- Home
- Entertainment
- TV Talk
- ಬಿಗ್ ಬಾಸ್ ಕ್ಯಾಮೆರಾ ಕಣ್ತಪ್ಪಿಸಿ ಖತರ್ನಾಕ್ ಕೆಲಸ ಮಾಡಿದ ರಕ್ಷಿತಾ; ರೆಡ್ ಹ್ಯಾಂಡ್ ಆಗಿ ಹಿಡಿದ ಗಿಲ್ಲಿ ನಟ!
ಬಿಗ್ ಬಾಸ್ ಕ್ಯಾಮೆರಾ ಕಣ್ತಪ್ಪಿಸಿ ಖತರ್ನಾಕ್ ಕೆಲಸ ಮಾಡಿದ ರಕ್ಷಿತಾ; ರೆಡ್ ಹ್ಯಾಂಡ್ ಆಗಿ ಹಿಡಿದ ಗಿಲ್ಲಿ ನಟ!
ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿ ರಕ್ಷಿತಾ ಶೆಟ್ಟಿ, ಕ್ಯಾಮೆರಾ ಕಣತಪ್ಪಿಸಿ ಖತರ್ನಾಕ್ ಕೆಲಸ ಮಾಡುತ್ತಿದ್ದರು. ಈ ರಹಸ್ಯವನ್ನು ಪತ್ತೆಹಚ್ಚಿದ ಗಿಲ್ಲಿ ನಟ ಮನೆ ಎಲ್ಲರಿಗೂ ತಿಳಿಸಿದ್ದಾರೆ. ಈ ವಿಚಾರ ತಿಳಿದ ಕ್ಯಾಪ್ಟನ್ ಧನುಷ್, ನಿಯಮ ಉಲ್ಲಂಘಿಸಿದ್ದಕ್ಕಾಗಿ ರಕ್ಷಿತಾಗೆ ಎಚ್ಚರಿಕೆ ನೀಡಿದ್ದಾರೆ.

ಕ್ಯಾಮೆರಾ ಕಣ್ತಪ್ಪಿಸಿ ನಿದ್ದೆ ಮಾಡಿ ಸಿಕ್ಕಿಬಿದ್ದ ರಕ್ಷಿತಾ
ಬಿಗ್ ಬಾಸ್ ಸೀಸನ್ 12ರ ರಿಯಾಲಿಟಿ ಶೋ ಈಗಾಗಲೇ 63 ದಿನಗಳು ಮುಕ್ತಾಯಗೊಂಡಿವೆ. ಇದೀಗ ಕಳೆದ ವಾರ ಬಂದಿರುವ ಚೈತ್ರಾ ಕುಂದಾಪುರ ಹಾಗೂ ರಜತ್ ಕಿಶನ್ ಸೇರಿ 14 ಸ್ಪರ್ಧಿಗಳು ಮಾತ್ರ ಮನೆಯಲ್ಲಿದ್ದಾರೆ. ಆದರೆ, ಬಿಗ್ ಬಾಸ್ ಮನೆಯ ಕ್ಯಾಮೆರಾ ಕಣ್ಣಿಗೂ ಕಾಣಿಸದಂತೆ ನಿದ್ದೆ ಮಾಡುತ್ತಿದ್ದ ರಕ್ಷಿತಾ ರಹಸ್ಯವನ್ನು ಗಿಲ್ಲಿ ನಟ ಪತ್ತೆ ಮಾಡಿದ್ದಾನೆ. ಇದೆಲ್ಲವನ್ನೂ ಮನೆಯವರಿಗೆ ಹೇಳಿದ್ದಾನೆ.
