದ್ದೇನು?
ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ನಡುವಿನ ಸ್ನೇಹ ಎಲ್ಲರ ಗಮನ ಸೆಳೆಯುತ್ತಿದೆ. ಕಾವ್ಯಾಗೆ ಸದಾ ಬೆಂಬಲವಾಗಿ ನಿಲ್ಲುವ ಗಿಲ್ಲಿಯನ್ನು ಸುದೀಪ್ ಕೂಡ ತಮಾಷೆ ಮಾಡುತ್ತಾರೆ. ಇದೀಗ, ಗಿಲ್ಲಿಯವರ ಚಿಕ್ಕಪ್ಪ, ತಮ್ಮ ಮನೆಗೆ ಸೊಸೆಯಾಗಿ ಕಾವ್ಯಾ ಬರಲಿ ಎಂದು ತಮ್ಮ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಗಿಲ್ಲಿ ಹವಾ
ಸದ್ಯ ಬಿಗ್ಬಾಸ್ (Bigg Boss)ನಲ್ಲಿ ಗಿಲ್ಲಿ ನಟ ಹವಾ ಜೋರಾಗಿಯೇ ನಡೆಯುತ್ತಿದೆ. ಸದ್ಯ ಕಾವ್ಯಾ ಶೈವ ಮತ್ತು ಗಿಲ್ಲಿ ನಡುವೆ ಲವ್ ಶುರುವಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದೇನು ನಿಜಕ್ಕೂ ಪ್ರೀತಿ-ಪ್ರೇಮ ಏನೂ ಅಲ್ಲ. ಇವರಿಬ್ಬರೂ ತುಂಬಾ ಕ್ಲೋಸ್ ಸ್ನೇಹಿತರು ಅಷ್ಟೇ. ಆದರೂ ಇವರಿಬ್ಬರನ್ನು ಆಡಿಕೊಳ್ಳಲಾಗುತ್ತಿದೆ. ಎಂಥ ಸಂದರ್ಭದಲ್ಲಿ ಕೂಡ ಕಾವ್ಯ ಅವರನ್ನು ಗಿಲ್ಲಿ ಬಿಟ್ಟುಕೊಡುವುದಿಲ್ಲ.
ಗಿಲ್ಲಿಯಿಂದ ಸಪೋರ್ಟ್
ಮಿಡ್ ಸೀಸನ್ ಫಿನಾಲೆ ತಲುಪಲು ಬಿಗ್ ಬಾಸ್ ಸರಣಿ ಟಾಸ್ಕ್ ನೀಡುತ್ತಿದ್ದ ಸಂದರ್ಭದಲ್ಲಿಯೂ ಇವರ ಫ್ರೆಂಡ್ಷಿಪ್ ತಿಳಿದಿತ್ತು. ಆಗ ಕಾವ್ಯಾ ಶೈವ ಮತ್ತು ರಾಶಿಕಾ ಶೆಟ್ಟಿ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಬಹುತೇಕರು ರಾಶಿಕಾ ಶೆಟ್ಟಿಗೆ ಬೆಂಬಲ ನೀಡಿದರು. ಕಾವ್ಯ ಶೈವ ಅವರಿಗೆ ಕೆಲವರ ಬೆಂಬಲ ಮಾತ್ರ ಸಿಕ್ಕಿತು. ನಿರೀಕ್ಷೆಯಂತೆ ಗಿಲ್ಲಿ ನಟ ಅವರು ಕಾವ್ಯ ಪರವಾಗಿಯೇ ನಿಂತವರು.
ರಾಶಿಕಾ ಶೆಟ್ಟಿಗೆ ಗೆಲುವು
ಈ ಟಾಸ್ಕ್ನಲ್ಲಿ ರಾಶಿಕಾ ಶೆಟ್ಟಿಗೆ ಗೆಲುವಾಗಿತ್ತು. ಅದು ಗಿಲ್ಲಿ ಅವರಿಗೆ ನೋವು ತಂದಿತ್ತು. ‘ಇಷ್ಟು ದಿನ ಎಲ್ಲರೂ ನಿನ್ನ ಜೊತೆ ಚೆನ್ನಾಗಿದ್ದರು. ಈಗ ಬಂದು ರಾಶಿಕಾಗೆ ಸಪೋರ್ಟ್ ಮಾಡಿದರು. ಅದು ನನಗೆ ಉರಿಯಿತು’ ಎಂದು ಗಿಲ್ಲಿ ನಟ ಹೇಳಿದ್ದರು. ಹೀಗಿದೆ ಅವರ ಸ್ನೇಹ.
