- Home
- Entertainment
- TV Talk
- Bigg Boss Kannada 12: ಮುಂದಿನ ವೀಕೆಂಡ್ ಸಂಚಿಕೆಗೆ ಬರಲ್ಲ ಸುದೀಪ್? ಕಿಚ್ಚನ ಬದಲಿಗೆ ಬರೋರು ಯಾರು?
Bigg Boss Kannada 12: ಮುಂದಿನ ವೀಕೆಂಡ್ ಸಂಚಿಕೆಗೆ ಬರಲ್ಲ ಸುದೀಪ್? ಕಿಚ್ಚನ ಬದಲಿಗೆ ಬರೋರು ಯಾರು?
ಕಿಚ್ಚ ಸುದೀಪ್ ಮುಂಬರುವ ಬಿಗ್‌ಬಾಸ್ ಕನ್ನಡ ಸೀಸನ್ 12ರ ವೀಕೆಂಡ್ ಸಂಚಿಕೆಗೆ ಗೈರಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ, ಸುದೀಪ್ ಅನುಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಯಾರು ನಡೆಸಿಕೊಡಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದ್ದು, ಹಿಂದಿನ ಸೀಸನ್‌ಗಳಂತೆ ವಿಶೇಷ ಅತಿಥಿಯ ಆಗಮನದ ನಿರೀಕ್ಷೆಯಿದೆ.

ಬಿಗ್‌ಬಾಸ್ ಕನ್ನಡ - ಸುದೀಪ್ ನಿರೂಪಣೆ
ಬಿಗ್‌ಬಾಸ್ ಕನ್ನಡ ಸೀಸನ್ 12ರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದಾಖಲೆಯ ಟಿಆರ್‌ಪಿಯನ್ನು ತನ್ನ ಮುಡಿಗೇರಿಸಿಕೊಳ್ಳುತ್ತಿದೆ. ವಾರದ ಐದು ದಿನ ಒಂದು ಲೆಕ್ಕವಾದ್ರೆ, ಶನಿವಾರ ಮತ್ತು ಭಾನುವಾರದ ಸಂಚಿಕೆಯದ್ದು ಮತ್ತೊಂದು ಲೆಕ್ಕವಾಗಿರುತ್ತದೆ. ಇದಕ್ಕೆ ನಟ ಕಿಚ್ಚ ಸುದೀಪ್ ಅವರ ನಿರೂಪಣೆ. ಹಾಗಾಗಿ ವೀಕ್ಷಕರು ವೀಕೆಂಡ್ ಸಂಚಿಕೆಯನ್ನು ಮಿಸ್ ಮಾಡಿಕೊಳ್ಳಲ್ಲ.
ಈ ವಾರ ಮಾರ್ಕ್ ಬಿಡುಗಡೆ
ಮುಂದಿನ ವಾರದ ವೀಕೆಂಡ್ ಸಂಚಿಕೆಯನ್ನು ಸುದೀಪ್ ನಡೆಸಿಕೊಡಲ್ಲ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿವೆ. ಸುದೀಪ್ ನಟನೆಯ ಮಾರ್ಕ್ ಸಿನಿಮಾ ಇದೇ ಡಿಸೆಂಬರ್ 25ರಂದು ಬಿಡುಗಡೆಯಾಗಲಿದೆ. ಸಿನಿಮಾ ಪ್ರಚಾರ ಕೆಲಸಗಳಿರುವ ಹಿನ್ನೆಲೆ ಡಿಸೆಂಬರ್ 27 ಮತ್ತು 28ರ ಸಂಚಿಕೆಗಳಿಗೆ ಸುದೀಪ್ ಗೈರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸುದೀಪ್ ಮಾತು ಎನರ್ಜಿ ಬೂಸ್ಟರ್
ವೀಕ್ಷಕರ ಜೊತೆ ಬಿಗ್‌ಬಾಸ್ ಮನೆಯಲ್ಲಿರುವ ಸದಸ್ಯರು ಸಹ ಸುದೀಪ್ ಅವರ ಬರುವಿಕೆಯನ್ನು ಕಾಯುತ್ತಿರುತ್ತಾರೆ. ಒಂದು ವಾರದಲ್ಲಿ ನಡೆದ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಬಿಗ್‌ಬಾಸ್ ಸ್ಪರ್ಧಿಗಳು ಕಾಯುತ್ತಿರುತ್ತಾರೆ. ಸುದೀಪ್ ಮಾತುಗಳು ಸ್ಪರ್ಧಿಗಳಿಗೆ ಎನರ್ಜಿ ಬೂಸ್ಟರ್ ರೀತಿಯಲ್ಲಿ ಕೆಲಸ ಮಾಡುತ್ತವೆ ಎಂಬುವುದು ಹಲವರ ಅಭಿಪ್ರಾಯವಾಗಿದೆ.