ಗಿಲ್ಲಿ ಕೈಗೆ ಸಿಕ್ಕಿಬಿದ್ದಳು
ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಯಾವುದೇ ಕ್ಯಾಮೆರಾ ಕಣ್ಣಿಗೂ ಬೀಳದಂತೆ ನಿದ್ದೆ ಮಾಡುತ್ತಿದ್ದಳು ಎಂಬುದು ಇದೀಗ ರಿವೀಲ್ ಆಗಿದೆ. ರಕ್ಷಿತಾಳ ಎಲ್ಲ ಚಟುವಟಿಕೆಗಳನ್ನ ಗಮನಿಸಿದ ಗಿಲ್ಲಿ ನಟ ಆಕೆ ನಿದ್ದೆ ಮಾಡಿದ್ದಾಳೆ ಎಂಬುದನ್ನು ಕಂಡುಹಿಡಿದು ಮನೆಯರ ಮುಂದೆ ಹೇಳಿದ್ದಾನೆ.
ಬಿಗ್ ಬಾಸ್ ಮನೆಯಲ್ಲಿ ಎಲ್ಲ ಸ್ಪರ್ಧಿಗಳನ್ನು ಎಚ್ಚರಿಸಲು ಹಾಡನ್ನು ಹಾಕುತ್ತಾರೆ. ಈ ಹಾಡು 4-5 ನಿಮಿಷವಿದ್ದು, ಈ ಅವಧಿಯಲ್ಲಿ ಎಲ್ಲರೂ ಎದ್ದು ಡ್ಯಾನ್ಸ್ ಮಾಡುತ್ತಾ ಅಥವಾ ಸಾಮಾನ್ಯದಂತೆ ದಿನನಿತ್ಯದ ಚಟುವಟಿಕೆಯಲ್ಲಿ ಭಾಗಿಯಾಗಬೇಕು.
ನಿದ್ದೆ ಮಾಡುತ್ತಿದ್ದದ್ದು ಎಲ್ಲಿ?
ಹಾಡು ಬಂದಾಕ್ಷಣ ಎಲ್ಲರಂತೆ ಎದ್ದೇಳುವ ರಕ್ಷಿತಾ ಶೆಟ್ಟಿ, ಎಲ್ಲರಿಗಿಂತ ತುಸು ಹೆಚ್ಚಾಗಿಯೇ ಕುಣಿದು ಕುಪ್ಪಳಿಸುತ್ತಾಳೆ. ಆದರೆ, ಇದೀಗ ತೀವ್ರ ಚಳಿ ಇರುವುದರಿಂದ ಹಾಸಿಗೆಯಿಂದ ಎದ್ದರೂ ನಿದ್ದೆ ಮಂಪರು ಹೋಗುವುದಿಲ್ಲ. ಹೀಗಾಗಿ, ರಕ್ಷಿತಾ ಶೆಟ್ಟಿ ಎಲ್ಲರೂ ಎದ್ದ ನಂತರ ದಿನನಿತ್ಯ ಕರ್ಮಗಳನ್ನು ಮುಗಿಸುವಂತೆ ಬಾತ್ ರೂಮಿಗೆ ಹೋಗಿ ಕೂರುತ್ತಾಳೆ. ಅಲ್ಲಿಯೇ ತುಸು ಹೊತ್ತು ಕುಳಿತಲ್ಲಿಯೇ ನಿದ್ದೆ ಮಾಡಿ ಬರುತ್ತಾಳೆ.
ಬಟ್ಟೆ ಬದಲಿಸದೇ ಹೊರಗೆ ಬಂದು ಸಿಕ್ಕಿಬಿದ್ದ ರಕ್ಷಿತಾ
ಇದನ್ನು ಗಮನಿಸಿದ ಗಿಲ್ಲಿ ನಟ ರಕ್ಷಿತಾ ನಿದ್ದೆ ಮಂಪರಿನಲ್ಲಿಯೇ ಓಡಾಡುವುದನ್ನು ನೋಡಿದ್ದಾನೆ. ನಂತರ, ರಕ್ಷಿತಾ ಬಾತ್ ರೂಮಿಗೆ ಹೋಗುವಾಗ ಒಂದು ಎಕ್ಸ್ಟ್ರಾ ಬಟ್ಟೆಯನ್ನು ತೆಗೆದುಕೊಂಡು ಹೋಗುತ್ತಾಳೆ. ಇದಾದ ನಂತರ ತುಂಬಾ ಹೊತ್ತಾದರೂ ಬಾರದ ಹಿನ್ನೆಲೆಯಲ್ಲಿ ಮನೆಯವರಿಗೆಲ್ಲಾ ವಿಚಾರವನ್ನು ತಿಳಿಸಿ ಎಲ್ಲೆಡೆ ಹುಡುಕುತ್ತಾರೆ. ಆದರೆ, ರಕ್ಷಿತಾ ತುಂಬಾ ಸಮಯವಾದ ನಂತರ ಹೊರಗೆ ಬರುತ್ತಾಳೆ. ಆದರೆ, ಮೈ ಮೇಲಿನ ಬಟ್ಟೆಗಳಲ್ಲಿ ಯಾವುದೇ ಬದಲಾವಣೆ ಆಗಿರುವುದಿಲ್ಲ.