ಸುದೀಪ್ ತಮಾಷೆ
ಇದೇ ಕಾರಣಕ್ಕೆ ಸುದೀಪ್ (Sudeep) ಕೂಡ ಹಲವು ಬಾರಿ ಇವರಿಬ್ಬರ ಬಗ್ಗೆ ತಮಾಷೆ ಮಾಡುವುದು ಇದೆ. ಬಲವಂತವಾಗಿ ಕಾವ್ಯನ ಕೈಯಿಂದ ರಾಖಿ ಕಟ್ಟಿಸಲಾಗಿತ್ತು. ಅದಕ್ಕಾಗಿಯೇ ಸುದೀಪ್ ಅವರು ಗಿಲ್ಲಿ ನಿಮ್ಮ ತಂಗಿ ಕಾವ್ಯಾ ಎಲ್ಲಿ ಎಂದು ಜೋಕ್ ಮಾಡುತ್ತಿರುತ್ತಾರೆ.
ಕಾವ್ಯಾ ಹೆಸರು
ಇದೀಗ, ಗಿಲ್ಲಿ ನಟ ಅವರ ಚಿಕ್ಕಪ್ಪನವರಿಗೆ ಒಂದು ಪ್ರಶ್ನೆ ಎದುರಾಗಿದೆ. ನಿಮ್ಮ ಮನೆಗೆ ಸೊಸೆಯಾಗಿ ಯಾರು ಬರಬೇಕು ಎಂದು ಪ್ರಶ್ನಿಸಲಾಗಿದ್ದು, ಕಾವ್ಯಾ, ಗಗನ, ಯಶು ಮೂವರ ಹೆಸರನ್ನು ಹೇಳಲಾಗಿದೆ. ಆರಂಭದಲ್ಲಿ ಅವನ ಆಯ್ಕೆ ಎಂದಿದ್ದಾರೆ. ಕೊನೆಗೆ ಚಿಕ್ಕಪ್ಪ ಕಾವ್ಯಾ ಹೆಸರು ಹೇಳಿದ್ದಾರೆ.
ಅವನ ಇಷ್ಟ ಎಂದ ಚಿಕ್ಕಪ್ಪ
ಅವನು ಈಗ ಸೆಲೆಬ್ರಿಟಿ. ಮೊದಲಾಗಿದ್ದರೆ ನಾವೇ ಇಂಥವಳನ್ನು ಮದ್ವೆಯಾಗು ಎನ್ನಬಹುದಿತ್ತು. ಆದರೆ ಈಗ ಅವನ ಇಷ್ಟ. ಹಳ್ಳಿ ಹುಡುಗಿಯನ್ನೇ ಆಗಲೀ, ಪೇಟೆಯವರೇ ಆಗಲಿ, ಯಾರನ್ನಾದರೂ ಆಗಲಿ. ಅವನಿಗಿನ್ನೂ 25 ವರ್ಷ ವಯಸ್ಸು. ಮದ್ವೆಯಾದ್ರೆ ಬೇರೆಲ್ಲಾ ಜವಾಬ್ದಾರಿ ಬರುತ್ತೆ. ಮೊದಲು ಹೆಸರು ಮಾಡಲಿ ಎಂದಿದ್ದಾರೆ. ಇದನ್ನು ಕನ್ನಡ ಫಿಲ್ಮಿನ್ಯೂಸ್ ಶೇರ್ ಮಾಡಿದ್ದು, ಅದರ ಲಿಂಕ್ಗಾಗಿ ಈ ಕೆಳಗೆ ಕ್ಲಿಕ್ ಮಾಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