ವೀಕೆಂಡ್ ಸಂಚಿಕೆ
ಸುದೀಪ್ ಅನುಪಸ್ಥಿತಿಯಲ್ಲಿ ವೀಕೆಂಡ್ ಸಂಚಿಕೆ ಹೇಗಿರಲಿದೆ ಎಂಬುದರ ಬಗ್ಗೆ ಚರ್ಚೆಗಳು ಆರಂಭಗೊಂಡಿವೆ. ಈ ಹಿಂದಿನ ಸೀಸನ್‌ಗಳನ್ನು ಗಮನಿಸಿದಾಗ ಸುದೀಪ್ ಅನುಪಸ್ಥಿತಿಯನ್ನು ಬಿಗ್‌ಬಾಸ್ ತಂಡ ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಿತ್ತು. ಸುದೀಪ್ ಅವರ ತಾಯಿ ನಿಧನವಾದ ಸಂದರ್ಭದಲ್ಲಿ ವೀಕೆಂಡ್ ಎಪಿಸೋಡ್‌ಗೆ ನಿರ್ದೇಶಕ ಯೋಗರಾಜ್ ಭಟ್ಟರು ನಡೆಸಿಕೊಟ್ಟಿದ್ದರು.
ಇದನ್ನೂ ಓದಿ: BBK 12: ದಿನಸಿ ಕಳೆದುಕೊಂಡ ಸದಸ್ಯರು; ಅಂದು ಗಿಲ್ಲಿ, ಇಂದು ಅಶ್ವಿನಿ; ಕಿಡಿ ಹಚ್ಚಿದ್ರಾ ರಾಶಿಕಾ?
ಯಾರು ವಿಶೇಷ ಅತಿಥಿ?
ಕೊರೊನಾ ಸೋಂಕಿಗೆ ಒಳಗಾದ ಸಂದರ್ಭದಲ್ಲಿ ಹಿನ್ನಲೆ ಧ್ವನಿ ಮೂಲಕ ಶೋವನ್ನು ಮನರಂಜನಾತ್ಮಕವಾಗಿ ನಡೆಸಲಾಗಿತ್ತು. ಒಮ್ಮೆ ಹಿರಿಯ ನಟಿ ಶ್ರುತಿ ಅವರು ಕೋರ್ಟ್ ಕಲ್ಪನೆಯಲ್ಲಿ ಬಿಗ್‌ಬಾಸ್ ಸಂಚಿಕೆಯನ್ನು ನಿರೂಪಣೆ ಮಾಡಿದ್ದರು. ಆದ್ರೆ ಮುಂದಿನ ವಾರ ಬರುವ ವಿಶೇಷ ಅತಿಥಿ ಯಾರು ಎಂಬುದರ ಬಗ್ಗೆ ಕುತೂಹಲ ಮೂಡಿದೆ.
ಇದನ್ನೂ ಓದಿ: BBK 12: ರಕ್ಷಿತಾ ಶೆಟ್ಟಿ ಭ್ರಮೆಗೆ ಕಾವ್ಯಾ ಕೊಟ್ರು ತಿರುಗೇಟು! ಭವಿಷ್ಯ ನುಡಿದ ಬಿಗ್‌ಬಾಸ್ ವೀಕ್ಷಕರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.