ಸ್ವಿಮ್ಮಿಂಗ್ ಪೂಲ್‌ಗೆ ಹಾಕುವುದಾಗಿ ಎಚ್ಚರಿಕೆ
ಇನ್ನು ರಕ್ಷಿತಾ ಶೆಟ್ಟಿ ಬಾತ್ ರೂಮಿನಲ್ಲಿ ಕುಳಿತು ನಿದ್ದೆ ಮಾಡಿದ್ದಾಳೆ ಎಂಬ ಮಾಹಿತಿ ಕ್ಯಾಪ್ಟನ್ ಧನುಷ್ ಕಿವಿಗೂ ಬೀಳುತ್ತದೆ. ಆಗ ರಕ್ಷಿತಾ ನೀನು ನಿದ್ದೆ ಮಾಡುವುದು ಬಿಗ್ ಬಾಸ್ ಕ್ಯಾಮೆರಾ ಕಣ್ಣಿಗೆ ಕಾಣಿಸದಿದ್ದರೂ ನಾನು ಇದನ್ನು ಬಿಗ್ ಬಾಸ್‌ಗೆ ಹೇಳುತ್ತೇನೆ. ಮನೆಯಲ್ಲಿ ಲೈಟ್ ಆಫ್ ಆಗದ ವೇಳೆ ನಿದ್ದೆ ಮಾಡಿದರೆ ಅವರನ್ನು ಸ್ವಿಮ್ಮಿಂಗ್ ಪೂಲ್‌ಗೆ ಹಾಕಲಾಗುತ್ತದೆ. ಅದರಂತೆ, ಬಿಗ್ ಬಾಸ್‌ಗೆ ನೀನು ನಿದ್ದೆ ಮಾಡುವುದು ಹೇಳಿ ಸ್ವಿಮ್ಮಿಂಗ್ ಪೂಲ್‌ಗೆ ಹಾಕಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅತಿ ಕಿರಿಯ ಆಟಗಾರ್ತಿ
ಬಿಗ್ ಬಾಸ್ ಮನೆಯಲ್ಲಿ ಅತಿ ಚಿಕ್ಕ ವಯಸ್ಸಿನ ಆಟಗಾರ್ತಿ ಎಂದರೆ ಅದು ರಕ್ಷಿತಾ ಶೆಟ್ಟಿ. ಅಸ್ಪಷ್ಟ ಕನ್ನಡ ಭಾಷೆಯನ್ನು ಮಾತನಾಡಿದರೂ ಅವಳ ಆಟಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಮನೆಯಲ್ಲಿದ್ದ ಎಲ್ಲ ಹಿರಿಯ ಸ್ಪರ್ಧಿಗಳಿಗೂ ಕೌಂಟರ್ ಕೊಡುತ್ತಲೇ ಉತ್ತಮವಾಗಿ ಆಟವಾಡುತ್ತಿದ್ದಾರೆ.
Rakshitha changing room alli malkondirodna Gilli haakodthovne Captain ge 🤣🤭#BBK12#Gillipic.twitter.com/fDf2nE9MBs
— Feed My Ego (@badgag_235) December 2, 2025
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

