- Home
- Entertainment
- TV Talk
- ಬಿಗ್ ಬಾಸ್ ಸ್ಪರ್ಧಿ ಮನೆ ಮೇಲೆ 25 ಬಾರಿ ಗುಂಡಿನ ದಾಳಿ ಮಾಡಿ, ಎಚ್ಚರಿಕೆ ಕೊಟ್ಟು ಹೋದ ಉಗ್ರರು! ಕಾರಣ ಏನು?
ಬಿಗ್ ಬಾಸ್ ಸ್ಪರ್ಧಿ ಮನೆ ಮೇಲೆ 25 ಬಾರಿ ಗುಂಡಿನ ದಾಳಿ ಮಾಡಿ, ಎಚ್ಚರಿಕೆ ಕೊಟ್ಟು ಹೋದ ಉಗ್ರರು! ಕಾರಣ ಏನು?
ಯೂಟ್ಯೂಬರ್, ಬಿಗ್ ಬಾಸ್ ಹಿಂದಿ ಓಟಿಟಿ ವಿಜೇತ ಎಲ್ವಿಶ್ ಯಾದವ್ ಗುರ್‌ಗಾಂವ್‌ನಲ್ಲಿರುವ ಮನೆಯ ಮೇಲೆ ಗುಂಡಿನ ದಾಳಿ ನಡೆದಿದೆ. ಇದಕ್ಕೆ ಕಾರಣ ಏನು? ನಿಜಕ್ಕೂ ಏನಾಯ್ತು?

ಇಂದು ಬೆಳಿಗ್ಗೆ ( ಆಗಸ್ಟ್ 8 ರಂದು ) 5 ಗಂಟೆಗೆ ಮುಖವಾಡ ಧರಿಸಿದ ಮೂವರು ದುಷ್ಕರ್ಮಿಗಳು ಬಂದಿದ್ದಾರೆ. ಸ್ವಲ್ಪ ಹೊತ್ತು ಗುಂಡು ಹಾರಿಸಿ ಭಯ ಹುಟ್ಟಿಸಿ ಆರೋಪಿಗಳು ಪರಾರಿಯಾಗಿದ್ದಾರೆ.
ಗುಂಡಿನ ದಾಳಿ ನಡೆದ ಸಮಯದಲ್ಲಿ ಎಲ್ವಿಶ್ ಮನೆಯಲ್ಲಿ ಇರಲಿಲ್ಲ. ಹಿಮಾಂಶು ಬಸು ಗ್ಯಾಂಗ್ ಈ ದಾಳಿಯ ಹೊಣೆ ಹೊತ್ತಿದೆ. ಜೂಜಾಟದ ಜಾಹೀರಾತಿಗೆ ಎಲ್ವಿಶ್ ನೀಡಿದ್ದ ಎಚ್ಚರಿಕೆಗೆ ಪ್ರತಿಯಾಗಿ ಈ ದಾಳಿ ನಡೆದಿದೆ ಎಂದು ಆರೋಪಿಗಳು ಹೇಳಿದ್ದಾರೆ. ಜೂಜಾಟದಿಂದ ಅನೇಕ ಕುಟುಂಬಗಳು ನಾಶವಾಗುತ್ತಿವೆ, ಇದನ್ನು ಎಚ್ಚರಿಕೆ ಎಂದು ಭಾವಿಸಬೇಕು ಎಂದು ಅವರು ಹೇಳಿದ್ದಾರೆ.
ಮಗ ಯಾವುದೇ ಜೂಜಾಟದ ಜಾಹೀರಾತಿನಲ್ಲಿ ಭಾಗಿಯಾಗಿರುವುದು ತಮಗೆ ತಿಳಿದಿಲ್ಲ, ಯಾವುದೇ ಬೆದರಿಕೆ ಕರೆಗಳು ಬಂದಿಲ್ಲ ಎಂದು ಕುಟುಂಬದವರು ಹೇಳಿದ್ದಾರೆ. ಸುಮಾರು 25-30 ಸುತ್ತು ಗುಂಡು ಹಾರಿಸಲಾಗಿದೆ. ಎಲ್ವಿಶ್‌ಗೆ ಯಾವುದೇ ಬೆದರಿಕೆ ಇರಲಿಲ್ಲ. ಸಿಸಿಟಿವಿ ದೃಶ್ಯಗಳಲ್ಲಿ ಮೂವರು ಕಾಣಿಸಿಕೊಂಡಿದ್ದಾರೆ. ಬೈಕ್‌ನಲ್ಲಿ ಬಂದಿದ್ದ ಇಬ್ಬರು ಗೇಟ್ ಮುಂದೆ ಬಂದಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ.
ಪೊಲೀಸರು ಎಲ್ವಿಶ್ ಯಾದವ್ ಅವರ ಮನೆಗೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಕಾನೂನು ಕ್ರಮ ಜರುಗಿಸಲಾಗಿದೆ, ಕುಟುಂಬದವರು ದೂರು ನೀಡಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ವಿಶ್ ಯಾದವ್ ಅವರು ಬಿಗ್ ಬಾಸ್ ಸ್ಪರ್ಧಿಯೋರ್ವರಿಗೆ ಜನಾಂಗೀಯವಾಗಿ ಮಾತನಾಡಿದ್ದರು ಎಂಬ ಆರೋಪ ಇತ್ತು. ಇದು ಕೂಡ ದೊಡ್ಡ ಕಾಂಟ್ರವರ್ಸಿಯಾಗಿತ್ತು.
ಎಲ್ವಿಶ್ ಯಾದವ್ ಅವರು ಬಿಗ್ ಬಾಸ್ ಮನೆಯಲ್ಲಿದ್ದಾಗ ಪ್ರತಿಸ್ಪರ್ಧಿಗಳ ಮಾತಿಗೆ ಕೌಂಟರ್ ಕೊಟ್ಟು ಇನ್ನಷ್ಟು ವೀಕ್ಷಕರಿಗೆ ಇಷ್ಟವಾಗಿದ್ದರು. ಅವರ ನೇರ ಮಾತು ಅನೇಕರಿಗೆ ಇಷ್ಟ ಆಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

